For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನ ಸದಾ ಲವಲವಿಕೆಯಿಂದ ಕೂಡಿರಲು ಹೀಗೆ ಮಾಡಿ

|

ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿರುವುದು. ಆದರೆ ದಿನಕಳೆದಂತೆ ಅದೇ ಕೆಲಸ, ಮನೆ ಜವಾಬ್ದಾರಿಯನ್ನು ನಿರ್ವಹಿಸುವಾಗ ನಿಮ್ಮ ದಾಂಪತ್ಯದಲ್ಲಿ ಸ್ಪಾರ್ಕ್ ಅಥವಾ ಮೊದಲಿದ್ದ ಕಳೆ ಇರುವುದಿಲ್ಲ. ಇದರ ಪರಿಣಾಮವಾಗಿ ಪತಿ-ಪತ್ನಿ ನಡುವೆ ಪ್ರಣಯ ಮತ್ತು ಉತ್ಸಾಹ ಕಡಿಮೆಯಾಗುವುದು. ಆದ್ದರಿಂದ ನೀವು ನಿಮ್ಮ ದಾಂಪತ್ಯದಲ್ಲಿ ಖುಷಿ ತರುವ ಸಣ್ಣ ಸಣ್ಣ ಕೆಲಸಗಳನ್ನು ಆಗಾಗ ಮಾಡುತ್ತಿರಬೇಕು. ಅಂತಹ ಕೆಲವು ವೈವಾಹಿಕ ಜೀವನದಲ್ಲಿ ಪ್ರೀತಿ ಕಿಡಿಯನ್ನು ಹೆಚ್ಚಿಸುವ ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ವೈವಾಹಿಕ ಜೀವನದಲ್ಲಿ ಪ್ರೀತಿ ಸದಾ ಉಳಿಸುವಂತಹ ಕೆಲವೊಂದು ವಿಧಾನಗಳನ್ನು ಇಲ್ಲಿ ನೀಡಲಾಗಿದೆ:

ರೊಮ್ಯಾಂಟಿಕ್ ರಾತ್ರಿಯನ್ನು ಪ್ಲಾನ್ ಮಾಡಿ:

ರೊಮ್ಯಾಂಟಿಕ್ ರಾತ್ರಿಯನ್ನು ಪ್ಲಾನ್ ಮಾಡಿ:

ನೀವು ಎಷ್ಟೇ ಬ್ಯುಸಿಯಾಗಿದ್ದರೂ ಸಹ, ಆಗಾಗ ರೊಮ್ಯಾಂಟಿಕ್ ನೈಟ್ ಡಿನ್ನರ್ ಅಥವಾ ನೈಟ್ ಡೇಟಿಂಗ್ ನ್ನು ಪ್ಲಾನ್ ಮಾಡಿ. ಯಾವುದಾದರೂ ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಟೇಬಲ್ ಬುಕ್ ಮಾಡಿ. ಅಲ್ಲಿಗೆ ಹೋಗುವಾಗ ನಿಮ್ಮ ಸಂಗಾತಿಯನ್ನು ಈ ಸಂದರ್ಭಕ್ಕೆ ತಕ್ಕಂತೆ ರೆಡಿಯಾಗಲು ಹೇಳಿ. ಇದ್ಯಾವುದೂ ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಕ್ಯಾಂಡಲ್ ಲೈಟ್ ಡಿನ್ನರ್ ನ್ನು ಪ್ಲಾನ್ ಮಾಡಿ, ರೊಮ್ಯಾಂಟಿಕ್ ಆಗಿ ಒಟ್ಟಿಗೆ ಸಮಯ ಕಳೆಯಿರಿ. ಇದು ಪ್ರತಿದಿನವೂ ಇರಬೇಕಾಗಿಲ್ಲ, ಆದರೆ ಆಗಾಗ ಹೀಗೆ ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಪ್ರೀತಿ ಚಿರಕಾಲವಿರುವುದು.

ಇಬ್ಬರೂ ಒಟ್ಟಿಗೆ ಸ್ಪಾ ದಿನವನ್ನು ನಿಗದಿಪಡಿಸಿ:

ಇಬ್ಬರೂ ಒಟ್ಟಿಗೆ ಸ್ಪಾ ದಿನವನ್ನು ನಿಗದಿಪಡಿಸಿ:

ದೈನಂದಿನ ಕೆಲಸ ಮತ್ತು ಗದ್ದಲವು ನಿಮಗೆ ಕೆಲಸಗಳಲ್ಲಿ ಆಯಾಸ ಮತ್ತು ಒತ್ತಡವನ್ನುಂಟು ಮಾಡುತ್ತದೆ. ಆದ್ದರಿಂದ, ಸ್ಪಾ ಸೆಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ದಂಪತಿಗಳು ಆಗಾಗ ಮಸಾಜ್ , ಪೆಡಿಕ್ಯೂರ್, ಮೆನಿಕ್ಯೂರ್ ನಂತಹ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದನ್ನು ಒಂದೇ ದಿನ ನಿಗದಿಪಡಿಸಿ, ಇಬ್ಬರೂ ಒಟ್ಟಿಗೆ ತೆರಳಿ, ನಿಮ್ಮನ್ನು ನೀವು ಸುಂದರಗೊಳಸಿಕೊಳ್ಳಿ. ಇದನ್ನ ಇಬ್ಬರೂ ಮನೆಯಲ್ಲಿಯೂ ಮಾಡಬಹುದು. ಅಲ್ಲಿ ನೀವು ಇಬ್ಬರೂ ಪರಸ್ಪರ ಮಸಾಜ್ ಮಾಡಬಹುದು, ಜೊತೆಗೆ ಸುವಾಸಿತ ಮೇಣದ ಬತ್ತಿಗಳ ಸುವಾಸನೆಯು ಕೋಣೆಯನ್ನು ತುಂಬಿಸಬಹುದು.

ಸಂಗಾತಿಯ ಮಾತುಗಳ ಕೇಳುಗರಾಗಿ:

ಸಂಗಾತಿಯ ಮಾತುಗಳ ಕೇಳುಗರಾಗಿ:

ನಿಮ್ಮ ದಾಂಪತ್ಯದಲ್ಲಿ ಪ್ರಗತಿ ಹೊಂದುತ್ತಿರುವಾಗ, ಮನಸ್ಸು ಯಾವಾಗಲೂ ಮಾತನಾಡುವ ಹಂಬಲ ಮಾಡುತ್ತದೆ. ಇದು ಒಳ್ಳೆಯ ಸಂಕೇತವಾಗಿದ್ದರೂ, ನಿಮ್ಮ ಸಂಗಾತಿ ಕೇಳುತ್ತಾರೆ ಎಂದು ಮಾತನಾಡುತ್ತಲೇ ಇರುವುದು ಉತ್ತಮವಲ್ಲ. ಹಾಗೇ ಮಾತನಾಡುವಾಗ ನೀವು ಮಧ್ಯೆ ಬಾಯಿ ಹಾಕುವುದು ಸರಿಯಲ್ಲ. ಅವರ ಮಾತುಗಳನ್ನು ಆಲಿಸಿ. ಅವರ ಮನಸ್ಸಲ್ಲಿ ಇರುವುದನ್ನು ಹೇಳಿಕೊಳ್ಳಲು ಅವಕಾಶ ನೀಡಿ. ನೆನಪಿಡಿ ಅವರ ಮಾತುಗಳನ್ನು ಎಂದಿಗೂ ಟೀಕಿಸಲು ಹೋಗಬೇಡಿ.

ಒಟ್ಟಿಗೆ ಧ್ಯಾನ ಮಾಡಿ:

ಒಟ್ಟಿಗೆ ಧ್ಯಾನ ಮಾಡಿ:

ಒಟ್ಟಿಗೆ ಧ್ಯಾನ ಮಾಡುವುದು ಪರಸ್ಪರರ ಆಧ್ಯಾತ್ಮಿಕವಾಗಿ ಸಂಪರ್ಕದಲ್ಲಿರಲು ಉತ್ತಮ ಮಾರ್ಗವಾಗಿದೆ. ಮದುವೆಯಲ್ಲಿ ಪ್ರಣಯ ಮತ್ತು ಉತ್ಸಾಹ ಕಳೆದುಹೋದಾಗ, ಬಲವಾದ ಸಂಪರ್ಕವನ್ನು ಬೆಳೆಸಲು ಒಟ್ಟಿಗೆ ಧ್ಯಾನ ಮಾಡುವುದು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಇಬ್ಬರೂ ಕುಳಿತು ಧ್ಯಾನ ಮಾಡಿ. ಇದು ನಿಮ್ಮನ್ನು ಭಾವನಾತ್ಮಕವಾಗಿ ಹತ್ತಿರ ಮಾಡುವುದು.

ಸಣ್ಣ ಪ್ರವಾಸಗಳನ್ನು ಆಯೋಜಿಸಿ:

ಸಣ್ಣ ಪ್ರವಾಸಗಳನ್ನು ಆಯೋಜಿಸಿ:

ಕೆಲಸದ ಜೀವನವು ನಿಮ್ಮಿಬ್ಬರನ್ನು ದಣಿಯುವಂತೆ ಮಾಡಿದ್ದರೆ, ವಾರಾಂತ್ಯದ ಪ್ರವಾಸವು ನಿಮ್ಮನ್ನು ಫ್ರೀ ಮಾಡಲು ಸಹಾಯ ಮಾಡುವುದು. ನಿಮ್ಮಿಬ್ಬರಿಗೂ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿಗೆ ತೆರಳಿ ಉತ್ತಮ ಸಮಯವನ್ನು ಕಳೆಯಬಹುದು. ಇದು ಹೊಸ ಚೈತನ್ಯವನ್ನು ದಾಂಪತ್ಯದಲ್ಲಿ ಸೃಷ್ಠಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

Ways To Rekindle Spark In Your Marriage in Kannada

Here we talking about Ways To Rekindle Spark In Your Marriage in Kannada, read on
Story first published: Wednesday, June 23, 2021, 17:16 [IST]
X
Desktop Bottom Promotion