For Quick Alerts
ALLOW NOTIFICATIONS  
For Daily Alerts

ಈ ದಾರಿಗಳನ್ನು ಪಾಲಿಸಿದರೆ ನಿಮ್ಮ ಅತ್ತೆ ಮೆಲ್ಟ್ ಆಗೋದು ಖಂಡಿತ!

|

ಮದುವೆ ಎಂಬುದು ಕೇವಲ ಎರಡು ಜೀವಗಳ ನಡುವಿನ ಬೆಸುಗೆಯಲ್ಲ, ಅದು ಎರಡು ಕುಟುಂಬಗಳ ನಡುವಿನ ಸಂಬಂಧ. ವಿವಾಹದ ಬಳಿಕ ಪುರುಷನಾಗಲಿ, ಮಹಿಳೆಯಾಗಲಿ, ಹಲವಾರು ಹೊಸ ಹೊಸ ಸಂಬಂಧಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿರುವುದು ಅತ್ತೆ ಹಾಗೂ ಮಾವನ ಸಂಬಂಧ. ಆಧುನಿಕ ಯುಗದ ಮಹಿಳೆಯರು ಹೆಚ್ಚಾಗಿ ತಾವು ಕೇವಲ ಪತಿಯ ಜತೆಗೆ ಮಾತ್ರ ವಾಸವಾಗಿರಬೇಕು ಎಂದು ಬಯಸುವುದು ಸಾಮಾನ್ಯ. ಆದರೆ ಇದು ಸಾಧ್ಯವಾಗದೇ ಇರುವಂತಹ ಮಾತು. ಯಾಕಂದ್ರೆ ಚಿಕ್ಕನಿಂದ ತಮ್ಮನ್ನ ಹೆತ್ತು-ಹೊತ್ತು ಸಾಕಿದ ತಂದೆ-ತಾಯಿಯನ್ನು ಬಿಟ್ಟು ವಾಸಿಸಲು ಆಗದು. ಇಂತಹ ಸಮಯದಲ್ಲಿ ಮಹಿಳೆಯರು ತಮ್ಮ ಅತ್ತೆ ಮಾವನ ಜೊತೆಗೆ ಒಳ್ಳೆಯ ಸಂಬಂಧ ಬೆಸೆದುಕೊಳ್ಳಬೇಕು. ಅತ್ತೆ ಮಾವನ ಜತೆಗೆ ಯಾವ ರೀತಿಯಲ್ಲಿ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬಹುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಅತ್ತೆ-ಮಾವನ ಜೊತೆಗೆ ಉತ್ತಮ ಭಾಂದವ್ಯ ಬೆಸೆಯಲು ಮಹಿಳೆಯರಿಗೆ ಸಲಹೆಗಳು:

ಅವರ ಕುಟುಂಬದ ಬಗ್ಗೆ ತಿಳಿಯಿರಿ:

ಅವರ ಕುಟುಂಬದ ಬಗ್ಗೆ ತಿಳಿಯಿರಿ:

ಇದು ಬಹಳ ಮುಖ್ಯ. ಅವರ ಕುಟುಂಬದ ಬಗ್ಗೆ ಅರಿತುಕೊಂಡರೆ, ನೀವು ಸುಲಭವಾಗಿ ಹೊಂದಿಕೊಳ್ಳಬಹುದು. ನೀವು ಮದುವೆಯಾಗಿರುವ ಪುರುಷನ ಬಾಲ್ಯದ ಹಾಗೂ ಆತನ ಹಿಂದಿನ ದಿನಗಳು ಹೇಗೆ ಇದ್ದವು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಅದರಲ್ಲೂ ನೀವು ಇದನ್ನು ಅತ್ತೆಯಿಂದ ತಿಳಿದುಕೊಂಡರೆ ತುಂಬಾ ಒಳ್ಳೆಯದು. ಈ ಮೂಲಕ ನಿಮ್ಮ ಅತ್ತೆಯೊಂದಿಗೆ ಹತ್ತಿರವಾಗಬಹುದು. ನೀವು ಆಕೆಯೊಂದಿಗೆ ಕುಳಿತುಕೊಂಡು ಫೋಟೊ ಅಲ್ಬಮ್ ನೋಡುತ್ತಾ, ಹಿಂದಿನ ನೆನಪುಗಳನ್ನು ಅತ್ತೆಯ ಮನಸ್ಸಿನಲ್ಲಿ ಮೂಡುವಂತೆ ಮಾಡಿದರೆ ಬಹಳ ಒಳ್ಳೆಯದು.

ಆಕೆಯ ಸ್ಥಾನ ಭದ್ರವಾಗಿದೆ ಎಂಬುದನ್ನು ತಿಳಿಸಿ:

ಆಕೆಯ ಸ್ಥಾನ ಭದ್ರವಾಗಿದೆ ಎಂಬುದನ್ನು ತಿಳಿಸಿ:

ಸೊಸೆ ಮನೆಗೆ ಬಂದ ಕೂಡಲೇ ಅತ್ತೆ ಮನಸ್ಸಿನಲ್ಲಿ ಕಾಡುವಂತಹ ವಿಚಾರವೆಂದರೆ, ತನ್ನ ಸ್ಥಾನಕ್ಕೆ ಕುತ್ತು ಬರುತ್ತದೆಯಾ ಎನ್ನುವುದು. ಸೊಸೆ ಹಾಗೇ ಇಲ್ಲದಿದ್ದರೂ ಸಹ, ಆಕೆಯ ಮನಸ್ಸಿನಲ್ಲಿ ತನ್ನ ಮಗನನ್ನು ತನ್ನಿಂದ ಕಸಿದುಕೊಳ್ಳುತ್ತಾಳೆ ಎಂಬ ಭಾವನೆ ಮೂಡುತ್ತದೆ. ಯಾಕಂದ್ರೆ ಆಕೆ ತನ್ನ ಮಗನನ್ನು ತುಂಬಾ ಕಷ್ಟಪಟ್ಟು ಬೆಳೆಸಿರುತ್ತಾಳೆ. ಹೀಗಾಗಿ ಸೊಸೆ ಬಂದಾಗ ಅವರ ಮನಸ್ಸಿನಲ್ಲಿ ಅಸುರಕ್ಷತೆಯು ಕಾಡಬಹುದು. ಇದು ಸಾಮಾನ್ಯ ಪ್ರಕ್ರಿಯೆಯೂ ಕೂಡ. ಮಗನ ಜೀವನದಿಂದ ತಾನು ಎಲ್ಲಿ ಹೊರಗೆ ಹೋಗುತ್ತೇನೋ ಎನ್ನುವ ಭೀತಿಯು ಆಕೆಯಲ್ಲಿ ಮೂಡುತ್ತದೆ. ನಿಮ್ಮ ಆಗಮನದಿಂದ ಕುಟುಂಬದಲ್ಲಿ ಹೆಚ್ಚಿನ ಖುಷಿ ಬರುತ್ತದೆ ಮತ್ತು ಆಕೆಯ ಮಗಳಂತೆ ಇರುವುದಾಗಿ ಹೇಳಿ.

ಕುಟುಂಬ ಆರಂಭಿಸುವ ಬಗ್ಗೆ ತಿಳಿಸಿ:

ಕುಟುಂಬ ಆರಂಭಿಸುವ ಬಗ್ಗೆ ತಿಳಿಸಿ:

ಮಗು ಬೇಕು ಎನ್ನುವ ಆಸೆಯು ಪ್ರತಿಯೊಬ್ಬ ಅತ್ತೆಗೂ ಇರುತ್ತದೆ. ಆದರೆ ಹೊಸದಾಗಿ ಮದುವೆಯಾದ ಸಂದರ್ಭದಲ್ಲಿ ಮಹಿಳೆಯರನ್ನು ಸಂಬಂಧಿಕರು ಹಾಗೂ ಅತ್ತೆ ಮನೆಯವರು ಈ ಬಗ್ಗೆ ಪ್ರಶ್ನೆ ಮಾಡುತ್ತಲಿರುತ್ತಾರೆ. ಇದರಿಂದ ನಿಮ್ಮ ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಹಾಗಂತ ಈ ವಿಚಾರದಲ್ಲಿ ನಿಮ್ಮ ಅತ್ತೆಯನ್ನು ದೂರವ ಹಾಗಿಲ್ಲ. ಅವರು ಕೇಳುವ ಪ್ರಶ್ನೆಯೂ ಸಹ ನ್ಯಾಯಯುತವಾದುದೇ. ಆದರೆ ನೀವು ಈ ಬಗ್ಗೆ ಅವರಿಗೆ ಸ್ಪಷ್ಟವಾಗಿ ಯಾವಾಗ ಮಗು ಪಡೆಯಲು ತಯಾರಾಗುತ್ತೀರಿ ಎಂದು ತಿಳಿಸಿ.

ಅಡುಗೆ ಮನೆಯಲ್ಲಿ ಸಹಾಯ ಮಾಡಿ:

ಅಡುಗೆ ಮನೆಯಲ್ಲಿ ಸಹಾಯ ಮಾಡಿ:

ಆಹಾರ ಎನ್ನುವುದು ಪ್ರತಿಯೊಬ್ಬರ ನಾಲಗೆಯ ಮೂಲಕ ಹೊಟ್ಟೆಗೆ ತಲುಪಿ, ಅದು ಮನಸ್ಸನ್ನು ಗೆಲ್ಲುತ್ತದೆ ಎನ್ನುವ ಮಾತಿದೆ. ಅದರಲ್ಲೂ ಈ ಮಾತು ಅತ್ತೆಯನ್ನು ಒಲಿಸಿಕೊಳ್ಳಲು ಇರುವ ಮಾರ್ಗವಾಗಿದೆ. ಅತ್ತೆಗೆ ತನ್ನ ಸೊಸೆಯು ಅಡುಗೆ ಮಾಡಬೇಕೆಂಬ ಬಯಕೆ ಇರುತ್ತದೆ. ಅತ್ತೆ ಯಾವುದನ್ನು ಇಷ್ಟಪಡುತ್ತಾರೆ ಹಾಗೂ ಯಾವ ಅಡುಗೆ ಅವರಿಗೆ ಇಷ್ಟ ಆಗಲ್ಲ ಎಂದು ತಿಳಿಯಿರಿ. ಇದು ಯಾವಾಗಲೂ ಮನಸ್ಥಿತಿ ಸುಧಾರಿಸುವ ಕೆಲಸ ಮಾಡುತ್ತದೆ. ನೀವು ಅಡುಗೆ ಮನೆಯಲ್ಲಿ ಭಾಗಿಯಾದರೆ ನಿಮ್ಮ ಅತ್ತೆಗೂ ಕೆಲಸದ ಹೊರೆ ಕಡಿಮೆಯಾಗುತ್ತದೆ.

ತಾಯಿಯಂತೆ ಸಲಹಿ:

ತಾಯಿಯಂತೆ ಸಲಹಿ:

ಪ್ರತಿಯೊಬ್ಬ ಹೆಣ್ಣು ತನ್ನ ಅತ್ತೆಯನ್ನು ತಾಯಿಯಂತೆ ಭಾವಿಸಿದರೆ ಯಾವ ಮನಸ್ಥಾಪವೂ ಇರುವುದಿಲ್ಲ, ಅದೇ ರೀತಿ ಪ್ರತಿ ಅತ್ತೆಯೂ ತನ್ನ ಸೊಸೆಯನ್ನು ಮಗಳೆಂದುಕೊಂಡರೆ ಯಾವುದೇ ಜಗಳಗಳು ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದು ಎಂದಿಗೂ ನಡೆಯದು. ಇಬ್ಬರೂ ಇಂತಹ ಭಾವನೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ತಾಯಿ ಕೂಡ ಮತ್ತೊಬ್ಬರಿಗೆ ಅತ್ತೆಯಾಗುವರು. ಹೀಗಾಗಿ ನೀವು ಅತ್ತೆಯನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಬೇಕಾಗಿರುವುದು ಅಗತ್ಯ. ತಾಯಿಯಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಆಕೆಗೆ ತನ್ನ ಮಗನ ಮದುವೆ ಬಳಿಕ ಸಂತೋಷ ಸಿಗಬೇಕು ಎಂದು ಬಯಸುವಳು. ಆಕೆ ನಿಮ್ಮ ತಾಯಿ ಅಲ್ಲದೆ ಇದ್ದರೂ ಆಕೆಯನ್ನು ತಾಯಿಯಂತೆ ಸಲುಹಿದರೆ, ಆಗ ನಿಮ್ಮ ಪತಿ ಹಾಗೂ ಕುಟುಂಬದವರ ಮನ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

Ways To Impress Your Mother-In-Law In Kannada

Here we told about Ways to Impress Your Mother-in-Law in Kannada, read on
X
Desktop Bottom Promotion