For Quick Alerts
ALLOW NOTIFICATIONS  
For Daily Alerts

ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಪಡೆಯುವುದು ಹೇಗೆ?

|

ಇಂದಿನ ದಿನಗಳಲ್ಲಿಯೂ ಕುಟುಂಬದ ಒಪ್ಪಿಗೆಯ ಮೇರೆಗೆ ಪ್ರೇಮ ವಿವಾಹವಾಗುವುದು ಒಂದು ರೀತಿಯ ಸವಾಲೇ ಸರಿ, ಏಕೆಂದರೆ, ಭಾರತೀಯ ಪೋಷಕರು ಪ್ರೇಮ ವಿವಾಹವನ್ನು ಸುಲಭವಾಗಿ ಒಪ್ಪಿಕೊಳ್ಳುವಂತಹ ಮನಸ್ಥಿತಿಗೆ ಬಂದಿಲ್ಲ. ಅದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ, ತಂದೆ-ತಾಯಿ ಕುಟುಂಬದ ಆಶೀರ್ವಾದ ಪಡೆದು, ಆಗುವ ಪ್ರೇಮ ವಿವಾಹಕ್ಕೆ ತುಸು ಬೆಲೆ ಜಾಸ್ತಿ ಅಂತಾನೇ ಹೇಳಬಹುದು.

ನೀವೇನದರೂ, ಪ್ರೇಮವಿವಾಹವಾಗಲು, ಮನೆಯವರನ್ನು ಒಪ್ಪಿಸಲು ಹೆಣಗಾಡುತ್ತಿದ್ದರೆ, ಈ ಲೇಖನ ನಿಮಗಾಗಿ. ಇಲ್ಲಿ ನಾವು ನಿಮ್ಮ ಹೆತ್ತವರನ್ನು ನೋಯಿಸದೇ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಲು ನೀವು ಮಾಡಬಹುದಾದ ಕೆಲವು ವಿಷಯಗಳನ್ನು ತಿಳಿಸಿದ್ದೇವೆ.

ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಪಡೆಯಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ನಿಮ್ಮ ಪ್ರೇಮಿಯಲ್ಲಿ ಉತ್ತಮವಾದದ್ದನ್ನು ನೋಡಲು ಅವರಿಗೆ ಸಹಾಯ ಮಾಡಿ:

ನಿಮ್ಮ ಪ್ರೇಮಿಯಲ್ಲಿ ಉತ್ತಮವಾದದ್ದನ್ನು ನೋಡಲು ಅವರಿಗೆ ಸಹಾಯ ಮಾಡಿ:

ನಿಮ್ಮ ಸಂಗಾತಿ ಹೊಂದಿರುವ ಎಲ್ಲಾ ಗುಣಲಕ್ಷಣಗಳಿಂದಾಗಿ ನೀವು ಅವರೊಂದಿಗೆ ಪ್ರೀತಿಯಲ್ಲಿರುತ್ತೀರಿ. ಆದರೆ, ನಿಮ್ಮ ಹೆತ್ತವರಿಗೆ ಅವರ ಬಗ್ಗೆ ತಿಳಿದಿಲ್ಲ. ಈ ವ್ಯಕ್ತಿ ನಿಮಗೆ ಏಕೆ ಆದರ್ಶ ಜೀವನ ಸಂಗಾತಿ ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡುವ ಮೂಲಕ ಅವರನ್ನು ಒಪ್ಪಿಸಿ. ನಿಮ್ಮ ಪ್ರೇಮಿಯ ಅವರ ಸ್ವಭಾವ, ಅಡುಗೆ ಕೌಶಲ್ಯ, ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಆರ್ಥಿಕ ಸ್ಥಿರತೆಯಂತಹ ಉತ್ತಮ ಗುಣಗಳನ್ನು ಪ್ರದರ್ಶಿಸಿ; ಇದು ನಿಮ್ಮ ಪೋಷಕರಿಗೆ ಮನವರಿಕೆ ಮಾಡಲು ಸಹಾಯ ಮಾಡುತ್ತದೆ.

ನೀವು ಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೀರಿ ಎಂದು ನಿಮ್ಮ ಪೋಷಕರಿಗೆ ಸಾಬೀತುಪಡಿಸಿ:

ನೀವು ಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೀರಿ ಎಂದು ನಿಮ್ಮ ಪೋಷಕರಿಗೆ ಸಾಬೀತುಪಡಿಸಿ:

ಸಾಮಾನ್ಯವಾಗಿ ನಿಮ್ಮ ಜೀವನದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಪೋಷಕರೇ ತೆಗೆದುಕೊಳ್ಳುತ್ತಾರೆ. ಏಕೆಂದರೆ, ಅವರ ಪ್ರಕಾರ, ನೀವಿನ್ನೂ ಚಿಕ್ಕವರು, ಯಾವುದೇ ಮಹತ್ವದ ವಿಚಾರದಲ್ಲಿ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅದರಿಂದ ಬರುವ ಸಮಸ್ಯೆಗಳನ್ನು ನಿಮ್ಮಿಂದ ಎದುರಿಸಲು ಸಾಧ್ಯವಿಲ್ಲ ಎಂದು ನಂಬಿರುತ್ತಾರೆ. ಆದರೆ, ಮೊದಲು ನಿಮ್ಮ ಪೋಷಕರಿಗೆ, ನಿಮ್ಮ ಸ್ವಂತ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುವಷ್ಟು ಸಮರ್ಥರು ಎಂಬುದನ್ನು ಮನವರಿಕೆ ಮಾಡಿಸಬೇಕು. ಇದಕ್ಕಾಗಿ ಉದಾಹರಣೆಗಳನ್ನು ನೀಡುವ ಮೂಲಕ ನೀವು ಪ್ರೌಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂಬುದನ್ನು ಪೋಷಕರಿಗೆ ಸಾಬೀತುಪಡಿಸಬೇಕು. ಇದು ನಿಮ್ಮ ಸ್ವಂತ ವೃತ್ತಿ ಮಾರ್ಗವನ್ನು ಆರಿಸಿಕೊಳ್ಳುವುದು ಮತ್ತು ಅದರಲ್ಲಿ ಯಶಸ್ವಿಯಾಗುವುದು ಅಥವಾ ಶಿಕ್ಷಣಕ್ಕಾಗಿ ಹೊಸ ನಗರದಲ್ಲಿ ಏಕಾಂಗಿಯಾಗಿ ವಾಸಿಸುವುದು ಮತ್ತು ಅವರ ಸಹಾಯವಿಲ್ಲದೆ ಜೀವನ ಸಾಗಿಸುವುದು ಆಗಿರಬಹುದು.

ಅವರ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯವನ್ನು ಪಡೆದುಕೊಳ್ಳಿ:

ಅವರ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯವನ್ನು ಪಡೆದುಕೊಳ್ಳಿ:

ನಿಮ್ಮ ಪೋಷಕರು ನಿಮ್ಮ ಮಾತನ್ನು ಸುಲಭವಾಗಿ ಕೇಳದಿದ್ದರೂ, ಅವರ ಸ್ನೇಹಿತರ ಅಥವಾ ಸಂಬಂಧಿಕರಿಂದ ಸಲಹೆಯನ್ನು ತೆಗೆದುಕೊಳ್ಳಲು ಹೆಚ್ಚು ಸಿದ್ಧರಿರಬಹುದು. ಆದ್ದರಿಂದ, ಪ್ರೇಮ ವಿವಾಹ ಆಗಿರುವ ಸಂಬಂಧಿಕರನ್ನು ಹುಡುಕಿ ಮತ್ತು ನಿಮ್ಮ ಹೆತ್ತವರಿಗೆ ಅದರ ಪ್ರಯೋಜನಗಳನ್ನು ತಿಳಿಸಲು ಹೇಳಿ. ನೀವು ಸ್ನೇಹಪರ ಚಿಕ್ಕಪ್ಪ ಮತ್ತು ಚಿಕ್ಕಮ್ಮರನ್ನು ಸಹಾಯ ಪಡೆಯಬಹುದು. ಅಂತಹ ಸಲಹೆಯನ್ನು ಅವರು ತಿಳಿದಿರುವ ಮತ್ತು ನಂಬುವ ವಯಸ್ಕರು ನೀಡಿದಾಗ ಅವರು ಗಂಭೀರವಾಗಿ ಕೇಳುವ ಸಾಧ್ಯತೆಯಿದೆ.

English summary

Ways to Convince your Parents for Love Marriage Without offending Them in Kannada

Here we talking about Ways to convince your parents for love marriage without offending them in Kannada, read on
Story first published: Saturday, January 22, 2022, 17:53 [IST]
X
Desktop Bottom Promotion