For Quick Alerts
ALLOW NOTIFICATIONS  
For Daily Alerts

ಮಗುವಾದ ಮೇಲೆ ದಾಂಪತ್ಯದಲ್ಲಿ ವಿರಸ ಅಧಿಕವಾಗುವುದು, ಏಕೆ?

|

ಮದುವೆಯಾದ ಮೇಲೆ ಮಗು ಆಗುವರೆಗಿನ ಪ್ರಪಂಚವೇ ಬೇರೆ, ಮಗುವಾದ ಮೇಲೆ ಅವರ ಪ್ರಪಂಚವೇ ಬೇರೆಯಾಗುವುದು. ಕೆಲವರು ಆ ಬದಲಾವಣೆಗೆ ಸುಲಭವಾಗಿ ಒಗ್ಗಿಕೊಂಡರೆ ಇನ್ನು ಕೆಲವರಿಗೆ ತುಂಬಾನೇ ಕಷ್ಟವಾಗುವುದು. ಮಗುವಾಗುವರೆಗೆ ಜಗಳವೇ ಆಡದ ಜೋಡಿ ಕೂಡ ಮಗುವಾದ ಮೇಲೆ ಜಗಳವಾಡಬಹುದು!

ನಮ್ಮ ಸಮಯಕ್ಕೆ ಮಗು ಹೊಂದಿಕೊಳ್ಳಲ್ಲ, ಅದರ ಸಮಯಕ್ಕೆ ನಾವು ಹೊಂದಿಕೊಳ್ಳಬೇಕಾಗುತ್ತದೆ. ಮಗು ಮಧ್ಯರಾತ್ರಿ ಎಚ್ಚರವಾದಾಗೆಲ್ಲ ನಾವೂ ಎದ್ದು ಕೂರಬೇಕು, ಇನ್ನು ಹಗಲಿನಲ್ಲಿ ಮಗು ಮಲಗಿರುವಾಗ ಸ್ವಲ್ಪ ರೆಸ್ಟ್‌ ಮಾಡೋಣ ಅಂದ್ರೆ ಬೇರೆ ಕೆಲಸಗಳು ಹಾಗೇ ಬಿದ್ದಿರುತ್ತವೆ, ಅವುಗಳನ್ನು ಮಾಡಿ ಮುಗಿಸಬೇಕಾಗುತ್ತದೆ ಹೀಗೆ ಮಗು, ಕೆಲಸದ ನಡುವೆ ಬ್ಯುಸಿಯಾಗಿ ದಂಪತಿ ನಡುವೆ ರೊಮ್ಯಾಂಟಿಕ್‌ ಕ್ಷಣವೆಂಬುವುದೇ ಅಪರೂಪವಾಗುವುದು. ಚಿಕ್ಕ-ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು, ಸಂಬಂಧ ಏಕೋ ಮೊದಲಿನಂತೆ ಇಲ್ಲ ಎಂದು ಅನಿಸಲಾರಂಭಿಸುತ್ತದೆ...

ಆ ರೀತಿ ಇಬ್ಬರಲ್ಲಿ ಒಬ್ಬರಿಗೆ ಅನಿಸಿದರೆ ಮುಂದೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮಗುವಾದ ಮೇಲೆ ದಂಪತಿಗೆ ಎದುರಾಗುವ ಸವಾಲು, ಅದನ್ನು ನಿಭಾಯಿಸುವುದು ಹೇಗೆ ಎಂದು ಹೇಳಲಾಗಿದೆ ನೋಡಿ:

ಜವಾಬ್ದಾರಿ ಹೆಚ್ಚುವುದು

ಜವಾಬ್ದಾರಿ ಹೆಚ್ಚುವುದು

ಮಗುವಾದ ಮೇಲೆ ಪೋಷಕರಿಗಾಗಿ ಜವಾಬ್ದಾರಿ ಹೆಚ್ಚುವುದು. ಮಗುವಿನ ಆರೈಕೆಗೆ ಒಬ್ಬರು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಮಗುವಾದ ಮೇಲೆ ತಾಯಿಗೆ ತನ್ನ ಸೌಂದರ್ಯ ಹಾಗೂ ದೇಹದ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಿಲ್ಲ. ಆಗ ಅವಳ ಬೆಂಬಲಕ್ಕೆ ಗಂಡ ನಿಂತರೆ ಆ ಸಂಸಾರ ತುಂಬಾ ಸುಂದರವಾಗಿರುತ್ತದೆ. ಮಗುವಿನ ಆರೈಕೆ ಜವಾಬ್ದಾರಿ ಅಂದ್ರೆ ಮಗುವನ್ನು ನಿದ್ದೆ ಮಾಡಿಸುವುದು, ಆಟ ಆಡಿಸುವುದು, ತಿನಿಸುವುದು, ಸ್ನಾನ ಮಾಡಿಸುವುದು ಇವೆಲ್ಲಾ ತಾಯಿಯೇ ಮಾಡಬೇಕೆಂದು ಕೂರದೆ ಪತ್ನಿಗೆ ಸಹಾಯ ಮಾಡಿದರೆ ಅವಳಿಗೂ ಸ್ವಲ್ಪ ವಿಶ್ರಾಂತಿ ಸಿಗುವುದು. ಅಲ್ಲದೆ ಈ ರೀತಿ ಮಾಡುವುದರಿಂದ ನಿಮ್ಮಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗುವುದು.

 ಮಗುವಾದ ಬಳಿಕ ಸಂಗಾತಿಯನ್ನು ದ್ವೇಷಿಸಲು ಪ್ರಾರಂಭಿಸಬಹುದು

ಮಗುವಾದ ಬಳಿಕ ಸಂಗಾತಿಯನ್ನು ದ್ವೇಷಿಸಲು ಪ್ರಾರಂಭಿಸಬಹುದು

ನನಗೆ ಏನೂ ಸಹಾಯ ಮಾಡುತ್ತಿಲ್ಲ ಎಂಬ ಕೋಪ ಪತ್ನಿಗೆ ಇದ್ದರೆ, ನನ್ನ ಪತ್ನಿ ಮೊದಲಿನಂತೆ ನನ್ನ ಜೊತೆ ಇಲ್ಲ ಎಂಬ ಅಸಮಧಾನ ಪತಿಗೆ ಬರಬಹುದು. ಇದಕ್ಕೆ ಒಂದು ಪರಿಹಾರವೆಂದರೆ ಮಗುವಿನ ಜವಾಬ್ದಾರಿ ಇಬ್ಬರು ಸಮಾನವಾಗಿ ತೆಗೆದುಕೊಳ್ಳುವುದು. ಜೊತೆಗೆ ಪರಿಸ್ಥಿತಿಯನ್ನು ಅರ್ತ ಮಾಡಿಕೊಳ್ಳಲು ಪ್ರಯತ್ನಿಸುವುದು.

ರೊಮ್ಯಾನ್ಸ್‌ ಅಪರೂಪವಾಗುವುದು

ರೊಮ್ಯಾನ್ಸ್‌ ಅಪರೂಪವಾಗುವುದು

ಮಗುವಾದ ಮೇಲೆ ನೀವಿಬ್ಬರೇ ರೊಮ್ಯಾಂಟಿಕ್ ಕ್ಷಣವನ್ನು ಕೆಲ ಕಾಲ ಕಳೆಯಬೇಕೆಂದು ಬಯಸಿದರೆ ಅದು ಕಷ್ಟವೇ.. ಮಗುವಾಗಿ ಕನಿಷ್ಠ 6 ವಾರಗಳ ಗಂಡ-ಹೆಂಡತಿ ಒಂದಾಗಬಾರದು, ಅದಾದ ಬಳಿಕ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯುವುದು ಒಳ್ಳೆಯದು. ಕೆಲವರಿಗೆ ಮಗುವಾದ ಬಳಿಕ ಲೈಂಗಿಕ ಕ್ರಿಯೆ ನಡೆಸುವಾಗ ಮೊದ-ಮೊದಲಿಗೆ ನೋವು ಕಾಣಿಸಬಹುದು. ದೇಹ ಮೊದಲಿನ ಸ್ಥಿತಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಸುಸ್ತು, ಮೂಡ್‌ ಸ್ವಿಂಗ್‌, ಮಗುವಿಗೆ ಎದೆ ಹಾಲುಣಿಸುವುದು ಈ ಎಲ್ಲಾ ಕಾರಣಗಳಿಂದ ನೀವು ಬಯಸಿದ ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯುವುದು ಸ್ವಲ್ಪ ಕಷ್ಟವೇ.

ಮಗು ಸ್ವಲ್ಪ ದೊಡ್ಡದಾಗುವವರೆಗೆ ನಿಮ್ಮದೇ ಖಾಸಗಿ ಕ್ಷಣ ಸಿಗುವುದು ಕಷ್ಟವೇ, ಮಗು ಎಚ್ಚರವಾಗಬಹುದು, ಅಳಬಹುದು. ಮಗುವನ್ನು ಸಮಧಾನ ಮಾಡುವಷ್ಟರಲ್ಲಿ ಆ ರೊಮ್ಯಾಂಟಿಕ್ ಮೂಡ್ ದೂರವಾಗಬಹುದು.

ಇದೇ ಕಾರಣಕ್ಕೆ ಸಂಗಾತಿಗೆ ನೀವು ಈಗೀಗ ಅವರ ಮೇಲೆ ಆಸಕ್ತಿ ಹೊಂದಿಲ್ಲ ಎಂದು ಅನಿಸಬಹುದು, ಇಬ್ಬರು ಮನಸ್ಸು ಬಿಚ್ಚಿ ಮಾತನಾಡುವುದರಿಂದ ಈ ತಪ್ಪು ಕಲ್ಪನೆ ತೆಗೆದು ಹಾಕಬಹುದು.

ಸಂಗಾತಿಗಿಂತ ಮಗುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು

ಸಂಗಾತಿಗಿಂತ ಮಗುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು

ಮಗುವಾಗುವ ಮೊದಲು ರೆಸಾರ್ಟ್, ಟ್ರಿಪ್, ಶಾಪಿಂಗ್ ಅಂತ ಕಳೆಯುತ್ತಿದ್ದವರು ಮಗುವಾದ ಮೇಲೆ ಮಗುವಿಗೆ ಡಯಾಪರ್‌ ಕೊಳ್ಳುವುದೇ ಶಾಪಿಂಗ್ ಅಂತಾಗುವುದು.. ಇನ್ನು ಒಂದು ಹೋಟೆಲ್‌ಗೆ ಹೋಗಿ ಇಷ್ಟದ ಊಟ ಆರಾಮವಾಗಿ ಕೂತು ತಿನ್ನೋಣ ಅಂದ್ರೆ ಸಾಧ್ಯವಾಗಲ್ಲ, ಮಗು ಅಳುವುದು, ಗಲಾಟೆ ಮಾಡುವುದು ಎಲ್ಲವೂ ಇರುತ್ತದೆ, ನಾವು ನಮ್ಮ ಸಂತೋಷಕ್ಕೆ ಹೆಚ್ಚಾಗಿ ಮಗು-ಮಗು ಅಂತ ಮಗುವಿನ ಬಗ್ಗೆ ಯೋಚನೆ ಮಾಡುತ್ತೇವೆ.. ಹೀಗಾಗಿ ಬೇಕಂತೂ ಅಲ್ಲ.. ನಮಗೆ ಗೊತ್ತಿಲ್ಲದೆ ಸಂಗಾತಿ ಕಡೆಗೆ ಗಮನ ಸ್ವಲ್ಪ ಕಡಿಮೆಯಾಗುವುದು.

ನಮ್ಮ ವರ್ತನೆಯಿಂದ ಸಂಗಾತಿಗೆ ಬೇಸರವಾಗುತ್ತಿದೆ ಎಂದು ಗೊತ್ತಾದರೆ ಅವರ ಜೊತೆ ಮುಕ್ತವಾಗಿ ಮಾತನಾಡಿ ಇದರಿಂದ ಪರಿಸ್ಥಿತಿ ಸರಿಪಡಿಸಬಹುದು. ಅಲ್ಲದೆ ಮಗು ಮೇಲೆ ಇಬ್ಬರಿಗೂ ಅಕ್ಕರೆ ಇರುವುದರಿಂದ ಮಗುವಿಗಾಗಿ ಇಬ್ಬರು ಹೊಂದಾಣಿಕೆ ಮಾಡಲು ಸಿದ್ಧ. ಹೀಗಾಗಿ ನಿಮ್ಮಿಬ್ಬರ ನಡುವೆ ಸಂವಹನ ಕಡಿಮೆಯಾಗದಂತೆ ನೋಡಿಕೊಳ್ಳಿ.

English summary

Ways Marriage Can Change After Baby in kannada

Ways marriage can change after baby in kannada, read on....
Story first published: Tuesday, August 3, 2021, 21:33 [IST]
X
Desktop Bottom Promotion