For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಅಭದ್ರತೆ ಕಾಡುತ್ತಿದೆಯಾ? ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

|

ಸಂಬಂಧದಲ್ಲಿ ಅಭದ್ರತೆ ಸಾಮಾನ್ಯವಾದರೂ, ಅದು ಅತಿರೇಕಕ್ಕೆ ಹೋಗಬಾರದು. ತನ್ನ ಸಂಗಾತಿ, ತನ್ನನ್ನು ಬಿಟ್ಟು ಬೇರೆ ಯಾರನ್ನೋ ಇಷ್ಟಪಡುತ್ತಾನೋ, ಯಾರಿಗಾದರೂ ಹತ್ತಿರವಾಗುತ್ತಾನೋ ಎಂಬುದು ಪ್ರೀತಿಯ ಲಕ್ಷಣವಾಗಿದ್ದರೂ, ಇದೇ ಮನೋಭಾವ ಹೆಚ್ಚಾದರೆ, ನಿಮ್ಮ ಸಂಗಾತಿಗೆ ಉಸಿರುಗಟ್ಟಿದ ಅನುಭವ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ತಮ್ಮ ರೂಪ, ನೋಟ ಇಂತಹ ನಾನಾಕಾರಣಗಳ ಕುರಿತು ಸ್ವಯಂ ಅನುಮಾನಗಳೇ ಈ ಅಭದ್ರತೆಗೆ ಕಾರಣಗಳಾಗಿವೆ. ಆದ್ದರಿಂದ ಈ ಆಲೋಚನೆಗಳನ್ನು ದೂರಮಾಡುವ ಪ್ರಯತ್ನ ಪಟ್ಟರೆ, ಧನಾತ್ಮಕ ಫಲಿತಾಂಶ ಪಡೆಯಬಹುದು. ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

1. ಪ್ರೆಸೆಂಟ್ ನ್ನು ಪಾಸ್ಟ್ ನೊಂದಿಗೆ ಹೋಲಿಸುವುದನ್ನು ನಿಲ್ಲಿಸಿ:

1. ಪ್ರೆಸೆಂಟ್ ನ್ನು ಪಾಸ್ಟ್ ನೊಂದಿಗೆ ಹೋಲಿಸುವುದನ್ನು ನಿಲ್ಲಿಸಿ:

ಹಳೆಯದನ್ನು ನೆನಯುತ್ತಾ ಕುಳಿತಿರುವುದರಿಂದ ಏನೂ ಪ್ರಯೋಜನ ಇಲ್ಲ ಎಂಬುದನ್ನು ಮೊದಲು ನೆನಪಿಡಿ. ಹಿಂದೆ ಹಾಗಿತ್ತು, ಈಗ ಹೀಗ್ಯಾಕೆ ಅನ್ನೋ ವಿಚಾರ ಬೇಡ, ಏಕೆಂದರೆ, ಕಾಲಕಾಲಕ್ಕೆ ಎಲ್ಲವೂ ಬದಲಾಗುತ್ತದೆ. ನಡೆದುಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ, ಅದೇ ರೀತಿ, ಮುಂದಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಚಿಂತೆ ಬಿಟ್ಟು, ಭವಿಷ್ಯದಲ್ಲಿ ನೀವೇನೂ ಮಾಡಬೇಕು, ಉತ್ತಮ ಜೀವನ ಮಾಡಲು ಎಂತಹ ಕೆಲಸ ಮಾಡಬೇಕು ಎಂಬುದನ್ನಷ್ಟೇ ಯೋಚಿಸಿ. ಇದರಿಂದ ಉತ್ತಮ ಭವಿಷ್ಯ ನಿಮ್ಮದಾಗಬಹುದು.

2. ಇಲ್ಲದಿರುವ ಸಮಸ್ಯೆಗಳ ಬಗ್ಗೆ ಚಿಂತಿಸುವುದು:

2. ಇಲ್ಲದಿರುವ ಸಮಸ್ಯೆಗಳ ಬಗ್ಗೆ ಚಿಂತಿಸುವುದು:

ಒಂದು ಕಟು ಸತ್ಯವೆಂದರೆ ಗೋಚರಿಸದೇ ಇರುವ ಸಮಸ್ಯೆಗಳನ್ನು ಹುಡುಕಲು ಹೋಗುತ್ತೇವೆ. ನೀವು ಅಂದುಕೊಂಡಂತೆ ನಿಮ್ಮ ಸಂಗಾತಿ ಯಾವುದೇ ಮೋಸ ಮಾಡುತ್ತಿರುವುದಿಲ್ಲ. ಆದರೆ ನೀವೇ ಇಲ್ಲದಿರುವ ಸಮಸ್ಯೆಗಳನ್ನು ಯೋಚಿಸುತ್ತಾ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುತ್ತೀರಿ. ಇದು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ ಮತ್ತು ಜಗಳಕ್ಕೆ ಕಾರಣವಾಗಬಹುದು. ನಿಮ್ಮ ತಲೆಯಲ್ಲಿ ಇಲ್ಲಸಲ್ಲದ ಆಲೋಚನೆಗಳನ್ನು ಬೆಳೆಸಿಕೊಳ್ಳುವುದಕ್ಕಿಂತ ನಿಮ್ಮ ಸಂಗಾತಿಯೊಂದಿಗೆ ಸಂವಹನ ನಡೆಸುವ ಮೂಲಕ ನೇರವಾಗಿ ಪರಿಹರಿಸಿಕೊಳ್ಳಬಹುದು.

3. ನಿಮಗೆ ನೀವೇ ಪ್ರಾಮಾಣಿಕರಾಗಿರಿ:

3. ನಿಮಗೆ ನೀವೇ ಪ್ರಾಮಾಣಿಕರಾಗಿರಿ:

ಎಲ್ಲವೂ ಮೊದಲು ನಿಮ್ಮಿಂದಲೇ ಆರಂಭವಾಗುತ್ತದೆ, ಅದು ಒಳ್ಳೆಯ ಆಲೋಚನೆಗಳಾಗಲೀ ಅಥವಾ ಬೇಡದ ಕೆಟ್ಟ ಚಿಂತೆಗಳೇ ಆಗಲಿ. ನೀವೇ ನಿಮ್ಮನ್ನು ಪ್ರೀತಿಸದಿದ್ದರೆ, ಆ ಪ್ರೀತಿಯನ್ನು ಬೇರೆಯವರಿಂದ ನಿರೀಕ್ಷಿಸುವುದು ಕಷ್ಟ. ನಿಮ್ಮ ಅಭದ್ರತೆಯ ಮೂಲ ಕಾರಣ ನಿಮ್ಮೊಳಗೆ ಉದ್ಭವಿಸುತ್ತದೆ. ಆದ್ದರಿಂದ ಅದನ್ನು ಹೋಗಲಾಡಿಸಲು ಏನು ಮಾಡಬೇಕು ಅದನ್ನು ನೀವೇ ಆಲೋಚಿಸಿಬೇಕು, ಕಾರ್ಯರೂಪಕ್ಕೆ ತರಬೇಕು. ನೀವು ನಿಮ್ಮನ್ನು ಪ್ರೀತಿಸಿದಾಗ, ಇತರರೂ ಅದೇ ರೀತಿ ಭಾವಿಸುವುದನ್ನು ಕಾಣಬಹುದು.

4. ಓವರ್‌ ಥಿಂಕಿಂಗ್ ಬೇಡ:

4. ಓವರ್‌ ಥಿಂಕಿಂಗ್ ಬೇಡ:

ಮಾನವ ಮನಸ್ಸು ಬೇಡದ ಸನ್ನಿವೇಶಗಳಿಗೆ ಬೇಗ ತೆರೆದುಕೊಳ್ಳುತ್ತದೆ. ಅಸುರಕ್ಷಿತತೆಯ ಸಾಮಾನ್ಯ ಚಿಹ್ನೆಗಳೆಂದರೆ ಪ್ರತಿಯೊಂದು ಸನ್ನಿವೇಶವನ್ನೂ ಅತಿಯಾಗಿ ಯೋಚಿಸುವುದು. ಈ ಕಲ್ಪನೆಯು ಅನಗತ್ಯ ಅನುಮಾನಗಳನ್ನು ಸೃಷ್ಟಿಸುತ್ತದೆ. ಇದರಿಂದ ನಿಮ್ಮ ಮುಂದಿರುವ ಸಂಗಾತಿಯ ಜೊತೆಗೆ ಖುಷಿಯಾಗಿರುವುದನ್ನು ಸಹ ತಡೆಯುತ್ತದೆ. ನಿಮ್ಮ ಸಂಗಾತಿ ಏನು ಯೋಚಿಸುತ್ತಿದ್ದಾರೆಂಬುದನ್ನು ನೀವು ನಿರಂತರವಾಗಿ ಯೋಚಿಸುತ್ತಿದ್ದರೆ, ಅವರ ಸಹವಾಸವನ್ನು ಆನಂದಿಸಲು ಆಗುವುದಿಲ್ಲ. ಅವರ ಎಲ್ಲಾ ಮಾತುಗಳನ್ನು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ.

5. ನಿಮ್ಮೊಂದಿಗೆ ಮಾತನಾಡಿಕೊಳ್ಳಿ:

5. ನಿಮ್ಮೊಂದಿಗೆ ಮಾತನಾಡಿಕೊಳ್ಳಿ:

ನಿಮಗೆ ನಿಮ್ಮ ಮೇಲೆ ಅನುಮಾನ ಹುಟ್ಟುತ್ತದೆ ಎಂದರೆ, ಅದನ್ನು ಹೊರಹಾಕಿ ಅಥವಾ ಅದರಿಂದ ಹೊರಬನ್ನಿ. ನೀವು ನಿಮ್ಮೊಂದಿಗೆ ಮಾತನಾಡಿಕೊಂಡು, ಹಾಗಲ್ಲ ಹೀಗೆ ಎಂದು ಮನದಟ್ಟುಮಾಡಿಕೊಳ್ಳಿ. ಸಾಧ್ಯವಾದಷ್ಟು ಜೋರಾಗಿ ಅಳಿ, ಆದರೆ ನಿಮ್ಮನ್ನು ದೂಷಿಸಬೇಡಿ. ಶಾಂತವಾದಾಗ, ಪರಿಸ್ಥಿತಿಯಿಂದ ಹೊರಬನ್ನಿ. ಇದಕ್ಕಾಗಿ ಒಂದು ಸಣ್ಣ ದಿನಚರಿಯನ್ನು ನಿರ್ವಹಿಸಿ. ಇದು ನಿಮಗೆ ಸಾಕಷ್ಟು ಆತ್ಮವಿಶ್ವಾಸ ನೀಡುತ್ತದೆ. ನಿಮಗೆ ಬೇಜಾರಾದಾಗೆಲ್ಲಾ ಆ ಡೈರಿಯನ್ನು ಓದಿ, ಇದು ನಿಮಗೆ ಪರಿಸ್ಥಿತಿ ಎದುರಿಸಲು ಸಹಾಯ ಮಾಡುತ್ತದೆ.

English summary

Tips on How To Deal With Insecurity In A Relationship in Kannada

Being insecure is okay to an extent but anything in excess is gets toxic. If you take a little extra effort and let go of the negativity pinning you down, you will notice the difference in being positive. Here we talking about Tips on How To Deal With Insecurity In A Relationship in Kannada, read on
Story first published: Wednesday, August 18, 2021, 14:21 [IST]
X
Desktop Bottom Promotion