For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೀತಿಪಾತ್ರರು ತುಂಬಾ ನೋವಿನಲ್ಲಿದ್ದರೆ ಅವರನ್ನು ಸಂತೈಸುವುದು ಹೇಗೆ, ಇಲ್ಲಿದೆ ಟಿಪ್ಸ್

|

ಎಲ್ಲರಿಗೂ ಜೀವನದಲ್ಲಿ ಸಮಸ್ಯೆಗಳು ಇದ್ದೆ ಇದೆ. ಕೆಲವರು ಈ ಸಮಸ್ಯೆ ಅನ್ನೋ ಯುದ್ಧದ ವಿರುದ್ಧ ಸೆಣಸಾಡಿ ಗೆಲ್ಲುತ್ತಾರೆ. ಇನ್ನು ಕೆಲವರು ಯುದ್ಧ ಮಾಡುವ ಮೊದಲೇ ಶಸ್ತ್ರ ತ್ಯಾಗ ಮಾಡುವುದುಂಟು. ಆದರೆ ನಾವು ತೀವ್ರ ನೋವಿನಲ್ಲಿದ್ದಾಗ ಯಾರಾದರೂ ನಮಗೆ ಸಾಂತ್ವನ ಹೇಳಿದರೆ ನಮ್ಮ ನೋವು ಕಡಿಮೆಯಾಗುವುದುಂಟು.

123

ಹಾಗಾಂತ ಎಲ್ಲರಿಗೂ ಸಾಂತ್ವನ ಮಾಡುವ ಸ್ಕಿಲ್ ಇರುವುದಿಲ್ಲ. ಕೆಲವರಿಗೆ ಒಬ್ಬ ವ್ಯಕ್ತಿ ನೋವಲ್ಲಿ ಇದ್ದಾನೆ ಅಂತನೂ ಗೊತ್ತಾಗುವುದಿಲ್ಲ. ಹಾಗಾದರೆ ನಿಮ್ಮ ಸುತ್ತಲು ಇರುವ ವ್ಯಕ್ತಿಗಳು ಭಾವನಾತ್ಮಕವಾಗಿ ನೋವನ್ನು ಅನುಭವಿಸುತ್ತಿದ್ದರೆ ಅಥವಾ ನಷ್ಟವನ್ನು ಅನುಭವಿಸುತ್ತಿದ್ದರೆ ಅವರನ್ನು ನೀವು ಹೇಗೆ ಸಂತೈಸುತ್ತೀರಿ. ಅವರ ಜೊತೆ ನೀವಿದ್ದೀರಿ ಎನ್ನುವುದನ್ನು ನೀವು ಹೇಗೆ ಅವರಿಗೆ ಅರ್ಥ ಮಾಡಿಸುತ್ತೀರಿ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ನೀವು ಇದ್ದರೆ ಸಾಕಾಗುತ್ತೆ!

ನೀವು ಇದ್ದರೆ ಸಾಕಾಗುತ್ತೆ!

ನಿಮ್ಮ ಅಕ್ಕ ಪಕ್ಕದಲ್ಲಿ ಇರುವ ವ್ಯಕ್ತಿ ಭಾವನಾತ್ಮಕವಾಗಿ ಕುಗ್ಗಿ ಹೋಗಿರುತ್ತಾನೆ. ಈ ವೇಳೆ ಆತನಿಗೆ ನೀವು ಸಾಂತ್ವನದ ಪದಗಳು ಹೇಳ ಬೇಕಿಲ್ಲ. ಅವರ ಜೊತೆ ಇದ್ದರೆ ಸಾಕು, ಅವರಿಗೆ ಯಾವುದೇ ಸಮಸ್ಯೆಯನ್ನು ಎದುರಿಸುವ ಶಕ್ತಿ ಸಿಗುತ್ತದೆ. ಹೌದು, ಯಾವುದೇ ದೊಡ್ಡ ಸಮಸ್ಯೆಯಲ್ಲಿದ್ದರು ನಮ್ಮ ಒಂದು ಪ್ರೆಸೆನ್ಸ್ ಸಾಕು ಅವರಿಗೆ ಹೋರಾಡುವ ಶಕ್ತಿ ನೀಡುತ್ತದೆ. ಉದಾಹರಣೆಗೆ ನಿಮ್ಮ ನೆರೆಮನೆ ಅಥವಾ ನಿಮ್ಮ ಸಂಬಂಧಿಕರ ಮನೆಯಲ್ಲಿ ಯಾರಾದರೂ ಸತ್ತಿದ್ದಾರೆ ಅಂದುಕೊಳ್ಳಿ. ಆ ಕುಟುಂಬವೇ ಸಂಪೂರ್ಣವಾಗಿ ಕುಗ್ಗಿ ಹೋಗಿರುತ್ತದೆ. ಈ ವೇಳೆ ನೀವು ಅಲ್ಲಿಗೆ ಹೋಗಿ ಯಾವುದೇ ಕೆಲಸ ಮಾಡಬೇಕೆಂದಿಲ್ಲ ಅಥವಾ ಅವರಿಗೆ ಸಾಂತ್ವನ ಹೇಳಬೇಕಿಲ್ಲ. ಅವರ ಮನೆಗೆ ಹೋದರೆ ಸಾಕು ಅವರಿಗೇನೋ ಧೈರ್ಯ ಮೂಡುತ್ತದೆ. ಹೀಗೆ ನೀವು ನಿಮ್ಮವರ ಜೊತೆ ನಿಂತ ಖುಷಿಯು ಆಗುತ್ತದೆ.

ಸುಮ್ಮನೆ ಮಾತನಾಡದೆ ಇರುವುದು!

ಸುಮ್ಮನೆ ಮಾತನಾಡದೆ ಇರುವುದು!

ಒಂದು ಮನೆಯಲ್ಲಿ ಸಾವು ಸಂಭವಿಸಿರುತ್ತದೆ. ಈ ವೇಳೆ ನಾವು ಅಲ್ಲಿಗೆ ಹೋಗುವುದು ಇದು ಅವರಿಗೆ ನಾವು ನೀಡುವ ನೈತಿಕ ಬೆಂಬಲವಾಗುತ್ತದೆ. ಇದರಿಂದ ಅವರಿಗೆ ಧೈರ್ಯವೂ ಸಿಗುತ್ತದೆ. ಇನ್ನು ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ ಅಥವಾ ಅವರ ಜೊತೆ ನಾವಿದ್ದೇವೆ ಎಂದು ತೋರಿಸಲು ಸೈಲೆಂಟ್ ಆಗಿರುವುದು ಒಳ್ಳೆಯ ಕೆಲಸ. ಯಾಕೆಂದರೆ ನಾವು ಸೈಲೆಂಟ್ ಆಗಿದ್ದೇವೆ ಎಂದರೆ ಈ ಘಟನೆಯಿಂದ ನಮಗೂ ನೋವಾಗಿದೆ ಅನ್ನುವುದನ್ನು ನಾವು ತೋರಿಸಬಹುದಾಗಿದೆ. ಅಂದರೆ ಸಾವು ಸಂಭವಿಸಿದ ಮನೆಯಲ್ಲಿ ನಾವು ನಗುತ್ತ ಮಾತಾಡಿದರೆ ಅದು ಶೋಭೆ ತರುವುದಿಲ್ಲ.ಅಲ್ಲದೇ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ತೋರಿಸಿದಂತೆ ಆಗುತ್ತದೆ. ಹೀಗಾಗಿ ಸೈಲೆಂಟ್ ಅಥವಾ ಮಾತನಾಡದೆ ಸುಮ್ಮನಿರುವ ಮೂಲಕ ನಮ್ಮ ದುಖಃ, ನೋವು ಪ್ರಕಟಿಸಬಹುದಾಗಿದೆ.

ಮಾತಿನ ಸಾಂತ್ವನ!

ಮಾತಿನ ಸಾಂತ್ವನ!

ನೀವು ಕೊಂಚ ಸಮಯ ಸೈಲೆಂಟ್ ಆಗಿದ್ದು ನಿಮ್ಮ ನೋವು, ದುಖಃವನ್ನು ತೋರಿಸಬಹುದು. ಆದರೆ ದೀರ್ಘಕಾಲ ಹೀಗಿರಲು ಸಾಧ್ಯವಿಲ್ಲ. ಯಾಕೆಂದರೆ ನೀವು ಮಾತಿನಲ್ಲಿ ಸಾಂತ್ವನ ಹೇಳಲೇಬೇಕು. ಉದಾಹರಣೆಗೆ ನೀವು ಸಾವಿನ ಮನೆಗೆ ಹೋದರೆ ಅಲ್ಲಿ ಪ್ರೀತಿ ಪಾತ್ರರನ್ನು ಕಳೆದುಕೊಂಡ ದುಖಃವನ್ನು ನಿಮ್ಮ ಬಳಿ ಬಂದು ಹೇಳಿದರೆ ನೀವು ಸೈಲೆಂಟ್ ಆಗಿ ಇದ್ದರೆ ಅದು ತಪ್ಪಾಗುತ್ತೆ. ಹೀಗಾಗಿ ಇಲ್ಲಿ ಮಾತು ಮುಖ್ಯ, ಮಾತಿನ ಮೂಲಕ ಅವರನ್ನು ಸಾಂತ್ವನಗೊಳಿಸಬೇಕಾಗುತ್ತದೆ. ಆದರೆ ಮಾತನಾಡುವಾಗ ನಿಮ್ಮ ತಲೆಯಲ್ಲಿ ಇರಬೇಕಾದ ಮುಖ್ಯ ಅಂಶ ಎಂದರೆ, ನಾವು ಯಾವ ರೀತಿ ಮಾತನಾಡಬೇಕು? ಏನು ಪ್ರಶ್ನೆ ಕೇಳಬೇಕು? ಏನು ಉತ್ತರ ನೀಡಬೇಕು? ಎನ್ನುವುದು ಗಮನದಲ್ಲಿರಬೇಕು. ಯಾಕೆಂದರೆ ನಮ್ಮ ಮಾತು ನೊಂದವರಿಗೆ ಮತ್ತೇ ನೋವು ನೀಡುವಂತೆ ಇರಬಾರದು.

ಮಾತನಾಡುವಾಗ ಜಾಗೃತವಾಗಿರಿ!

ಮಾತನಾಡುವಾಗ ಜಾಗೃತವಾಗಿರಿ!

ಈ ಜಗತ್ತಿನಲ್ಲಿ ಕೆಲವರು ಹೇಗೆ ಇರುತ್ತಾರೆ ಎಂದರೆ ಅವರಿಗೆ ಯಾವ ಸ್ಥಳದಲ್ಲಿ ಯಾರ ಹತ್ರ ಏನು ಮಾತನಾಡುತ್ತಾರೆ ಅನ್ನುವುದು ಗೊತ್ತಿರುವುದಿಲ್ಲ. ಹೀಗಾಗಿ ನಿಜಕ್ಕೂ ನಿಮ್ಮ ಪ್ರೀತಿ ಪಾತ್ರರು ಅಥವಾ ನಿಮ್ಮ ಅಪ್ಪ ಪಕ್ಕದವರು ಸಮಸ್ಯೆಯಲ್ಲಿದ್ದರೆ ಅವರನ್ನು ಮಾತುಗಳಿಂದ ಸಾಂತ್ವನಪಡಿಸಲು ಮುಂದಾಗಿದ್ದರೆ ಯಾವುದೇ ರೀತಿಯ ಊಹೆಗಳ ಮಾತನ್ನು ಅವರ ಮುಂದೆ ಹೇಳಬೇಡಿ. ನಿಮ್ಮ ಮಾತು ಅವರನ್ನು ಸಮಾಧಾನ ಪಡಿಸುವಂತೆ ಇರಬೇಕು. ಮಾತುಗಳ ಚೌಕಟ್ಟಿನ ಬಗ್ಗೆ ನಮಗೆ ಗೊತ್ತಿರಬೇಕು. ಉದಾಹರಣೆಗೆ ಒಬ್ಬ ಯುವಕ ಬೈಕ್ ನಲ್ಲಿ ಸತ್ತಿರುತ್ತಾನೆ ಎಂದಂದುಕೊಳ್ಳಿ. ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವಾಗ ಆತ ತುಂಬ ಸ್ಪೀಡ್ ನಲ್ಲಿ ಇದ್ದು ಸತ್ತ, ಮದ್ಯಪಾನದಿಂದ ಸತ್ತ ಎನ್ನುವ ಅವರ ಮನಸ್ಸನ್ನು ಘಾಸಿಗೊಳಿಸುವಂತಹ ಹೇಳಿಕೆಗಳನ್ನು ನೀಡಬಾರದು.

ಅವರ ಮಾತುಗಳನ್ನು ಕೇಳಿ!

ಅವರ ಮಾತುಗಳನ್ನು ಕೇಳಿ!

ನಿಮ್ಮ ಪರಿಚಯಸ್ಥರು ತೀವ್ರ ತರದ ಭಾವನಾತ್ಮಕ ಸಮಸ್ಯೆಯಲ್ಲಿದ್ದರೆ ಅವರು ಏನಾನ್ನದರೂ ಹೇಳಬೇಕು ಎಂದು ಬಯಸಿದರೆ ಅವರ ಮಾತನ್ನು ನಾವು ಕೇಳಬೇಕು. ನಾವು ಅವರು ಹೇಳುವಾಗ ಅಡ್ಡ ಬಾಯಿ ಹಾಕಬಾರದು. ಅಥವಾ ಅವರು ಹೇಳುವಾಗ ನಾವು ಅಭಿಪ್ರಾಯ ತಿಳಿಸಬಾರದು. ಇದರಿಂದ ಅವರಿಗೆ ನೋವು ಇಮ್ಮಡಿಯಾಗುತ್ತದೆ. ಬೇಜಾರು ಇಳಿದು ಹೋಗಲ್ಲ. ಅವರು ತಮ್ಮ ನೋವನ್ನು ಮಾತಿನಲ್ಲಿ ನಮಗೆ ಹೇಳಿದರೆ ಅದನ್ನು ನಾವು ಪೂರ್ಣವಾಗಿ ಕೇಳುವುದು ನಾವು ಅವರಿಗಾಗಿ ಮಾಡುವ ಉತ್ತಮ ಕಾರ್ಯ. ಈ ವೇಳೆ ಅವರ ಮನಸ್ಸಿನಲ್ಲಿ ಇರುವ ನೋವು, ಭಾರ ಇಳಿದು ಹೋಗುತ್ತದೆ.

ನಿಮ್ಮ ಬಗ್ಗೆ ಸಮಯ ನೋಡಿಕೊಂಡು ಹೇಳಬಹುದು!

ನಿಮ್ಮ ಬಗ್ಗೆ ಸಮಯ ನೋಡಿಕೊಂಡು ಹೇಳಬಹುದು!

ಕೆಲವರು ಭಾವನಾತ್ಮಕವಾಗಿ ಬೇಜಾರಿನಲ್ಲಿದ್ದರೆ ಬೇರೆಯವರು ಹೇಳುವುದನ್ನು ಕೇಳಲು ಬಯಸುತ್ತಾರೆ. ಆ ವೇಳೆ ನಾವು ನಮ್ಮ ಜೀವನದಲ್ಲಿ ನಡೆದಿರುವ ಘಟನೆಯನ್ನು ಸಮಯಕ್ಕೆ ತಕ್ಕಂತೆ ಹೇಳಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆಗಿ ಸೂಸೈಡ್ ಮಾಡುವ ಹಂತಕ್ಕೆ ತಲುಪಿರುತ್ತಾನೆ. ಈ ವೇಳೆ ಆತನಿಗೆ ನಾವು ಕಡಿಮೆ ಅಂಕ ತೆಗೆದಿದ್ವಿ, ನಾವು ಫೇಲ್ ಆಗಿದ್ವಿ ಅಂತ ಹೇಳಿ ಸಾಂತ್ವನ ಮಾಡಬಹುದು. ಸಮಯ ನೋಡಿಕೊಂಡು ನಮ್ಮನ್ನು ಅವರಿಗೆ ಉದಾಹರಣೆಯಾಗಿ ಹೇಳಬಹುದು.

ನೋವಿನಲ್ಲಿದ್ದರೆ ಅಡ್ವಾಯ್ಸ್ ಮಾಡಬೇಡಿ!

ನೋವಿನಲ್ಲಿದ್ದರೆ ಅಡ್ವಾಯ್ಸ್ ಮಾಡಬೇಡಿ!

ನಿಮ್ಮ ಪರಿಚಯಸ್ಥರು ತೀವ್ರವಾಗಿ ನೋವಿನಲ್ಲಿದ್ದರೆ ಅಥವಾ ದುಖಃದಲ್ಲಿ ಇದ್ದರೆ ಅವರಿಗೆ ಅಡ್ವಾಯ್ಸ್ ಮಾಡಲು ಹೋಗಬೇಡಿ. ಇದು ಅವರಿಗೆ ಕೋಪ ತರಿಸಬಹುದು ಅಥವಾ ಅವರಿಗೆ ದುಖಃ ಇನ್ನಷ್ಟು ಜಾಸ್ತಿಯಾಗಬಹುದು. ಹೌದು, ವ್ಯಕ್ತಿ, ಸಮಯ ನೋಡಿಕೊಂಡು ಅಡ್ವಾಯ್ಸ್ ಮಾಡಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಪತ್ನಿ ಆಫೀಸ್ ವಿಚಾರದಲ್ಲಿ ತಲೆ ಕೆಡಿಸಿಕೊಂಡು ತುಂಬಾ ದುಖಃದಲ್ಲಿದ್ದರೆ ಅವರ ಜೊತೆ ಇರಿ, ನಾನು ನಿನ್ನ ಜೊತೆ ಇದ್ದೀನಿ ಎಂದು ಹೇಳಿ. ಅದು ಬಿಟ್ಟು ಆಫೀಸ್ ಅಂದರೆ ಹಾಗೇ ಹೀಗೆ ಎಂದು ಫಿಲಾಸಫಿ ಹೇಳಬೇಡಿ. ಇದು ಅವರಿಗೆ ತೀವ್ರ ನೋವಾಗುತ್ತದೆ.

ಸಹಾಯ ಮಾಡಿ!

ಸಹಾಯ ಮಾಡಿ!

ಅಡ್ವಾಯ್ಸ್ ಮಾಡುವ ಬದಲು ಅವರಿಗೆ ಸಹಾಯ ಮಾಡಬಹುದು. ಉದಾಹರಣೆ ನಿಮ್ಮ ಪತ್ನಿ ಕಚೇರಿ ವಿಚಾರದಿಂದ ದುಖಃದಲ್ಲಿದ್ದರೆ ಅವರಿಗೆ ಮನೆಯ ಆಹಾರ ತಯಾರಿಸಲು ಸಹಾಯ ಮಾಡಿ ಅಥವಾ ನೀವೆ ಹೊರಗಿನಿಂದ ಊಟ ತಂದುಕೊಟ್ಟು ಅವರನ್ನು ಸಾಂತ್ವನ ಮಾಡಬಹುದು. ಇನ್ನು ನಿಮ್ಮ ಗೆಳೆಯ ಬೈಕ್ ಆಕ್ಸಿಡೆಂಟ್ ನಲ್ಲಿ ಆಸ್ಪತ್ರೆಯಲ್ಲಿ ಮಲಗಿ ಖಿನ್ನತೆಯಲ್ಲಿದ್ದರೆ ಆತನಿಗೆ ಊಟ ತಂದು ಕೊಡುವುದು ಹೀಗೆ ಅವರ ನೋವು ದುಖಃವನ್ನು ನಿವಾರಿಸಬಹುದು.

ಫಾಲೋ ಅಪ್ ಮಾಡುವುದು!

ಫಾಲೋ ಅಪ್ ಮಾಡುವುದು!

ನಿಮ್ಮ ಪರಿಚಯಸ್ಥರು ನೋವು ಅಥವಾ ದುಖಃದಲ್ಲಿ ಇದ್ದರೆ ಆ ಕ್ಷಣದಲ್ಲಿ ಮಾರಿನ್ ಸಾಂತ್ವನ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೇ ಮತ್ತೆ ಅವರ ದುಖಃದ ಬಗ್ಗೆ ಫಾಲೋಅಪ್ ಮಾಡುವುದು ಅವರಿಗೆ ಇನ್ನಷ್ಟು ಖುಷಿ ಹಾಗೂ ಧೈರ್ಯ ನೀಡುತ್ತದೆ. ಯಾಕೆಂದರೆ ದುಖಃವಾದಗ ಅಥವಾ ನೋವಲ್ಲಿ ಇರುವಾಗ ವಿಚಾರಿಸಲು, ಸಾಂತ್ವನ ಹೇಳಲು ಅನೇಕರು ಇರುತ್ತಾರೆ. ಆದರೆ ದಿನ ಕಳೆದಂತೆ ಯಾರು ಇರುವುದಿಲ್ಲ. ಹೀಗಾಗಿ ಫೋನ್ ಮೂಲಕವೋ ಅಥವಾ ಮನೆಗೆ ಭೇಟಿ ನಿಡಿಯೋ ಅವರ ನೋವಿನ ದುಖಃದ ಬಗ್ಗೆ ವಿಚಾರಿಸಬಹುದು.

English summary

Tips for supporting someone through emotional pain and loss in Kannada

Here we are discussing about 10 tips for supporting someone through emotional pain and loss in kannada des : 10 tips for supporting someone through emotional pain and loss in kannada, read on..
Story first published: Friday, July 29, 2022, 10:51 [IST]
X
Desktop Bottom Promotion