For Quick Alerts
ALLOW NOTIFICATIONS  
For Daily Alerts

ಉತ್ತಮ ಭಾಂದವ್ಯಕ್ಕೆ ಪ್ರತಿದಿನ ಬೆಳಿಗ್ಗೆ ಅನುಸರಿಬೇಕಾದ ಕಪಲ್ ಗೋಲ್ಸ್ಗಳಿವು

|

ನಮ್ಮ ದಿನ ಚೆನ್ನಾಗಿರಬೇಕಾದರೆ, ದಿನದ ಆರಂಭ ಉತ್ಸಾಹಭರಿತವಾಗಿರಬೇಕು. ಆಗ ತನ್ನಿಂದ ತಾನಾಗಿಯೇ ಎಲ್ಲವೂ ಸರಿ ದಾರಿಯಲ್ಲಿ ಸಾಗುತ್ತದೆ. ಇದು ದಂಪತಿಗಳ ವಿಷಯದಲ್ಲೂ ಹೊರತಾಗಿಲ್ಲ. ತಮ್ಮ ನಡುವಿನ ಪ್ರೀತಿ, ಬಂಧ, ಸಾಮರಸ್ಯ ಹೆಚ್ಚಾಗಲು ಬೆಳಗಿನ ಸಮಯಕ್ಕಿಂತ ಉತ್ತಮ ಸಮಯ ಬೇರೋಂದಿಲ್ಲ ಎಂಬುದು ಅನುಭವ ಇರುವವರ ಮಾತು.

ಹೌದು, ಸಂಬಂಧ ಗಟ್ಟಿಯಾಗಲು ಬೆಳಗ್ಗಿನ ಸಮಯವು ಅತ್ಯಂತ ಸೂಕ್ತ. ನಾವು ಬೆಳಸಿಕೊಂಡಿರುವ ಅಭ್ಯಾಸಗಳು ನಮ್ಮ ನಡುವಿನ ಬಂಧವನ್ನು ಬಿಗಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ಗುಡ್ ಮಾರ್ನಿಂಗ್, ಒಂದು ಕಿಸ್ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಬಲವಾದ ಬಂಧಕ್ಕಾಗಿ ಪ್ರತಿದಿನ ಬೆಳಿಗ್ಗೆ ದಂಪತಿಗಳು ಅನುಸರಿಬೇಕಾದ ಕೆಲವೊಂದು ವಿಚಾರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ದಾಂಪತ್ಯ ಸುಖವಾಗಿರಲು ಪ್ರತಿದಿನ ಬೆಳಿಗ್ಗೆ ದಂಪತಿಗಳು ಅನುಸರಿಬೇಕಾದ ಕೆಲವು ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ;

ಬೆಳಗ್ಗಿನ ಶುಭಾಶಯಗಳು:

ಬೆಳಗ್ಗಿನ ಶುಭಾಶಯಗಳು:

ಬೆಳಿಗ್ಗೆ ನಿಮ್ಮ ಸಂಗಾತಿಗೆ ಶುಭೋದಯ ಎಂದು ಹೇಳಲು ಮರೆಯದಿರಿ. ಅದರ ಜೊತೆ ಒಂದು ಸ್ಮೈಲ್ ಇದ್ದರೆ ಇನ್ನಷ್ಟು ಪ್ಲಸ್ ಪಾಯಿಂಟ್. ಈ ಶುಭಾಶಯವು ನಿಮ್ಮ ಸಂಗಾತಿಗೆ, ಅವರ ಉಪಸ್ಥಿತಿಯು ಎಷ್ಟು ಮಹತ್ವದ್ದು ಎಂಬುದನ್ನು ತಿಳಿಸುತ್ತದೆ. ಜೊತೆಗೆ ಇಬ್ಬರ ಮೂಡ್ ಕೂಡ ಪಾಸಿಟಿವ್ ವೈಬ್ನಿಂದಲೇ ಶುರುವಾಗುತ್ತದೆ.

ಅಭಿನಂದನೆ ಅಥವಾ ಹೊಗಳಿಗೆ:

ಅಭಿನಂದನೆ ಅಥವಾ ಹೊಗಳಿಗೆ:

ಯಾರಿಗಾದರೂ ಅಭಿನಂದನೆಗಳನ್ನು ತಿಳಿಸುವುದಿರಿಂದ ಅವರ ಸಂತೋಷದ ಹಾರ್ಮೋನ್ ಆದ ಸಿರೊಟೋನಿನ್ ಹೆಚ್ಚಾಗುತ್ತದೆ ಎಂಬುದು ಸಾಬೀತಾಗಿದೆ. ಆದ್ದರಿಂದ, ನಿಮ್ಮ ಸಂಗಾತಿಯನ್ನು ದಿನ ಆರಂಭವಾಗುವ ವೇಳೆ ಹೊಗಳಿದರೆ, ಅದು ಸ್ವಯಂಚಾಲಿತವಾಗಿ ಅವರನ್ನು ಹುರಿದುಂಬಿಸುತ್ತದೆ ಜೊತೆಗೆ ದಿನವಿಡೀ ಚೆನ್ನಾಗಿರಲು ಒಳ್ಳೆಯ ಸ್ಟಾರ್ಟ್ ಸಿಗುವುದು. ಇದಕ್ಕೆ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂದು ಸರಳವಾಗಿ ಹೇಳಬಹುದು ಅಥವಾ ಕೇವಲ ಐ ಲವ್ ಯೂ ಸಹ ಹೇಳಬಹುದು.

ಕಾಫಿ ಮತ್ತು ಪ್ರೀತಿ:

ಕಾಫಿ ಮತ್ತು ಪ್ರೀತಿ:

ಬೇಗನೆ ಎದ್ದೇಳಿ ಮತ್ತು ಒಟ್ಟಿಗೆ ಬ್ರೇಕ್ಫಾಸ್ಟ್ ಅಥವಾ ಉಪಹಾರವನ್ನು ತಯಾರಿಸಲು ಅಭ್ಯಾಸ ಮಾಡಿ. ಸ್ವಲ್ಪ ಕಾಫಿ, ಟೋಸ್ಟ್, ಮೊಟ್ಟೆ ಇತ್ಯಾದಿಗಳನ್ನು ಒಟ್ಟಿಗೆ ಸೇರಿಸಿ ಏಕೆಂದರೆ ಇದು ನಿಮ್ಮಿಬ್ಬರ ನಡುವೆ ಒಗ್ಗಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ ಸೇರಿ ಅಡುಗೆ ಮಾಡಿ, ಒಟ್ಟಿಗೇ ಕೂತು, ತಿನ್ನುವುದರಿಂದ ನಿಮ್ಮ ಪಾತ್ರಗಳನ್ನು ಸಮತೋಲನಗೊಳಿಸುತ್ತದೆ.

ಕಣ್ಣಲ್ಲಿ ಕಣ್ಣಿಟ್ಟು ನೋಡಿ:

ಕಣ್ಣಲ್ಲಿ ಕಣ್ಣಿಟ್ಟು ನೋಡಿ:

ನಿಮ್ಮ ಸಂಗಾತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಅವರತ್ತ ದೃಷ್ಟಿ ಹಾಯಿಸಿ, ಅವರನ್ನು ದಿಟ್ಟಿಸಿ ನೋಡಿ. ಆ ಕಣ್ಣುಗಳನ್ನೇ ನೋಡುತ್ತಾ, ಅವರಲ್ಲಿನ ವೈಶಿಷ್ಟ್ಯಗಳನ್ನು ಮೆಚ್ಚುವ ಮೂಲಕ ನೀವು ವಿಶೇಷವಾಗಿ ಪ್ರೀತಿ ವ್ಯಕ್ತಪಡಿಸಬಹುದು. ಕಣ್ಣಿನ ಸಂಪರ್ಕವು ನಿಮ್ಮ ಬಂಧವನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದ್ದು, ಬೆಳಿಗ್ಗೆ ಅದನ್ನು ಪ್ರಾರಂಭಿಸುವುದರಿಂದ ನಿಮ್ಮ ಸಂಬಂಧದಲ್ಲಿ ಉತ್ತಮ ಟೋನ್ ಇರುತ್ತದೆ.

ಹಾಸ್ಯ:

ಹಾಸ್ಯ:

ಜೋರಾಗಿ ನಗುವುದಕ್ಕಿಂತ ದಿನವನ್ನು ಪ್ರಾರಂಭಿಸಲು ಉತ್ತಮ ಮಾರ್ಗ ಬೇರಾವುದಿದೆ ಹೇಳಿ? ಅದರಲ್ಲೂ ಸಂಗಾತಿ ರೊಮ್ಯಾಂಟಿಕ್ ಇದ್ದರೆ, ಅಲ್ಲಿ ನಗುವಿಗೆ ಬರವಿರುವುದಿಲ್ಲ. ಆದ್ದರಿಂದ ನಿಮ್ಮ ಸಂಗಾತಿಯ ಮುಖದಲ್ಲಿ ನಗು ಮೂಡಿಸುವ ಕೆಲಸ ಮಾಡಿ. ಅದಕ್ಕಾಗಿ ಯಾವುದೋ ಜೋಕ್ ಹೇಳಬಹುದು, ಅಥವಾ ತರಲೆ ಕೀಟಲೆಗಳನ್ನು ಮಾಡಬಹುದು. ಈ ಮೂಲಕ ನಿಮ್ಮ ಸಂಗಾತಿಗೆ ಉತ್ತಮ ದಿನದ ಆರಂಭ ನೀಡಬಹುದು. ಇದು ನಿಮ್ಮ ನಡುವಿನ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವುದು.

English summary

Tips for Couples to Follow Every Morning for a Strong Bond in Kannada

Here we talking about Tips for Couples to Follow Every Morning for a Strong Bond in Kannada, read on
Story first published: Thursday, November 25, 2021, 16:41 [IST]
X
Desktop Bottom Promotion