For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ಜಗಳವಾದಾಗ, ಕೋಪದ ಕೈಗೆ ಬುದ್ಧಿ ಕೊಡುವ ಬದಲು ಹೀಗೆ ಮಾಡಿ

|

ಪ್ರೀತಿ ಅಥವಾ ಸಂಬಂಧದಲ್ಲಿ ಜಗಳ, ವಾದಗಳು ಸಾಮಾನ್ಯ. ಯಾರೂ ಇಷ್ಟಪಡದಿದ್ದರೂ, ಅದೆಷ್ಟೇ ಪ್ರಯತ್ನ ಪಟ್ಟರೂ ಸಹ, ಮನಸ್ತಾಪ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಅದು ಸಂಗಾತಿಯ ಜೊತೆ, ಸ್ನೇಹಿತರ ನಡುವೆ ಅಥವಾ ಪೋಷಕರೊಂದಿಗಾಗಲೀ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ.

ಜೀವನದಲ್ಲಿ ವಾದ, ಜಗಳಗಳಿಂದ ಪಾರಾಗಲು ಸಾಧ್ಯವಿಲ್ಲ. ಆದರೆ, ಆ ಪರಿಸ್ಥಿತಿ ಉಲ್ಭಣಕ್ಕೆ ಹೋಗಬಾರದೆಂದರೆ ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸಂಬಂಧದಲ್ಲಿ ವಾದಗಳಾದಾಗ ಮಾಡಬೇಕಾದ ಕೆಲವು ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

1. ಪರಿಸ್ಥಿತಿಯಿಂದ ದೂರ ಉಳಿಯಿರಿ:

1. ಪರಿಸ್ಥಿತಿಯಿಂದ ದೂರ ಉಳಿಯಿರಿ:

ಯಾವುದಾದರೂ ವಾದದ ನಂತರ, ನಮ್ಮ ಭಾವನೆಗಳು ಉತ್ತುಂಗದಲ್ಲಿರುತ್ತದೆ. ಯಾವುದು ಸರಿ? ಯಾವುದು ತಪ್ಪು ಎಂದು ಅರ್ಥಮಾಡಿಕೊಳ್ಳುವ ಮನಸ್ಥಿತಿಯೂ ಇರುವುದಿಲ್ಲ. ಜೊತೆಗೆ ಈಗಾಗಲೇ ಹಾಳಾದ ಪರಿಸ್ಥಿತಿಯನ್ನು ಹದಗೆಡಿಸುವತ್ತ ನಾವು ಹೆಜ್ಜೆ ಇಡುವ ಸಾಧ್ಯತೆಯಿದೆ. ಆದ್ದರಿಂದ ಆಗ ನಿಮ್ಮ ಫೋನ್ ಅನ್ನು ದೂರವಿಡಿ, ಓಟ ಅಥವಾ ನಡಿಗೆಗೆ ಹೋಗಿ ಅಥವಾ ಜಿಮ್‌ಗೆ ಹೋಗಿ. ಹೆಚ್ಚಿನ ತೀವ್ರತೆಯ ತಾಲೀಮು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

2. ಸಂಗೀತ, ಧ್ಯಾನದಿಂದ ನಿಮ್ಮನ್ನು ವಿಚಲಿತಗೊಳಿಸಿ:

2. ಸಂಗೀತ, ಧ್ಯಾನದಿಂದ ನಿಮ್ಮನ್ನು ವಿಚಲಿತಗೊಳಿಸಿ:

ಜಗಳದ ಪರಿಸ್ಥಿತಿಯನ್ನು ನಿಭಾಯಿಸಲು ಮನಸ್ಸನ್ನು ಬೇರೆಡೆಗೆ ಕೊಂಡ್ಯೊಯ್ಯುವುದು ಬಹಳ ಒಳ್ಳೆಯದು. ವಾಕ್ ಅಥವಾ ವ್ಯಾಯಾಮದ ನಂತರ, ನಿಮಗಿಷ್ಟವಾದ ಯಾವುದರಲ್ಲಾದರೂ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಮನಸ್ಸನ್ನು ವಿಚಲಿತಗೊಳಿಸಿ. ಇದು ಶಾಂತವಾಗಿ ಕುಳಿತು ನಿಮ್ಮ ಆಲೋಚನೆಗಳನ್ನು ಹಾದುಹೋಗಲು ಬಿಡುತ್ತದೆ. ಸಂಗೀತವು ಮತ್ತೊಂದು ಚಿತ್ತ ಉತ್ತೇಜನಕಾರಿಯಾಗಿದೆ, ಜೊತೆಗೆ ಚಲನಚಿತ್ರವನ್ನು ನೋಡುವುದು ಅಥವಾ ಓದುವುದು ಅಥವಾ ಚಿತ್ರಕಲೆ ಉತ್ತಮ ಒತ್ತಡ ಬಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

3. ಶಾಂತವಾದ ಮೇಲೆ ಪ್ರತಿಕ್ರಿಯಿಸಿ:

3. ಶಾಂತವಾದ ಮೇಲೆ ಪ್ರತಿಕ್ರಿಯಿಸಿ:

ಜಗಳವಾದಾಗ ನಮ್ಮ ಭಾವನೆಗಳು ಉತ್ತುಂಗದಲ್ಲಿರುತ್ತದೆ. ಏನು ಹೇಳುತ್ತೇವೆ, ಏನು ಮಾಡುತ್ತೇವೆ ಒಂದು ಅರ್ಥವಾಗುವುದಿಲ್ಲ. ಆದ್ದರಿಂದ ಶಾಂತವಾದ ಮೇಲೆ ಸನ್ನಿವೇಶವನ್ನು ಮನನ ಮಾಡಿಕೊಳ್ಳಿ. ಎಲ್ಲಿ ಏನ ತಪ್ಪಾಗಿದೆ ಎಂದು ಕೂತು ಯೋಚಿಸಿ, ಅದನ್ನು ಪರಿಹರಿಸುವ ದಾರಿಯ ಬಗ್ಗೆ ಚಿಂತಿಸಿ. ಇದು ಸಂಬಂಧವನ್ನು ಉಳಿಸುವ ಕೆಲಸ ಮಾಡುತ್ತದೆ. ಇಲ್ಲವಾದಲ್ಲಿ, ಕೋಪದಲ್ಲಿದ್ದಾಗ ಮಾತನಾಡಿದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

4. ಆಗಿದ್ದರ ಬಗ್ಗೆ ಮಾತನಾಡಿ:

4. ಆಗಿದ್ದರ ಬಗ್ಗೆ ಮಾತನಾಡಿ:

ನಿಮ್ಮ ಕಡೆಯಿಂದ ತಪ್ಪಾಗಿದೆ ಎಂದು ನಿಮಗೆ ಅನಿಸಿದರೆ ಕ್ಷಮೆಯಾಚಿಸುವುದು ಯಾವಾಗಲೂ ಒಳ್ಳೆಯದು. ಒಂದು ವೇಳೆ ಅವರದೇ ತಪ್ಪಾಗಿದ್ದರೂ, ಅದನ್ನು ಶಾಂತವಾಗಿ ಆ ವ್ಯಕ್ತಿಯ ಗಮನಕ್ಕೆ ತನ್ನಿ. ನಾವೆಲ್ಲರೂ ನಮ್ಮ ತಪ್ಪುಗಳಿಂದ ಹೆಚ್ಚು ಕಲಿಯುತ್ತೇವೆ, ಆದ್ದರಿಂದ ಸಂವಹನದ ಮಾರ್ಗವನ್ನು ಮುಕ್ತವಾಗಿಡಿ. ದ್ವಿಮುಖ ಸಂವಹನವು ಯಾವುದೇ ಆರೋಗ್ಯಕರ ಸಂಬಂಧದ ಮಾನದಂಡವಾಗಿದೆ. ಆದ್ದರಿಂದ ಮುಕ್ತವಾಗಿ ಮಾತನಾಡಿ.

5. ಅನುಷ್ಠಾನವು ಮುಖ್ಯ:

5. ಅನುಷ್ಠಾನವು ಮುಖ್ಯ:

ಭಾವನೆಗಳಿಂದ ನಾವು ಒದ್ದಾಡುವುದರಿಂದ ಹೆಚ್ಚಾಗಿ ಅನುಷ್ಠಾನವು ಆ ಸನ್ನಿವೇಶಕ್ಕೆ ತೇಪೆಯಾಗಿರುತ್ತದೆ. ಆದರೆ, ಹಿಂದಿನ ಸನ್ನಿವೇಶಗಳಿಂದ ಬುದ್ಧಿ ಕಲಿಯುವುದು ಮುಖ್ಯವಾಗಿದೆ. ಮಾತನ್ನು ನಿಲ್ಲಿಸುವುದು, ವಾದಗಳಿಂದ ದೂರವಿರುವುದು, ನಿಮ್ಮನ್ನು ಮತ್ತು ನಿಮ್ಮ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸದಿರುವುದು, ಸಂಬಂಧ ಕೊನೆ ಮಾಡುವ ಮಾತನ್ನು ತ್ಯಜಿಸುವುದು, ಭಾವನೆಗಳನ್ನು ನಿರ್ವಹಿಸುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಈ ಅಭ್ಯಾಸಗಳನ್ನ ಅನುಷ್ಠಾನಕ್ಕೆ ತನ್ನಿ.

English summary

Things you can do after an Argument to Calm your Mind in Kannada

Here we talking about Things you can do after an argument to calm your mind in kannada, read on
Story first published: Thursday, November 18, 2021, 16:39 [IST]
X
Desktop Bottom Promotion