For Quick Alerts
ALLOW NOTIFICATIONS  
For Daily Alerts

ಯಾರನ್ನೇ ಆಗಲಿ, ಅತಿಯಾಗಿ ನಂಬುವ ಮುನ್ನ ಈ ವಿಚಾರಗಳನ್ನು ನೆನಪಿನಲ್ಲಿರಲಿ

|

ನಂಬಿಕೆ ಒಳ್ಳೆಯದು, ಆದರೆ ಅತಿಯಾದ ನಂಬಿಕೆ ಒಳ್ಳೆಯದಲ್ಲ, ಅದು ಯಾರೇ ಆಗಿರಲಿ, ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು? ಯಾವದನ್ನು ಖಾಸಗಿಯಾಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ನಾವೇ ಸರಿಯಾಗಿ ತಿಳಿದಿರಬೇಕು. ಇಲ್ಲವಾದಲ್ಲಿ ನೋವು ಕಟ್ಟಿಟ್ಟ ಬುತ್ತಿ. ಏಕೆಂದರೆ, ನಾವು ಯಾರನ್ನೂ ಹೆಚ್ಚು ನಂಬಿರುತ್ತೇವೆಯೋ, ಅವರಿಂದಲೇ ನೋವು ಹೆಚ್ಚು ಸಿಗುವುದು.

ಅತಿಯಾದ ನಂಬಿಕೆಯ ಅಭ್ಯಾಸವು ನಮ್ಮನ್ನು ಹೆಚ್ಚಾಗಿ ತೊಂದರೆಗೆ ಸಿಲುಕಿಸುತ್ತದೆ. ಆದರೂ, ಈ ತಪ್ಪುಗಳಿಂದ ನಾವು ಬುದ್ಧಿ ಕಲಿಯುವುದಿಲ್ಲ. ಆದ್ದರಿಂದ, ಮುಂದಿನ ಬಾರಿ ಜನರನ್ನು ಅತಿಯಾಗಿ ನಂಬುವ ಮುನ್ನ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಯಾರನ್ನಾದರೂ ಅತಿಯಾಗಿ ನಂಬುವ ಮುನ್ನ ನೆನಪಿಡಬೇಕಾದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅತಿಯಾದ ನಂಬಿಕೆಯು ನಿಮ್ಮ ಹೃದಯವನ್ನು ಒಡೆಯಬಹುದು:

ಅತಿಯಾದ ನಂಬಿಕೆಯು ನಿಮ್ಮ ಹೃದಯವನ್ನು ಒಡೆಯಬಹುದು:

ಹೌದು, ಇದು ಸಾಮಾನ್ಯವಾಗಿ ಆಗುವಂತಹ ಸಂಗತಿ. ನಾವು ಯಾರ ಮೇಲೆ ಅತಿಯಾಗಿ ನಂಬಿಕೆ ಇಡುತ್ತೇವೆಯೋ, ಮುಂದೆ ಆ ವ್ಯಕ್ತಿಯಿಂದಲೇ ನಿಮ್ಮ ಮನಸ್ಸು ಚೂರಾಗಬಹುದು. ನಿಮ್ಮ ಅತಿಯಾದ ನಂಬಿಕೆಯಿಂದ ಹೃದಯ ಒಡೆದಾಗ, ನಿಮ್ಮನ್ನು ನೀವೇ ದೂಷಿಸಬೇಕೇ ಹೊರತು, ಅದನ್ನು ಮಾಡಿದವರನ್ನಲ್ಲ. ಖಾಸಗಿಯಾಗಿ ಇಡಬೇಕಾದ ವಿಷಯಗಳನ್ನು ಖಾಸಗಿಯಾಗಿಯೇ ಇಡಬೇಕು. ನಂಬಿಕೆಯಿದೆ ಎಂದು ವಿಚಾರಗಳನ್ನು ಹೇಳಿಕೊಂಡರೆ, ಮುಂದೆ ಅದೇ ನಿಮ್ಮ ಪಾಲಿಗೆ ಮುಳುವಾಗಬಹುದು. ಜನರನ್ನು ನಂಬಬೇಕು ಆದರೆ ಅತಿಯಾಗಿ ನಂಬಬೇಡಿ. ಏನನ್ನು ಹಂಚಿಕೊಳ್ಳಬೇಕು ಮತ್ತು ಏನು ಹೇಳಬಾರದು ಎಂಬುದರ ಸ್ಪಷ್ಟ ಅರಿವಿರಲಿ. ನಿಮ್ಮ ರಹಸ್ಯಗಳು ಮತ್ತು ವೀಕ್‌ನೆಸ್‌ಗಳನ್ನು ಹೇಳಿಕೊಂಡರೆ, ಅದನ್ನು ನಿಮ್ಮ ವಿರುದ್ಧವೇ ಬಳಸಿಕೊಳ್ಳಬಹುದು. ಆಗ ಮನಸ್ಸು ಚೂರಾಗುವುದು ಖಂಡಿತ. ಏಕೆಂದರೆ ಆ ವ್ಯಕ್ತಿಯು ನಿಮ್ಮ ಬಗ್ಗೆ ಏನು ಮನಸ್ಸಿನಲ್ಲಿಟ್ಟುಕೊಂಡಿದ್ದಾನೆಂದು ನಿಮಗೆ ತಿಳಿದಿರುವುದಿಲ್ಲ.

ಅತಿಯಾದ ನಂಬಿಕೆ ಒಂದು ದೌರ್ಬಲ್ಯ:

ಅತಿಯಾದ ನಂಬಿಕೆ ಒಂದು ದೌರ್ಬಲ್ಯ:

ಈ ಮಾತು ಖಂಡಿತವಾಗಿಯೂ ಸತ್ಯ. ಅತಿಯಾಗಿ ನಂಬಿಕೆಯಿಡುವುದು ಒಳ್ಳೆಯ ಮನಸ್ಸಿನ ಜನರ ದೌರ್ಬಲ್ಯ. ನೀವು ಎಲ್ಲರೊಂದಿಗೆ ಒಳ್ಳೆಯವರಾಗಿರುತ್ತೀರಿ, ಹಾಗಂತ ಅವರೂ ಹಾಗೆಯೇ ಇರುತ್ತಾರೆ ಎಂದರ್ಥವಲ್ಲ. ಏಕೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ, ಅವರನ್ನು ತಿಳಿದುಕೊಳ್ಳಬೇಕಾಗಿರುವುದು, ಅವರು ಹೇಗೆ ಎಂದು ಅರ್ಥ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅದಕ್ಕೂ ಮುನ್ನವೇ, ಅವರ ಮೇಲ ಅತಿಯಾಗಿ ನಂಬಿಕೆಯಿಟ್ಟು ಎಡವಿದರೆ, ಅದು ನಿಮ್ಮದೇ ತಪ್ಪಾಗುವುದು.

ಎಲ್ಲರೂ ಸ್ನೇಹಿತರಲ್ಲ ಎಂಬುದನ್ನು ನೆನಪಿಡಿ:

ಎಲ್ಲರೂ ಸ್ನೇಹಿತರಲ್ಲ ಎಂಬುದನ್ನು ನೆನಪಿಡಿ:

ಇದು ಹೆಚ್ಚಿನವರು ತಿಳಿದುಕೊಳ್ಲಬೇಕಾದ ಕಹಿಸತ್ಯ. ನಿಮ್ಮ ಸ್ನೇಹಿತರಂತೆ ನಟಿಸುವ ನೂರಾರು ಜನರು ಇರುತ್ತಾರೆ, ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ನಿಮ್ಮ ನಿಜವಾದ ಸ್ನೇಹಿತರಾಗುತ್ತಾರೆ. ಎಲ್ಲರೂ ನಿಮ್ಮ ಕಡೆಗೆ ಸಹಾನುಭೂತಿ ಹೊಂದಿರುವುದಿಲ್ಲ. ಹೆಚ್ಚಿನವರು ನಿಮ್ಮ ಕಷ್ಟವನ್ನು ಕಂಡು ನಗುತ್ತಾರೆ. ಕೆಲವರು ನಿಮ್ಮ ಮಾತುಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಆದ್ದರಿಂದ, ನಿಮ್ಮ ನಂಬಿಕೆಯನ್ನು ಇಡಲು ಮತ್ತು ಉಳಿದವರನ್ನು ಪರಿಚಯ ಮಾಡಿಕೊಳ್ಳಲು ಉತ್ತಮ ಜನರ ಗುಂಪನ್ನು ಆಯ್ಕೆಮಾಡಿ.

English summary

Things to Keep in Mind before you Overtrust People in Kannada

Here we talking about Things to keep in mind before you overtrust people in kannada, read on
Story first published: Monday, November 15, 2021, 16:30 [IST]
X
Desktop Bottom Promotion