For Quick Alerts
ALLOW NOTIFICATIONS  
For Daily Alerts

ನಿಮ್ಮ ವೈವಾಹಿಕ ಜೀವನ ನೀರಸ ಎನಿಸುತ್ತಿದೆಯೇ ಮತ್ತೆ ಹ್ಯಾಪಿ ಲೈಫ್‌ ಶುರು ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

|

"ಮದುವೆಯ ಈ ಬಂಧ ಅನುರಾಗದ ಅನುಬಂಧˌ ಏಳೇಳು ಜನ್ಮಗಳೂ ತೀರದ ಸಂಬಂಧ" ಈ ಹಾಡಿನ ಹಾಗೇ ಬದುಕಿನ ಮಹತ್ತರ ಘಟ್ಟಗಳಲ್ಲಿ ಮದುವೆ ಕೂಡ ಒಂದು. ಇದು ಏಳೇಳೂ ಜನ್ಮಕ್ಕೂ ತೀರದ ಒಂದು ಸಂಬಂಧ. ಹೊಸ ಪರಿಸರದಲ್ಲಿ, ಹೊಸ ಕನಸಿನೊಂದಿಗೆ, ಹೊಸ ಪರಿವಾರದ ಜೊತೆಗೆ ಜೀವನ ನಡೆಸುವ ಸುಮಧುರ ಬಂಧನವೇ ಮದುವೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಸಂಗಾತಿ ಅಥವಾ ಪತಿಯೊಂದಿಗಿನ ಅನ್ಯೋನ್ಯತೆ, ಕುಟುಂಬದೊದಿಗಿನ ಹೊಂದಾಣಿಕೆ. ಇದಕ್ಕೆ ಆಧಾರ ನಂಬಿಕೆ.

123

ಸಂಬಂಧದ ಮೂಲ ಬೇರು ನಂಬಿಕೆ ಹೀಗಾಗಿ ಬಂಧ ಗಟ್ಟಿಯಾಗಬೇಕಾದರೆ ಒಬ್ಬರನ್ನೊಬ್ಬರು ಕಣ್ಣುಮುಚ್ಚಿ ನಂಬುವಷ್ಟು ಗಾಢತೆ ಇರಬೇಕು. ಕೆಲವೊಮ್ಮೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ತಪ್ಪುಗಳು, ಅಪನಂಬಿಕೆ ಬರುವ ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಅದನ್ನು ಸರಿದೂಗಿಸಿಕೊಂಡು ಹೊಗುವ ಛಾತಿ ಇಬ್ಬರಲ್ಲೂ ಇರಬೇಕು. ಆದರೆ ಇಂತಹ ಸುಮಧುರ ಸಂಬಂಧ ಬೋರ್ ಆಗೋದು ಸಹಜ. ಮದುವೆ ಆರಂಭದಲ್ಲಿದ್ದ ಮಜಾ, ಖುಷಿ ಎಲ್ಲವೂ ದಿನ ಕಳೆದಂತೆ ಮಾಯವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ನೀವಿದ್ದೀರಾ? ಹಾಗಾದರೆ ಈ ಸೂತ್ರಗಳನ್ನು ಪಾಲಿಸಿ ಇಂತಹ ಸಮಸ್ಯೆಯಿಂದ ಹೊರಬಂದು, ಉತ್ತಮ ವೈವಾಹಿಕ ಜೀವನ ನಡೆಸಿ. ಹಾಗಾದರೆ ಏನದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮದುವೆ ಆದ ಕೆಲ ವರ್ಷಗಳ ಬಳಿಕ ವೈವಾಹಿಕ ಜೀವನ ಕೆಲವರಿಗೆ ಬೋರ್ ಅನಿಸೋದು ಸಾಮಾನ್ಯ . ಈ ನೀರಸ ಸಂಬಂಧಗಳು ಗಲಾಟೆಗೂ ಕಾರಣವಾಗಬಹುದು. ಇದು ಬಳಿಕ ವಿಚ್ಛೇದನಕ್ಕೂ ಕಾರಣವಾಗಬಹುದು. ಆದರೆ ನಾವು ಈ ಸಮಯದಲ್ಲಿ ಧೃತಿಗೆಡದೆ. ಏನು ತಪ್ಪಾಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡಿದರೆ ಸಾಕು.

1.ನಿಮಗೆ ಏಕೆ ಬೇಸರವಾಗಿದೆ ಎಂದು ನೀವೇ ಕೇಳಿಕೊಳ್ಳಿ!

1.ನಿಮಗೆ ಏಕೆ ಬೇಸರವಾಗಿದೆ ಎಂದು ನೀವೇ ಕೇಳಿಕೊಳ್ಳಿ!

ನಿಮಗೆ ನಿಮ್ಮ ವೈವಾಹಿಕ ಜೀವನದಲ್ಲಿ ಯಾಕೆ ಬೋರ್ ಅನಿಸುತ್ತಿದೆ ಎನ್ನುವುದನ್ನು ನೀವು ಮೊದಲು ಕಂಡು ಹಿಡಿಯಬೇಕು. ಅದಲ್ಲದೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಮೊದಲು ಸ್ವಯಂ-ಮೌಲ್ಯಮಾಪನಕ್ಕೆ ಸಮಯ ತೆಗೆದುಕೊಳ್ಳಿ. ಅಥವಾ ನಿಮ್ಮ ಸಂಗಾತಿಯ ಸಮಸ್ಯೆ ಇದ್ಯಾ ಅನ್ನುವುದನ್ನು ನೋಡಿ. ಇದನ್ನು ಸರಿ ಮಾಡಲು ಸಾಧ್ಯವಿದ್ಯಾ ಎನ್ನುವುದನ್ನು ನೋಡಬೇಕು. ಯಾಕೆಂದರೆ ನಮ್ಮ ಪರ್ಸನಲ್ ಲೈಫ್ ಅಥವಾ ವೈವಾಹಿಕ ಜೀವನ ಯಾವತ್ತೂ ನಾವು ಅಂದುಕೊಂಡಂತೆ ಇರುವುದಿಲ್ಲ. ಹೀಗಾಗಿ ಸಮಸ್ಯೆಗಳನ್ನು ಬಗೆ ಹರಿಸುವ ಬಗ್ಗೆ ಯೋಚಿಸಬೇಕು. ಬಗೆಹರಿಸುತ್ತಾ ಮುಂದುವರೆಯೋದು ಒಳ್ಳೆಯದು.

2. ಬದಲಾವಣೆ ತರುವ ಜವಾಬ್ದಾರಿ ತೆಗೆದುಕೊಳ್ಳಿ!

ವೈವಾಹಿಕ ಜೀವನ ನೀರಸವಾಗಿ ಎಂದರೆ ಅದು ನಮ್ಮ ದೈನಂದಿನ ಕೆಲಸದಿಂದ ಆಗಿರುವ ಸಾಧ್ಯತೆ ಜಾಸ್ತಿ ಇರುತ್ತೆ. ಪತ್ನಿ-ಪತಿ ಇಬ್ಬರು ಕೆಲಸಕ್ಕೆ ಹೋಗುವುದು. ಮಾತುಕತೆ ಇರದೆ ಇರುವುದು ಸಮಸ್ಯೆಯ ಮೂಲ ಆಗಿರುತ್ತದೆ. ಹೀಗಾಗಿ ವೈವಾಹಿಕ ಜೀವನದಲ್ಲಿ ಕೊಂಚ ಬದಲಾವಣೆ ತರುವುದು ಒಳ್ಳೆಯ ಐಡಿಯಾ ಆಗಿರುತ್ತದೆ. ಎಲ್ಲದರೂ ಪಿಕ್ ನಿಕ್ ಹೋಗುವುದು, ವೀಕೆಂಡ್ ಪಾರ್ಟಿಗೆ ಹೋಗುವುದು, ಸಿನಿಮಾಗೆ ಹೋಗುವುದು ಈ ಮೂಲಕ ಲೈಫ್ ನಲ್ಲಿ ಏನಾದ್ರೂ ಚೇಂಜಸ್ ಮಾಡಿ. ಮನೆಯಲ್ಲೇ ಇಬ್ಬರು ಜಾಸ್ತಿ ಮಾತಾನಾಡುತ್ತಾ ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಬಗ್ಗೆಯೂ ಸಮಯ ನಿಗದಿ ಮಾಡಿಕೊಳ್ಳಿ. ದಿನ ನಿತ್ಯ ಮನೆಯಲ್ಲೇ ಊಟ ಮಾಡುತ್ತಿದ್ದರೆ ಈ ಬಾರಿ ಊಟ ಹೊರಗಡೆಯಿಂದ ಆರ್ಡರ್ ಮಾಡಿ ಒಟ್ಟಿಗೆ ಊಟ ಮಾಡಿ. ಊಟ ಮಾಡಿದ ನಂತರ ಟಿವಿ ನೋಡುವ ಅಭ್ಯಾಸವಿದ್ದರೆ ನಿಮ್ಮ ಮದುವೆಯ ವಿಡಿಯೋ ನೋಡಿ ಆ ಹಳೆ ನೆನಪುಗಳನ್ನು ಮೆಲುಕು ಹಾಕಿ.

3.ವಿವಾಹದ ಆರಂಭದಲ್ಲಿ ಮಾಡಿದ್ದನ್ನೆ ಮತ್ತೆ ಮಾಡಿ!

3.ವಿವಾಹದ ಆರಂಭದಲ್ಲಿ ಮಾಡಿದ್ದನ್ನೆ ಮತ್ತೆ ಮಾಡಿ!

ವಿವಾಹ ಆದ ಕೆಲ ವರ್ಷಗಳಲ್ಲಿ ನಿಮಗೆ ನಿಮ್ಮ ವೈವಾಹಿಕ ಜೀವನ ಬೋರ್ ಎಂದು ಅನಿಸಿಬಿಡುತ್ತೆ. ಆಗ ನೀವು ಈ ರೀತಿಯ ಐಡಿಯಾ ಬಳಸಿದರೆ ಸಮಸ್ಯೆ ದೂರವಾಗಲಿದೆ. ಹೌದು, ನೀವು ನಿಮ್ಮ ವಿವಾಹದ ಆರಂಭದಲ್ಲಿ ಮಾಡಿದ ಕೆಲಸವನ್ನು ಮತ್ತೆ ಮಾಡಲು ಆರಂಭಿಸಿ. ಉದಾಹರಣೆಗೆ ನೀವು ಕಾಫಿ ಕುಡಿಯಲು ಒಂದೊಳ್ಳೆ ಕಾಫಿ ಶಾಪ್ ಗೆ ಈ ಹಿಂದೆ ಹೋಗಿದ್ದರೆ ಮತ್ತೆ ಅಲ್ಲಿಗೆ ಹೋಗಿ ನಿಮ್ಮ ಹಳೆಯ ಮಾತುಕತೆಗಳನ್ನು ಮೆಲುಕು ಹಾಕಿ. ವಿವಾಹದ ಸಂದರ್ಭದ ಖುಷಿಗಳನ್ನು ನೆನೆಯುತ್ತಾ ಕಾಫಿ ಸವಿಯಿರಿ ಈ ಮೂಲಕ ನೀರಸ ವೈವಾಹಿಕ ಜೀವನವನ್ನು ಮತ್ತೆ ಟ್ರ್ಯಾಕ್ ಗೆ ತರಬಹುದು.

4. ಜೊತೆಯಾಗಿ ಮಾಡುವ ಹವ್ಯಾಸ ಆರಂಭಿಸಿ

4. ಜೊತೆಯಾಗಿ ಮಾಡುವ ಹವ್ಯಾಸ ಆರಂಭಿಸಿ

ಇನ್ನು ಅನೇಕರಿಗೆ ವೈವಾಹಿಕ ಜೀವನ ಬೋರ್ ಆಗಲು ಒಂದು ಕಡೆ ಪತ್ನಿ-ಇನ್ನೊಂದು ಕಡೆ ಪತಿ ಇರುವುದು ಕೂಡ ಮತ್ತೊಂದು ಕಾರಣ. ಅಂದರೆ ಒಟ್ಟಿಗೆ ಒಂದೆ ಮನೆಯಲ್ಲಿ ಇದ್ದರೂ ಸರಿಯಾಗಿ ಮಾತು ಇಲ್ಲ, ಏನು ಇರುವುದಿಲ್ಲ. ಈ ವೇಳೆ ನೀವು ಮಾಡಬೇಕಾಗಿದ್ದು ಆಲ್ ಮೋಸ್ಟ್ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವುದು. ಹೌದು, ಉದಾಹರಣೆಗೆ ಒಟ್ಟಿಗೆ ಜಾಗಿಂಗ್ ಹೋಗುವುದು, ಒಟ್ಟಿಗೆ ಅಡುಗೆ ತಯಾರು ಮಾಡುವುದು, ಮನೆಯಲ್ಲಿ ಒಟ್ಟಿಗೆ ಕುಳಿತು ಸಿನಿಮಾ ನೋಡುವುದು. ಹೀಗೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವಾಗ ನಮಗೆ ಮತ್ತೆ ಮತ್ತೆ ಪ್ರೀತಿ ಹುಟ್ಟುವ ಸಾಧ್ಯತೆ ಇದೆ.

5. ರೊಮ್ಯಾಂಟಿಕ್ ಜೀವನ ನಡೆಸುವುದು!

5. ರೊಮ್ಯಾಂಟಿಕ್ ಜೀವನ ನಡೆಸುವುದು!

ಅನೇಕ ವೈವಾಹಿಕ ಜೀವನ ರೋಮ್ಯಾಂಟಿಕ ಇಲ್ಲದ ಕಾರಣಕ್ಕೆ ಮುರಿದು ಬೀಳುತ್ತ್ದೆ ಅಥವಾ ನೀರಸ ವೈವಾಹಿಕ ಜೀವನ ಆಗುತ್ತದೆ ಇದಕ್ಕಾಗಿ ನೀವು ನಿಮ್ಮ ವೈವಾಹಿಕ ಜೀವನವನ್ನು ಅತೀ ರೊಮ್ಯಾಂಟಿಕ್ ಆಗಿ ಮಾಡಿಕೊಳ್ಳಿ. ರೊಮ್ಯಾಂಟಿಕ್ ಅಂದರೆ ಕೇವಲ ಸೆಕ್ಸ್ ಮಾತ್ರವಲ್ಲ. ಬದಲಾಗಿ ಕ್ಯಾಂಡಲ್ ಲೈಟ್ ಡಿನ್ನರ್, ಒಟ್ಟಿಗೆ ನೃತ್ಯ ಮಾಡೋದು ಹೀಗೆ ಹಲವಾರು ರೊಮ್ಯಾಂಟಿಕ್ ವಿಚಾರಗಳನ್ನು ಮಾಡಿಕೊಳ್ಳಬಹುದು. ಇನ್ನು ಸೆಕ್ಸ್ ಕೂಡ ಎಲ್ಲಾ ದಂಪತಿಗಳಿಗೆ ಮುಖ್ಯವಾಗಿ ಬೇಕಾಗಿರುವ ಅಂಶ. ಹೀಗಾಗಿ ಸೆಕ್ಸ್ ಮೂಲಕವೂ ನಿಮ್ಮ ಬೋರ್ ನೆಸ್ ದೂರ ಮಾಡಿಕೊಳ್ಳಬಹುದು.

6. ಕುಟುಂಬದೊಂದಿಗೆ ಜೀವಿಸಿ

6. ಕುಟುಂಬದೊಂದಿಗೆ ಜೀವಿಸಿ

ಅನೇಕ ವೈವಾಹಿಕದ ನೀರಸ ಸಂಬಂಧಕ್ಕೆ ಕಾರಣ ದಂಪತಿ ಕುಟುಂಬದೊಂದಿಗೆ ದೂರ ಇರುವುದು. ಈಗ ಏನಾಗುತ್ತಿದೆ ಎಂದರೆ ಮದುವೆಯಾಗಿ ದೂರದ ಪಟ್ಟಣಕ್ಕೆ ದಂಪತಿ ಹೋಗುತ್ತಾರೆ. ಅಲ್ಲೇ ಇಬ್ಬರು ಜೀವನ ನಡೆಸುತ್ತಾರೆ. ಇಬ್ಬರೇ ಇರುವುದರಿಂದ ಹಲವು ಸಮಸ್ಯೆಗಳು ಬಂದು ಅದು ನೀರಸ ವೈವಾಹಿಕ ಜೀವನಕ್ಕೆ ಕಾರಣವಾಗುತ್ತದೆ. ಹೀಗಾಗಿ ಇದ್ದ ಮನೆಯೂ ಅಥವಾ ಬಾಡಿಗೆ ಮನೆಯೂ ಅಲ್ಲಿಂದ ದೂರ ಬಂದು ತಮ್ಮ ಕುಟುಂಬದೊಂದಿಗೆ ಜೀವಿಸಬೇಕು. ಅಲ್ಲಿ ದಿನ ನಿತ್ಯ ನಡೆಯುವ ಹಾಗೂ ಹೋಗುಗಳು ಮತ್ತೆ ನಿಮ್ಮಲ್ಲಿ ವೈವಾಹಿಕ ಜೀವನದ ನೈಜ ಖುಷಿಯನ್ನು ಪಡೆಯಲು ಮನಸ್ಸು ಖಂಡಿತವಾಗಿಯೂ ಹೇಳುತ್ತದೆ.

7.ದೂರ ಉಳಿಯಬಹುದು!

7.ದೂರ ಉಳಿಯಬಹುದು!

ದಿನ ನಿತ್ಯ ಒಟ್ಟಿಗೆ ಇದ್ದು ಕೆಲವು ಕಪಲ್ ಗಳಿಗೆ ಮ್ಯಾರೇಜ್ ಲೈಫ್ ನಲ್ಲಿ ಬೋರ್ ಆಗುವುದುಂಟು. ಈ ವೇಳೆ ಈ ರೀತಿಯ ಪ್ರಯೋಗವನ್ನು ಕೂಡ ನೀವು ಮಾಡಬಹುದು. ಕೊಂಚ ದಿನ ದೂರ ಉಳಿಯಬೇಕು. ದೂರ ಉಳಿದಾಗ ಪ್ರೀತಿ ಜಾಸ್ತಿಯಾಗುತ್ತೆ ಎನ್ನುತ್ತಾರೆ. ದೂರ ಉಳಿದಾಗ ಇಬ್ಬರಿಗೂ ತಮ್ಮ ಪ್ರೀತಿಯ ನೈಜ ಅರ್ಥ ತಿಳಿಯುತ್ತದೆ. ಉದಾಹರಣೆಗೆ ಹುಡುಗ ವಿದೇಶದಲ್ಲಿ ಇದ್ದು ಹುಡುಗಿ ಭಾರತದಲ್ಲಿ ಇರಬಹುದು. ಈ ರೀತಿ ಮಾಡಿದಾಗ ಕಣ್ಣು ನೋಡಲು ಬಯಸುತ್ತೆ, ನಾಲಗೆ ಮಾತನಾಡಲು ಬಯಸುತ್ತದೆ. ದೇಹ ಸೇರಲು ಬಯಸುವುದು ಸಹಜ.

English summary

Things to Do When Your Marriage Feels Boring in Kannada

Here we are discusing about Things to Do When Your Marriage Feels Boring in Kannada. feeling bored can lead a marriage down a dark path of arguments, bad decisions, and even divorce.. Read more
Story first published: Monday, July 11, 2022, 12:38 [IST]
X
Desktop Bottom Promotion