For Quick Alerts
ALLOW NOTIFICATIONS  
For Daily Alerts

ವಿಚ್ಛೇದನಕ್ಕೆ ಮುಂದಾಗುವ ಮುನ್ನ ಈ 8 ಸಂಗತಿ ಚರ್ಚಿಸಿ

|

ಏಕೋ ಈ ಸಂಬಂಧ ಮುಂದುವರೆಯುವ ಲಕ್ಷಣ ಕಾಣುತ್ತಿಲ್ಲ, ಈ ವ್ಯಕ್ತಿ ಜೊತೆ ಹೊಂದಿಕೊಂಡು ಹೋಗಲು ಇನ್ನು ಸಾಧ್ಯವಿಲ್ಲ, ಬೇರೆ-ಬೇರೆಯಾಗುವುದೇ ಒಳ್ಳೆಯದೆಂದು ದಂಪತಿ ವಿಚ್ಛೇದನದ ಆಲೋಚನೆ ಮಾಡುವ ಮುನ್ನ ಕೆಲವೊಂದು ವಿಷಯಗಳನ್ನು ಚರ್ಚಿಸಿದರೆ ತಮ್ಮ ಸಂಬಂಧ ಎತ್ತ ಸಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯುತ್ತದೆ.

Things To Discuss before You Are Ending Relationship

ಹೌದು ಎಷ್ಟೋ ಸಂಬಂಧಗಳು ಆತುರದಿಂದ ಮುರಿದು ಹೋಗುತ್ತವೆ, ಅಲ್ಲಿ Ego ಸಮಸ್ಯೆ, ಮತ್ತಿತರ ಸಣ್ಣ ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಇಬ್ಬರು ದೂರವಾಗುವ ನಿರ್ಧಾರ ಮಾಡಿರುತ್ತಾರೆ. ಇಬ್ಬರು ತಮ್ಮ ಸಂಬಂಧದಲ್ಲಿ ಏನು ತೊಂದರೆಗಳಿವೆ ಎಂಬುವುದರ ಬಗ್ಗೆ ಮುಕ್ತವಾಗಿ ಚರ್ಚಿಸಲು ಮುಂದಾಗುವುದಿಲ್ಲ.

ಎಷ್ಟೋ ಸಮಸ್ಯೆಗಳು ಮಾತನಾಡಿದರೆ ಬಗೆ ಹರಿಯುತ್ತದೆ, ಆದರೆ ಮುಕ್ತವಾಗಿ ಮಾತನಾಡದೆ ಸಂಬಂಧಗಳು ಕೊನೆಯಾಗುತ್ತವೆ. ಯಾರೇ ಆಗಲಿ ವಿಚ್ಛೇದನಕ್ಕೆ ಮುಂದಾಗುವ ಈ 8 ವಿಷಯಗಳನ್ನು ಮುಕ್ತವಾಗಿ ಚರ್ಚಿಸುವುದು ಒಳ್ಳೆಯದು.

 1. ಈ ಸಂಬಂಧದಲ್ಲಿ ಸಂಗಾತಿ ಅಭಿಪ್ರಾಯವೇನು?

1. ಈ ಸಂಬಂಧದಲ್ಲಿ ಸಂಗಾತಿ ಅಭಿಪ್ರಾಯವೇನು?

ಎಷ್ಟೋ ಬಾರಿ ನಾವು ಒಬ್ಬ ವ್ಯಕ್ತಿಯ ಒಂದು ಸೈಡ್ ಅಷ್ಟೇ ನೋಡಿರುತ್ತೇವೆ, ಅವರ ಮತ್ತೊಂದು ಮುಖದ ಪರಿಚಯನೇ ಆಗಿರಲ್ಲ. ನಾವೇ ಇಲ್ಲ ಅವರಿಗೆ ನಮ್ಮನ್ನು ಕಂಡರೆ ಇಷ್ಟವಿಲ್ಲ, ಅವರಿಗೆ ಬೇರೆ ಸಂಬಂಧವಿದೆ ಹೀಗೆ ಸಾಕಷ್ಟು ಊಹಿಸಿ ಸಂಬಂಧ ಮುರಿಯಲು ಕೆಲವರು ಮುಂದಾಗುತ್ತಾರೆ. ಆದಷ್ಟು ಸಾಕಷ್ಟು ಸಮಯದಲ್ಲಿ ನಾವು ಊಹಿಸಿದಂತೆ ಅವರು ಇರುವುದಿಲ್ಲ. ಅವರು ಬೇರೆ ಯಾವುದೋ ಕಾರಣ ಆ ನಿಮಗೆ ಆ ವ್ಯಕ್ತಿ ಭಿನ್ನವಾಗಿ ಕಂಡಿರುತ್ತಾರೆ. ವಿಚ್ಛೇದನಕ್ಕೆ ಮುಂದಾಗುವ ಮುನ್ನ ನಿಮಗೆ ಅವರ ಬಗ್ಗೆ ಏನು ಅನಿಸಿದೆ, ಅವರಿಗೆ ನಿಮ್ಮ ಮೇಲೆ ಪ್ರೀತಿ ಇದೆಯೇ? ಪ್ರೀತಿ ಇದ್ದರೆ ಅವರು ನಿಮ್ಮೊಂದಿಗೆ ಖುಷಿಯಾಗಿರಲು ಯಾವ ಕಾರಣ ಅಡ್ಡಿಯಾಗುತ್ತಿದೆ ಎಂದು ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.

2.ನಿಮಗೆ ಕಿರಿಕಿರಿ ತಂದ ವಿಷಯ ಯಾವುದು

2.ನಿಮಗೆ ಕಿರಿಕಿರಿ ತಂದ ವಿಷಯ ಯಾವುದು

ಬೇರೆಯಾಗಲು ತೀರ್ಮಾನಿಸಿದ ಮೇಲೆ ನಿಮಗೆ ಯಾವ ವಿಷಯ ಕಿರಿಕಿರಿ ಉಂಟು ಮಾಡಿತು ಎಂಬುವುದನ್ನು ನಿಮ್ಮ ಸಂಗಾತಿಯೊಂದಿಗೆ ಹೇಳುವುದು ಒಳ್ಳೆಯದು. ಕೆಲವೊಮ್ಮೆ ನಿಮಗೆ ಕಿರಿಕಿರಿ ಅನಿಸಿರುವ ವಿಷಯ ಅವರಿಗೆ ತಿಳಿದಿರುವುದೇ ಇಲ್ಲ, ಸರಿ ಪಡಿಸಲು ಅವರಿಗೆ ಮನಸ್ಸು ಇದ್ದರೆ ಸುಮ್ಮನೇ ಒಂದು ಸುಂದರ ಸಂಬಂಧ ಮುರಿಯುವ ಅಗ್ಯತವಾದರೂ ಏಕೆ ಅಲ್ವಾ? ಹೊಂದಾಣಿಕೆಯೇ ಯಶಸ್ವಿ ದಾಂಪತ್ಯದ ಸೂತ್ರವಲ್ಲವೇ?

3. ನೀವು ಏನು ನಿರೀಕ್ಷೆ ಮಾಡುತ್ತಿದ್ದೀರಿ?

3. ನೀವು ಏನು ನಿರೀಕ್ಷೆ ಮಾಡುತ್ತಿದ್ದೀರಿ?

ನಿಮ್ಮ ನಿರೀಕ್ಷೆಗಳೇನು, ನೀವು ಅವರಿಂದ ಏನು ಬಯಸುತ್ತಿದ್ದೀರಿ ಎಂಬುವುದನ್ನು ಅವರು ಅರ್ಥ ಮಾಡಿಕೊಂಡು ಮಾಡಲಿ ಎಂದು ನಿಮಗನಿಸಬಹುದು. ಆದರೆ ಅದೆಲ್ಲಾ ಸಿನಿಮಾ ಲೈಫ್‌ನಲ್ಲಿ ಆಗುತ್ತೆ, ಇಲ್ಲಾ ಕೆಲವರ ಜೀವನದಲ್ಲಿಷ್ಟೇ ಆಗುತ್ತೆ. ನೀವೇನು ಬಯಸುತ್ತಿದ್ದೀರಿ ಎಂಬುವುದನ್ನು ಅವರಿಗೆ ಹೇಳಿ, ಇಲ್ಲದಿದ್ದರೆ ಅವರಿಗೂ ಗೊತ್ತಾಗುವುದಿಲ್ಲ. ನಿಮ್ಮ ನಿರೀಕ್ಷೆ ಅವರು ಮುಟ್ಟದಿದ್ದಾಗ ನಿಮಗೆ ನಿರಾಸೆ ಮೂಡುವುದು, ಆ ನಿರಾಸೆಯೇ ಕೋಪದ ರೂಪದಲ್ಲಿ ಹೊರಹೊಮ್ಮಿ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರಾಗುವ ನಿರ್ಧಾರಕ್ಕೆ ಬರುವಂತಾಗುವುದು.

4. ದೂರ ಸರಿಯಲು ನಿರ್ಧಾರ ಮಾಡಿರುವುದು ಏಕೆ?

4. ದೂರ ಸರಿಯಲು ನಿರ್ಧಾರ ಮಾಡಿರುವುದು ಏಕೆ?

ಎಲ್ಲಾ ಬ್ರೇಕಪ್‌ಗಳಿಗೆ ತುಂಬಾ ಕೆಟ್ಟ ಕಾರಣಗಳಿರುವುದಿಲ್ಲ. ಕೆಲವೊಂದು ಸಂಬಂಧಗಳು ಸಂಹವನ ಕೊರತೆಯಿಂದಾಗಿ ಮುರಿದು ಬೀಳುತ್ತವೆ. ನೀವು ಬೆಳೆದ ಪರಿಸರ, ಅವರು ಬೆಳದ ಪರಿಸರ, ಅಂತರ್‌ ಜಾತೀಯ ಮದುವೆಯಾದರೆ ಆಚಾರ, ವಿಚಾರಗಳು ಎಲ್ಲವೂ ಬೇರೆ-ಬೇರೆಯಾಗಿರುತ್ತದೆ. ಕೆಲವೊಂದು ವಿಚಾರಗಳಿಗೆ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವುದು ಕಷ್ಟವಾಗಬಹುದು. ಆದರೆ ಈ ಕುರಿತು ಸಂಗಾತಿ ಜೊತೆ ಮಾತನಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಏನೂ ಮಾತನಾಡದೆ ಎಲ್ಲವನ್ನು ನಿಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದರಿಂದ ಅವರಿಗೂ ಏನೂ ಅರ್ಥ ಆಗಲ್ಲ, ಕೊನೆಗೆ ಸುಮ್ಮನೆ ವಿಚ್ಛೇದನಕ್ಕೆ ಮುಂದಾಗಬೇಕಾಗುತ್ತದೆ.

5. ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೀರಾ?

5. ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೀರಾ?

ಸಂಬಂಧ ಉಳಿಯಬೇಕೆಂದರೆ ಅಲ್ಲಿ ಪ್ರೀತಿ ಮಾತ್ರ ಸಾಲದು ಪ್ರಯತ್ನವೂ ಬೇಕು. ಹೌದು ಕೆಲವೊಂದು ವಿಚಾರಗಳಲ್ಲಿ ಸಂಗಾತಿಗೆ ಇಷ್ಟವಾಗುವ ರೀತಿಯಲ್ಲಿ ಹೊಂದಿಕೊಂಡು ಹೋಗಲು ಪ್ರಯತ್ನಿಸಿಬೇಕು. ಈ ಇಟ್ಟಿನಲ್ಲಿ ನೀವಿಬ್ಬರು ಎಷ್ಟು ಪ್ರಯತ್ನಿಸಿದ್ದೀರಿ ಎಂಬುವುದನ್ನು ಪ್ರಾಮಾಣಿಕವಾಗಿ ಮಾತನಾಡಿ. ಒಬ್ಬರು ಮಾತ್ರ ಸಂಬಂಧ ಉಳಿಸಿಕೊಳ್ಳಲು ಹೆಣಗುವುದು, ಮತ್ತೊಬ್ಬರು ನಿರಾಸಕ್ತಿ ತೋರುವುದು ಮಾಡಿದರೆ ಅಂಥ ಸಂಬಂಧದಲ್ಲಿ ಮುಂದುವರೆಯುವುದಕ್ಕಿಂತ ಬೇರೆಯಾಗುವುದು ಉತ್ತಮ ಎಂಬ ನಿರ್ಧಾರ ತೆಗೆದುಕೊಳ್ಳಬಹುದು.

6. ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿದೆಯೇ?

6. ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿದೆಯೇ?

ದಾಂಪತ್ಯದಲ್ಲಿ ಸಮಸ್ಯೆಯಿಲ್ಲದ ದಂಪತಿಗಳೇ ಇರಲ್ಲ. ಆದರೆ ಹೊಂದಾಣಿಕೆಯಿಂದ ಒಂದು ಸುಂದರ ಬದುಕು ಕಟ್ಟಿಕೊಂಡಿರುತ್ತಾರೆ. ನೀವು ನಿಮ್ಮ ಸಮಸ್ಯೆಯಗಳನ್ನು ಬಗೆ ಹರಿಸಲು ಸಾಧ್ಯವೇ ಎಂದು ಯೋಚಿಸಿದ್ದೀರಾ? ಏಕೆಂದರೆ ಹೆಚ್ಚಿನವರು ಮನೆಯವರ ಮಾತು ಕೇಳಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಆದರೆ ಮುಂದೆ ಕಾಡುವ ಸಮಸ್ಯೆ, ಒಂಟಿತನ ಈ ಬಗ್ಗೆಯೆಲ್ಲಾ ಯೋಚಿಸಿದ್ದೀರಾ? ನೀವು ಬೇರೆಯಾಗಿರಲು ಕಾರಣವಾಗಿರುವ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವೇ ಎಂದು ಮಾತನಾಡಿ.

ಹೀಗೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿದು ಮತ್ತೆ ಒಂದಾಗಿ ಜೀವನ ಸಾಗಿಸಬಹುದು. ಬೇರೆಯಾಗಲು ನಿರ್ಧರಿಸಿ ನಂತರ ಉತ್ತಮ ಬದುಕು ಕಟ್ಟಿಕೊಂಡಿರುವ ಎಷ್ಟೋ ಜೋಡಿಗಳನ್ನು ನೋಡಬಹುದು. ಅವರಂತೆಯೇ ನೀವು ಕೂಡ ನಿಮ್ಮ ಸಮಸ್ಯೆ ಬಗೆಹರಿಸಿ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಎಂದು ಯೋಚಿಸಿ.

 7. ಬ್ರೇಕಪ್ ನಂತರ ಮುಂದೇನು?

7. ಬ್ರೇಕಪ್ ನಂತರ ಮುಂದೇನು?

ಇಲ್ಲ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದಾದರೆ ಬ್ರೇಕಪ್ ನಂತರ ಮುಂದೇನು ಎಂದು ಯೋಚಿಸುವುದು ಕೂಡ ಒಳ್ಳೆಯದು. ಅದೇ ಮಕ್ಕಳಿದ್ದರೆ ಅವರ ಮಾನಸಿಕ ಬೆಳವಣಿಗೆಗೆ ಆಘಾತವಾಗದಂತೆ ನಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು? ಬೇರೆ-ಬೇರೆಯಾಗಿದ್ದರೂ ಮಕ್ಕಳ ವಿಷಯದಲ್ಲಿ ಜವಾಬ್ದಾರಿ ಹೇಗೆ ನಿಭಾಯಿಸಬೇಕು ಎಂಬುವುದರ ಬಗ್ಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು.

8. ಹಳೆಯ ಸುಂದರ ನೆನಪುಗಳು

8. ಹಳೆಯ ಸುಂದರ ನೆನಪುಗಳು

ಬೇರೆಯಾಗಲು ತೀರ್ಮಾನಿಸಿದರೆ ಅಲ್ಲಿ ಸಂಬಂಧದ ಕಹಿ ನೆನಪುಗಳೇ ನಿಮ್ಮನ್ನು ಕಾಡುತ್ತಿರುತ್ತದೆ. ಆ ಕಹಿ ನೆನಪುಗಳೊಂದಿಗೇ ಹೊರನಡೆಯಬೇಡಿ. ನಿಮ್ಮಿಬ್ಬರ ಜೀವನದಲ್ಲಿ ನಡೆದ ಸುಂದರ ಘಟನೆಗಳ ಮೆಲುಕು ಹಾಕಿ. ಹೀಗೆ ಮಾಡುವುದರಿಂದ ಆ ವ್ಯಕ್ತಿ ಕಡೆ ನಿಮಗಿರುವ ದ್ವೇಷ, ಅಸಹ್ಯ ಸ್ವಲ್ಪ ಕಡಿಮೆಯಾಗುವುದು. ಎಷ್ಟೋ ಸೆಲೆಬ್ರಿಟಿಗಳು ವಿಚ್ಛೇದನದ ಬಳಿಕ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನೀವು ಕೂಡ ಇಷ್ಟ ಪಡುವುದಾದರೆ ಸ್ನೇಹ ಸಂಬಂಧದಲ್ಲಿರಬಹುದು.

ಕಷ್ಟ ಅನಿಸಿದರೆ ಅವರಿಂದ ದೂರವಾಗಿ ನಿಮ್ಮ ಬದುಕನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಯೋಚಿಸಬಹುದು.

ಸಲಹೆ: ಸಂಬಂಧದಲ್ಲಿ ಎಷ್ಟೋ ಸಮಸ್ಯೆಗಳು ಮಾತನಾಡುವುದರಿಂದ ಬಗೆ ಹರಿಯುತ್ತದೆ, ಮೊದಲಿಗೆ ನೀವಿಬ್ಬರು ಮುಕ್ತವಾಗಿ ಮಾತನಾಡಿ. ಆಗ ಒಟ್ಟಿಗೆ ಇರಬೇಕೆ? ಬೇಡ್ವೆ? ಎಂಬ ನಿರ್ಧಾರಕ್ಕೆ ಬರಬಹುದು.

English summary

Things To Discuss before You Are Ending Relationship

It is high time that you realise what's wrong in your relationship. But before you head towards a breakup, here are a few things that you could discuss with your partner and try to decide if you really need to end your relationship.
Story first published: Tuesday, June 16, 2020, 14:54 [IST]
X
Desktop Bottom Promotion