For Quick Alerts
ALLOW NOTIFICATIONS  
For Daily Alerts

ನಿತ್ಯ ಮಾಡುವ ಈ ಕೆಲಸಗಳೇ ನಿಮ್ಮ ಮೂಡ್‌ ಮೇಲೆ ಪರಿಣಾಮ ಬೀರುತ್ತದೆ

|

ಪ್ರಪಂಚದಲ್ಲಿ ಯಾರೂ ಸಹ ಯಾವಾಗಲೂ ಒಂದೇ ರೀತಿಯ ಮನಸ್ಥಿತಿಯಲ್ಲಿ ಇರುವುದಿಲ್ಲ, ಇರಲು ಸಾಧ್ಯವೂ ಇಲ್ಲ. ಸಂತೋಷ, ದುಖಃ, ನೋವು, ನಲಿವು, ಸಿಟ್ಟು, ಶಾಂತ, ಅಸಹ್ಯ ಇಂಥಾ ಎಲ್ಲಾ ನವರಸಗಳ ಮಿಶ್ರಣವೇ ಮನುಷ್ಯ. ಪ್ರತಿಯೊಬ್ಬರೂ ಸಂದರ್ಭಕ್ಕೆ ಅನುಸಾರ ಮನಸ್ಥಿತಿ ಬದಲಾಗುತ್ತಲೇ ಇರುತ್ತದೆ.

ಆದರೆ ಹೀಗೆ ನಮ್ಮ ಮನಸ್ಥಿತಿ ಬದಲಾಗಲು ಸಾಕಷ್ಟು ಕಾರಣಗಳಿವೆ. ಒಳ್ಳೆ ಕಾರಣಕ್ಕೆ ನಮ್ಮ ಮೂಡ್ ಬದಲಾದರೆ ಉತ್ತಮ, ಆದರೆ ನಾವು ಕೆಲವು ಕೆಲಸಗಳಿಂದ ನಮಗೇ ಅರಿವಿಲ್ಲದಂತೆ ನಮ್ಮ ಮೂಡ್‌ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದನ್ನು ಸ್ವತಃ ಅನುಭವಿಸುವವರೇ ಒಪ್ಪುವುದಿಲ್ಲ.

ಹಾಗಿದ್ದರೆ ನಮಗೇ ತಿಳಿಯದಂತೆ ನಾವು ಮಾಡುವ ಯಾವ ಕೆಲಸಗಳು ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮುಂದೆ ನೋಡೋಣ:

1) ನಿಮಗೆ ಎಷ್ಟು ನಿದ್ರೆ ಬರುತ್ತದೆ

1) ನಿಮಗೆ ಎಷ್ಟು ನಿದ್ರೆ ಬರುತ್ತದೆ

ನೀವು ಎಷ್ಟು ನಿದ್ರೆ ಮಾಡುತ್ತೀರಾ ಹಾಗೂ ಎಂಥಾ ಗುಣಮಟ್ಟದ ನಿದ್ರೆ ಮಾಡುತ್ತೀರಾ ಎಂಬುದು ನಿಮ್ಮ ಮೂಡ್‌ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ನಿದ್ರೆ ಮಾಡಲು ನೀವು ಮಾಡಬೇಕಾದುದು ಬೆಳಕು ನೀವು ಮಲಗುವ ಕೋಣೆಗೆ ಬರದಂತೆ ತಡೆಯಲು ಉತ್ತಮ ಪರದೆ ಅಥವಾ ಸ್ಕ್ರೀನ್‌ಗಳನ್ನು ಬಳಸಿ. ಬೆಳಕು ನಿಮ್ಮ ನಿದ್ರೆಗೆ ಭಂಗ ಮಾಡಬಹುದು ಮತ್ತು ನಿಮ್ಮನ್ನು ಎಚ್ಚರಗೊಳಿಸುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ ನಿದ್ರೆಯ ಕೊರತೆಯು ನಿಮ್ಮ ಗಮನಕ್ಕೆ ಸಮಸ್ಯೆಯಾಗಬಹುದು ಮತ್ತು ಖಿನ್ನತೆಗೆ ಕಾರಣವಾಗಬಹುದು. ನೀವು ರಾತ್ರಿಯ ದೀಪಗಳನ್ನು ಹಾಕಿಕೊಳ್ಳಬೇಡಿ, ನಿಮ್ಮ ಡಿಜಿಟಲ್ ಗಡಿಯಾರಗಳು ಅಥವಾ ಎಲ್ಇಡಿ ಉಪಕರಣಗಳನ್ನು ಆಫ್‌ ಮಾಡಿ. ನೀವು ನಿದ್ದೆ ಮಾಡುವಾಗ ಟಿವಿಯನ್ನು ಬಳಸುವ ಅಭ್ಯಾಸ ಬೇಡ, ಉತ್ತಮ ಮತ್ತು ಹೆಚ್ಚು ನಿದ್ರೆಯನ್ನು ಮಾಡಲು ಕಣ್ಣಿಗೆ ಪಟ್ಟಿಯನ್ನು/ಮುಖವಾಡವನ್ನು ಹಾಕಿ ಮಲಗಲು ಪ್ರಯತ್ನಿಸಿ.

2) ನೀವು ಏನು ತಿನ್ನುತ್ತೀರಿ

2) ನೀವು ಏನು ತಿನ್ನುತ್ತೀರಿ

ನಿಮ್ಮ ಆಹಾರವು ನಿಮ್ಮ ಮನಸ್ಥಿತಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಸಿಹಿ ಅಥವಾ ಸಂಸ್ಕರಿಸಿದ ಆಹಾರಗಳ ಬದಲು ಆರೋಗ್ಯಕರ ಕೊಬ್ಬುಗಳು, ಅತ್ಯುತ್ತಮ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ. ಚೆನ್ನಾಗಿ ತಿನ್ನುವುದು ಮತ್ತು ಆರೋಗ್ಯಕರವಾಗಿ ಬದುಕುವುದು ಸಹ ನಿಮ್ಮ ದೀರ್ಘಕಾಲೀನ ಸ್ವಾಸ್ಥ್ಯಕ್ಕೆ ಸಹಕಾರಿ ಹಾಗೂ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಆಹಾರ ಅಥವಾ ನಿರ್ಬಂಧಿತ ಆಹಾರವು ನಿಮ್ಮನ್ನು ಕೋಪಗೊಳಿಸುತ್ತದೆ ಮತ್ತು ಮೂಡಿ ಮಾಡುತ್ತದೆ. ಆದ್ದರಿಂದ ಎಲ್ಲವನ್ನೂ ಮಿತವಾಗಿ ಆನಂದಿಸುವುದು ಮತ್ತು ಸಮತೋಲನಕ್ಕಾಗಿ ಶ್ರಮಿಸುವುದು ಮುಖ್ಯ.

3) ಹವಾಮಾನ

3) ಹವಾಮಾನ

ಹವಾಮಾನವು ಕತ್ತಲೆಯಾದಾಗ ನಾವು ಸ್ವಲ್ಪ ಬೇಸರ ಅಥವಾ ಯಾವುದರ ಮೇಲೂ ಆಸಕ್ತಿ ಇರದ ಮನಸ್ಥಿತಿಯಲ್ಲಿ ಇರುತ್ತೇವೆ. ಇಂಥಾ ವಾತಾವರಣದಲ್ಲಿ ನಾವು ಮೂಡಿ ಮತ್ತು ಇಡೀ ದಿನ ಹಾಸಿಗೆಯಲ್ಲಿರಲು ಬಯಸುತ್ತೇವೆ. ಬಿಸಿಲಿನ ಅಥವಾ ಉತ್ತಮ ವಾತಾವರಣ ಇದ್ದರೆ ಜನರ ಮನಸ್ಥಿತಿಯು ಸಂತೋಷವಾಗಿರುತ್ತದೆ ಮತ್ತು ಅವರು ಉದ್ಯಾನವನದಲ್ಲಿ ಕುಳಿತು ಹವಾಮಾನವನ್ನು ಆನಂದಿಸಲು ಬಯಸುತ್ತಾರೆ. ಉತ್ತಮ ಬೆಳಕು ಬೇಕು ಹೌದು ಆದರೆ ನಾವು ಬೆವರುವುದು ಸಹ ನಮಗೆ ಬೇಸರ ಮೂಡಿಸುತ್ತದೆ. ಬೆಳಕು, ವಾತಾವರಣವು ಸಹ ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

4) ಸಾಮಾಜಿಕ ಜಾಲತಾಣ

4) ಸಾಮಾಜಿಕ ಜಾಲತಾಣ

ಸಾಮಾಜಿಕ ಮಾಧ್ಯಮವು ನಿಮ್ಮನ್ನು ಹುರಿದುಂಬಿಸಬಹುದು, ನಿಮಗೆ ಒಂಟಿತನ ಕಾಡದಂತೆ ಮಾಡುತ್ತದೆ, ನಿಮ್ಮ ಸ್ನೇಹ ವಲಯವನ್ನು ಹೆಚ್ಚಿಸುತ್ತದೆ. ಅದರೆ ಇದೆಲ್ಲವೂ ಸಹ ನಮ್ಮ ಮೂಡ್‌ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಸಾಮಾಜಿಕ ಜಾಲತಾಣ ಒಂದು ರೀತಿ ಎರಡು ಅಲುಗಿನ ಕತ್ತಿಯಂತೆ. ನಾನು ಸಾಮಾಜಿಕ ಮಾಧ್ಯಮವನ್ನು ಇಷ್ಟಪಡುವ ಕಾರಣವನ್ನು ಹೇಳುವ ಮೂಲಕ ನಾನು ಪ್ರಾರಂಭಿಸುತ್ತೇನೆ ಅದಕ್ಕೆ ಚೆನ್ನಾಗಿ ಹೊಂದಿಕೊಂಡು ಅದರ ಜತೆ ಸಮಯ ಕಳೆಯುತ್ತೇನೆ. ಸ್ವಲ್ಪ ಸಮಯದ ನಂತರ ನನ್ನ ಜೀವನದ ಕ್ಷಣಗಳನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಆದರೆ ಸಾಮಾಜಿಕ ಜಾಲತಾಣ ಸಂಬಂಧಗಳ ನಡುವೆ ಬಿರುಕು ಸೃಷ್ಟಿಸುತ್ತದೆ ಮತ್ತು ಜೀವನವು ಹೇಗಿರಬೇಕು ಎಂಬುದರ ಮರೀಚಿಕೆಯನ್ನು ನಮ್ಮ ಮನಸ್ಸಿನಲ್ಲಿ ನಿರ್ಮಿಸುತ್ತದೆ. ಆದ್ದರಿಂದ ನೀವು ಅಂತರ್ಜಾಲವನ್ನು ಬಳಸುವ ಉದ್ದೇಶದ ಬಗ್ಗೆ ಸ್ಪಷ್ಟವಾಗಿರಿ.

5) ಅಸಂಘಟಿತ ಆಲೋಚನೆಗಳು

5) ಅಸಂಘಟಿತ ಆಲೋಚನೆಗಳು

ಮಾನವರಾದ ನಾವೆಲ್ಲರೂ ಆಂತರಿಕ ವಟಗುಟ್ಟುವಿಕೆ ಅನುಭವಿಸುತ್ತೇವೆ, ಅಂದರೆ ಮನಸ್ಸಲ್ಲೇ ಎಲ್ಲಾ ಯೋಚನೆಗಳನ್ನು ಮಾಡುತ್ತಲಿರುತ್ತೇವೆ. ಮನಸ್ಸು ಯಾವಾಗಲೂ ಸಂಭಾಷಣೆಯಲ್ಲಿ ಒಂದು ಸಂಕೇತಗಳನ್ನು ನೀಡುತ್ತದೆ. ಹೇಗೆ ವರ್ತಿಸಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂದು ಹೇಳುತ್ತದೆ. ಇದರರ್ಥ ಮನಸ್ಸು ಎಂದಿಗೂ ಶಾಂತವಾಗಿರುವುದಿಲ್ಲ. ಇದು ಸಹ ನಮಗೆ ಸಾಕಷ್ಟು ದಣಿವುಂಟು ಮಾಡುತ್ತದೆ. ನಿಮ್ಮ ಆಲೋಚನೆಗಳನ್ನು ಸಂಘಟಿಸಿದಾಗ ಮನಸ್ಸು ಶಾಂತವಾಗಿರುತ್ತದೆ, ಹೆಚ್ಚು ಗೊಂದಲಗಳಿಗೆ ಒಳಗಾಗುವುದಿಲ್ಲ. ಆಗ ನಿಮ್ಮ ಮನಸ್ಥಿತಿ ಸಹ ಸಮಾಧಾನವಾಗಿರುತ್ತದೆ.

6) ದಿನದಲ್ಲಿ ಎಷ್ಟು ಚಲಿಸುತ್ತೀರಿ

6) ದಿನದಲ್ಲಿ ಎಷ್ಟು ಚಲಿಸುತ್ತೀರಿ

ವ್ಯಾಯಾಮವು ನಿಮಗೆ ಅತ್ಯುತ್ತಮವಾದ ಸಕಾರಾತ್ಮಕ ಚೇತನವನ್ನು ನೀಡುತ್ತದೆ. ನಿಮ್ಮ ದೇಹವು ಚೇತರಿಸಿಕೊಳ್ಳಲು ಮತ್ತು ಸರಿಪಡಿಸಲು ಸಾಕಷ್ಟು ಸಮಯವನ್ನು ನೀಡದಿದ್ದರೆ, ಅದು ಸ್ನಾಯುಗಳ ಒತ್ತಡಕ್ಕೆ ಕಾರಣವಾಗುತ್ತದೆ. ಇಂಥಾ ಮಾನಸಿಕ ಹಾಗೂ ದೈಹಿಕ ನೋವುಗಳು ನಿಮ್ಮನ್ನು ಶೀಘ್ರವಾಗಿ ಭಯಾನಕ ಮನಸ್ಥಿತಿಗೆ ತರುತ್ತದೆ. ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿ, ಹಣ್ಣುಗಳು ಮತ್ತು ಪ್ರೋಟೀನ್‌ಗಳನ್ನು ಚೆನ್ನಾಗಿ ಸೇವಿಸಿ, ನೀವು ಯಾವುದೇ ಸಮಯದಲ್ಲಿ ಪೂರ್ಣ ಶಕ್ತಿಗೆ ಮರಳುತ್ತೀರಿ.

7) ಸ್ಥಳ ಸ್ವಚ್ಛವಾಗಿ ಇಟ್ಟುಕೊಳ್ಳಿ

7) ಸ್ಥಳ ಸ್ವಚ್ಛವಾಗಿ ಇಟ್ಟುಕೊಳ್ಳಿ

ನನ್ನ ಸ್ಥಳವು ಸ್ವಚ್ಛ ಮತ್ತು ಸ್ಪಷ್ಟವಾಗಿದ್ದಾಗ ನಾನು ಉತ್ತಮವಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ನಾನು ವಾಸಿಸುವ ಸ್ಥಳದಿಂದ ಹೆಚ್ಚು ಚೈತನ್ಯ ಹೊಂದಲು ಸಾಧ್ಯವಾಗುತ್ತದೆ. ಅತಿಯಾದ ಅಲಂಕಾರ, ಕಡಿಮೆ ಬೆಳಕು ಮತ್ತು ಸಂಘಟಿತ ಗೊಂದಲದಿಂದ ಮನಸ್ಸು ಉದ್ವೇಗಗೊಳ್ಳುತ್ತದೆ, ನಿಮಿಷದಲ್ಲಿ ಹತಾಶೆ ಹೆಚ್ಚಾಗುತ್ತದೆ. ನಿಮ್ಮ ಉತ್ಪಾದಕತೆ ಇಳಿಯುತ್ತದೆ ಏಕೆಂದರೆ ಮನೆಯಲ್ಲಿ ನಿಮಗೆ ಬೇಕಿರುವ ವಸ್ತುವಿಗಾಗಿ ಹುಡುಕಾಡಿ ತುಂಬಾ ದಣಿದಿರುತ್ತೀರಿ. ಉತ್ತಮವಾಗಿ ಸಂಘಟಿಸದ ಕಾರಣ ಸಿಟ್ಟು ಬರುತ್ತದೆ. ಕೊನೆಗೆ ನಕಾರಾತ್ಮಕ ಮನಸ್ಥಿತಿಯೊಂದಿಗೆ ನಿಮ್ಮನ್ನು ಬಿಡುತ್ತದೆ.

8) ಒತ್ತಡ

8) ಒತ್ತಡ

ಹೆಚ್ಚಿನ ಜನರು ತಮ್ಮ ಕೆಲಸವನ್ನು ಸರಿಯಾಗಿ ಪ್ಲಾನ್‌ ಮಾಡದ ಕಾರಣ, ಮನೆಯ ಒತ್ತಡವೋ ಅಥವಾ ಕೆಲಸದ ಒತ್ತಡವೋ ನಿಮಗೆ ಜೀವನದಲ್ಲಿ ಇತರ ಜವಾಬ್ದಾರಿಗಳಿಂದ ಒತ್ತಡವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸಂತೋಷವಾಗಿದ್ದರೆ, ನೀವು ಹೆಚ್ಚು ಉತ್ಪಾದಕ ಮತ್ತು ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿವು ಹೆಚ್ಚು ಒತ್ತಡದಲ್ಲಿದ್ದರೆ ದೇಹವು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ, ಅದು ಆತಂಕ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ನೀವು ಒತ್ತಡಕ್ಕೊಳಗಾದಾಗ ಸ್ವಲ್ಪ ವಿರಾಮ ತೆಗೆದುಕೊಳ್ಳಿ, ನಡೆಯಿರಿ, ಸಂಗೀತವನ್ನು ಕೇಳಿ, ನಿಮ್ಮ ನೆಚ್ಚಿನದನ್ನು ವೀಕ್ಷಿಸಿ, ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಿ. ಇದು ನಿಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

9) ನಕಾರಾತ್ಮಕ ಜನರು

9) ನಕಾರಾತ್ಮಕ ಜನರು

ಇಷ್ಟೆಲ್ಲಾ ವಿಚಾರಗಳ ಹೊರತಾಗಿಯೂ ನೀವು ನಕಾರಾತ್ಮಕವಾಗಿ ಯೋಚನೆ ಮಾಡುವ ಜನರಿಂದ ಸಹ ದೂರವಿರಬೇಕು. ಇವರು ಸಹ ನೀವು ಎಷ್ಟೇ ಸಕಾರಾತ್ಮಕವಾಗಿ ಯೋಚನೆ ಮಾಡಿದರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಮ್ಮ ಮನಸ್ಥಿತಿ ಹಾಗೂ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಆಪ್ತ ಸ್ನೇಹ ಹಾಗೂ ಸಂಬಂಧ ವಲಯವನ್ನು ಮಾಡಿಕೊಳ್ಳುವ ಮುನ್ನ ತುಂಬಾ ಯೋಚನೆ ಮಾಡಿ.

ಇನ್ನೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಹೀರಿಕೊಳ್ಳುವುದು ಎಷ್ಟು ಸುಲಭ ಎಂದು ನೀವು ಗಮನಿಸಿದ್ದೀರಾ? ಯಾರಾದರೂ ಅಸಾಮಾನ್ಯವಾಗಿ ಕೋಪಗೊಂಡಿದ್ದರೆ, ಕ್ರ್ಯಾಂಕಿ ಅಥವಾ ನಿಮ್ಮನ್ನು ಕೆರಳಿಸಬಹುದು.

English summary

Things That Will Affect Your Mood Without Realising in Kannada

Here we are discussing about Things That Will Affect Your Mood Without Realising in Kannada. Read more.
Story first published: Wednesday, July 21, 2021, 15:00 [IST]
X