For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನ ಮತ್ತಷ್ಟು ರಸಮಯವಾಗಿಸುವ ಕ್ಷಣಗಳಿವು

|

ಆಧುನಿಕತೆಯ ಭರ ಜೀವನವನ್ನೇ ಬದಲಿಸಿ ಬಿಟ್ಟಿದೆ. ಆದರೆ ಇದರ ವ್ಯತಿರಿಕ್ತ ಪರಿಣಾಮಗಳಲ್ಲಿ ದಾಂಪತ್ಯದ ನಡುವೆ ಹಿಂಡುವ ಹುಳಿಯೂ ಒಂದು. ಪರಸ್ಪರ ಬೇರ್ಪಟ್ಟ ದಂಪತಿಗಳಲ್ಲಿ 80% ವ್ಯಕ್ತಿಗಳು ಇದಕ್ಕೆ ಫೇಸ್‍ಬುಕ್ ಕಾರಣ ಎಂದು ಒಪ್ಪಿಕೊಂಡಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ?.

These Good Night Habits Every Couple Should Adopt

ತಮ್ಮ ಸಂಗಾತಿ ತಮ್ಮೊಂದಿಗೆ ಮಾತನಾಡುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕಳೆಯುವುದರಿಂದಲೇ ಹುಳಿ ಹಿಂಡಲ್ಪಟ್ಟಿದೆ ಎಂದು ಇವರು ಭಾವಿಸುತ್ತಾರೆ. ಯಾವುದೇ ಸಂಬಂಧ ಯಶಸ್ವಿಯಾಗಬೇಕಾದರೆ ಅನ್ಯೋನ್ಯತೆ ಅಗತ್ಯವಾಗಿದ್ದು ಇದಕ್ಕಾಗಿ ನಿಮ್ಮ ಸಮಯವನ್ನು ಸಂಗಾತಿಗಾಗಿ ಮೀಸಲಾಗಿರಿಸುವುದಕ್ಕಿಂತಲೂ ಮಿಗಿಲಾಗಿದೆ.

ನಿಮ್ಮ ಸಂಬಂಧದಲ್ಲಿ ನೀವು ಒಟ್ಟಿಗೆ ಕಳೆಯುವ ಸಮಯದಲ್ಲಿ ಗುಣಮಟ್ಟದ ಸಮಯಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಮತ್ತು ನಿಮ್ಮ ಸಂಬಂಧದಲ್ಲಿ ಹೆಚ್ಚು ಗುಣಮಟ್ಟದ ಸಮಯವನ್ನು ಹೇಗೆ ಕಳೆಯುವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಇಂದಿನ ಲೇಖನದಿಂದ ನೀವೆಲ್ಲಿ ತಪ್ಪುತ್ತಿದ್ದೀರಿ ಎಂದು ಅರ್ಥವಾಗುತ್ತದೆ. ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಹತ್ತಿರವಾಗಲು ಅಭ್ಯಾಸ ಮಾಡಬಹುದಾದ ಎಂಟು ಅತ್ಯುತ್ತಮ ಕ್ರಮಗಳನ್ನು ವಿವರಿಸಲಾಗಿದೆ, ಬನ್ನಿ ನೋಡೋಣ:

1) ಜೊತೆಯಾಗಿ ಅಡುಗೆ ಮಾಡಿ, ಜೊತೆಯಾಗಿಯೇ ಊಟವನ್ನೂ ಮಾಡಿ

1) ಜೊತೆಯಾಗಿ ಅಡುಗೆ ಮಾಡಿ, ಜೊತೆಯಾಗಿಯೇ ಊಟವನ್ನೂ ಮಾಡಿ

'ಪತಿಯ ಹೃದಯಕ್ಕೆ ನೇರವಾದ ದಾರಿ ಆತನ ಹೊಟ್ಟೆಯ ಮೂಲಕ' ಎಂಬ ಆಂಗ್ಲ ನಾಣ್ಣುಡಿಯನ್ನು ಎಲ್ಲಾ ಸಮಯದಲ್ಲಿ ಪಾಲಿಸುವುದೇ ತಮ್ಮ ಧರ್ಮ ಎಂದು ಹೆಚ್ಚಿನ ಪತ್ನಿಯರು ತಿಳಿದುಕೊಂಡಿದ್ದಾರೆ. ಅಂತೆಯೇ ಹೆಚ್ಚಿನ ದಂಪತಿಗಳಲ್ಲಿ ಪತ್ನಿ ಅಡುಗೆ ಮಾಡುತ್ತಾಳೆ ಮತ್ತು ಪತಿ ಆರಾಮವಾಗಿ ಊಟ ಮಾಡುತ್ತಾನೆ. ಆದರೆ, ಯಾವ ದಂಪತಿಗಳು ಅಡುಗೆ ಕೆಲಸವನ್ನೂ, ಊಟವನ್ನೂ, ಬಳಿಕ ಸ್ವಚ್ಛಗೊಳಿಸುವಿಕೆ, ಪಾತ್ರೆ ತೊಳೆಯುವುದು ಮೊದಲಾದವುಗಳನ್ನೂ ಸಮನಾಗಿ ಹಂಚಿಕೊಂಡು ಈ ಸಮಯಗಳನ್ನು ಜೊತೆಯಾಗಿ ಕಳೆಯುತ್ತಾರೋ ಇವರ ದಾಂಪತ್ಯ ಅತ್ಯಂತ ಹೆಚ್ಚು ಅನ್ಯೋನ್ಯತೆ ಪಡೆಯುತ್ತದೆ. ಎಲ್ಲಾ ಕೆಲಸಗಳು ಬಾರದಿದ್ದರೂ ಪರವಾಗಿಲ್ಲ, ಯಾವ ಕೆಲಸ ಬರುತ್ತದೆಯೋ ಅದನ್ನೇ ಮಾಡಿದರೆ ಸಾಕು.

2) ಇಂದಿನ ದಿನದಲ್ಲಿ ಏನೇನೆಲ್ಲಾ ಆಯಿತು ಪರಸ್ಪರ ಹಂಚಿಕೊಳ್ಳಿ

2) ಇಂದಿನ ದಿನದಲ್ಲಿ ಏನೇನೆಲ್ಲಾ ಆಯಿತು ಪರಸ್ಪರ ಹಂಚಿಕೊಳ್ಳಿ

ದಂಪತಿಗಳು ಪರಸ್ಪರರ ಬಗ್ಗೆ ಸರಿಯಾದ ಮಾಹಿತಿಗಳನ್ನಿರಿಕೊಂಡಷ್ಟೂ ಇಬ್ಬರಿಗೂ ಪರಸ್ಪರರ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ದಿನವಿಡೀ ಕಾರ್ಯನಿಮಿತ್ತ ದೂರವಿದ್ದ ಇಬ್ಬರೂ ದಿನದ ಸಂಜೆಯ ಬಳಿಕ ಜೊತೆಯಾದ ಬಳಿಕ ಸಾವಕಾಶವಾಗಿ ದಿನದ ಹೊತ್ತಿನಲ್ಲಿ ಏನೇನೆಲ್ಲಾ ಆಯಿತು, ಇದರಲ್ಲಿ ಒಳ್ಳೆಯ ಅಂಶಗಳೆಷ್ಟು ಎಂಬುದನ್ನು ಪರಸ್ಪರರಿಗೆ ತಿಳಿಸುವ ಮೂಲಕ ಈ ಸಮಯವನ್ನು ಸದುಪಯೋಗಿಸಿಕೊಳ್ಳಬಹುದು. ಈ ಮೂಲಕ ತಮ್ಮ ಸಂಗಾತಿ ತಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಭಾವನೆ ಬದಲಾಗುತ್ತದೆ ಹಾಗೂ ಪರಸ್ಪರರಿಂದ ವಿಮುಖರಾಗುವ ಸಾಧ್ಯತೆಗಳು ಇಲ್ಲವಾಗುತ್ತವೆ.

3) ಪರಸ್ಪರ ಕಣ್ಣುಗಳನ್ನು ದಿಟ್ಟಿಸಿ

3) ಪರಸ್ಪರ ಕಣ್ಣುಗಳನ್ನು ದಿಟ್ಟಿಸಿ

ನಿಮ್ಮ ಸಂಗಾತಿಯ ದೃಷ್ಟಿಯಲ್ಲಿ ಆಳವಾಗಿ ನೋಡುವುದರಲ್ಲಿ ಅಂತರ್ಗತವಾದ ಪ್ರಣಯ ಮತ್ತು ಆತ್ಮೀಯವಾದ ನಿಕಟ ಸಂಗತಿಯಿದೆ. ಕಣ್ಣುಗಳು ಆತ್ಮದ ಕಿಟಕಿಗಳಾಗಿವೆ ಮತ್ತು ಈ ಕಿಟಕಿಗಳ ಮೂಲಕ ಪರಸ್ಪರರ ಆತ್ಮವನ್ನು ಪ್ರವೇಶಿಸಬಹುದು ಎಂದು ಹಿರಿಯರು ಹೇಳುತ್ತಾರೆ.

ನಿಮ್ಮ ಸಂಗಾತಿಯ ಕಣ್ಣುಗಳನ್ನೇ ದಿಟ್ಟಿಸಿ, ಈ ಮೂಲಕ ಸಂಗಾತಿಯ ಮನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವಲೋಕಿಸಿ. ನೀವು ಅಂದುಕೊಂಡಿದ್ದು ನಿಜ ಎಂದು ನಿಮ್ಮ ಸಂಗಾತಿ ಹೇಳಿದರೆ ಇದಕ್ಕಿಂತ ದೊಡ್ಡ ಬಹುಮಾನ ಜಗತ್ತಿನಲ್ಲಿ ಇನ್ನೊಂದಿರಲಾರದು.

4) ದಾಂಪತ್ಯಕ್ಕೂ ಮುನ್ನ ನಿಮ್ಮಿಬ್ಬರ ನಡುವೆ ನಡೆದ 'ಮೊದಲ’ ಸಂಗತಿಗಳನ್ನು ನೆನಪಿಸಿಕೊಳ್ಳಿ

4) ದಾಂಪತ್ಯಕ್ಕೂ ಮುನ್ನ ನಿಮ್ಮಿಬ್ಬರ ನಡುವೆ ನಡೆದ 'ಮೊದಲ’ ಸಂಗತಿಗಳನ್ನು ನೆನಪಿಸಿಕೊಳ್ಳಿ

ಕೆಲವೊಮ್ಮೆ, ನಿಮ್ಮ ಪ್ರಣಯದ ಬಂಧವನ್ನು ಬಲಪಡಿಸುವ ಅತ್ಯುತ್ತಮ ಮಾರ್ಗವೆಂದರೆ ನೀವು ದಂಪತಿಗಳಾದ ಪ್ರಯಾಣಕ್ಕೂ ಹಿಂದಿನ ಮಧುರ ಸಂಗತಿಗಳನ್ನು ನೀವೇ ನೆನಪಿಸಿಕೊಳ್ಳುವುದು. ನಿಮ್ಮಿಬ್ಬರು ದಂಪತಿಗಳಾಗಿ ಹಂಚಿಕೊಂಡ ಅನೇಕ ನೆನಪುಗಳನ್ನು ಕೆದಕಿ ನೋಡುವುದು, ಅದರಲ್ಲೂ ಯಾವುದೇ ಮೊದಲ ಸಂಗತಿಗಳು ಯಾವಾಗಲೂ ಹೆಚ್ಚಿನ ಸಂತೋಷವನ್ನು ನೀಡುತ್ತವೆ. ನಿಮ್ಮ ಸಂಬಂಧವನ್ನು ನೀವು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಇವುಗಳು ನಿಮಗೆ ಮೆಟ್ಟಿಲುಗಳಾಗಿ ಕಾರ್ಯನಿರ್ವಹಿಸುತ್ತವೆ.

5) ಪರಸ್ಪರರಿಗೆ ಹಿತವಾದ ಮಸಾಜ್ ಸೇವೆಯನ್ನು ನೀಡಿ

5) ಪರಸ್ಪರರಿಗೆ ಹಿತವಾದ ಮಸಾಜ್ ಸೇವೆಯನ್ನು ನೀಡಿ

ಮಸಾಜ್ ಅಥವಾ ಹಿತವಾದ ಒತ್ತಡ ಪಡೆಯುವುದು ಯಾರಿಗೇ ಆದರೂ ಸರಿ, ಅತ್ಯಂತ ಸುಖಕರವಾದ ಅನುಭವವಾಗಿದೆ. ದಿನದ ಆಯಾಸವನ್ನು ಕಳೆಯಲು ಮಸಾಜ್ ಅತ್ಯುತ್ತಮವಾಗಿದೆ. ಆದರೆ ಈ ಸೇವೆಯನ್ನು ನಿಮ್ಮ ಸಂಗಾತಿಯೇ ನಿಮಗೆ ನೀಡುವಾಗ ಈ ಸುಖ ನೂರ್ಮಡಿಯಾಗುತ್ತದೆ. ನಿಮ್ಮ ಸಂಗಾತಿಗೆ ಮಸಾಜ್ ಮಾಡಲು ನೀವು ಪ್ರಯತ್ನಿಸಿದಾಗ, ಅವರು ವಿಶ್ರಾಂತಿ ಪಡೆಯಬೇಕೆಂದು ನೀವು ಬಯಸುತ್ತೀರಿ ಮತ್ತು ನಿಮ್ಮಲ್ಲಿ ಯಾವಾಗಲೂ ಆರಾಮವನ್ನು ಕಾಣಬಹುದು ಎಂದು ನೀವು ಅವರಿಗೆ ಮನದಟ್ಟು ಮಾಡುತ್ತಿದ್ದೀರಿ. ಅಷ್ಟೇ ಅಲ್ಲ, ಇದು ಲೈಂಗಿಕ ಅನ್ಯೋನ್ಯತೆಗೆ ಕರೆಯೋಲೆ ನೀಡುವ ಉತ್ತಮ ಮಾರ್ಗವೂ ಆಗಿದೆ.

6) ಒಬ್ಬರಿಗೊಬ್ಬರು ಹಾಡಿ ಮತ್ತು ನರ್ತಿಸಿ

6) ಒಬ್ಬರಿಗೊಬ್ಬರು ಹಾಡಿ ಮತ್ತು ನರ್ತಿಸಿ

ನೀವು ವಿಶ್ವದ ಅತ್ಯುತ್ತಮ ಗಾಯಕರಾಗಬೇಕಾಗಿಲ್ಲ ಅಥವಾ ನರ್ತಕರೂ ಆಗಬೇಕಿಲ್ಲ. ಯಾವುದೇ ವ್ಯಕ್ತಿ ತನ್ನ ಸಂಗಾತಿ ತನಗಾಗಿ ಹಾಡುವ ಯಾವುದೇ ಎರಡೇ ಸಾಲನ್ನಾದರೂ ಸರಿ ಕೇಳಲು ಕಾತುರರಾಗಿರುತ್ತಾರೆ. ಇದೇ ರೀತಿ ನರ್ತನವೂ ಸಹಾ! ನಿಮ್ಮ ಸಂಗಾತಿಗಾಗಿ ನೀವು ಪರಸ್ಪರ ಹಾಡಿ ಮತ್ತು ನರ್ತಿಸಿ. ಮೂಲ ಹಾಡಿಗೂ ನಿಮ್ಮ ಸಂಗಾತಿಯ ಹಾಡಿಗೂ ನರ್ತನಕ್ಕೂ ಅಜಗಜಾಂತರ ವ್ಯತ್ಯಾಸವೇ ಇರಬಹುದು, ಆದರೆ ಅದು ಎಲ್ಲರಿಗಾಗಿ ಇದ್ದರೆ ಇದು ಮಾತ್ರ ಕೇವಲ ನಿಮಗಿಬ್ಬರಿಗಾಗಿಯೇ ಇರುತ್ತದೆ. ಸಂಗೀತಕ್ಕೆ ದಂಪತಿಗಳ ನಡುವಣ ಅನ್ಯೋನ್ಯತೆಯನ್ನು ಹೆಚ್ಚಿಸುವ ಗುಣವಿದೆ.

7) ಒಂದು ಪುಸ್ತಕವನ್ನು ಜೊತೆಯಾಗಿ ಓದಿ

7) ಒಂದು ಪುಸ್ತಕವನ್ನು ಜೊತೆಯಾಗಿ ಓದಿ

ಓದುವುದು ಯಾವಾಗಲೂ ಒಳ್ಳೆಯ ಅಭ್ಯಾಸವೇ ಸರಿ. ಉತ್ತಮ ಕೃತಿಗಳನ್ನು ಓದಿ ಇದರ ಪಾತ್ರಗಳ ಮತ್ತು ವಿಷಯಗಳ ಬಗ್ಗೆ ಚರ್ಚಿಸುವುದು ಎಂದಿಗೂ ಉತ್ತಮವಾದ ವಿಚಾರವೇ ಆಗಿದೆ. ದಂಪತಿಗಳು ಇಬ್ಬರಿಗೂ ಇಷ್ಟವಾಗುವ ಒಂದು ಕೃತಿಯನ್ನು ಜೊತೆಯಾಗಿ ಓದುತ್ತಾ ಇದರ ಪಾತ್ರಗಳನ್ನು ಕಲ್ಪಿಸಿಕೊಂಡು ವಿಮರ್ಶಿಸಿದಾಗ ಈ ಕಥೆ ಇಬ್ಬರ ಮನಸ್ಸಿನಲ್ಲಿಯೂ ಎಷ್ಟು ಚೆನ್ನಾಗಿ ಮೂಡಿ ಬರುತ್ತದೆ ಎಂದರೆ ಒಬ್ಬರೇ ಓದಿದ್ದಾಗ ಇಷ್ಟು ಚೆನ್ನಾಗಿ ಮೂಡಿ ಬರಲು ಸಾಧ್ಯವೇ ಆಗಲಿಕ್ಕಿಲ್ಲ. ಒಂದೇ ಕಥೆಯನ್ನು ನೀವು ಒಟ್ಟಿಗೇ ಸುಮ್ಮನೇ ಓದಿದರೂ ಸರಿ, ನಿಮ್ಮಿಬ್ಬರು ಮಾತಾಡದೆ ಒಬ್ಬರಿಗೊಬ್ಬರು ಗುಣಮಟ್ಟದ ಸಮಯವನ್ನು ಕಳೆಯಲು ಇದು ಒಂದು ಉತ್ತಮ ಮಾರ್ಗವಾಗಿದೆ.

8) ನೀವು ಒಬ್ಬರಿಗೊಬ್ಬರು ಏಕೆ ಕೃತಜ್ಞರಾಗಿರುತ್ತೀರಿ ಎಂಬುದರ ಕುರಿತು ಮಾತನಾಡಿ

8) ನೀವು ಒಬ್ಬರಿಗೊಬ್ಬರು ಏಕೆ ಕೃತಜ್ಞರಾಗಿರುತ್ತೀರಿ ಎಂಬುದರ ಕುರಿತು ಮಾತನಾಡಿ

ನಿಮ್ಮ ಸಂಬಂಧಕ್ಕೆ ಅವರು ನೀಡುತ್ತಿರುವ ಪ್ರಯತ್ನಗಳನ್ನು ನೀವು ಕೃತಜ್ಞರಾಗಿರುತ್ತೀರಿ ಮತ್ತು ಮೆಚ್ಚುತ್ತೀರಿ ಎಂದು ನಿಮ್ಮ ಸಂಗಾತಿಗೆ ತಿಳಿದಿದೆ ಎಂದು ಯಾವಾಗಲೂ ಖಚಿತಪಡಿಸಿಕೊಳ್ಳಿ. ನಿಮ್ಮ ಸಂಗಾತಿ ನೀವು ಕೃತಜ್ಞರಲ್ಲದವರು ಅಥವಾ ನೀವು ಅವರನ್ನು ಲಘುವಾಗಿ ಪರಿಗಣಿಸುತ್ತಿದ್ದೀರಿ ಎಂದು ಭಾವಿಸಲು ನೀವು ಎಂದಿಗೂ ಬಯಸುವುದಿಲ್ಲ. ಅದಕ್ಕಾಗಿಯೇ ನಿಮ್ಮ ಸಂಗಾತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಸದುಪಯೋಗಿಸಿಕೊಳ್ಳಿ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

These Good Night Habits Every Couple Should Adopt

Here we are discussing about These Good Night Habits Every Couple Should Adopt. Being in a successful relationship is more than just spending a lot of your time with one another.Read more.
X
Desktop Bottom Promotion