For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ಹೀಗೆ ನಡೆದುಕೊಂಡರೆ ದಾಂಪತ್ಯ ಹಾಳಾಗುತ್ತದೆ

|

ಅತ್ಯಂತ ಸಂತೋಷದ ಜೀವನವನ್ನು ಅನುಭವಿಸುತ್ತಿರುವ ದಂಪತಿಗಳು ಇದ್ದಕ್ಕಿದ್ದಂತೆಯೇ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ ಆಶ್ಚರ್ಯಕ್ಕೆ ಒಳಗಾಗುವ ಅಗತ್ಯವಿಲ್ಲ. ಅವರಿಬ್ಬರ ನಡುವೆ ಏನೋ ಒಂದು ದೊಡ್ಡ ಭಿನ್ನಾಭಿಪ್ರಾಯ ಅಥವಾ ತಪ್ಪು ಕಲ್ಪನೆಗಳು ಸಂಭವಿಸಿದೆ ಎಂದು ತಿಳಿಯಬಹುದು. ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಾ, ಒಬ್ಬರನ್ನೊಬ್ಬರು ಅಗಲಿ ಬದುಕಲು ಸಾಧ್ಯವಿಲ್ಲ ಎನ್ನುವ ಭಾವನೆ ಹೊಂದಿದ್ದವರು ಇದೀಗ ತಮ್ಮ ಭಾವನೆಗಳನ್ನು ಬದಲಿಸಿಕೊಂಡಿದ್ದಾರೆ, ಇಬ್ಬರೂ ಬೇರೆ ಬೇರೆ ಜೀವನದ ಪತವನ್ನು ಆಯ್ಕೆ ಮಾಡಿಕೊಂಡರೆ ಜೀವನ ಸುಂದರವಾಗಿರುತ್ತದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದರೆ ಅವರ ನಡುವೆ ಸಹಿಸಿಕೊಳ್ಳಲು ಸಾಧ್ಯವಾಗದ ಸಂಗತಿಗಳಿವೆ ಎಂದು ತಿಳಿಯಬಹುದು.

ವಿವಾಹ ಎನ್ನುವುದು ಎರಡು ಹೃದಯಗಳನ್ನು ಬೆಸೆಯುವ ಹಾಗೂ ದೀರ್ಘ ಸಮಯಗಳ ಕಾಲ ಒಟ್ಟಾಗಿ ಬಾಳಲು ಅನುವು ಮಾಡಿಕೊಡುವ ಒಂದು ಬಂಧ. ಈ ಬಂಧನದಲ್ಲಿ ಕೇವಲ ಒಂದು ಹುಡುಗ ಹುಡುಗಿಯ ಜೀವನ ನಿಂತಿರುವುದಿಲ್ಲ. ಸುಂದರ ಬೆಸುಗೆಯ ನಡುವೆ ಎರಡು ಕುಟುಂಬಗಳ ಸಂಬಂಧಗಳು ಸಹ ಬೆಸೆದುಕೊಳ್ಳುತ್ತವೆ. ಇಂತಹ ಒಂದು ಜೀವನ ಹಾಗೂ ಸಂಬಂಧಗಳು ದೂರವಾಗುತ್ತವೆ ಎಂದರೆ ಅಲ್ಲಿ ಹುಡುಗ ಅಥವಾ ಹುಡುಗಿಯ ನಡುವೆ ಇರುವ ಕೆಟ್ಟ ಹವ್ಯಾಸಗಳು ಆಗಿರಬಹುದು.

ನಿಜ, ಇತ್ತೀಚೆಗೆ ಸಾಕಷ್ಟು ದಂಪತಿಗಳು ಸಂಬಂಧಗಳನ್ನು ತೊರೆದು, ಒಂಟಿ ಜೀವನವನ್ನು ನಡೆಸಲು ನಿರ್ಧರಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ನಡುವೆ ದುಃಖವನ್ನು ಹುಟ್ಟಿಸುವ ಕೆಟ್ಟ ಹವ್ಯಾಸಗಳು ಅಥವಾ ಅಭ್ಯಾಸಗಳು ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ಇರುವ ಸಾಕಷ್ಟು ಭಿನ್ನಾಭಿಪ್ರಾಯಗಳು, ಚಿಂತನೆಗಳು ಹಾಗೂ ವರ್ತನೆಗಳು ಸಂಬಂಧವನ್ನು ಸಡಿಲಗೊಳಿಸುತ್ತವೆ. ಬಂಧಗಳ ಬಗ್ಗೆ ಬೇಸರ ಹಾಗೂ ಮಾನಸಿಕ ಒತ್ತಡಗಳು ದಾಂಪತ್ಯ ಜೀವನವನ್ನು ಹಾಳು ಮಾಡುವುದು.

ನಮ್ಮ ವರ್ತನೆಗಳು ಅಥವಾ ಅಭ್ಯಾಸಗಳು ನಮ್ಮ ಸಂಗಾತಿಗೆ ನೋವನ್ನುಂಟು ಮಾಡುತ್ತಿದೆ ಎಂದಾಗ ಅದನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು. ಸಂಗಾತಿಯ ಭಾವನೆಗಳಿಗೂ ಬೆಲೆಯಿದೆ, ಅವಳು/ಅವನು ನನ್ನವಳು/ನನ್ನವನು ಎನ್ನುವ ಪ್ರೀತಿಯ ಭಾವನೆಯನ್ನು ಹೊಂದುವ ಮೂಲಕ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಆದರೆ ಅಷ್ಟು ವ್ಯವದಾನ ಅಥವಾ ಬುದ್ಧಿವಂತಿಕೆ ನಮ್ಮಲ್ಲಿ ಇಲ್ಲ. ನಮ್ಮ ಸುಂದರವಾದ ವೈವಾಹಿಕ ಜೀವನ ಎಂದೆಂದಿಗೂ ಸಿಹಿಯಾಗಿಯೇ ಮುಂದುವರಿಯಬೇಕು ಎಂದರೆ ಪತಿ-ಪತ್ನಿಯರಿಬ್ಬರು ಕೆಲವು ಸೂಕ್ಷ್ಮ ಸಂಗತಿಗಳನ್ನು ಅರಿಯಬೇಕು. ಜೊತೆಗೆ ಒಂದಿಷ್ಟು ದುರಾಭ್ಯಾಸವನ್ನು ಬಿಡಬೇಕು.

ಅತಿಯಾಗಿ ತಪ್ಪು ಹುಡುಕುವುದು

ಅತಿಯಾಗಿ ತಪ್ಪು ಹುಡುಕುವುದು

ಪ್ರತಿಯೊಬ್ಬರು ವಿಭಿನ್ನವಾದ ವರ್ತನೆ ಹಾಗೂ ಹವ್ಯಾಸವನ್ನು ಹೊಂದಿರುತ್ತಾರೆ. ಹಾಗಂತ ಅದನ್ನು ಮನಸ್ಸಿಗೆ ಬಂದ ಹಾಗೆ ವ್ಯಕ್ತಪಡಿಸಬಾರದು. ನಮ್ಮ ಮಾತು ಮತ್ತು ವರ್ತನೆ ಇತರರಿಗೆ ನೋವನ್ನುಂಟುಮಾಡಬಾರದು. ಬಹುತೇಕ ಸಂದರ್ಭದಲ್ಲಿ ವ್ಯಕ್ತಿ ತಾನು ಯಾವ ಆದರ್ಶ ಮತ್ತು ಶಿಸ್ತನ್ನು ಹೊಂದಿರುತ್ತಾನೋ ಹಾಗೆಯೇ ಇತರರು ಇರಬೇಕು ಎಂದು ಬಯಸುತ್ತಾರೆ. ಅಂತಹ ಬದಲಾವಣೆ ಅಥವಾ ನಿರೀಕ್ಷೆಯು ಈಡೇರದೆ ಹೋದರೆ ಬೇಸರಕ್ಕೆ ಒಳಗಾಗಿ ಬೈಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ ಬೇರೆಯವರ ತಪ್ಪನ್ನೇ ಸದಾ ಗುರುತಿಸುವುದು. ಇಂತಹ ಗುಣಗಳು ಇರುವ ದಂಪತಿಗಳಲ್ಲಿ ಪರಸ್ಪರ ತಪ್ಪುಗಳನ್ನು ಹುಡುಕುವುದು, ಅವುಗಳನ್ನು ಹೇಳುವುದರಿಂದ ಇಬ್ಬರಲ್ಲೂ ಬೇಸರ ಹಾಗೂ ಮನಃಸ್ತಾಪ ಉಂಟಾಗುವುದು. ಹಾಗಾಗಿ ಆದಷ್ಟು ಅಂತಹ ಹವ್ಯಾಸವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ.

ದಿನವಿಡೀ ವಾದದಲ್ಲೇ ಮುಳುಗುವುದು

ದಿನವಿಡೀ ವಾದದಲ್ಲೇ ಮುಳುಗುವುದು

ಯಾವುದಾದರೂ ಭಿನ್ನಾಭಿಪ್ರಾಯ ಉದ್ಭವಿಸಿದೆ ಎಂದಾಗ ಅದರ ಬಗ್ಗೆ ಸಣ್ಣ ವಿವರಣೆಯನ್ನು ನೀಡಿ, ವಿಷಯವನ್ನು ಅಲ್ಲಿಗೆ ನಿಲ್ಲಿಸಿ. ಅನಗತ್ಯವಾದ ಮಾತು ಅಥವಾ ವಾದಗಳು ನಿಮ್ಮ ಸಂಬಂಧದಲ್ಲಿ ಬೇಸರವನ್ನು ಮತ್ತು ಬಿರುಕು ಉಂಟುಮಾಡುತ್ತಿದೆ ಎಂದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡುವುದು ಉತ್ತಮ. ಯಾವ ಸಂಗತಿಯನ್ನು ಮಾತನಾಡಿದರೂ ಅದೇ ಹಳೆಯ ವಾದಕ್ಕೆ ಕರೆದೊಯ್ಯುವುದು, ವಾದ ಮಾಡುವುದರ ಮೂಲಕ ಸಂಬಂಧದ ಸಿಹಿಯನ್ನು ಹಾಳು ಮಾಡುವುದು ಸರಿಯಾದ ಸಂಗತಿಯಲ್ಲ. ನಿಮ್ಮ ಸಂಬಂಧಗಳಿಗಿಂತ ಹೆಚ್ಚು ಸಂತೋಷ ನೀಡುವುದು ಬೇರೆ ಯಾವುದೂ ಇಲ್ಲ. ಹಾಗಾಗಿ ನಿಮ್ಮಲ್ಲಿ ಇರುವ ವಾದದ ಪ್ರವೃತ್ತಿಯನ್ನು ಇಂದೇ ಬಿಟ್ಟು ಬಿಡಿ.

ಸಂಗಾತಿಯ ಬಗ್ಗೆ ಹಿಂದೆ ಮಾತನಾಡಬೇಡಿ

ಸಂಗಾತಿಯ ಬಗ್ಗೆ ಹಿಂದೆ ಮಾತನಾಡಬೇಡಿ

ನಿಮ್ಮ ಸಂಗಾತಿಯ ಬಗ್ಗೆ ಅಥವಾ ಅವರ ನಡವಳಿಕೆಯ ಬಗ್ಗೆ ನಿಮಗೆ ಗೊಂದಲ ಅಥವಾ ಬೇಸರ ಇರಬಹುದು. ಹಾಗಂತ ಅವುಗಳನ್ನು ಅವರ ಹಿಂದೆ ಇತರರಲ್ಲಿ ಹೇಳಿಕೊಂಡು ಬರಬೇಡಿ. ನಿಮ್ಮ ನಡುವೆ ಮನಃಸ್ತಾಪ ಅಥವಾ ಗೊಂದಲ ಇದ್ದರೆ ಅವುಗಳನ್ನು ಅವರ ಬಳಿಯೇ ಚರ್ಚಿಸಿ, ಆಗ ನಿಮಗೆ ನಿಜವಾದ ಸಂಗತಿ ಹಾಗೂ ಗೊಂದಲಗಳು ದೂರವಾಗುತ್ತವೆ. ಮೂರನೇ ವ್ಯಕ್ತಿಯಲ್ಲಿ ಸಂಗಾತಿಯ ಬಗ್ಗೆ ಹೇಳಿದ ಮಾತುಗಳು ಅವರ ಕಿವಿಗೆ ಬಿದ್ದಾಗ ಬೇಸರ ಹಾಗೂ ದುಃಖವಾಗುವುದು. ಈ ವಿಷಯಗಳೇ ದೊಡ್ಡದಾಗಿ ದಾಂಪತ್ಯದಲ್ಲಿ ಬಿರುಕು ಉಂಟಾಗುವುದು. ಹಾಗಾಗಿ ಆದಷ್ಟು ಸಂಗಾತಿಯ ಬಗ್ಗೆ ಅಪಪ್ರಚಾರ ಹಾಗೂ ಸುಳ್ಳು ಸುದ್ದಿ ಹರಡುವ ಅಭ್ಯಾಸವನ್ನು ಬಿಟ್ಟುಬಿಡಿ.

ಇತರರೊಂದಿಗೆ ಹೋಲಿಕೆ ಮಾಡುವುದು

ಇತರರೊಂದಿಗೆ ಹೋಲಿಕೆ ಮಾಡುವುದು

ಪ್ರತಿಯೊಬ್ಬರು ವಿಭಿನ್ನ ವರ್ತನೆ ಹಾಗೂ ಹವ್ಯಾಸಗಳನ್ನು ಹೊಂದಿರುತ್ತಾರೆ. ಅದನ್ನು ಇತರರೊಂದಿಗೆ ಹೋಲಿಕೆ ಮಾಡುವುದು ತಪ್ಪು. ನೀವು ನಿಮ್ಮ ಪ್ರೇಮಿಯೊಂದಿಗೆ ಅಥವಾ ಸ್ನೇಹಿತರೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸಬೇಡಿ. ಹೋಲಿಕೆ ಮಾಡುವುದು ನಿಮ್ಮ ಸಂಗಾತಿಗೆ ಇಷ್ಟವಾಗದೆ ಇರಬಹುದು. ಜೊತೆಗೆ ಹೋಲಿಕೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ಹೆಚ್ಚಿನ ಕೊರತೆಗಳು ಕಂಡು ಬರುತ್ತವೆ. ಆಗ ಸಂಬಂಧದ ಬಗ್ಗೆ ಇನ್ನಷ್ಟು ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯಲ್ಲಿ ಇರುವ ಒಳ್ಳೆಯ ಗುಣಗಳ ಬಗ್ಗೆ ಸಂತೋಷ ಪಡಿ. ಆಗ ಸಂಬಂಧ ಚೆನ್ನಾಗಿರುತ್ತದೆ.

ವೈಯಕ್ತಿಕ ಸಂಗತಿಗಳನ್ನು ಗೌರವಿಸದೆ ಇರುವುದು

ವೈಯಕ್ತಿಕ ಸಂಗತಿಗಳನ್ನು ಗೌರವಿಸದೆ ಇರುವುದು

ಪ್ರತಿಯೊಬ್ಬರಿಗೂ ವೈಯಕ್ತಿಕ ಸಂಗತಿ ಎನ್ನುವುದು ಇರುತ್ತದೆ. ಅದನ್ನು ನೀವು ಗೌರವಿಸದೆ ಇರುವುದು ಅಥವಾ ಕೀಳಾಗಿ ಕಾಣುವುದು ಮಾಡಬಾರದು. ಸಂಗಾತಿಯ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ಗೌರವಿಸದೆ ಇರುವುದು, ನಿಂದಿಸುವುದು ಮಾಡಬಾರದು. ಅವು ನಿಮ್ಮ ಸಂಗಾತಿಯ ಬೇಸರಕ್ಕೆ ಕಾರಣವಾಗುವುದು. ಸಿಟ್ಟಿಗೆದ್ದಾಗ ಸಂಗಾತಿಗೆ ಹಿಂಸಿಸುವುದು ಅಥವಾ ಅವರಿಗೆ ಇಷ್ಟವಿಲ್ಲದ ಸಂಗತಿಯನ್ನು ಮಾಡುವಂತೆ ಒತ್ತಾಯಿಸಬಾರದು. ಇಂತಹ ವರ್ತನೆಗಳು ಸಂಬಂಧಗಳಲ್ಲಿ ಬೇಸರವನ್ನು ಹಾಗೂ ಬಿರುಕನ್ನು ತರುತ್ತವೆ. ಅನಗತ್ಯವಾದ ಸಂಗತಿ ಹಾಗೂ ಅಭ್ಯಾಸಗಳಿಂದಾಗಿಯೇ ಸಂಬಂಧಗಳು ಬಹುಬೇಗ ಹಾಳಾಗುವುದು. ಜೊತೆಗೆ ಸಂತೋಷವನ್ನು ಕೆಡಿಸುವುದು.

English summary

These Bad Habits May Ruin Even the Happiest Marriage

Sometimes there are irreconcilable reasons behind their decision and at times there are things which the couple could have easily mended to save a marriage. Here are some seemingly harmless habits that can become the bone of contention between partners and avoiding these can make a marriage stronger.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more