For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ಬೆತ್ತಲಾಗಿ ಮಲಗಿದರೆ ಆರೋಗ್ಯಕ್ಕಿದೆ 8 ಲಾಭ

|

ಗಂಡ-ಹೆಂಡತಿಯ ಮಧುರ ಸಂಬಂಧ ಕೇವಲ ದೈಹಿಕ ಆಸೆ ಪೂರೈಸುವುದು ಅಷ್ಟೇ ಅನೇಕ ಶಾರೀರಿಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂಬುವುದನ್ನು ನೀವು ಕೇಳಿರಬಹುದು. ಮೂರ್ಛೆ ರೋಗ, ಆಗಾಗ ಕಾಡುವ ತಲೆನೋವು, ಮುಟ್ಟಿನ ನೋವು ಇವೆಲ್ಲಾ ಮದುವೆಯಾದ ಬಳಿಕ ಕಡಿಮೆಯಾಯಿತು ಎಂದು ಹೇಳುವುದನ್ನು ಕೇಳಿರಬಹುದು.

Did You Know That Sleeping Naked With Your Partner Can Help Reduce Stress & Boost Self-esteem?

ನಾವಿಲ್ಲಿ ಸಂಗಾತಿ ಜೊತೆಗೆ ಬೆತ್ತಲೆಯಾಗಿ ಮಲಗುವುದರಿಂದ ದೊರೆಯುವ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ. ಬೆತ್ತಲೆಯಾಗಿ ಮಲಗುವಿದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ವೈಜ್ಞಾನಿಕವಾಗಿ ಸಾಬೀತಾಗಿದೆ. ಸಂಗಾತಿ ಜೊತೆ ಬೆತ್ತಲಾಗಿ ಮಲಗುವುರಿಂದ ಆರೋಗ್ಯಕ್ಕೆ ಏನು ಲಾಭವೆಂದು ನೋಡೋಣವೇ:

1. ಸುಖ ನಿದ್ದೆ

1. ಸುಖ ನಿದ್ದೆ

ಹೆಚ್ಚಿನವರು ನಿದ್ದೆಯಿಲ್ಲದೆ ಹೊರಳಾಡುತ್ತಾರೆ, ಮಲಗಿ ಎರು-ಮೂರು ಗಂಟೆಯಾದರೂ ನಿದ್ದೆ ಬರಲ್ಲ ಎಂದು ಹೇಳುತ್ತಾರೆ, ನಿದ್ದೆ ಕಡಿಮೆಯಾದರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಬಟ್ಟೆಯಿಲ್ಲದೆ ಮಲಗುವುದರಿಂದ ಬೇಗನೆ ನಿದ್ದೆ ಬರುವುದು ಹಾಗೂ ತುಂಬಾ ಹೊತ್ತು ಚೆನ್ನಾಗಿ ನಿದ್ದೆ ಮಾಡಬಹುದು. ದೇಹವೂ ಕೂಡ ತಂಪಾಗಿ ಇರುವುದರಿಂದ ನಿದ್ದೆ ಸಹಕಾರಿ ಎಂದು ಹೇಳಲಾಗಿದೆ.

2. ಮಾನಸಿಕ ಒತ್ತಡ ಕಡಿಮೆಯಾಗುವುದು

2. ಮಾನಸಿಕ ಒತ್ತಡ ಕಡಿಮೆಯಾಗುವುದು

ಖಿನ್ನತೆ, ಮಾನಸಿಕ ಒತ್ತಡ ಇದ್ದರೆ ಅವೆಲ್ಲಾ ಬೆತ್ತಲೆಯಾಗಿ ಮಲಗುವುದರಿಂದ ಕಡಿಮೆಯಾಗುವುದೆಂದು ಅಧ್ಯಯನಗಳು ಹೇಳಿವೆ. ನಿದ್ದೆ ಚೆನ್ನಾಗಿ ಬರುತ್ತದೆ, ನಿದ್ದೆ ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ವೃದ್ಧಿಯಾಗುವುದು.

 3. ತೂಕ ಹೆಚ್ಚಾಗುವುದಿಲ್ಲ

3. ತೂಕ ಹೆಚ್ಚಾಗುವುದಿಲ್ಲ

ನಿದ್ದೆ ಕಡಿಮೆಯಾದರೆ ತೂಕ ಹೆಚ್ಚಾಗುವುದು. ಆದ್ದರಿಂದ ನಿದ್ದೆಗೂ, ತೂಕ ಹೆಚ್ಚಾಗುವುದಕ್ಕೂ ಸಂಬಂಧವಿದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಮನುಷ್ಯ ದಿನದಲ್ಲಿ 6-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ನಿದ್ದೆ ಚೆನ್ನಾಗಿ ಆದರೆ ತೂಕವೂ ಕೂಡ ಹೆಚ್ಚುವುದಿಲ್ಲ.

4. ಮಧಮೇಹದ ಅಪಾಯ

4. ಮಧಮೇಹದ ಅಪಾಯ

ನಿದ್ದೆ ಚೆನ್ನಾಗಿ ಮಾಡಿದರೆ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ, ಇದರಿಂದ ಮಧುಮೇಹದ ಅಪಾಯವೂ ಕಡಿಮೆಯಾಗುವುದು. ಅದರಲ್ಲೂ ಟೈಪ್‌ 2 ಮಧುಮೇಹ ತಡೆಗಟ್ಟುವಲ್ಲಿ ನಿದ್ದೆ ಸಹಕಾರಿಯಾಗಿದೆ. ದಿನಾ ಒಂದೇ ಸಮಯದಲ್ಲಿ ಮಲಗುವುದು, ಏಳುವುದು ರೂಢಿಸಿಕೊಳ್ಳಿ. ತಡ ರಾತ್ರಿ ಮಲಗುವುದು, ತುಂಬಾ ತಡವಾಗಿ ಏಳುವುದು ಆರೋಗ್ಯಕರವಲ್ಲ.

5. ಪುರುಷರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸುತ್ತೆ

5. ಪುರುಷರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸುತ್ತೆ

ಬಿಗಿಯಾದ ಒಳ ಉಡುಪುಗಳನ್ನು ಧರಿಸಿ ಮಲಗುವುದು ಒಳ್ಳೆಯದಲ್ಲ. ಬಿಗಿಯಾದ ಒಳ ಉಡುಪು ಧರಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಒಂದು ಅಧ್ಯಯನದಲ್ಲಿ ಬಿಗಿಯಾಗಿ ಒಳ ಉಡುಪು ಧರಿಸುವ ಪುರುಷರ ವೀರ್ಯಾಣು, ಸಡಿಲವಾದ ಅಂಡರ್‌ವೇರ್ ಧರಿಸುವ ಪುರುಷರ ವೀರ್ಯಾಣುಗಿಂತ ಕಡಿಮೆ ಇರುವುದು ಸಾಬೀತಾಗಿದೆ.

6. ಮಹಿಳೆಯರಲ್ಲಿ ಜನನೇಂದ್ರೀಯದ ಆರೋಗ್ಯ ಹೆಚ್ಚಿಸುತ್ತೆ

6. ಮಹಿಳೆಯರಲ್ಲಿ ಜನನೇಂದ್ರೀಯದ ಆರೋಗ್ಯ ಹೆಚ್ಚಿಸುತ್ತೆ

ಒಳ ಉಡುಪು ಧರಿಸಿ ಮಲಗುವುದರಿಂದ ಬೆವರು, ದ್ರವಾಂಶ ಇವುಗಳಿಂದ ತುರಿಕೆ ಉಂಟಾಗುವುದು ಕೆಲವೊಮ್ಮೆ ಮೂತ್ರ ಸೋಂಕು ಕೂಡ ಉಂಟಾಗುವುದು. ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಲು ಒಳ ಉಡುಪು ಇಲ್ಲದೆ ಮಲಗುವುದು ಒಳ್ಳೆಯದು, ಇದರಿಂದ ಯೀಸ್ಟ್ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು.

7. ಆತ್ಮವಿಶ್ವಾಸ ಹೆಚ್ಚಿಸುತ್ತೆ

7. ಆತ್ಮವಿಶ್ವಾಸ ಹೆಚ್ಚಿಸುತ್ತೆ

ಬೆತ್ತಲೆಯಾಗಿ ಮಲಗುವ ದಂಪತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ ಎಂದು ಒಂದು ವಿಮರ್ಶೆಯಲ್ಲಿ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದ ದಂಪತಿಗಳಲ್ಲಿ ತಮ್ಮ ದೇಹದ ಬಗ್ಗೆ ಹೆಮ್ಮೆ, ಆತ್ಮವಿಶ್ವಾಸ ಇವೆಲ್ಲಾ ಬೆತ್ತಲೆಯಾಗಿ ಮಲಗುವ ದಂಪತಿಗಳಲ್ಲಿ ಹೆಚ್ಚಾಗಿತ್ತು ಎಂದು ಆ ವಿಮರ್ಶೆ ಹೇಳಿದೆ.

8. ತ್ವಚೆಗೂ ಒಳ್ಳೆಯದು

8. ತ್ವಚೆಗೂ ಒಳ್ಳೆಯದು

ಇನ್ನು ಬೆತ್ತಲೆಯಾಗಿ ಮಲಗುವುದರಿಂದ ತ್ವಚೆ ಸೌಂದರ್ಯ ಕೂಡ ಹೆಚ್ಚುವುದು. ಯಾವುದೇ ಬಿಗಿ ಉಡುಪುಗಳಿಲ್ಲದೆ ರಕ್ತ ಸಂಚಲನ ಸರಾಗವಾಗಿ ನಡೆಯುವುದು, ಇದರಿಂದ ತ್ವಚೆಯ ಹೊಳಪು ಹೆಚ್ಚುವುದು, ಹೀಗೆ ಮಲಗುವುದರಿಂದ ಯೌವನ ಕಳೆ ಕೂಡ ಬೇಗ ಮಾಸುವುದಿಲ್ಲವಂತೆ. ದೇಹದ ಉಷ್ಣಾಂಶ ಕಡಿಮೆ ಇರುವುದರಿಂದ ಮೆಲಾಟೋನಿನ್‌ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ತ್ವಚೆ ಯೌವನ ಕಳೆಯಿಂದ ಕೂಡಿರುವಂತೆ ಮಾಡುತ್ತದೆ.

English summary

Sleeping Naked (With Your Partner) Can Help Reduce Stress & Boost Self-esteem.

Here we will explore the ways through which sleeping without your clothes can improve your health. Let's take a look.
X
Desktop Bottom Promotion