For Quick Alerts
ALLOW NOTIFICATIONS  
For Daily Alerts

ನಿಮ್ಮ ಪತಿಯಲ್ಲಿ ಈ ಲಕ್ಷಣಗಳಿದ್ದರೆ ಅವನಿಗೆ ಇನ್ನೂ ಪ್ರಬುದ್ಧತೆ ಇಲ್ಲ ಎಂದರ್ಥ..!

|

ಮನುಷ್ಯನಿಗೆ ಮಗುವಿನಂತ ಮನಸ್ಸಿರಬೇಕು ಎಂಬ ಮಾತಿದೆ, ಅದು ನಿಜ ಕೂಡ.. ಆದರೆ, ಎಲ್ಲಾ ಸಮಯದಲ್ಲೂ ಮಗುವಿನಂತೆಯೇ ವರ್ತಿಸುತ್ತಿದ್ದರೆ ಅದು ಸರಿಯಲ್ಲ. ಕೆಲವೊಮ್ಮೆ ಡೇಟಿಂಗ್ ಮಾಡುತ್ತಿರುವಾಗ ಇಂತಹ ಭಾವನೆ ಮೂಡುತ್ತದೆ. ಅದು ಸಹಜ ಕೂಡ.

123

ಕೆಲ ಪುರುಷರು ತಮ್ಮ ಸಂಗಾತಿಯೊಂದಿಗೆ ಮಗುವಿನಂತೆ ವರ್ತಿಸುತ್ತಿರುತ್ತಾರೆ. ಆದರೆ ಇದು ಎಲ್ಲಾ ಕಾಲಕ್ಕೂ ಸಲ್ಲದು. ಸಂಬಂಧದಲ್ಲಿ ಜವಾಬ್ದಾರಿ ಹಂಚಿಕೊಳ್ಳುವುದು ತುಂಬಾ ಮುಖ್ಯ. ಆತ ಮಗುವಿನಂತೆ ವರ್ತಿಸಿ, ಎಲ್ಲವೂ ನಿಮ್ಮ ಮೇಲೆ ಹೊರೆಸಿದರೆ, ಮುಂದೆ ಸಮಸ್ಯೆಯಾಗುವುದು ಖಂಡಿತ. ಹಾಗಾದರೆ, ನಿಮ್ಮ ಪತಿ ಅಥವಾ ಸಂಗಾತಿ ಇನ್ನೂ ಪ್ರಬುದ್ಧನಾಗಿಲ್ಲ ಎಂದು ಸೂಚಿಸುವ ಲಕ್ಷಣಗಳ ಬಗ್ಗೆ ಇಲ್ಲಿ ನೋಡೋಣ.

ಆತ ಬೇಜವಾಬ್ದಾರಿತನವನ್ನ ತೋರುವುದು

ಆತ ಬೇಜವಾಬ್ದಾರಿತನವನ್ನ ತೋರುವುದು

ವೈವಾಹಿಕ ಜೀವನದಲ್ಲಿ ಗಂಡ ಆದವನು ಜವಾಬ್ದಾರಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಪತಿ ಅಥವಾ ಪ್ರೇಮಿ ತನ್ನ ವಸ್ತು ಅಥವಾ ಯಾವುದೇ ಕೆಲಸಗಳ ಬಗ್ಗೆ ತುಂಬಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದರೆ, ಆತ ಇನ್ನೂ ಪ್ರಬುದ್ಧವಾಗಿಲ್ಲ ಎಂದರ್ಥ.. ಈಗಲೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದರೆ, ಮುಂದೆ ಅದು ಸಮಸ್ಯೆಯಾಗಬಹುದು.

ತನ್ನ ತಪ್ಪುಗಳಿಗೆ ಸದಾ ಕಾರಣ ಹೇಳುವುದು

ತನ್ನ ತಪ್ಪುಗಳಿಗೆ ಸದಾ ಕಾರಣ ಹೇಳುವುದು

ತಪ್ಪು ಮಾಡುವುದು ಸಹಜ. ಆದರೆ ಸದಾ ತಪ್ಪುಗಳನ್ನೇ ಮಾಡಿ, ಅದನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿದ್ದರೆ, ನಿಮ್ಮ ಗಂಡ ಅಥವಾ ಹುಡುಗ ಮಗುವಿನಂತೆ ವರ್ತಿಸುತ್ತಿರುವ ವ್ಯಕ್ತಿ ಎಂದರ್ಥ. ಇಂತಹವರು ಯಾವುದೋ ಕಾರಣ ನೀಡಿ ನಿಮ್ಮನ್ನು ಮನವೊಲಿಸಲು ಪ್ರಯತ್ನಿಸುತ್ತಾನೆ. ತಮ್ಮ ರಂಗಿನ ಮಾತುಗಳಿಂದ ತಮ್ಮ ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ.

ನಿರಂತರ ಆರ್ಥಿಕ ಸಮಸ್ಯೆಗಳಿರುವುದು

ನಿರಂತರ ಆರ್ಥಿಕ ಸಮಸ್ಯೆಗಳಿರುವುದು

ನಿಮ್ಮ ಪತಿ ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಆತ ಇನ್ನೂ ಪ್ರಬುದ್ಧತೆ ಪಡೆದಿಲ್ಲ ಎಂಬುದರ ಸಂಕೇತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಸಮಯದ ನಂತರ ಆರ್ಥಿಕವಾಗಿ ಜವಾಬ್ದಾರನಾಗುತ್ತಾನೆ, ಆದರೆ ನಿಮ್ಮ ಪತಿ ತನ್ನ ಹಣಕಾಸಿನ ಬಗ್ಗೆ ಯೋಚಿಸಲು ಸಾಧ್ಯವಾಗದಿದ್ದರೆ ಅಥವಾ ಆತ ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ಹೆಂಡತಿಯಾದವಳು ಗಂಭೀರವಾಗಿ ಮಾತನಾಡುವ ಸಮಯವಾಗಿದೆ.

ಟೀಕೆಗಳನ್ನು ಒಪ್ಪಿಕೊಳ್ಳಲು ಸಿದ್ದನಿಲ್ಲದಿರುವುದು

ಟೀಕೆಗಳನ್ನು ಒಪ್ಪಿಕೊಳ್ಳಲು ಸಿದ್ದನಿಲ್ಲದಿರುವುದು

ಯಾವುದಾದರೂ ವಿಚಾರಕ್ಕೆ ಯಾರಾದರೂ ಅಥವಾ ನೀವೇ ನಿಮ್ಮ ಗಂಡನನ್ನು ಟೀಕಿಸಿದಾಗ ಅಥವಾ ಅವರ ತಪ್ಪುಗಳನ್ನು ಎತ್ತಿ ತೋರಿಸಿದಾಗ ನಿಮ್ಮ ಪತಿ ಕೋಪ-ಪ್ರತಾಪ ತೋರಿದರೆ, ಆತ ಮಾನಸಿಕವಾಗಿ ಮೆಚ್ಯುರ್ ಆಗಿಲ್ಲ ಎಂದರ್ಥ. ಒಬ್ಬ ಪ್ರಬುದ್ಧ ವ್ಯಕ್ತಿಯು ಟೀಕೆಗಳನ್ನು ನಿಭಾಯಿಸುವ ಶಕ್ತಿಯನ್ನ ಹೊಂದಿರುತ್ತಾನೆ, ಆದರೆ, ಅಪಕ್ವ ಜನರು ಅದರ ವಿರುದ್ದ ಏನನ್ನಾದರೂ ಮಾಡುತ್ತಾರೆ.

ವಿಶ್ವಾಸಕ್ಕೆ ಅರ್ಹನಲ್ಲದಿರುವುದು

ವಿಶ್ವಾಸಕ್ಕೆ ಅರ್ಹನಲ್ಲದಿರುವುದು

ನಿಮ್ಮ ಪತಿ ಮಗುವಿನಂತೆ ವರ್ತಿಸುತ್ತಿದ್ದರೆ, ಯಾವುದೇ ಕೆಲಸಕ್ಕಾಗಿ ಅತನನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬುದು ಸತ್ಯ. ಅವರನ್ನು ನಂಬಿ ಯಾವುದೇ ಕೆಲಸ ಅಥವಾ ಜವಾಬ್ದಾರಿಗಳನ್ನು ಕೊಡಲು ನಿಮಗೆ ಧೈರ್ಯ ಬರಲಾರದು. ಆದರೆ, ವಿಶ್ವಾಸಾರ್ಹತೆ ಅಥವಾ ನಂಬಿಕೆ ಎನ್ನುವಂತಹದ್ದು ಸಂಬಂಧಕ್ಕೆ ಭದ್ರಬುನಾದಿಯಿದ್ದಂತೆ. ಅದೇ ಇಲ್ಲದಾಗ ಮುಂದೆ ಎಲ್ಲಾ ನಿರ್ಧಾರ ಅಥವಾ ಆಯ್ಕೆಗಳು ಒಂದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.

ಯಾವಾಗ ಹೇಗೆ ಮಾತನಾಡಬೇಕು ಎಂಬುದರ ಅರಿವಿಲ್ಲದಿರುವುದು

ಯಾವಾಗ ಹೇಗೆ ಮಾತನಾಡಬೇಕು ಎಂಬುದರ ಅರಿವಿಲ್ಲದಿರುವುದು

ನಿಮ್ಮ ಪತಿಗೆ ಯಾವಾಗ, ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಯಾವುದೇ ಕಾಳಜಿಯಿಲ್ಲದಿದ್ದರೆ ಆತ ಪರಿಪಕ್ವ ವ್ಯಕ್ತಿಯಾಗಿಲ್ಲ ಎಂದರ್ಥ.. ಒಬ್ಬ ಪ್ರಬುದ್ಧ ವ್ಯಕ್ತಿ ಯಾವುದಾದರೂ ಸನ್ನಿವೇಶದಲ್ಲಿ ಹೇಗೆ ಮಾತನಾಡಬೇಕು? ಅದನ್ನು ಹೇಗೆ ನಿರ್ವಹಿಸಬೇಕು? ಎಂಬುದರ ಬಗ್ಗೆ ಅರಿವನ್ನು ಹೊಂದಿರುತ್ತಾನೆ. ಸುಖಾಸುಮ್ಮನೆ ಮಾತು ಸೇರಿಸಿ, ಆ ಸನ್ನಿವೇಶವನ್ನು ಮತ್ತಷ್ಟು ಹದಗೆಡಿಸಲಾರನು. ನಿಮ್ಮ ಪತಿಗೆ ಯಾವಾಗ ಏನು ಹೇಳಬೇಕೆಂದು ತಿಳಿದಿಲ್ಲದಿದ್ದರೆ, ಅವನಿಗೆ ಸ್ವಲ್ಪ ಶಿಕ್ಷಣದ ಅಗತ್ಯವಿದೆ ಎಂದರ್ಥ.

English summary

Signs your husband is a Man Child in kannada

Here we talking about Signs your husband is a Man Child in kannada, read on
Story first published: Tuesday, August 30, 2022, 9:00 [IST]
X
Desktop Bottom Promotion