For Quick Alerts
ALLOW NOTIFICATIONS  
For Daily Alerts

ಮಕ್ಕಳು ವೈವಾಹಿಕ ಸಂಬಂಧದಲ್ಲಿ ದೌರ್ಜನ್ಯಕ್ಕೊಳಗಾದರೆ ಪೋಷಕರು ಹೇಗೆ ಪತ್ತೆ ಮಾಡಬೇಕು?

|

ಇಂದಿನ ಜೀವನ ಶೈಲಿಯಿಂದ ಮಾನವೀಯತೆ ಮೌಲ್ಯಗಳು ದೂರವಾಗುತ್ತಿದ್ದು ಕ್ರೌರ್ಯಗಳು ಹೆಚ್ಚುತ್ತಿದೆ. ಇನ್ನು ಸಂಬಂಧದಲ್ಲೂ ಕ್ರೌರ್ಯ, ದೌರ್ಜನ್ಯಗಳು ಹೆಚ್ಚುತ್ತಿದೆ. ಆರಂಭದಲ್ಲಿ ಭಾರೀ ಪ್ರೀತಿ ಇದ್ದರೆ ಬಳಿಕ ನಿಂದನೆ, ದೌರ್ಜನ್ಯ, ಹಿಂಸೆ ಉಂಟಾಗುತ್ತಿದೆ. ಹೌದು ಇದು ಮದುವೆಯ ಬಳಿಕದ ಸಂಬಂಧ ಆಗಿರಬಹುದು ಅಥವಾ ಮದುವೆಗೂ ಮುನ್ನ ಆಗುವ ರಿಲೇಶನ್ ಶಿಪ್ ಆಗಿರಬಹುದು.

123

ಅನೇಕ ಸಂಬಂಧಗಳಲ್ಲಿ ಸಂಗಾತಿಯು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಈ ರೀತಿಯ ಘಟನೆಗಳಿಂದ ನೋವು ಪಡೋದು ಪೋಷಕರು. ಹೌದು, ತಾವು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸಿದ ತಮ್ಮ ಮಕ್ಕಳನ್ನು ಸಂಬಂಧದಲ್ಲಿ ಅವರ ಸಂಗಾತಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೋವು ಪಡುತ್ತಾರೆ.

ಕೆಲವೊಂದು ಬಾರಿ ಏನು ಮಾಡಬೇಕು ಎಂದು ತಿಳಿಯದೆ ಅಸಹಾಯಕರಾಗುತ್ತಾರೆ. ಕೆಲವು ಪೋಷಕರಿಗೆ ತಮ್ಮ ಮಕ್ಕಳು ಸಂಬಂಧದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬುವುದು ಅರಿವೇ ಇರುವುದಿಲ್ಲ. ಹಾಗಾದರೆ ಈ ಲೇಖನದ ಮೂಲಕ ಇಂದು ನಿಮಗೆ ಸಂಬಂಧದಲ್ಲಿ ಸಂಗಾತಿಯಿಂದ ಆಗುವ ವಿವಿಧ ದೌರ್ಜನ್ಯ, ನಿಂದನೆ ಬಗ್ಗೆ ತಿಳಿಸುತ್ತೇವೆ. ನಿಮ್ಮ ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದರೆ ನೀವು ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದಕ್ಕೆ ಯಾವ ರೀತಿ ನೀವು ಸಹಾಯ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ.

ಸಂಗಾತಿಯಿಂದ ದೌರ್ಜನ್ಯ-ನಿಂದನೆ ಎಂದರೆ ಏನು?

ಸಂಗಾತಿಯಿಂದ ದೌರ್ಜನ್ಯ-ನಿಂದನೆ ಎಂದರೆ ಏನು?

ಸಂಬಂಧ ಎಂದಾಗ ಎಲ್ಲರದ್ದೂ ಸರಿ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಒಂದಲ್ಲೊಂದು ಸಮಸ್ಯೆಗಳು ಸಂಬಂಧಗಳಲ್ಲಿ ಉಲ್ಬಣಿಸುತ್ತದೆ. ಸಂಗಾತಿಯಿಂದ ದೌರ್ಜನ್ಯಕ್ಕೊಳಗಾದರು ಎನ್ನುವ ಸುದ್ದಿ ನಾವು ಕೇಳುತ್ತಲೇ ಇರುತ್ತೇವೆ.

* ಇನ್ನು ಈ ಪೈಕಿ ಭಾವನಾತ್ಮಕ, ಮೌಖಿಕ, ದೈಹಿಕ, ಲೈಂಗಿಕ ದೌರ್ಜನ್ಯಗಳು ಸಂಬಂಧದಲ್ಲಿ ಕೇಳಿಬರುವ ದೊಡ್ಡ ಸಮಸ್ಯೆ. ಈ ರೀತಿಯ ದೌರ್ಜನ್ಯದಿಂದ ಅನೇಕರು ಆತ್ಮಹತ್ಯೆ ಕೂಡ ಮಾಡಿರುವ ಘಟನೆಗಳು ಇದೆ.

* ಇನ್ನು ಸಂಗಾತಿಯ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವುದನ್ನು ಭಾವನಾತ್ಮಕ ದೌರ್ಜನ್ಯ ಎಂದು ಕರೆಯುತ್ತಾರೆ. ಭಾವನಾತ್ಮಕ ನಿಂದನೆ, ಆಗಾಗ್ಗೆ ನಿರಂತರ ಟೀಕೆ, ಒಲ್ಲದ ಹೆಸರು ಕರೆಯುವುದು,ಸಂಗಾತಿಯ ಕುಟುಂಬದವರ ಜೊತೆಗಿನ ಸಂಬಂಧವನ್ನು ಹಾಳುಗೆಡವುದಾಗಿದೆ. ಭಾವನಾತ್ಮಕವಾಗಿ ಚಿತ್ರಹಿಂಸೆ ನೀಡುವುದು.

* ಇನ್ನು ನೇರವಾಗಿ ಸಂಗಾತಿಯನ್ನು ಕೆಟ್ಟಪದಗಳಿಂದ ಹೀಯಾಳಿಸುವುದು, ಆಕೆಗೆ ಬೇರೆ ಸಂಬಂಧ ಕಟ್ಟಿ ಬೈಯುವುದು, ಸಾರ್ವಜನಿಕವಾಗಿ ಬೈದು ಕಿರುಕುಳ ನೀಡುವುದು ಮೌಖಿಕ ದೌರ್ಜನ್ಯವಾಗಿದೆ.

* ಇನ್ನು ಸಂಗಾತಿಯ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುವುದು. ಲೈಂಗಿಕ ದೇಹದ ಭಾಗಗಳ ಮೇಲೆ ಆಕ್ರಮಣ ಮಾಡುವುದು, ಲೈಂಗಿಕ ಹಿಂಸಾಚಾರದ ನಂತರ ನಡೆಯುವ ದೈಹಿಕ ಹಿಂಸೆ, ಲೈಂಗಿಕವಾಗಿ ಸಂಗಾತಿಯನ್ನು ನಿಂದಿಸುವುದು ಅಥವಾ ಸಂಗಾತಿಯ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ಹಾಸ್ಯಗಳನ್ನು ಹೇಳುವುದು ಮತ್ತು ಅಶ್ಲೀಲ ವಿಡಿಯೋಗಳನ್ನು ತೋರಿಸುವುದು ಲೈಂಗಿಕ ಕಿರುಕುಳವಾಗಿದೆ. ಈ ಎಲ್ಲಾ ಘಟನೆಗಳು ಅನೇಕರ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಮಾರ್ಯಾದೆಗೆ ಅಂಜಿ ಇದು ಹೊರಬರುತ್ತಿಲ್ಲ ಅಷ್ಟೇ.

ಮಕ್ಕಳು ಸಂಬಂಧದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಯುವುದು ಹೇಗೆ?

ಮಕ್ಕಳು ಸಂಬಂಧದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಯುವುದು ಹೇಗೆ?

ಸಾಮಾನ್ಯವಾಗಿ ಪೋಷಕರಿಗೆ ಮಕ್ಕಳು ಸಂಬಂಧದಲ್ಲಿ ದೌರ್ಜನ್ಯ ಅನುಭವಿಸುತ್ತಿದ್ದಾರೆ ಎಂದು ತಿಳಿಯುವುದೇ ಇಲ್ಲ. ಮಾರ್ಯಾದೆಗೆ ಅಂಜಿ ಮಕ್ಕಳು ಈ ಬಗ್ಗೆ ಪೋಷಕರಲ್ಲಿ ಹೇಳಲು ಹೋಗುವುದಿಲ್ಲ. ಅದಾಗ್ಯೂ ಮಕ್ಕಳ ನಡತೆ, ಮಾನಸಿಕತೆ, ಅವರ ಮಾತುಕತೆಯಲ್ಲಾಗುವ ಬದಲಾವಣೆಯನ್ನು ಸರಿಯಾಗಿ ಗಮನಿಸಿದರೆ ನಿಮಗೆ ಉತ್ತರ ಸಿಗಲಿದೆ.

ನಮ್ಮ ಮಕ್ಕಳು ಸಂಗಾತಿಯಿಂದ ದೌರ್ಜನ್ಯ, ನಿಂದನೆಗೊಳಗಾಗುತ್ತಿದ್ದಾರಾ? ಎನ್ನುವುದು ತಿಳಿಯುತ್ತೆ. ಈ ಕೆಳಗಿನ ಬದಲಾವಣೆಗಳಿದ್ದರೆ ಮಕ್ಕಳ ಸಂಬಂಧದಲ್ಲಿ ಸಮಸ್ಯೆ ಇದೆ ಎಂದು ಅರ್ಥ.

1. ಒತ್ತಡ, ಆತಂಕ ಮತ್ತು ವಿಪರೀತ ಭಯ

2. ಅವರ ನೆಚ್ಚಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು

3. ಯಾವಗಲೂ ಜೀವನದಲ್ಲಿ ತಳಮಳಗೊಂಡವರಂತೆ ಇರುವುದು

4.ಕುಟುಂಬ ಮತ್ತು ಪ್ರೀತಿಪಾತ್ರರಿಂದ ದೂರ ಉಳಿಯುವುದು

5.ತೀವ್ರ ಕೋಪಗೊಳ್ಳುವುದು

6. ಬೇರೆಯವರ ಮೇಲೆ ಯಾವಾಗಲೂ ರೇಗಾಡುವುದು

7. ಬೇರೆಯವರ ಸಂಬಂಧಗಳ ಬಗ್ಗೆ ಮಾತನಾಡಲು ಹಿಂದೇಟು

8.ಮನೆಯ ಹೊರಗೆ ಬರಲು ಹಿಂದೇಟು, ಒಂಟಿಯಾಗಿರಲು ಯತ್ನ

ಮಕ್ಕಳ ಜೊತೆ ಮಾತನಾಡಿ!

ಮಕ್ಕಳ ಜೊತೆ ಮಾತನಾಡಿ!

ಎಲ್ಲದರೂ ನಿಮಗೆ ಇಂತಹ ವರ್ತನೆಗಳು ನಿಮ್ಮ ಮಕ್ಕಳಲ್ಲಿ ನೀವು ಕಂಡರೆ ಖಂಡಿತವಾಗಿ ಅವರ ಜೊತೆ ನೀವು ಮಾತನಾಡಬೇಕು. ಅವರ ಜೀವನದಲ್ಲಿ ಮಧ್ಯಪ್ರವೇಶಿಸಲು ಹಿಂಜರಿಯಬೇಡಿ. ಈ ರೀತಿ ಸಮಸ್ಯೆ ಇದೆ ಎಂದು ತಿಳಿದ ಕೂಡಲೇ ಅವರಿಗೆ ಸಾಂತ್ವಾನ ಹೇಳಿ. ಅವರೊಂದಿಗೆ ನೀವು ಇದ್ದೀರಿ ಎಂಬುವ ಧೈರ್ಯ ತುಂಬಿ. ಅವರೊಂದಿಗೆ ಯಾವತ್ತೂ ನಾವು ಇರುತ್ತೇವೆ ಎನ್ನುವ ಮೂಲಕ ಮುಂದೆ ಆಗಬಹುದಾದ ಅವಾಂತರ ತಪ್ಪಿಸಿಕೊಳ್ಳಬಹುದು.

ಸಂಬಂಧ ಬಿಡು ಎನ್ನುವುದಕ್ಕಿಂತ ಅವರೊಂದಿಗೆ ಇರುವುದು ಒಳ್ಳೆಯದು!

ಸಂಬಂಧ ಬಿಡು ಎನ್ನುವುದಕ್ಕಿಂತ ಅವರೊಂದಿಗೆ ಇರುವುದು ಒಳ್ಳೆಯದು!

ಇಂತಹ ಸಮಸ್ಯೆ ಎದುರಾದಾಗ ಮಕ್ಕಳ ಜೊತೆ ಮಾತನಾಡಿ ಸಂತೈಸುವುದು ಒಳ್ಳೆಯ ಐಡಿಯಾ. ಅದು ಬಿಟ್ಟು ಯಾವತ್ತೂ ಸಂಬಂಧ ಕೊನೆಗೊಳಿಸಲು ಐಡಿಯಾ ಕೊಡಬೇಡಿ. ಇದು ಅವರ ಕೋಪವನ್ನು ಇಮ್ಮಡಿ ಮಾಡುವ್ ಸಾಧ್ಯತೆ ಇದೆ. ಇಂತಹ ಸಮಸ್ಯೆ ಎದುರಿಸಿದರೂ ಅವರು ಸಂಗಾತಿಯನ್ನು ಬಿಡಲು ತಯಾರಿರುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ಅವರಿಗೆ ಧೈರ್ಯ ಹೇಳಿ ನಾನು ನಿನ್ನೊಂದಿಗೆ ಇದ್ದೀನಿ ಎಂದು ಮಾತುಗಳಲ್ಲಿ ತಿಳಿಸಬೇಕು. ಆಕೆಯ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಬೇಕು. ಈ ರೀತಿ ಮಾಡಿದರೆ ಅವರ ಮನಸ್ಸು ಬದಲಾಗಬಹುದು.

ಅವರೊಂದಿಗೆ ಸಂಪರ್ಕದಲ್ಲಿ ಇರಿ!

ಅವರೊಂದಿಗೆ ಸಂಪರ್ಕದಲ್ಲಿ ಇರಿ!

ಇನ್ನು ಸಂಗಾತಿಯಿಂದ ದೌರ್ಜನ್ಯ ಅನುಭವಿಸುತ್ತಿದ್ದಾರೆ ಎನ್ನುವುದು ನಿಮ್ಮ ಅನುಭವಕ್ಕೆ ಬಂದರೆ. ಮಕ್ಕಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಿ, ಅವರು ಎಲ್ಲಿದ್ದಾರೆ, ಅವರು ಏನು ಮಾಡುತ್ತಿದ್ದಾರೆ ಮತ್ತು ಎಂಬುದನ್ನು ತಿಳಿದುಕೊಳ್ಳಿ.

ಹಾಗೆ ಮಾಡುವುದರಿಂದ ಇದು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಮಕ್ಕಳು ಅಪಾಯದಲ್ಲಿದ್ದಾರೆ, ಮಕ್ಕಳಿಗೆ ಬೆದರಿಕೆ ಇದೆ ಎಂದು ನೀವು ಭಾವಿಸಿದರೆ ಕೂಡಲೇ ನೀವು ಸಹಾಯಕ್ಕೆ ಧಾವಿಸಬೇಕು. ಹೀಗಾಗಿ ಸಂಪರ್ಕದಲ್ಲಿದ್ದರೆ ಅವರಿಗೂ ಧೈರ್ಯ ಇರುತ್ತದೆ. ಅಲ್ಲದೇ ಒಂದಲ್ಲ ಒಂದು ದಿನ ಅವರಿಗೆ ಆಗುವ ಸಮಸ್ಯೆಯನ್ನು ಅವರು ಮನಬಿಚ್ಚಿ ಹೇಳುವ ಸಾಧ್ಯತೆ ಹೆಚ್ಚು.

ಸರಿ ಪಡಿಸಲು ಸಾಧ್ಯವಾದರೆ ಸರಿ ಮಾಡಿ!

ಸರಿ ಪಡಿಸಲು ಸಾಧ್ಯವಾದರೆ ಸರಿ ಮಾಡಿ!

ಇನ್ನು ಸಂಗಾತಿಯಿಂದ ದೌರ್ಜನ್ಯವನ್ನು ನಿಮ್ಮ ಮಕ್ಕಳು ಅನುಭವಿಸುತ್ತಿದ್ದಾರೆ. ಅವರ ಜೊತೆ ಬಗ್ಗೆ ಒಪನ್ ಆಗಿ ಮಾತನಾಡಿ ಸಮಸ್ಯೆ ಅರಿತುಕೊಂಡು ಅದನ್ನು ಸರಿಪಡಿಸಲು ಆದರೆ ಸರಿ ಪಡಿಸಬಹುದು. ಎರಡು ಕುಟುಂಬಗಳ್ ಜೊತೆ ಕುಳಿತು ಅಥವಾ ಸಂಗಾತಿಯನ್ನು ಕರೆದು ವಸ್ತು ಸ್ಥಿತಿ ಅರ್ಥಮಾಡಿಸಿಕೊಳ್ಳಬಹುದು.

English summary

Signs your child is trapped in an abusive relationship; how you can help in Kannada

Signs your child is trapped in an abusive relationship; how you can help in Kannada. Read more.
X
Desktop Bottom Promotion