For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳಿದ್ದರೆ ನಿಮ್ಮ ಸಂಗಾತಿಗೆ ಸೆಕ್ಸ್‌ ಚಟ ಇದೆ ಎಂದರ್ಥ

|

ವೈವಾಹಿಕ ಜೀವನದಲ್ಲಿ ಲೈಂಗಿಕ ಜೀವನವು ಅತೀ ಮುಖ್ಯ. ಜೀವನ ಹಾಗೂ ಲೈಂಗಿಕ ಜೀವನ ಗಾಡಿಯ ಚಕ್ರಗಳಿದ್ದಂತೆ. ಇದರಲ್ಲಿ ಒಂದಕ್ಕೆ ಸಮಸ್ಯೆ ಆದರೂ ಅದು ವೈವಾಹಿಕ ಜೀವನವನ್ನು ಸಮಸ್ಯೆಗೆ ದೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಲೈಂಗಿಕ ಸಮಸ್ಯೆಗಳಿಂದಾಗಿ ವೈವಾಹಿಕ ಜೀವನದಲ್ಲಿ ವಿಚ್ಛೇದನ ಪಡೆದಿರುವಂತಹ ಹಲವಾರು ಉದಾಹರಣೆಗಳು ಇವೆ. ಹೀಗಾಗಿ ಲೈಂಗಿಕ ಜೀವನಕ್ಕೆ ಕೂಡ ಸಂಗಾತಿಗಳಿಬ್ಬರು ಪ್ರಾಮುಖ್ಯತೆ ನೀಡಬೇಕು.

Signs That Your Partner Is Addicted To Sex

ಆದರೆ ದಾಂಪತ್ಯದಲ್ಲಿ ಕೆಲವೊಮ್ಮೆ ಒಬ್ಬರಿಗೆ ಲೈಂಗಿಕ ಚಟ ಎನ್ನುವುದು ಹತ್ತಿಕೊಂಡರೆ ಅದು ಕೂಡ ಸಮಸ್ಯೆಗೆ ಕಾರಣವಾಗಬಹುದು. ಇಂತಹ ಚಟ ಸಂಬಂಧವನ್ನೇ ಹಾಳು ಮಾಡಿಬಿಡಬಹುದು. ಇಂತಹ ಚಟ ವೈವಾಹಿಕ ಜೀವನದ ಆರಂಭದಲ್ಲೇ ನಿಮಗೆ ಕಂಡುಬಂದರೆ ಅದನ್ನು ನೀವು ಬೇಗನೆ ಬಗೆಹರಿಸಲು ಸಾಧ್ಯ. ಇಂತಹ ಚಟವನ್ನು ಪತ್ತೆ ಮಾಡಲು ಏನು ಮಾಡಬೇಕೆಂದು ತಿಳಿಯಿರಿ.

ಲೈಂಗಿಕ ನಡವಳಿಕೆಯಲ್ಲಿ ಬದಲಾವಣೆ

ಲೈಂಗಿಕ ನಡವಳಿಕೆಯಲ್ಲಿ ಬದಲಾವಣೆ

ನಿಮ್ಮ ಪತ್ನಿ ಅಥವಾ ಪತಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆ ಆಗಬಹುದು. ನಿಮಿರುವಿಕೆ ಉಂಟಾಗದೆ ಇರಬಹುದು ಅಥವಾ ಯಾವುದೇ ಹೊಸ ವಿಧಾನವನ್ನು ಅಳವಡಿಸುವಂತೆ ಒತ್ತಾಯ ಮಾಡಬಹುದು.

ಆರ್ಥಿಕ ಕುಸಿತ

ಆರ್ಥಿಕ ಕುಸಿತ

ಕ್ರೆಡಿಟ್ ಕಾರ್ಡ್ ವಿವರದಲ್ಲಿ ಹೋಟೆಲ್ ರೂಮ್, ಮಸಾಜ್ ಪಾರ್ಲರ್ ಮತ್ತು ಇತರ ಕೆಲವು ಕಡೆಗಳಲ್ಲಿ ವ್ಯಯಿಸಿರುವುದನ್ನು ನೋಡಬಹುದು. ಬ್ಯಾಂಕ್ ಅಕೌಂಟ್ ನಿಂದ ಕೂಡ ಆಗಾಗ ಹಣ ತೆಗೆಯುತ್ತಿರುವುದು ನಿಮಗೆ ತಿಳಿದುಬರುವುದು.

ಆನ್ ಲೈನ್ ನಲ್ಲಿ ಹೆಚ್ಚು ಸಮಯ ಕಳೆಯುವುದು

ಆನ್ ಲೈನ್ ನಲ್ಲಿ ಹೆಚ್ಚು ಸಮಯ ಕಳೆಯುವುದು

ಸಂಗಾತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಪ್ಯೂಟರ್ ನಲ್ಲಿ ರಾತ್ರಿ ತುಂಬಾ ಹೊತ್ತು ಕೆಲಸ ಮಾಡುತ್ತಿದ್ದಾರೆಯಾ? ಅವರು ನೋಡಿದಂತಹ ಸೈಟ್ ಗಳ ಹಿಸ್ಟ್ರಿ ಕೂಡ ಅಳಿಸುತ್ತಿದ್ದಾರೆಯಾ? ಹಾಗಾದರೆ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ.

ಸಾಮಾಜಿಕ ಜಾಲತಾಣ ಮೂಲಕ ಆನ್ ಲೈನ್ ಚಾಟ್

ಸಾಮಾಜಿಕ ಜಾಲತಾಣ ಮೂಲಕ ಆನ್ ಲೈನ್ ಚಾಟ್

ಸಂಗಾತಿಯು ಹೊಸ ಆಪ್ ಅಥವಾ ಕೆಲವು ಪ್ರೋಗಾಮ್ ಗಳನ್ನು ಉಪಯೋಗಿಸಿ ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರಬಹುದು ಮತ್ತು ಅವರಿಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು.

ಏಕಾಂಗಿಯಾಗಿ ಸಮಯ ಕಳೆಯುವುದು

ಏಕಾಂಗಿಯಾಗಿ ಸಮಯ ಕಳೆಯುವುದು

ಸಾಮಾಜಿಕ ಅಥವಾ ಕೌಟುಂಬಿಕ ಕಾರ್ಯಕ್ರಮದಲ್ಲಿ ಸಂಗಾತಿಗೆ ಭಾಗವಹಿಸಲು ಯಾವುದೇ ಇಚ್ಛೆ ಇಲ್ಲದೆ ಇರಬಹುದು ಅಥವಾ ಸಂಪೂರ್ಣವಾಗಿ ಇದನ್ನು ನಿಲ್ಲಿಸಿ ಬಿಡಬಹುದು. ನೀವು ಕೂಡ ಮನೆಯಿಂದ ಹೊರಗಡೆ ಹೆಚ್ಚು ಸಮಯ ಕಳೆಯುವಂತೆ ಸಂಗಾತಿಯು ಹೇಳಬಹುದು.

English summary

Signs That Your Partner Is Addicted To Sex

Here we are discussing about Signs That Your Partner Is Addicted To Sex. There are defining signs that a problem with your spouse’s negative behavior is taking place. Read more.
Story first published: Wednesday, April 15, 2020, 12:44 [IST]
X
Desktop Bottom Promotion