For Quick Alerts
ALLOW NOTIFICATIONS  
For Daily Alerts

ಪ್ರೀತಿ ಕುರುಡು ನಿಜ ಆದ್ರೆ, ಈ ವಿಚಾರಗಳಲ್ಲಿ ಕುರುಡುತನ ಬೇಡ!

|

ಸಂಬಂಧವೆಂಬುದು ಸುಲಭವಲ್ಲ, ಸಾಕಷ್ಟು ಸವಾಲುಗಳಿಂದ ತುಂಬಿರುತ್ತದೆ. ನಿಮ್ಮ ನಡುವೆ ಪ್ರೀತಿಯಿದ್ದರೆ ಬರುವ ಎಂತಹ ಸವಾಲುಗಳನ್ನಾದರೂ ಎದುರಿಸಬಹದು. ಆದರೆ ನಿಮ್ಮ ಪ್ರೀತಿಯೇ ಗಟ್ಟಿಯಾಗಿಲ್ಲ, ಕೇವಲ ಮುನಿಸು, ಕೋಪ-ತಾಪಗಳೇ ತುಂಬಿಕೊಂಡಿದ್ದರೆ, ಆ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ಸಂಗಾತಿ ಈ ಕೆಳಗಿನ ಗುಣಗಳನ್ನು ಹೊಂದಿದ್ದರೆ, ಸಂಬಂಧ ಚೆನ್ನಾಗಿರಲು ಸಾದ್ಯವಿಲ್ಲ. ಆ ಸಮಯದಲ್ಲಿ ಅಂತಹ ಸಂಬಂಧಗಳಿಂದ ಹೊರಬರುವುದೇ ಉತ್ತಮ.

ಹಾಗಾದರೆ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ನಿಮ್ಮ ಸಂಗಾತಿಯ ಗುಣಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸಂಬಂಧದಲ್ಲಿ ಎಂದಿಗೂ ನಿರ್ಲಕ್ಷಿಸಬಾರದ ಅನಾರೋಗ್ಯಕರ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆಂಬ ಭಾವನೆಯಿದ್ದರೆ :

ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆಂಬ ಭಾವನೆಯಿದ್ದರೆ :

ನಿಮ್ಮ ಸಂಗಾತಿ ಸ್ವತಃ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದರೆ, ಆಗ ನಿಮ್ಮನ್ನು ನಿಯಂತ್ರಿಸಲಾಗುತ್ತಿದೆ ಎಂದರ್ಥ. ಯಾವುದೇ ವಿಚಾರಕ್ಕೂ ನಿಮ್ಮ ಮಾತನ್ನು ಕೇಳದೇ ಅವರದೇ ನಿರ್ಧಾರವನ್ನು ಅಂತಿಮಗೊಳಿಸುತ್ತಿದ್ದರೆ, ಆ ವ್ಯಕ್ತಿ ನಿಮಗೆ ತರವಲ್ಲ. ನಿಮಗಿಂತಲೂ, ಸ್ನೇಹಿತರ ಮೇಲೆಯೇ ಆಸಕ್ತಿ ಹೆಚ್ಚಿದೆ ಎನ್ನುವ ವ್ಯಕ್ತಿಯ ಜೊತೆ ಬದುಕುವುದರಲ್ಲಿ ಅಥವಾ ಸಂಬಂಧ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಆದ್ದರಿಂದ ಇಂತಹ ವ್ಯಕ್ತಿಯ ಜೊತೆ ನಿಮ್ಮ ಪ್ರೀತಿಯಾಗಿದ್ದರೆ ಅದರಿಂದ ಹೊರಬರುವುದೇ ಒಳಿತು, ಇಲ್ಲವಾದಲ್ಲಿ ಮುಂದೆ ತೊಂದರೆ ಅನುಭವಿಸಬೇಕಾದೀತು.

ಅಗೌರವ ತೋರಿದರೆ:

ಅಗೌರವ ತೋರಿದರೆ:

ಮನುಷ್ಯನಿಗೆ ಗೌರವ ನೀಡುವುದು ಬಹಳ ಮುಖ್ಯ, ಅದರಲ್ಲೂ ತಮ್ಮ ಸಂಗಾತಿಯಾಗುವವರೆಗೆ ಗೌರವ ನೀಡದಿದ್ದರೆ ಅಲ್ಲಿ ಯಾವುದೇ ಭಾವನೆಗಳಿಗೆ ಬೆಲೆ ಇರಲಾರದು. ನಿಮ್ಮ ಯಾವುದಾದರೂ ಕೆಲಸಕ್ಕೆ ಅಗೌರವ ತೋರುತ್ತಿದ್ದರೆ, ಕೇವಲವಾಗಿ ನಿಮ್ಮನ್ನು ಕಾಣುತ್ತಿದ್ದರೆ, ಅವರಿಂದ ದೂರವಿರುವುದು ಉತ್ತಮವಾಗಿದೆ. ಕಣ್ಣಿನ ಸನ್ನೆಯಿಂದ ಮಾತನಾಡುವುದು ಅಥವಾ ಕೆರಳಿದಂತೆ ನೋಡುವುದು ಒಳ್ಳೆಯ ಪ್ರೀತಿ ಸಂಕೇತವಲ್ಲ. ಅಲ್ಲಿ ನಿಮಗೆ ಗೌರವದ ಕೊರತೆ ಖಂಡಿತಾ ಕಾಣುತ್ತದೆ, ಆದ್ದರಿಂದ ಅಂತಹ ಸಂಬಂಧದಿಂದ ದೂರಹೋಗುವುದು ಉತ್ತಮ.

ವೈಯಕ್ತಿಕ ಬೆಳವಣಿಗೆ ಇಲ್ಲದಿದ್ದರೆ:

ವೈಯಕ್ತಿಕ ಬೆಳವಣಿಗೆ ಇಲ್ಲದಿದ್ದರೆ:

ನಿಮ್ಮ ಸಂಗಾತಿಯು ನಿಮ್ಮ ಇಷ್ಟದಂತೆ ಇರಲು ಬಿಡದಿದ್ದರೆ ಅಥವಾ ಅವರಿಗೆ ಬೇಕಾದಂತೆ ನಿಮ್ಮನ್ನು ಬದಲಿಸಲು ಪ್ರಯತ್ನಿಸಿದರೆ, ಅಲ್ಲಿ ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅವಕಾಶವಿರುವುದಿಲ್ಲ. ಕೇವಲ ಅವರ ಇಷ್ಟದಂತೆ ಬದುಕುವುದರಿಂದ ನಿಮ್ಮ ವೈಯಕ್ತಿಕ ಜೀವನ, ಆಸೆ-ಆಕಾಂಕ್ಷೆಗಳೆಲ್ಲವೂ ಕುಂಠಿತಗೊಳ್ಳಲು ಪ್ರಾರಂಭವಾಗುತ್ತದೆ. ಸಂಬಂಧವೆಂದರೆ, ಅಲ್ಲಿ ಇಬ್ಬರೂ ಜೊತೆ ಸೇರಿ ಬೆಳೆಯಬೇಕು, ಜೊತೆಗೆ ಜೀವನವೆಂಬ ಹೋರಾಟದಲ್ಲಿ ಹೋರಾಡಬೇಕು. ಒಬ್ಬರ ಮೇಲೆಯೇ ಅವಲಂಬನೆಯಾದರೆ, ನಿಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ.

ನಿಮ್ಮನ್ನು ಅಗತ್ಯತೆಯಾಗಿ ನೋಡುತ್ತಿದ್ದರೆ:

ನಿಮ್ಮನ್ನು ಅಗತ್ಯತೆಯಾಗಿ ನೋಡುತ್ತಿದ್ದರೆ:

ಸಾಮಾನ್ಯವಾಗಿ ಅಗತ್ಯತೆ ಮತ್ತು ಪ್ರೀತಿಯ ನಡುವೆ ಜನರು ಗೊಂದಲಕ್ಕೊಳಗಾಗುತ್ತಾರೆ. ಯಾರೋ ಒಬ್ಬರು ಅವರ ಅಗತ್ಯಕ್ಕಾಗಿ ನಿಮ್ಮ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾರೆ ಅಥವಾ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದರೆ, ಅವರಿಂದ ಈಗಲೇ ದೂರವಾಗಿ. ಮೊದಲು ಪ್ರೀತಿ ಮತ್ತು ಅಗತ್ಯತೆ ನಡುವಿನ ತೆಳುವಾದ ರೇಖೆಯನ್ನು ಅರ್ಥಮಾಡಿಕೊಳ್ಳಿ.

ನಿಂದನೀಯ ವ್ಯಕ್ತಿತ್ವ ಹೊಂದಿದ್ದರೆ :

ನಿಂದನೀಯ ವ್ಯಕ್ತಿತ್ವ ಹೊಂದಿದ್ದರೆ :

ನಿಂದನೆ ಯಾವುದೇ ರೀತಿಯಲ್ಲಾದರೂ ಆಗಿರಬಹುದು, ಅದು ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಆಗಿರಬಹುದು, ಯಾವುದೂ ಒಳ್ಳೆಯದಲ್ಲ. ನೀವು ಒಂದು ನಿಂದನಾತ್ಮಕ ಸಂಬಂಧದಲ್ಲಿದ್ದರೆ, ಅದರಿಂದ ಹೊರಬರಬೇಕು. ನಿಮ್ಮ ಸಂಗಾತಿ ನಿಮ್ಮನ್ನು ಯಾವುದೇ ರೀತಿಯಲ್ಲಿ ನಾಶಮಾಡಲು ಅಥವಾ ನಿಮ್ಮನ್ನು ಕೆಳಹಾಕಲು ಪ್ರಯತ್ನಪಡುತ್ತಿದ್ದರೆ ಅದನ್ನು ಪ್ರೀತಿ ಎನ್ನಲು ಸಾದ್ಯವೇ ಇಲ್ಲ. ಪ್ರತಿ ವಿಚಾರಕ್ಕೂ ಇನ್ನೊಬ್ಬರ ಜೊತೆ ಹೋಲಿಸಿ ಮಾತನಾಡುವುದು, ಇನ್ನೊಬ್ಬರ ಮುಂದೆ ಕೀಳಾಗಿ ಕಾಣುವಂತಹ ವ್ಯಕ್ತಿ ನಿಮ್ಮವರಾಗಿದ್ದರೆ, ಆ ಸಂಬಂಧದಿಂದ ಹೊರನಡೆಯುವುದು ಉತ್ತಮ. ಏಕೆಂದರೆ ನೀವು ಪ್ರೀತಿಸುತ್ತಿದ್ದರೆ ಎಂದಿಗೂ ಆ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ನೋಯಿಸುವುದಿಲ್ಲ.

English summary

Signs of an Unhealthy Relationship that you should Never ignore in Kannada

Here we talking about Signs of an unhealthy relationship that you should never ignore in Kannada, read on
Story first published: Tuesday, October 5, 2021, 17:16 [IST]
X
Desktop Bottom Promotion