For Quick Alerts
ALLOW NOTIFICATIONS  
For Daily Alerts

ಪುರುಷನಲ್ಲಿ ಈ ರೀತಿಯ ಸ್ವಭಾವಗಳಿದ್ದರೆ ಅವನೊಂದಿಗಿನ ಬಾಳು ಬಲು ಕಷ್ಟ

|

ನಾವು ಇವತ್ತು ವಿಭಿನ್ನ ವಿಚಾರದ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ. ಅದುವೇ ಅಪ್ರಬುದ್ಧತೆ. ಹೌದು, ಪ್ರಬುದ್ಧತೆ ಎಂದರೆ ಮಾನಸಿಕವಾದ ಪ್ರಬುದ್ಧತೆಯೇ ಹೊರತು ವಯಸ್ಸಾಗುವಿಕೆಯಲ್ಲ. ಅಪ್ರಬುದ್ಧತೆ ಅಂದರೆ ಈ ವಿಚಾರಗಳ ವಿರುದ್ಧ ಪದವಾಗಿದೆ. ಇನ್ನು ವಯಸ್ಸು ಜಾಸ್ತಿ ಆದರೂ ಅನೇಕರಿಗೆ ಪ್ರಬುದ್ಧತೆ ಬಂದಿರುವುದಿಲ್ಲ. ಇನ್ನು ಕೆಲವರಿಗೆ ಸಣ್ಣ ಪ್ರಾಯದಲ್ಲೇ ಪ್ರಬುದ್ಧತೆ ಬಂದಿರುತ್ತದೆ. ಇನ್ನು ಪುರುಷನ ವಿಚಾರಕ್ಕೆ ಬಂದರೆ, ಎಲ್ಲಾ ಮಹಿಳೆಯರು ತನಗೆ ಪ್ರಬುದ್ಧತೆ ಇರುವ ಸಂಗಾತಿಯನ್ನು ಪಡೆಯಲು ಬಯಸುತ್ತಾರೆ. ತನ್ನ ಮತ್ತು ತನ್ನ ಕುಟುಂಬದ ರಕ್ಷಣೆ ಹೊರುವ, ತನ್ನ ಕನಸುಗಳಿಗೆ ನೀರೆರೆದು ಪೋಷಿಸುವ ಹಾಗೂ ಸಂದರ್ಭಗಳನ್ನು ಅರಿತು ಆ ಪ್ರಕಾರ ನಿರ್ಧಾರಗಳನ್ನು ಕೈಗೊಳ್ಳುವ ಪುರುಷರಿಗೇ ಮಹಿಳೆ ಹೆಚ್ಚು ಹೆಚ್ಚು ವಾಲುತ್ತಾಳೆ. ಹಾಗಾದರೆ ಪ್ರಬುದ್ಧತೆ ಎಂದರೇನು? ಪುರುಷನಲ್ಲಿರುವ ಅಪ್ರಬುದ್ಧತೆ ಲಕ್ಷಣಗಳು ಏನು? ಅದನ್ನು ಗುರುತಿಸುವುದು ಹೇಗೆ? ಇದಕ್ಕೆಲ್ಲ ಉತ್ತರ ಇಲ್ಲಿದೆ.

ಪ್ರಬುದ್ಧತೆ ಎಂದರೇನು?

ಪ್ರಬುದ್ಧತೆ ಎಂದರೇನು?

ಪ್ರಬುದ್ಧತೆ ಎಂದರೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಉತ್ತಮವಾಗಿ ಅಭಿವೃದ್ಧಿ ಹೊಂದುವುದು ಎನ್ನುವುದಾಗಿದೆ. ಪ್ರಬುದ್ಧತೆ ಹಾಗೇ ಸುಮ್ಮನೆ ಬರುವುದಿಲ್ಲ ಕಷ್ಟ, ಅನುಭವ, ನಮ್ಮ ಪರಿಸರಗಳಿಂದ ನಮಗೆ ಪ್ರಬುದ್ಧತೆಯನ್ನು ತಿಳಿಯುತ್ತೇವೆ. ಯಾರು ಕೂಡ ಅಪ್ರಬುದ್ಧತೆಯ ಪುರುಷನ ಜೊತೆ ಸಂಬಂಧ ಬೆಳೆಸಲು ಮುಂದಾಗುವುದಿಲ್ಲ. ಯಾಕೆಂದರೆ ಜೀವನವನ್ನು ಈಸಿಯಾಗಿ ತೆಗೆದುಕೊಳ್ಳುವ ಅಪ್ರಬುದ್ಧರು ಒಂದಲ್ಲ ಒಂದು ದಿನ ಸಮಸ್ಯೆಯನ್ನು ತಂದಿಡುವುದಂತು ಸತ್ಯ. ಅಪ್ರಬುದ್ಧತೆ ಎನ್ನುವುದು ಕೇಲವ ಜೀವನವನ್ನು ಈಸೀಯಾಗಿ ತೆಗೆದುಕೊಳ್ಳುವುದಲ್ಲ, ಮನೆಯಲ್ಲೇ ಲೇಸಿಯಾಗಿ ಇರುವುದಲ್ಲ. ಅದಕ್ಕಿಂತಲೂ ಹಲವು ವಿಚಾರಗಳಿವೆ. ಅಪ್ರಬುದ್ಧತೆ ಎನ್ನುವುದು ಪ್ರೀತಿ ಪ್ರೇಮವಿರಬಹುದು, ಹೆಂಡತಿ ಮಕ್ಕಳೊ೦ದಿಗಿನ ಕೌಟುಂಬಿಕ ಸಂಬಂಧಗಳಿರಬಹುದು, ನಾವು ಮಾಡುವ ವೃತ್ತಿಯಲ್ಲಿರಬಹುದು, ಹಣಕಾಸಿನ ಏರಿಳಿತ ಇರಬಹುದು, ಸಾವು ನೋವು, ಅಪಘಾತ, ಅವಮಾನಗಳಿರಬಹುದು ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯೇ ನಮ್ಮ ಪ್ರಬುದ್ಧತೆಯ ಮಟ್ಟ ನಿರ್ಧರಿಸುತ್ತದೆ. ಹಾಗಾದರೆ ಪುರುಷರ ಅಪ್ರಬುದ್ಧತೆ ಲಕ್ಷಣಗಳು ಏನು? ಇಲ್ಲಿ ಉದಾಹರಣೆ ಸಮೇತ ನೀಡುತ್ತೇವೆ ಓದಿ.

ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ!

ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ!

ಯಾವ ಪುರುಷನಿಗೆ ತನ್ನ ಜೀವನದಲ್ಲಿ ಮಹತ್ವಾಕಾಂಕ್ಷೆ ಕೊರತೆ ಇರುವುದೋ ಆ ಪುರುಷ ಅಪ್ರಬುದ್ಧತೆಯ ಮನುಷ್ಯ ಎಂದು ಹೇಳಬಹುದು. ಯಾಕೆಂದರೆ ಅವನಿಗೆ ಜೀವನದ ಭವಿಷ್ಯದ ಬಗ್ಗೆ ಯೋಚನೆ ಇರುವುದಿಲ್ಲ. ದಿನ ನಿತ್ಯ ತನ್ನ ಸ್ವ ಸುಖದ ಬಗ್ಗೆಯೇ ಯೋಚಿಸುತ್ತ ಸಮಯ ಕಳೆಯುವ ವ್ಯಕ್ತಿಯಾಗಿರುತ್ತಾನೆ. ಸಂಬಂಧಕ್ಕೆ ಬೆಲೆ ಕೊಡದೆ ತನ್ನ ಇಚ್ಚೆಗೆ ತಾನು ಇದ್ದರೆ ಅಂತಹವರು ಖಂಡಿತವಾಗಿಯೂ ಪಕ್ವತೆ ಇಲ್ಲದವರು ಅಥವಾ ಅಪ್ರಬುದ್ಧತೆಯ ಮನುಷ್ಯರು ಎಂದು ಅಂದಾಜಿಸಬಹುದು.

ಕಮಿಟ್ ಮೆಂಟ್ ಇರುವುದಿಲ್ಲ!

ಕಮಿಟ್ ಮೆಂಟ್ ಇರುವುದಿಲ್ಲ!

ಅಪ್ರಬುದ್ಧತೆ ಇಲ್ಲದ ಪುರುಷರಿಗೆ ಕಮಿಟ್ ಮೆಂಟ್ ಎನ್ನುವುದು ಇರುವುದಿಲ್ಲ. ಲವ್ ಎಲ್ಲಾ ಮಾಡುತ್ತಾರೆ. ಅದನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವುದು ಅವರಿಗೆ ತಿಳಿದಿರುವುದಿಲ್ಲ. ಎಲ್ಲದರಲ್ಲೂ ಮಕ್ಕಳ ತರ ವರ್ತಿಸುತ್ತಾರೆ. ಉದಾಹರಣೆಗೆ ನೀವು ನಿಮ್ಮ ಪ್ರೇಮದ ಬಗ್ಗೆ ಸಿರೀಯಸ್ ಆಗಿ ಹೇಳಿ ಮದುವೆ ಆಗೋಣಾ, ಮಕ್ಕಳು ಮಾಡಿಕೊಳ್ಳೋಣಾ ಎಂದರೆ ಅವರು ಅದಕ್ಕೆ ಹಿಂದೇಟು ಹಾಕುತ್ತಾರೆ ಅಥವಾ ಈ ವಿಚಾರ ತಿಳಿಸಿದಾಗ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇದಲ್ಲದೇ ಕೆಲಸದ ವಿಚಾರದಲ್ಲೂ ಕಮಿಟ್ ಮೆಂಟ್ ಇರುವುದಿಲ್ಲ.

ಬೇಕಾಬಿಟ್ಟಿ ಖರ್ಚು!

ಬೇಕಾಬಿಟ್ಟಿ ಖರ್ಚು!

ಉತ್ತಮ ಭವಿಷ್ಯದ ಬಗ್ಗೆ ಯೋಚನೆ ಮಾಡುವವರು ಬೇಕಾಬಿಟ್ಟಿ ಖರ್ಚು ಮಾಡಲು ಹೋಗುವುದಿಲ್ಲ. ಬೇಕಾಬಿಟ್ಟಿ ಖರ್ಚು ಮಾಡುವವರನ್ನು ಅಪ್ರಬುದ್ಧರು ಎಂದು ಕರೆಯಲಾಗುತ್ತದೆ. ಉದಾಹರಣೆಗೆ ತನಗೆ ಆ ವಸ್ತು ಅಗತ್ಯವಿರುವುದಿಲ್ಲ ಆದರೆ ದುಡ್ಡಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಹಣ ಖರ್ಚು ಮಾಡಿ ವಸ್ತು ಖರೀದಿಸುವುದು ಶಿಸ್ತು ಅಲ್ಲ. ಹೀಗಾಗಿ ಮುಂದಿನ ಜೀವನದ ಬಗ್ಗೆ ಯೋಚನೆ ಇಲ್ಲದವರು, ಅಪ್ರಬುದ್ಧರು ಮಾತ್ರ ಈ ರೀತಿ ವರ್ತಿಸುತ್ತಾರೆ. ನಿಮಗೆ ನಿಮ್ಮ ಪುರುಷನಲ್ಲಿ ಈ ಸ್ವಾಭಾವ ಕಂಡು ಬಂದರೆ ಆತ ಅಪ್ರಬುದ್ಧ ಎನ್ನುವುದು ಇದರ ಅರ್ಥ.

ಮಾತುಕತೆ ವೇಳೆ ದಾಳಿ ನಡೆಸುವ ಸ್ವಭಾವ!

ಮಾತುಕತೆ ವೇಳೆ ದಾಳಿ ನಡೆಸುವ ಸ್ವಭಾವ!

ಪ್ರಬುದ್ಧತೆ ಇಲ್ಲದ ಪುರುಷರ ಜೊತೆ ಅರ್ಥಪೂರ್ಣ ಮತ್ತು ಆಳವಾದ ಸಂಭಾಷಣೆಯನ್ನು ಮಾಡುವುದು ಕಷ್ಟ. ಅವರು ಯಾವಾಗಲೂ ವಾದವನ್ನು ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ. ಉದಾಹರಣೆಗೆ ಗಂಡ ಹಾಗೂ ಹೆಂಡತಿ ನಡುವೆ ಮಾತಿನ ಕಾಳಗ ನಡೆಯುತ್ತಿದ್ದರೆ ಈ ವಾದವನ್ನು ಗೆಲ್ಲಲು ಅವರು ಬೇಕಾದಷ್ಟು ಸುಳ್ಳು ಹೇಳುತ್ತಾರೆ. ನಿಮ್ಮನ್ನು ಅವಹೇಳನ ಮಾಡುತ್ತಾರೆ. ಅವರ ತಪ್ಪು ಒಪ್ಪಿಕೊಳ್ಳುವ ಬದಲು ಸೋಲುವ ಭಯದಲ್ಲಿ ನಿಮ್ಮ ಮೇಲೆ ದಾಳಿ ಕೂಡ ಮಾಡುತ್ತಾರೆ. ಎಂದೂ ಅವರು ಗೆಲ್ಲುವ ತವಕದಲ್ಲಿ ಇರುತ್ತಾರೆ. ತಾವು ಎದುರಾಳಿ ವಿರುದ್ಧ ಗೆಲ್ಲಲು ಯಾವ ಕುಕೃತ್ಯ ಕೂಡ ಮಾಡುತ್ತಾರೆ. ಈ ರೀತಿಯ ವರ್ತನೆ ನಿಮ್ಮ ಪುರುಷನಿಗೆ ಇದ್ದರೆ ಇದು ಅಪ್ರಬುದ್ಧತೆಯ ಲಕ್ಷಣವಾಗಿದೆ.

ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ!

ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ!

ಪ್ರಬುದ್ಧತೆ ಇರುವ ಪುರುಷನ ಮತ್ತೊಂದು ಲಕ್ಷಣ ತಪ್ಪನ್ನು ಒಪ್ಪಿಕೊಳ್ಳದೆ ಇರುವುದು. ಹೌದು, ತಾನು ತಪ್ಪು ಮಾಡಿದ್ದೇನೆ ಎಂದು ಗೊತ್ತಿದ್ದರು ಆತ ತಪ್ಪು ಒಪ್ಪಿಕೊಳ್ಳಲು ಹೋಗುವುದಿಲ್ಲ. ಆ ತಪ್ಪನ್ನು ನಿಮ್ಮ ಮೇಲೆ ಹಾಕಿ ಜಾರಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಯಾವುದೇ ವಿಚಾರಗಳಿಗೆ ಜವಾಬ್ದಾರನಾಗಲು ಬಯಸುವುದಿಲ್ಲ. ಉದಾಹರಣೆಗೆ ತನ್ನ ತಪ್ಪಿನಿಂದ ಏನಾದರೂ ಸಮಸ್ಯೆ ಆಗಿರುತ್ತದೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದನ್ನು ಬೇರೆಯವರ ಮೇಲೆ ಹೊರಿಸಿ ತಪ್ಪಿಸಿಕೊಳ್ಳುವುದಾಗಿದೆ.

ಸಂಬಂಧ ಉಳಿಸಲು ಗೊತ್ತಿರುವುದಿಲ್ಲ!

ಸಂಬಂಧ ಉಳಿಸಲು ಗೊತ್ತಿರುವುದಿಲ್ಲ!

ಅಪ್ರಬುದ್ಧತೆ ಪುರುಷರಿಗೆ ಸಂಬಂಧ ಉಳಿಸಲು ಗೊತ್ತಿರುವುದಿಲ್ಲ. ಅವನು ಒಂದು ಸಂಬಂಧದಲ್ಲಿ ಇರುವಾಗ ಮತ್ತೊಂದು ಸಂಬಂಧಕ್ಕೆ ತುಡಿಯುವುದು ಜಾಸ್ತಿ. ಅಲ್ಲದೇ ನೀವು ಆತನ ಹಿಂದಿನ ಸಂಬಂಧದ ಬಗ್ಗೆ ಕೇಳಿದರೆ ಅದನ್ನು ಹೇಳದೆ ನುಣುಚಿಕೊಳ್ಳುತ್ತಾನೆ. ಇದು ಕೂಡ ಅಪ್ರಬುದ್ಧತೆ ಪುರುಷನ ಮತ್ತೊಂದು ಲಕ್ಷಣ.

ಕೇಳುವ ಸಂಯಮವೂ ಇರುವುದಿಲ್ಲ!

ಕೇಳುವ ಸಂಯಮವೂ ಇರುವುದಿಲ್ಲ!

ಮತ್ತೊಂದು ಅಪ್ರಬುದ್ಧತೆ ಪುರುಷನ ಲಕ್ಷಣವೆಂದರೆ ಆತ ಬೇರೆಯವರು ಏನಾದರೂ ಹೇಳಿದರೆ ಅದನ್ನು ಕೇಳುವ ಸಂಯಮ ತೋರಿಸದೆ ಇರುವುದು. ಉದಾಹರಣೆ ಗಂಡ-ಹೆಂಡತಿ ವಿಚಾರದಲ್ಲಿ ನೋಡುವುದಾದರೆ ಗಂಡನಿಗೆ ಪತ್ನಿ ಏನಾದರೂ ಬುದ್ದಿವಾದ ಹೇಳಿದರೆ ಅದನ್ನು ಕೇಳುವ ಗೋಜಿಗೆ ಹೋಗುವುದಿಲ್ಲ. ತನ್ನದೇ ಸರಿ, ನನ್ನ ಬಿಟ್ಟು ಯಾರು ಇಲ್ಲ ಎನ್ನುವುದು ಅವರ ತಲೆಯಲ್ಲಿರುತ್ತದೆ. ಇದು ಕೂಡ ಅಪ್ರಬುದ್ಧತೆಯ ಪ್ರಮುಖ ಲಕ್ಷಣವಾಗಿದೆ.

ಸಾರ್ವಜನಿಕವಾಗಿ ನಿಮ್ಮನ್ನು ಅವಮಾನಿಸುವುದು!

ಸಾರ್ವಜನಿಕವಾಗಿ ನಿಮ್ಮನ್ನು ಅವಮಾನಿಸುವುದು!

ನಿಮ್ಮನ್ನು ನಿಮ್ಮ ಪುರುಷ ಸಾರ್ವಜನಿಕವಾಗಿ ಅವಮಾನಿಸಿದರೆ ಅದರ ಅರ್ಥ ಆತ ಇನ್ನು ಪಕ್ವತೆ ಹೊಂದಿಕೊಂಡಿಲ್ಲ ಎನ್ನುವುದು. ಹೌದು, ಕೆಲವೊಂದು ವಿಚಾರಕ್ಕೆ ಸಾರ್ವಜನಿಕ ಸ್ಥಳದಲ್ಲೇ ತಗಾದೆ ತೆಗೆದು ಜೋರು ಮಾತನಾಡುವುದು, ಮಾತುಗಳ ಮೂಲಕ ಅವಮಾನಿಸುವುದು ಇದು ಅಪ್ರಬುದ್ಧತೆಯ ಲಕ್ಷಣ. ಬಳಿಕ ಈ ವಿಚಾರಕ್ಕೆ ಕ್ಷಮೆ ಕೇಳದೆ ಸರಸಾಗಟವಾಗಿ ತಮಾಷೆ ಮೂಲಕ ಅದನ್ನು ತಳ್ಳಿ ಹಾಕುತ್ತಾನೆ.

ಪ್ರೇಮದಲ್ಲಿ ಅಭದ್ರತೆ ಕಾಡುವುದು!

ಪ್ರೇಮದಲ್ಲಿ ಅಭದ್ರತೆ ಕಾಡುವುದು ಕೂಡ ಅಪ್ರಬುದ್ಧತೆಯ ಲಕ್ಷಣವಾಗಿದೆ. ನಿಮ್ಮ ಫ್ರೆಂಡ್ಸ್ ಜೊತೆ ಹೋದರೆ ಅದಕ್ಕೆ ಏನೋ ಸೇರಿಸಿ ಹೇಳುವುದು. ಸಂಶಯ ಪಡುವುದು. ಕೆಟ್ಟದಾಗಿ ಮಾತನಾಡುವುದು, ಎಲ್ಲೂ ಹೊರಗೆ ಹೋಗದಂತೆ ತಾಕೀತು ಮಾಡುವುದು ಅಪ್ರಬುದ್ಧತೆಯ ಲಕ್ಷಣ.

ಅಪ್ರಬುದ್ಧತೆ ಎನ್ನುವುದು ವ್ಯಕ್ತಿತ್ವ ಅಸ್ವಸ್ಥತೆ?

ಹೌದು, ವೈದ್ಯರ ಪ್ರಕಾರ ಅಪ್ರಬುದ್ಧತೆ ಎನ್ನುವುದು ವ್ಯಕ್ತಿತ್ವ ಅಸ್ವಸ್ಥತೆ(ಪರ್ಸನಾಲಿಟಿ ಡಿಸಾರ್ಡರ್) ಅಂತೆ. ಅಪಕ್ವವಾದ ವ್ಯಕ್ತಿತ್ವ ಅಸ್ವಸ್ಥತೆ ಹೊಂದಿರುವ ಜನರು ಭಾವನಾತ್ಮಕ ಬೆಳವಣಿಗೆಯನ್ನು ಹೊಂದಿರುವುದಿಲ್ಲ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸಲು ಅಥವಾ ಅವರ ಕಾರ್ಯಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರಿಗೆ ಆಗುವುದಿಲ್ಲ. ಹೀಗಾಗಿ ಇದು ಪರ್ಸನಾಲಿಟಿ ಡಿಸಾರ್ಡರ್ ಆಗಿದೆ. ಸಮಯ ಬಂದಾಗ ಚೇಂಜ್ ಆಗುವುದು. ಇಂತಹ ಸಮಸ್ಯೆ ನಿಮ್ಮ ಪುರುಷನಲ್ಲಿ ಇದ್ದರೆ ಇದಕ್ಕೆ ಸಂಬಂಧಪಟ್ಟ ವೈದ್ಯರನ್ನು ಭೇಟಿ ಆಗುವುದು ಉತ್ತಮ.

English summary

Signs of an Immature Man in Kannada

If you found these Signs in a man, he is a not committed and matured man, be careful...
X
Desktop Bottom Promotion