For Quick Alerts
ALLOW NOTIFICATIONS  
For Daily Alerts

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಿಗೆ ಈ ಸಂಗತಿಗಳು ಇಷ್ಟವಾಗುವುದಿಲ್ಲ

|

ಮಹಿಳೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಆಕೆಗೆ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯುವುದು ತುಂಬಾ ಕಷ್ಟದ ವಿಚಾರ ಎಂದು ಹಿರಿಯರೇ ಹೇಳಿದ್ದಾರೆ. ನಿಜವಾಗಿಯೂ ಮಹಿಳೆಗೆ ಏನು ಬೇಕು ಎನ್ನುವ ಬಗ್ಗೆ ಪುರುಷರಲ್ಲಿ ಇಂದಿಗೂ ಗೊಂದಲವಿದೆ. ಬಂಗಾರ, ಐಷಾರಾಮಿ ಜೀವನ ಹೀಗೆ ಕೆಲವು ಮಹಿಳೆಯರಿಗೆ ಇದೆಲ್ಲವೂ ಇಷ್ಟವಾಗುವುದು. ಇನ್ನು ಕೆಲವು ಮಹಿಳೆಯರಿಗೆ ಐಷಾರಾಮಿ ಜೀವನಕ್ಕಿಂತಲೂ ಸರಳವಾಗಿರುವ ಜೀವನವೇ ಒಳ್ಳೆಯದು ಎನ್ನುವ ಭಾವನೆ ಇರುವುದು. ಇಂತಹ ಸಮಯದಲ್ಲಿ ಮಹಿಳೆಯರಿಗೆ ಲೈಂಗಿಕ ಜೀವನದಲ್ಲಿ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯಬೇಕಾದರೆ ಖಂಡಿತವಾಗಿಯೂ ಆತ ತಪಸ್ಸು ಮಾಡಬೇಕು. ಹಾಸಿಗೆಯಲ್ಲಿ ಮಹಿಳೆಯ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಜಗವನ್ನೇ ಗೆದ್ದಂತೆ ಎಂದು ಹೇಳಬಹುದು. ಲೈಂಗಿಕ ವಿಷಯದಲ್ಲಿ ಮಹಿಳೆಯ ಬಗ್ಗೆ ಪುರುಷ ಯೋಚನೆ ಮಾಡಿರುವುದಕ್ಕಿಂತ ಭಿನ್ನವಾಗಿಯೇ ಆಕೆ ಆಸಕ್ತಿಯನ್ನು ಹೊಂದಿರುತ್ತಾಳೆ ಎಂದು ಹಲವು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಇದು ಏನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ...

ಲೈಂಗಿಕ ಕ್ರಿಯೆ ವೇಳೆ ಪುರುಷರು ಏನು ಮಾಡಬಾರದು

ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ, ಲೈಂಗಿಕ ಕ್ರಿಯೆ ಸಂಬಂಧಿಸಿದಂತೆ ಅವರಿಗೆ ತಮ್ಮಲ್ಲಿ ಕೆಲವೊಂದು ಇಷ್ಟಗಳು ಇರುವುದು. ಕೆಲವರಿಗೆ ಲೈಂಗಿಕ ಕ್ರಿಯೆಗೆ ಮೊದಲಿನ ಆಟ ಇಷ್ಟವಾಗುವುದು, ಇನ್ನು ಕೆಲವರು ಮಂದಿಗೆ ಬೇಗನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಅದನ್ನು ಮುಗಿಸಿಬಿಡಬೇಕು ಎಂದು ಇರುತ್ತದೆ. ಇಂಗ್ಲೆಂಡಿನಲ್ಲಿನ ಲೈಂಗಿಕ ಆಟಿಕೆ ಕಂಪೆನಿಯೊಂದು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ, ಲೈಂಗಿಕ ಸಂತೋಷವು ಹೆಚ್ಚಾಗಿ ಲಿಂಗ, ವಯಸ್ಸು ಮತ್ತು ಲೈಂಗಿಕತೆಗೆ ಸಂಬಂಧಿಸಿದ್ದಾಗಿರುತ್ತೆ. ಈ ಅಧ್ಯಯನವು ಇನ್ನು ಕೆಲವೊಂದು ವಿಷಯಗಳನ್ನು ಕಂಡುಕೊಂಡಿವೆ.

ಲೈಂಗಿಕ ಕ್ರಿಯೆ ವೇಳೆ ಹತ್ತರಲ್ಲಿ 7 ಮಂದಿ ಮಾತ್ರ ಪರಾಕಾಷ್ಠೆ ತಲುಪುವರು

ಲೈಂಗಿಕ ಕ್ರಿಯೆ ವೇಳೆ ಹತ್ತರಲ್ಲಿ 9 ಮಂದಿ ಪುರುಷರು ಪರಾಕಾಷ್ಠೆ ತಲುಪುವರು. ಆದರೆ ಹತ್ತರಲ್ಲಿ ಏಳು ಮಂದಿ ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪುವರು. ಈ ಅಧ್ಯಯನಕ್ಕಾಗಿ ಅಮೆರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿನ ಜನರನ್ನು ಸಮೀಕ್ಷೆ ನಡೆಸಲಾಯಿತು. ಇದರಲ್ಲಿ ಲೈಂಗಿಕ ಸಂತೋಷವೆಂದರೆ ಏನು ಮತ್ತು ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಲಾಗಿತ್ತು.

1. ಮಹಿಳೆಯರಿಗೆ ಏನು ಇಷ್ಟವಿಲ್ಲ?

1. ಮಹಿಳೆಯರಿಗೆ ಏನು ಇಷ್ಟವಿಲ್ಲ?

ಲೈಂಗಿಕ ಕ್ರಿಯೆ ವೇಳೆ ಸ್ವಯಂ ಪ್ರಜ್ಞೆಯ ಭಾವನೆಯು ತಮಗೆ ಇಷ್ಟವಾಗುವುದಿಲ್ಲ ಎಂದು ಶೇ.30ರಷ್ಟು ಮಹಿಳೆಯರು ಹೇಳಿದ್ದಾರೆ. ಇದರ ಬಳಿಕ ಪುರುಷರು ಲೈಂಗಿಕ ಕ್ರಿಯೆ ಮುಗಿದ ತಕ್ಷಣವೇ ಮಗ್ಗುಲ ಬದಲಾಯಿಸಿ ಮಲಗಿ ಬಿಡುವುದು. ಲೈಂಗಿಕ ಕ್ರಿಯೆಗೆ ಮೊದಲು ಆಟವಾಡದೆ ಇರುವುದು, ಪರಾಕಾಷ್ಠೆ ತಲುಪದಿರುವುದು ಮತ್ತು ಮಧ್ಯೆ ಅಡಚಣೆ ಆಗುವುದನ್ನು ಇಷ್ಟಪಡುವುದಿಲ್ಲವೆಂದು ಹೆಚ್ಚಿನ ಮಹಿಳೆಯರು ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳು ಮಹಿಳೆಯರಿಗೆ ಸೆಕ್ಸ್ ನ್ನು ತುಂಬಾ ಕೆಟ್ಟದಾಗಿಸುತ್ತದೆ.

2. ಆಟವಾಡದೆ ಇರುವುದು

2. ಆಟವಾಡದೆ ಇರುವುದು

ಲೈಂಗಿಕ ಕ್ರಿಯೆ ಎನ್ನುವುದು ಎರಡು ಜೀವಗಳ ಸಮಾಗಮ. ಈ ವೇಳೆ ಪರಸ್ಪರರ ಅಂಗಾಂಗಗಳ ಬಗ್ಗೆ ಆಟವಾಡುವುದು, ಪೋಲಿ ಮಾತುಗಳನ್ನು ಆಡುವುದು ಮುಖ್ಯವಾಗಿ ಇರುತ್ತದೆ. ಆದರೆ ಇದೆಲ್ಲವೂ ಮಾಡದೆ ಇದ್ದರೆ ಆಗ ಮಹಿಳೆಯರಿಗೆ ನಿರಾಶೆ ಆಗುತ್ತದೆ. ಲೈಂಗಿಕ ಆಟವೆನ್ನುವುದು ಸಂಪೂರ್ಣ ಊಟಕ್ಕೆ ಮೊದಲು ಬಡಿಸುವಂತಹ ತಿಂಡಿಯಾಗಿರುವುದು. ಸ್ವಲ್ಪ ಸಮಯ ಲೈಂಗಿಕ ಆಟದಲ್ಲಿ ಕಳೆದರೆ ಆಗ ಮುಂದೆ ಲೈಂಗಿಕ ಕ್ರಿಯೆಗೆ ಇದು ತುಂಬಾ ನೆರವಾಗುವುದು.

3. ಆಕೆಯಲ್ಲಿ ಸ್ವಯಂ ಪ್ರಜ್ಞೆ ಉಂಟು ಮಾಡುವುದು

3. ಆಕೆಯಲ್ಲಿ ಸ್ವಯಂ ಪ್ರಜ್ಞೆ ಉಂಟು ಮಾಡುವುದು

ಕೆಲವೊಂದು ಕಾರಣಗಳಿಂದಾಗಿ ತಮ್ಮ ದೇಹದ ಬಗ್ಗೆ ಮಹಿಳೆಯರಿಗೆ ಸ್ವಯಂ ಪ್ರಜ್ಞೆ ಇರುತ್ತದೆ. ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಗೆ ತನ್ನ ದೇಹದ ಬಗ್ಗೆ ಆತ್ಮವಿಶ್ವಾಸ ಇರುವುದಿಲ್ಲ ಅಥವಾ ತನ್ನ ಋತುಚಕ್ರವು ಮರಳಿ ಬರುತ್ತಿದೆ ಎಂದು ಚಿಂತೆ ಇರಬಹುದು ಅಥವಾ ದೇಹದ ಸೌಂದರ್ಯದ ಬಗ್ಗೆ ಆಕೆಗೆ ಹೆಚ್ಚು ವಿಶ್ವಾಸವಿಲ್ಲದೆ ಇರಬಹುದು. ಇದೆಲ್ಲವನ್ನು ಪುರುಷರು ಹೇಳಿದರೆ, ಆಗ ಯಾವ ಮಹಿಳೆಯೂ ಆತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಇಷ್ಟಪಡುವುದಿಲ್ಲ. ಲೈಂಗಿಕ ಕ್ರಿಯೆ ವೇಳೆ ಆಕೆಯ ದೇಹವನ್ನು ಪ್ರಶಂಸೆ ಮಾಡಿ ಎಂದು ಹೇಳುತ್ತಿಲ್ಲ. ಯಾಕೆಂದರೆ ಅವರು ನಿಮ್ಮ ಸುಳ್ಳನ್ನು ಬೇಗನೆ ಕಂಡುಹಿಡಿಯುವರು. ಆದರೆ ನೀವು ಆಕೆಗೆ ಹಿತಕರವಾಗುವಂತೆ ಇರಿ ಮತ್ತು ಆಕೆಯ ದೇಹವನ್ನು ಸಂಪೂರ್ಣವಾಗಿ ಇಷ್ಟಪಡಿ.

4. ದಾಖಲೆ ಬೇಕಿಲ್ಲ

4. ದಾಖಲೆ ಬೇಕಿಲ್ಲ

ಲೈಂಗಿಕ ಶಕ್ತಿಯನ್ನು ವೃದ್ಧಿಸಲು ನೀವು ಯಾವುದಾದರೂ ವಿಧಾನವನ್ನು ಅಳವಡಿಸಿಕೊಳ್ಳುತ್ತಲಿದ್ದರೆ ಅದನ್ನು ಈಗಲೇ ಬಿಟ್ಟುಬಿಡಬೇಕು. ಯಾಕೆಂದರೆ ಹಾಸಿಗೆಯಲ್ಲಿ ನೀವು ಎಷ್ಟು ಚೆನ್ನಾಗಿದ್ದೀರಿ ಎಂದು ತಿಳಿಯಲು ಮಹಿಳೆಯರಿಗೆ ಇಷ್ಟವಿರುವುದಿಲ್ಲ. ಲೈಂಗಿಕವಾಗಿ ನೀವು ಕೊಚ್ಚಿಕೊಳ್ಳುವುದನ್ನು ಮಹಿಳೆಯರು ಇಷ್ಟಪಡುವುದಿಲ್ಲ.

5. ಆಕೆಯ ಪರಾಕಾಷ್ಠೆ ಬಗ್ಗೆ ಪದೇ ಪದೇ ಕೇಳುವುದು

5. ಆಕೆಯ ಪರಾಕಾಷ್ಠೆ ಬಗ್ಗೆ ಪದೇ ಪದೇ ಕೇಳುವುದು

ಲೈಂಗಿಕ ಕ್ರಿಯೆ ವೇಳೆ ಇದು ಅತೀ ದೊಡ್ಡ ನಿರಾಶೆಯನ್ನು ಉಂಟು ಮಾಡುವ ವಿಚಾರವಾಗಿದೆ. ಯಾಕೆಂದರೆ ಮಹಿಳೆಯರ ಪರಾಕಾಷ್ಠೆ ಬಗ್ಗೆ ಹಲವಾರು ಚಿತ್ರವಿಚಿತ್ರ ಕಥೆಗಳು ಇವೆ ಮತ್ತು ನೀವು ಹುಡುಕಲು ಹೋದರೆ ಆಗ ಸಾವಿರಾರು ಕಥೆಗಳು ನಿಮಗೆ ಸಿಗುವುದು. ತನ್ನ ಸಂಗಾತಿಯು ಪರಾಕಾಷ್ಠೆ ತಲುಪಿದ್ದಾಳೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಪುರುಷರಲ್ಲಿ ಕೌತುಕವಿರುವುದು. ಆದರೆ ಪದೇ ಪದೇ ಪರಾಕಾಷ್ಠೆ ತಲುಪಿದ್ದಾಳೆಯಾ ಅಥವಾ ಇಲ್ಲವಾ ಎಂದು ಕೇಳುವುದನ್ನು ಪುರುಷರು ನಿಲ್ಲಿಸಬೇಕು. ಇದು ಮಹಿಳೆಗೆ ಇಷ್ಟವಾಗಲ್ಲ.

6. ಜಿ-ಸ್ಪಾಟ್ ಹುಡುಕುವುದು

6. ಜಿ-ಸ್ಪಾಟ್ ಹುಡುಕುವುದು

ಲೈಂಗಿಕ ಕ್ರಿಯೆ ವೇಳೆ ಪುರುಷರು ಅರ್ಧಂಬರ್ಧ ಜ್ಞಾನ ಹಿಡಿದುಕೊಂಡು ಏನೇನೋ ಹುಡುಕುತ್ತಾ ಇರುತ್ತಾರೆ. ಆದರೆ ಲೈಂಗಿಕ ಕ್ರಿಯೆ ವೇಳೆ ಕೆಲವರು ಜಿಸ್ಪಾಟ್ ಹುಡುಕುವರು. ಇದು ತುಂಬಾ ಕೆಟ್ಟ ಅಭ್ಯಾಸ. ಪುರುಷನನ್ನು ತನ್ನೊಳಗೆ ಬಿಟ್ಟುಕೊಡುವುದು ಮಹಿಳೆಯ ವೈಯಕ್ತಿಕ ವಿಚಾರವಾಗಿದೆ. ಆದರೆ ನೀವು ಇಂಟರ್ನೆಟ್ ನಲ್ಲಿ ಇರುವುದನ್ನು ನೋಡಿ ಏನೇನೋ ಮಾಡಲು ಹೋಗಬೇಡಿ. ಇದರಿಂದ ಆಕೆಯು ಅಹಿತಕರ ಭಾವನೆ ಆಗುವುದು.

7. ಅನ್ವೇಷಿಸದೆ ಇರುವ ಭೂಮಿ

7. ಅನ್ವೇಷಿಸದೆ ಇರುವ ಭೂಮಿ

ಲೈಂಗಿಕ ಕ್ರಿಯೆ ವೇಳೆ ತನ್ನ ಸಂಗಾತಿಯು ದೇಹವನ್ನು ಒಂದು ಅನ್ವೇಷಿಸದೆ ಇರುವ ಭೂಮಿಯಂತೆ ನೋಡಿಕೊಳ್ಳಬೇಕು ಎಂದು ಪ್ರತಿಯೊಬ್ಬ ಮಹಿಳೆಯು ಬಯಸುವಳು. ನೀವು ಮಹಿಳೆಯ ದೇಹದಲ್ಲಿ ಅನ್ವೇಷಣೆ ಮಾಡಲು ಹೋಗಬೇಡಿ.

8. ನೀಲಿಚಿತ್ರದಲ್ಲಿ ನೋಡಿದಂತೆ….

8. ನೀಲಿಚಿತ್ರದಲ್ಲಿ ನೋಡಿದಂತೆ….

ಹೆಚ್ಚಾಗಿ ಪುರುಷರು ಲೈಂಗಿಕತೆ ಬಗ್ಗೆ ಮಾಹಿತಿ ಪಡೆಯುವುದು ನೀಲಿಚಿತ್ರಗಳ ಮೂಲಕ. ಆದರೆ ಇದು ನಿಜ ಜೀವನವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ನೀಲಿ ಚಿತ್ರದ ನಾಯಕನಂತೆ ಮಾಡಲು ಹೋದರೆ ಆಗ ಖಂಡಿತವಾಗಿಯೂ ನಿಮಗೆ ನಿರಾಶೆ ಆಗುವುದು ಮಾತ್ರವಲ್ಲದೆ, ನಿಮ್ಮ ಸಂಗಾತಿಗೂ ಇದರಿಂದ ತುಂಬಾ ನಿರಾಶೆ ಆಗುವುದು ಖಚಿತ.

English summary

Sex Tips For Men: These Things Women Hate While Having Sex

Being successful with women is more than just personality but being able to overcome "game killers" in the bedroom. Most men assume that all a woman needs is good food, a car and high heels. No! Women are very keen when it comes to those small details in the bedroom. We sought to find out what women hate about men hate about men when it comes to bedroom matters. From the research, it seems women are more physical than most men assumed.
Story first published: Saturday, September 21, 2019, 19:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more