For Quick Alerts
ALLOW NOTIFICATIONS  
For Daily Alerts

ಲೀವ್ ಇನ್‌ ರಿಲೇಷನ್‌ಶಿಪ್‌ನಲ್ಲಿರುವವರು ತಿಳಿದಿರಬೇಕಾದ ಹಕ್ಕುಗಳಿವು

|

ಕೆಲವೊಂದು ಜೋಡಿಗಳಿದ್ದಾರೆ ಅವರಿಗೆ ಜೊತೆಯಾಗಿ ಬಾಳಬೇಕೆಂಬ ಆಸೆ ಇರುತ್ತದೆ, ಆದರೆ ಅದಕ್ಕೆ ಮದುವೆಯ ಬಂಧನವಿರಲು ಇಷ್ಟಪಡಲ್ಲ. ಮದುವೆಯೆಂದರೆ ಕಮಿಟ್‌ಮೆಂಟ್‌, ಜವಾಬ್ದಾರಿ ಅವೆಲ್ಲಾ ಬೇಡ, ನಮ್ಮಿಷ್ಟಕ್ಕೆ ನಾವು ಆರಾಮ ಆಗಿರಬೇಕು ಎಂದು ಬಯಸುತ್ತಾರೆ. ಎಷ್ಟೋ ಜನರು ತಮ್ಮ ಲೀವ್‌ ಇನ್‌ ಸಂಬಂಧವನ್ನು ಹೊರ ಜಗತ್ತಿನಿಂದ ಬಚ್ಚಿಡುತ್ತಾರೆ.

Legal Status of Live-in in India

ಲೀವ್‌ ಇನ್ ಸಂಬಂಧದಲ್ಲಿ ಇಬ್ಬರಿಗೆ ಇಷ್ಟವಿರುವಷ್ಟು ಸಮಯ ಜೊತೆಗಿರುವುದು, ಬೇಡವೆಂದಾಗ ದೂರವಾಗುವುದು. ದೂರವಾಗುವಾಗ ವಿಚ್ಛೇದನದ ತಲೆ ಬಿಸಿಯೂ ಇಲ್ಲ, ಕಾನೂನಿನ ಚೌಕಟ್ಟೂ ಇಲ್ಲ. ಆದರೆ ಹೇಳಿದಷ್ಟು ಸುಲಭವಲ್ಲ ಈ ಸಂಬಂಧ. ಆರಾಮವಾಗಿರಬೇಕು, ವೈವಾಹಿಕ ಸಂಬಂಧದ ಕಿರಿಕಿರಿ ಬೇಡ ಎಂದು ಲೀವ್‌ ಇನ್‌ ಸಂಬಂಧದಲ್ಲಿರುವ ಬಹುತೇಕ ಜೋಡಿಗೆ ಮುಂದೆ ದೊಡ್ಡ ಸವಾಲುಗಳೇ ಎದುರಾಗಬಹುದು.

ಉದಾಹರಣೆಗೆ ಆ ಜೋಡಿಗೆ ಮಗುವಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ, ಒಬ್ಬರಿಗೆ ಬೇಕೆಂದು ಇರುವಾಗ ಮತ್ತೊಬ್ಬರಿಗೆ ಈ ವ್ಯಕ್ತಿ ಜೊತೆಗಿನ ಸಂಬಂಧ ಸಾಕು ಎಂದು ಅನಿಸಲಾರಂಭಿಸಿದಾಗ ಈ ಸಂಬಂಧ ಅಡಿಪಾಯವಿಲ್ಲದ ಗಾಜಿನ ಕಟ್ಟಡ ಎಂಬುವುದು ಅರಿವಾಗುವುದು. ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ.

ಹಾಗಂತ ಲೀವ್‌ ಇನ್‌ ಸಂಬಂಧದಲ್ಲಿರುವವರಿಗೆ ಕಾನೂನು ಪ್ರಕಾರ ಯಾವುದೇ ಹಕ್ಕುಗಳಿಲ್ಲವೇ? ಲೀವ್‌ ಇನ್‌ ಸಂಬಂಧದಲ್ಲಿರುವವರು ತಿಳಿದಿರಲೇಬೇಕಾದ ಸಂಗತಿಗಳಿವು ನೋಡಿ:

ಕಾನೂನು ಏನು ಹೇಳುತ್ತದೆ?

ಕಾನೂನು ಏನು ಹೇಳುತ್ತದೆ?

* ಮದುವೆಯಾಗದ ಹೆಣ್ಣು ಹಾಗೂ ಮದುವೆಯಾಗದ ಗಂಡು ಮದುವೆಯಾಗದೆ ಗಂಡ-ಹೆಂಡತಿಯ ಸಂಬಂಧದಲ್ಲಿದ್ದರೆ ಅಂಥ ಸಂಬಂಧಕ್ಕೆ ಕಾನೂನಿನಲ್ಲಿ ಶಿಕ್ಷೆಯಿಲ್ಲ.

* ಅದೇ ಮದುವೆಯಾದ ಪುರುಷ ಮೊದಲನೇ ಪತ್ನಿಯಿಂದ ವಿಚ್ಛೇದನೆ ತೆಗೆಯದೆ ಮದುವೆಯಾಗದೇ ಇರುವ ಹುಡುಗಿ ಜೊತೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರೆ ಅಥವಾ ಮದುವೆಯಾದ ಹೆಣ್ಣು ತನ್ನ ಪತಿಯಿಂದ ವಿಚ್ಛೇದನ ಪಡೆಯದೆ ಮದುವೆಯಾಗದೇ ಇರುವ ಪುರುಷನ ಜೊತೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ.

* ಈ ಮೊದಲು ಬೇರೆ ಮದುವೆಯಾಗಿರುವ ಪುರುಷ ಹಾಗೂ ಮಹಿಳೆ ಆ ಸಂಬಂಧವನ್ನು ಕಾನೂನಿನ ಪ್ರಕಾರ ವಿಚ್ಚೇದನ ಪಡೆಯದೆ ಇವರಿಬ್ಬರು ಸೇರಿ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ.

* ಸಲಿಂಗಿಗಳು ಜೊತೆಯಾಗಿ ಒಂದು ಮನೆಯಲ್ಲಿ ವಾಸಿಸುತ್ತಿದ್ದರೆ ಅವರಿಗೆ ಯಾವುದೇ ಶಿಕ್ಷೆಯಿಲ್ಲ.

ಲೀವ್‌ ಇನ್‌ ರಿಲೇಷನ್‌ಶಿಪ್‌ಗೆ ಭಾರತದಲ್ಲಿ ಅವಕಾಶವಿದೆಯೇ?

ಲೀವ್‌ ಇನ್‌ ರಿಲೇಷನ್‌ಶಿಪ್‌ಗೆ ಭಾರತದಲ್ಲಿ ಅವಕಾಶವಿದೆಯೇ?

ಉಚ್ಛನ್ಯಾಯಾಲಯ ಪ್ರಕಾರ ಪುರುಷ ಹಾಗೂ ಮಹಿಳೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ತುಂಬಾ ಕಾಲ ಇದ್ದರೆ, ಅವರಿಗೆ ಮಕ್ಕಳಾದರೆ ಆಗ ಅವರಿಗೆ ಇತರ ವೈವಾಹಿಕ ದಂಪತಿಗಳಿಗೆ ಇರುವ ಕಾನೂನು ಅನ್ವಹಿಸುವುದು.

ಪುರುಷ ಹಾಗೂ ಮಹಿಳೆ ಜೊತೆಯಾಗಿ ಬಾಳುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ಉಚ್ಛನ್ಯಾಯಾಲಯ ಹೇಳಿದೆ.

ಮದುವೆ ಹಾಗೂ ಲೀವ್‌ ಇನ್‌ ರಿಲೇಷನ್‌ಶಿಪ್‌ ಸಂಬಂಧದ ನಡುವಿನ ವ್ಯತ್ಯಾಸ

ಮದುವೆ ಹಾಗೂ ಲೀವ್‌ ಇನ್‌ ರಿಲೇಷನ್‌ಶಿಪ್‌ ಸಂಬಂಧದ ನಡುವಿನ ವ್ಯತ್ಯಾಸ

ಮದುವೆ ಎಂಬುವುದು ಹೆಣ್ಣು ಹಾಗೂ ಜೊತೆಯಾಗಿ ಬಾಳಲು ಸಮಾಜ ಹಾಕಿದ ಚೌಕಟ್ಟು. ಇವರಿಗೆ ವೈವಾಹಿಕ ಹಕ್ಕು ಹಾಗೂ ಕಾನೂಗಳಿವೆ ಆದ್ದರಿಂದ ಲೀವ್‌ ಇನ್ ರಿಲೇಷನ್‌ಶಿಪ್‌ಗಿಂತ ವೈವಾಹಿಕ ಸಂಬಂಧ ಹೆಚ್ಚು ಸುರಕ್ಷಿತವಾಗಿದೆ.

ಲೀವ್‌ ಇನ್‌ ಸಂಬಂಧದಂತೆ ಬೇಡ ಎಂದಾಗ ಅಷ್ಟು ಸುಲಭದಲ್ಲಿ ಬಿಟ್ಟು ಹೋಗುವಂತಿಲ್ಲ, ಕಾನೂನು ಪ್ರಕಾರ ಬೇರೆಯಾಗಬೇಕಾಗುತ್ತದೆ.

ಮದುವೆಯಾಗಿ ಜೊತೆಯಾಗಿ ಬಾಳುತ್ತಿರುವ ದಂಪತಿಗೆ ಸಿಗುವ ಮನ್ನಣೆ ಮದುವೆಯಾಗದೇ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವ ಜೋಡಿಗೆ ಈ ಸಮಾಜ ನೀಡಲ್ಲ.

ಲೀವ್‌ ಇನ್‌ ರಿಲೇಷನ್‌ ಹಾಗೂ ಮಕ್ಕಳು

ಲೀವ್‌ ಇನ್‌ ರಿಲೇಷನ್‌ ಹಾಗೂ ಮಕ್ಕಳು

* ಲೀವ್‌ ಇನ್ ರಿಲೇಷನ್‌ಶಿಪ್‌ನಲ್ಲಿರುವ ಜೋಡಿಗೆ ಮಕ್ಕಳನ್ನು ದತ್ತು ಪಡೆಯುವ ಅವಕಾಶವಿಲ್ಲ.

* ಲೀವ್‌ ಇನ್‌ ರಿಲೇಷನ್‌ಶಿಪ್‌ ಜೋಡಿಗೆ ಜನಿಸಿದ ಮಕ್ಕಳು ತಮ್ಮ ಪೋಷಕರ ಹಾಗೂ ಪೂರ್ವಜರ ಆಸ್ತಿಗೆ ಹಕ್ಕುದಾರರಾಗಬಹುದು ಎಂದು ಹಿಂದೂ ವಿವಾಹ ಕಾಯ್ದೆ ಕಾಲಂ 16ರಲ್ಲಿ ಹೇಳಲಾಗಿದೆ.

English summary

Right You Need To Know For A Perfect Live-in Relationship in Kannada

Right you need to Know for a perfect live-in relationship in Kannada, read on.. .
Story first published: Sunday, August 29, 2021, 20:56 [IST]
X
Desktop Bottom Promotion