For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿ ಬೇರೆ-ಬೇರೆ ಶಿಫ್ಟ್‌ನಲ್ಲಿ ಕೆಲಸ ಮಾಡ್ತಿದೀರಾ? ಹಾಗಾದ್ರೆ ಸಂಬಂಧದ ಉಳಿವಿಗಾಗಿ ಈ ಟಿಪ್ಸ್ ಫಾಲೋ ಮಾಡಿ

|

ದುಡಿಯಲು ಅಂತ ಬಂದ ಮೇಲೆ ಯಾವ ಶಿಫ್ಟ್ ಆದರೇನು? ಕೆಲಸ ಮಾಡಲೇಬೇಕು, ಇನ್ನು ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವುದಾದರೆ ನೈಟ್‌ ಶಿಫ್ಟ್‌ ಇರುವುದು ಸಹಜ. ಶಿಫ್ಟ್‌ನಲ್ಲಿ ಕೆಲಸ ಮಾಡುವಾಗ ಮದುವೆಗೆ ಮೊದಲು ಏನೂ ಅನಿಸುವುದಿಲ್ಲ, ಆದರೆ ಮದುವೆಯ ನಂತರ ಕೆಲಸ ಹಾಗೂ ಜೀವನ ಬ್ಯಾಲೆನ್ಸ್‌ ಮಾಡುವುದೇ ಒಂದು ಸವಾಲು ಆಗಿರುತ್ತದೆ. ಅದರಲ್ಲೂ ಇಬ್ಬರು ಹೊರಗಡೆ ದುಡಿಯುತ್ತಿದ್ದರೆ ಹೆಂಡತಿ ಮನೆಗೆ ಬರುವಾಗ ಗಂಡ ಇರಲ್ಲ, ಗಂಡ ಮನೆಗೆ ಬರುವಾಗ ಹೆಂಡತಿ ಇರಲ್ಲ, ಇಬ್ಬರು ಭೇಟಿಯಾಗಲು ವೀಕೆಂಡ್‌ ಬರುವುದನ್ನೇ ಕಾಯಬೇಕು. ಇನ್ನು ಕೆಲವರಿಗೆ ಒಬ್ಬರಿಗೆ ರಜೆ ಇರುವಾಗ, ಮತ್ತೊಬ್ಬರಿಗೆ ಇರುವುದಿಲ್ಲ, ಆಗ ಇಬ್ಬರು ಕೂಡಿ ಹೊರಗಡೆ ಹೋಗುವುದು, ಶಾಪಿಂಗ್‌ ಮಾಡುವುದು ಇವೆಲ್ಲಾ ತುಂಬಾ ಅಪರೂಪವಾಗುವುದು. ಈ ರೀತಿ ಆಗುತ್ತಿದ್ದರೆ ಅದರ ಪರಿಣಾಮ ದಾಂಪತ್ಯ ಜೀವನದ ಮೇಲೂ ಬೀಳಬಹುದು.

Working In different Shift Couple

ಕೆಲಸ-ಕೆಲಸ ಅಂತ ಸಂಗಾತಿಗೆ ಸಮಯ ಕೊಡದಿದ್ದರೆ ಅದು ಅವರ ಅಸಮಧಾನಕ್ಕೆ ಕಾರಣವಾಗಬಹುದು. ಇದರಿಂದ ದಾಂಪತ್ಯದಲ್ಲಿ ವಿರಸ ಮೂಡುವುದು, ಕೆಲವೊಮ್ಮೆ ಸಂಗಾತಿಯ ಅನೈತಿಕ ಸಂಬಂಧಕ್ಕೆ ಇದು ಕೂಡ ಒಂದು ಕಾರಣವಾಗಿರುವ ಎಷ್ಟೋ ಉದಾಹರಣೆಗಳಿವೆ. ನಾವು ದುಡಿಯುವುದೇ ನಮಗೋಸ್ಕರ, ನಮ್ಮ ಕುಟುಂಬದವರಿಗೋಸ್ಕರ ಅಂದ ಮೇಲೆ ಅವರು ಖುಷಿಯಾಗಿರಬೇಕು ಅಲ್ಲವೇ, ಯಾವುದೇ ಶಿಫ್ಟ್‌ ಆಗಿರಲಿ ಕುಟುಂಬದವರೊಂದಿಗೆ ಒಂದಿಷ್ಟು ಸಮಯ ಕಳೆಯಬೇಕು. ಇಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ. ಇವುಗಳನ್ನು ಪಾಲಿಸಿದರೆ ನಿಮ್ಮ ಬ್ಯುಸಿ ವರ್ಕಿಂಗ್‌ ಶೆಡ್ಯೂಲ್‌ ನಡುವೆಯೂ ನಿಮ್ಮ ಸುಂದರ ದಾಂಪತ್ಯ ಜೀವನವನ್ನು ಮತ್ತಷ್ಟು ಸುಂದರವಾಗಿ ಇಟ್ಟುಕೊಳ್ಳಬಹುದು.

1. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡಿ

1. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡಿ

ದಿನದ 24 ಗಂಟೆಯೂ ಕೆಲಸ, ಬಡ್ತಿ ಅಂತ ತಲೆ ಕೆಡಿಸಿಕೊಳ್ಳದೆ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಬೇರೆ-ಬೇರೆ ಶಿಫ್ಟ್‌ನಲ್ಲಿದ್ದಾಗ ಸಮಯ ಸಿಗುವುದಿಲ್ಲ, ಆದ್ದರಿಂದ ಸಿಕ್ಕ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆಯಿರಿ. ಇಬ್ಬರು ಸೇರಿ ಔಟಿಂಗ್‌ ಹೋಗುವುದು, ಇಲ್ಲಾ ಮನೆಯಲ್ಲೇ ಒಳ್ಳೆಯ ಅಡುಗೆ ಮಾಡಿ ಸವಿಯುವುದು, ಇಬ್ಬರು ಜತೆಯಲ್ಲಿ ಕುಳಿತು ರೊಮ್ಯಾಂಟಿಕ್‌ ಸಂಗೀತ ಕೇಳುವುದು, ಸಿನಿಮಾ ನೋಡುವುದು ಹೀಗೆ ನಿಮಗೆ ಯಾವುದು ಖುಷಿಯಾಗುತ್ತೋ ಅದನ್ನು ಮಾಡಿ.

ಇನ್ನು ಒಂದು ವಿಷಯ, ಇಬ್ಬರು ಸಿಗುವುದೇ ಅಪರೂಪವಾಗಿರುವಾಗ ಇಬ್ಬರು ಜತೆಯಾಗಿದ್ದಾಗ ನಿಮ್ಮ ಮೊಬೈಲ್‌ ಫೋನ್‌ಗಳಿಗೆ ವಿಶ್ರಾಂತಿ ನೀಡಿ. ಇಬ್ಬರು ಕೂತು ಮಾತನಾಡುವುದಕ್ಕಿಂತ ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಿದ್ದರೆ ಅದು ನಿಮ್ಮ ಸಂಗಾತಿಯ ಅಸಮಧಾನಕ್ಕೆ ಕಾರಣವಾಗಬಹುದು, ಇದೇ ಕಾರಣಕ್ಕೆ ಸಂತೋಷದಿಂದ ಕಳೆಯಬೇಕಿದ್ದ ದಿನ, ಜಗಳದಲ್ಲಿ ವ್ಯರ್ಥವಾಗಬಹುದು.

ದಂಪತಿಯಲ್ಲಿ ಒಬ್ಬರು ಬೆಳಗ್ಗಿನ ಪಾಳಿ ಮತ್ತೊಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ದಿನದ ಒಂದು ತಾಸಾದರೂ ಜತೆಗೆ ಕಳೆಯಲು ಸಮಯ ಹೊಂದಿಸಿ.

ಇನ್ನು ಹೆಂಡತಿ ಮನೆಯಲ್ಲಿದ್ದು ಗಂಡ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಗಂಡ ತನ್ನ ಹೆಂಡತಿಯ ಮನಸ್ಥಿತಿ ಅರಿಯಲು ಪ್ರಯತ್ನಿಸಬೇಕು. ರಾತ್ರಿ ಕೆಲಸ, ಹಗಲು ಬಂದು ನಿದ್ದೆ ಮಾಡುವುದೇ ಜೀವನವಾದರೆ ಅವರಿಗೂ ಜೀವನ ಬೋರ್‌ ಅನಿಸಲಿ ಶುರುವಾಗುವುದು. ನಿದ್ದೆ ಅವಶ್ಯಕವಾಗಿರುವುದರಿಂದ ಹೆಂಡತಿಗಾಗಿ ಒಂದಿಷ್ಟು ಸಮಯ ಮೀಸಲಿಡಿ. ಗಂಡ ತನ್ನ ಬೇಕು ಬೇಡಗಳನ್ನು ಅರಿತುಕೊಳ್ಳುತ್ತಿದ್ದಾನೆ ಎಂದು ಅನಿಸಿದರೆ ಆಕೆಗೂ ತುಂಬಾ ಖುಷಿಯಾಗುವುದು, ನಿಮ್ಮ ಮೇಲಿನ ಪ್ರೀತಿ ಹೆಚ್ಚುವುದು.

2. ಕೆಲಸದ ಜಾಗದಲ್ಲಿ ಬಿಡುವಿನ ವೇಳೆಯಲ್ಲಿ ಕರೆ ಮಾಡಿ

2. ಕೆಲಸದ ಜಾಗದಲ್ಲಿ ಬಿಡುವಿನ ವೇಳೆಯಲ್ಲಿ ಕರೆ ಮಾಡಿ

ಕೆಲಸದ ಜಾಗದಲ್ಲಿ ಟೀ ಹಾಗೂ ಊಟಕ್ಕೆ ಬ್ರೇಕ್‌ ಇದ್ದೇ ಇರುತ್ತದೆ. ಈ ಬ್ರೇಕ್‌ನಲ್ಲಿ ಸಂಗಾತಿಗೆ ಕರೆ ಮಾಡಿ ಮಾತನಾಡಿ. ನಿಮ್ಮ ಪ್ರೀತಿಯ ಸಂದೇಶಗಳನ್ನು ಮೆಸೇಜ್‌ ರೂಪದಲ್ಲಿ ಕಳುಹಿಸಿ. ಹೀಗೆ ಮಾಡುವುದರಿಂದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಒಂದು ನಿಮಿಷ ಮಾತನಾಡಿದರೂ ನಿಮ್ಮ ಮಾತುಗಳಲ್ಲಿ ಪ್ರೀತಿ ತುಂಬಿರಲಿ. ನೀವು ಹೊರಡುವ ಹೊತ್ತಿನಲ್ಲಿ ಅವರು ಏನೋ ಹೇಳಲು ಬಂದಿರುತ್ತಾರೆ, ಆದರೆ ಅದನ್ನು ಕೇಳಲು ನಿಮಗೆ ಪುರುಸೊತ್ತು ಇರುವುದಿಲ್ಲ, ಆದರೆ ಆಫೀಸ್‌ಗೆ ಬಂದ ಮೇಲೆ ಅವರು ಏನು ಹೇಳಲು ಬಯಸಿದ್ದು ಅಂತ ಕೇಳಿ ತಿಳಿದುಕೊಳ್ಳಿ. ನಿವು ಕೆಲಸದ ಬ್ಯುಸಿಯಲ್ಲಿ ಅವರ ಜತೆ ಸಮಯ ಕಳೆಯದಿದ್ದರೂ ಅವರಿಗೆ ನೀವು ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಅನಿಸಬಾರದು ನೋಡಿ.

3. ಆಹಾರವನ್ನು ಜತೆಯಾಗಿ ತೆಗೆದುಕೊಳ್ಳಿ

3. ಆಹಾರವನ್ನು ಜತೆಯಾಗಿ ತೆಗೆದುಕೊಳ್ಳಿ

ದಿನದಲ್ಲಿ ಯಾವುದಾದರೂ ಒಂದು ಹೊತ್ತು ಆಹಾರವನ್ನು ಜತೆಯಾಗಿ ತೆಗೆದುಕೊಳ್ಳಿ. ಅದೂ ಸಾಧ್ಯವಾಗದಿದ್ದಲ್ಲಿ ವಾರದಲ್ಲಿ 2-3 ಬಾರಿಯಾದರೂ ಜತೆಯಲ್ಲಿ ಕುಳಿತು ಆಹಾರ ಸೇವಿಸಿ. ವೀಕೆಂಡ್‌ನಲ್ಲಿ ಹೋಟೆಲ್, ರೆಸ್ಟೋರೆಂಟ್‌ ಅಂತ ಹೋಗಿ ಇಷ್ಟದ ಆಹಾರವನ್ನು ಸೇವಿಸಿ. ಸಂಗಾತಿಗಾಗಿ ಅವರ ಇಷ್ಟದ ಆಹಾರವನ್ನು ತಯಾರಿಸಿ ಸರ್‌ಫ್ರೈಸ್‌ ನೀಡಿ. ಇನ್ನು ನೀವಿಬ್ಬರು ಜತೆಯಾಗಿ ಸಿಗುವ ಸಮಯದಲ್ಲಿ ಆಫೀಸ್‌ ಒತ್ತಡದ ಬಗ್ಗೆ ಮಾತನಾಡಬೇಡಿ. ಇಬ್ಬರು ಕುಳಿತು ನಿಮ್ಮ ಬದುಕು, ಮಕ್ಕಳ ಬಗ್ಗೆ ಮಾತನಾಡಿ. ಸಿಗುವ ಸಮಯವನ್ನು ಖುಷಿಯಾಗಿ ಕಳೆಯಿರಿ. ಈ ರೀತಿ ಮಾಡುವುದರಿಂದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು.

4. ಮುಖ್ಯವಾದ ವಿಷಯಗಳನ್ನು ಮಾತನಾಡಲು ಸಮಯವನ್ನು ನಿಗದಿ ಪಡಿಸಿ

4. ಮುಖ್ಯವಾದ ವಿಷಯಗಳನ್ನು ಮಾತನಾಡಲು ಸಮಯವನ್ನು ನಿಗದಿ ಪಡಿಸಿ

ಕೆಲವೊಮ್ಮೆ ಯಾವುದೋ ಮುಖ್ಯವಾದ ವಿಷಯ ಮಾತನಾಡಬೇಕೆಂದು ಬಯಸಿರುತ್ತೀರಿ, ಇದನ್ನು ಅವರಿಗೆ ಹೇಳಿ ಒಂದು ಸಮಯನಿಗದಿ ಪಡಿಸಿ, ಆ ವಿಷಯವನ್ನು ಮಾತನಾಡಿ. ಊಟ ಮಾಡುವಾಗ, ಜತೆಯಲ್ಲಿ ಮಲಗುವಾಗ ಅಂತಹ ವಿಷಯಗಳ ಪ್ರಸ್ತಾಪ ಬೇಡ, ಕೆಲವೊಂದು ವಿಷಯಗಳನ್ನು ಹೇಳುವಾಗ ಚರ್ಚೆ ಬರಬಹುದು, ಅದರಿಂದ ನಿಮ್ಮ ಸಂಗಾತಿಗೆ ಅಸಮಧಾನ ಉಂಟಾಗಬಹುದು, ಇಲ್ಲ ನೀವು ಹೇಳುವ ವಿಷಯವನ್ನು ಅವರು ಒಪ್ಪದೇ ಹೋಗಬಹುದು, ಆದ್ದರಿಂದ ಒಬ್ಬರು ಮಾತನಾಡಿ ನಿರ್ಧಾರ ತೆಗೆದುಕೊಳ್ಳುವ ವಿಷಯಕ್ಕೆ ಒಂದು ಸಮಯ ಅಂತ ನಿಗದಿ ಮಾಡಿ ಮಾತನಾಡಿದರೆ ಒಳ್ಳೆಯದು.

5. ನಿಮ್ಮದೇ ಖಾಸಗಿ ಕ್ಷಣಗಳನ್ನು ಕಳೆಯಿರಿ

5. ನಿಮ್ಮದೇ ಖಾಸಗಿ ಕ್ಷಣಗಳನ್ನು ಕಳೆಯಿರಿ

ಕೆಲಸದ ಒತ್ತಡ, ಹೆಚ್ಚಿರುವ ಜವಾಬ್ದಾರಿಗಳ ನಡುವೆ ಖಾಸಗಿ ಕ್ಷಣಗಳನ್ನು ಕಳೆಯಲು ಸಮಯ ಹೆಚ್ಚು ಸಿಗದೇ ಹೋಗಬಹುದು. ಆದರೆ ಸಮಯ ಸಿಕ್ಕಾಗ ರೊಮ್ಯಾಂಟಿಕ್ ಆಗಿ ಕಳೆಯಿರಿ. ದಾಂಪತ್ಯ ಜೀವನದಲ್ಲಿ ಲೈಂಗಿಕ ತೃಪ್ತಿಯೂ ಬಹುಮುಖ್ಯ. ಈ ವಿಷಯದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಅಸಮಧಾನವಿದ್ದರೂ ಅದರಿಂದ ದಾಂಪತ್ಯದಲ್ಲಿ ಜಗಳ, ವಿರಸ ಬರಬಹುದು.

ಮದುವೆಯಾದ ಹೊಸತರಲ್ಲಿ ಮಾತ್ರ ಹನಿಮೂನ್ ಟ್ರಿಪ್‌ ಅಲ್ಲ, ನಂತರವೂ ಅನೇಕ ಹನಿಮೂನ್‌ ಟ್ರಿಪ್‌ಗಳಿಗೆ ಹೋಗಬಹುದು, ಟ್ರಿಪ್‌ ಹೋದಾಗ ಆ ಟ್ರಿಪ್ ಹನಿಮೂನ್‌ ಟ್ರಿಪ್‌ನಂತೆ ಕಳೆಯುವ ಮನಸ್ಸು ನೀವು ಮಾಡಬೇಕಷ್ಟೆ. ವಾರಾಂತ್ಯದ ದಿನಗಳಲ್ಲಿ ಖಾಸಗಿ ಕ್ಷಣಗಳನ್ನು ರೊಮ್ಯಾಂಟಿಕ್ ಆಗಿ ಕಳೆಯಲು ಪ್ಲಾನ್ ಮಾಡಿ.

6. ಕೆಲಸದ ನಡುವೆ ಚಿಕ್ಕ ಬ್ರೇಕ್ ತೆಗೆಯಿರಿ

6. ಕೆಲಸದ ನಡುವೆ ಚಿಕ್ಕ ಬ್ರೇಕ್ ತೆಗೆಯಿರಿ

ಆಫೀಸ್‌ನಲ್ಲಿ ಟಾರ್ಗೆಟ್‌ ಎನ್ನುವುದು ಹನುಮಂತನ ಬಾಲದ ರೀತಿ ಬೆಳೆಯುತ್ತಾ ಇರುತ್ತದೆ, ಕೆಲಸದ ಒತ್ತಡದಲ್ಲಿ ಕಳೆದು ಹೋಗದೆ ಜೀವನದಲ್ಲಿ ಉತ್ಸಾಹ ತಂದುಕೊಳ್ಳಲು ಒಂದು ಬ್ರೇಕ್ ಅವಶ್ಯಕ. ನಿಮ್ಮ ಸಂಗಾತಿಗೂ ಅದೇ ಸಮಯದಲ್ಲಿ ಬ್ರೇಕ್ ತೆಗೆಯಲು ಹೇಳಿ, ಇಬ್ಬರು ಇಷ್ಟಬಂದ ಜಾಗಗಳಿಗೆ ಹೋಗಿ ಬನ್ನಿ, ನಿಮ್ಮ ಸಂಗಾತಿ ಜತೆ ಹೆಚ್ಚಿನ ಸಮಯವನ್ನು ಕಳೆಯಿರಿ. ಇದರಿಂದ ನೀವಿಬ್ಬರು ಖುಷಿಯಾಗುವಿರಿ. ಬ್ರೇಕ್‌ ಬಳಿಕ ಕೆಲಸಕ್ಕೆ ಕಂಪನಿ ನಿಡಿದ ಟಾರ್ಗೆಟ್‌ ಮುಟ್ಟುವ ಉತ್ಸಾಹದಲ್ಲಿ ಬರುವಿರಿ ನೋಡಿ.

7. ಸಂಗಾತಿಯನ್ನು ಬೆಂಬಲಿಸಿ

7. ಸಂಗಾತಿಯನ್ನು ಬೆಂಬಲಿಸಿ

ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತರೆ ಮಾತ್ರ ಆ ದಾಂಪತ್ಯ ಸುಂದರವಾಗಿರಲು ಸಾಧ್ಯ. ಹೆಂಡತಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಮಾಡಿದರೆ ಆಕೆಗೂ ಸ್ವಲ್ಪ ವಿಶ್ರಾಂತಿ ಸಿಗುವುದು, ಇದರಿಂದ ಇಬ್ಬರು ಜತೆಯಾಗಿ ಕಳೆಯಲು ಹೆಚ್ಚಿನ ಸಮಯ ಸಿಗುವುದು. ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಗೌರವಿಸಬೇಕು, ದಾಂಪತ್ಯದಲ್ಲಿ ಸರಿ-ತಪ್ಪು ಎನ್ನುವುದಕ್ಕಿಂತ ಹೊಂದಾಣಿಕೆ ಮುಖ್ಯ. ಹೊಂದಿಕೊಂಡು ಬಾಳಿದರೆ ಸ್ವರ್ಗಕ್ಕೆ ಮೂರೇ ಗೇಣು ನೋಡಿ!

English summary

Relationship Tips For Working In different Shift Couple To Save Their Marital Life

Those couple who are working in different shift will not get much time spend together. But there are certain ways in which you can save your relationship from the adverse effects of different work shifts. Read on.
Story first published: Monday, November 11, 2019, 17:29 [IST]
X
Desktop Bottom Promotion