For Quick Alerts
ALLOW NOTIFICATIONS  
For Daily Alerts

ಇತ್ತೀಚೆಗೆ ಸೆಕ್ಸ್‌ನಲ್ಲಿ ಆಸಕ್ತಿ ಕುಂದುತ್ತಿದೆಯೇ? ಈ ಕಾರಣಗಳಿರಬಹುದು

By Manju
|

ಮಧುರ ದಾಂಪತ್ಯಕ್ಕೆ ಆರೋಗ್ಯಕರವಾದ ಸೆಕ್ಸ್ ಜೀವನ ಕೂಡ ಅಷ್ಟೇ ಮುಖ್ಯ. ಸೆಕ್ಸ್ ಬರೀ ದೈಹಿಕ ಸುಖ ನೀಡುವುದು ಮಾತ್ರವಲ್ಲ, ಗಂಡ-ಹೆಂಡತಿ ನಡುವಿನ ಭಾವನಾತ್ಮಕವಾದ ಬೆಸುಗೆಯನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಎಷ್ಟೋ ದಾಂಪತ್ಯ ಕಲಹಕ್ಕೆ, ಅನೈತಿಕ ಸಂಬಂಧಕ್ಕೆ ಗಂಡ-ಹೆಂಡತಿ ನಡುವಿನ ಸೆಕ್ಸ್ ಬದುಕು ಚೆನ್ನಾಗಿಲ್ಲದಿರುವುದೇ ಪ್ರಮುಖ ಕಾರಣವಾಗಿದೆ.

ವಯಸ್ಸಾಗುತ್ತಿದ್ದಂತೆ ಸೆಕ್ಸ್ ಬದುಕಿನಲ್ಲಿ ಆಸಕ್ತಿ ಕುಸಿಯುವುದು ಸಹಜ, ಆದರೆ ಯೌವನ ಪ್ರಾಯದಲ್ಲಿಯೇ ಇದರ ಬಗ್ಗೆ ಆಸಕ್ತಿ ಕಡಿಮೆಯಾಗಲು ಅನೇಕ ಕಾರಣಗಳಿವೆ. ಕೆಲವರಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಲೈಂಗಿಕ ಆಸಕ್ತಿ ಕುಂದಿದರೆ, ಇನ್ನು ಕೆಲವು ಕಾರಣಗಳಿಂದಲೂ ನಿಮಗೆ ಸಂಗಾತಿ ಜೊತೆ ಸೇರಲು ಮೂಡ್‌ ಬರುವುದಿಲ್ಲ.

ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣಗಳು ಯಾವುವು ಎಂಬುವುದರ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

1. ಅತ್ಯಧಿಕ ಮಾನಸಿಕ ಒತ್ತಡ

1. ಅತ್ಯಧಿಕ ಮಾನಸಿಕ ಒತ್ತಡ

ಮಾನಸಿಕ ಒತ್ತಡ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲಿಕೆ ಉಂಟು ಮಾಡುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಮಾನಸಿಕ ಒತ್ತಡ ಒಂದು ಕಾರಣವಾಗಿದೆ. ತುಂಬಾ ಮಾನಸಿಕ ಒತ್ತಡವಿದ್ದರೆ ಸೆಕ್ಸ್‌ನಲ್ಲಿ ಆಸಕ್ತಿ ಮೂಡುವುದಿಲ್ಲ. ಪುರುಷರಲ್ಲಿ ಶೀಘ್ರ ಸ್ಖಲನ ಸಮಸ್ಯೆ ಕಂಡು ಬರುವುದು. ಮಾನಸಿಕ ಸಮಸ್ಯೆಯಿದ್ದರೆ ಮೊದಲು ಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ಆಗ ಮಾತ್ರ ನಿಮ್ಮ ಮನಸ್ಸು ಚೆನ್ನಾಗಿರುತ್ತದೆ, ಸಂಗಾತಿಯೊಂದಿಗೆ ಮಧುರವಾದ ಕ್ಷಣಗಳನ್ನು ಕಳೆಯಬಹುದು.

2. ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ

2. ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ

ಗರ್ಭನಿರೋಧಕ ಮಾತ್ರೆಯ ಪ್ರಭಾವ ವ್ಯಕ್ತಿಯಿಂದ-ವ್ಯಕ್ತಿಗೆ ಭಿನ್ನವಾಗಿರುತ್ತದೆ. ಗರ್ಭನಿರೋಧಕ ಮಾತ್ರೆ ತುಂಬಾ ಸಮಯದಿಂದ ತೆಗೆದುಕೊಳ್ಳುತ್ತಿದ್ದರೆ ಇದು ಲೈಂಗಿಕ ಆಸಕ್ತಿ ಕಡಿಮೆ ಮಾಡುವುದು. ಗರ್ಭನಿರೋಧಕ ಮಾತ್ರೆ ಟೆಸ್ಟೋಸ್ಟಿರೋನ್ ಉತ್ಪತ್ತಿ ಕಡಿಮೆ ಮಾಡುವುದರಿಂದ ಲೈಂಗಿಕ ಆಸಕ್ತಿಯೂ ಕಡಿಮೆಯಾಗುವುದು. ನೀವು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆಯಾಗಿದ್ದರೆ ಈ ಕುರಿತು ಲೈಂಗಿಕ ತಜ್ಞರಲ್ಲಿ ಮಾತನಾಡಿ ಸೂಕ್ತ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.

3. ಅಲರ್ಜಿ, ಶೀತ, ಕೆಮ್ಮಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ

3. ಅಲರ್ಜಿ, ಶೀತ, ಕೆಮ್ಮಿಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ

ಅಲರ್ಜಿ, ಶೀತ, ಕೆಮ್ಮು ಈ ರೀತಿ ಸಮಸ್ಯೆಗೆ ತೆಗೆದುಕೊಳ್ಖುವ ಔಷಧಿಗಳು ಲೈಂಗಿಕ ಆಸಕ್ತಿ ಕಡಿಮೆ ಮಾಡುತ್ತದೆ. ಈ ರೀತಿಯ ಔಷಧಿಗಳು ಮಹಿಳೆಯರಲ್ಲಿ ಜನನೇಂದ್ರೀಯ ಡ್ರೈಯಾಗುವಂತೆ ಮಾಡುವುದು. ಒಂದು ವೇಳೆ ಈ ರೀತಿ ಉಂಟಾದಾಗ ನೀರು ಅಥವಾ ಸಿಲಿಕೋನ್ ಲ್ಯೂಬ್ಸ್ ಬಳಸಬಹುದು.

4. ನೋವು ಉಂಟಾಗುವುದಾದರೆ

4. ನೋವು ಉಂಟಾಗುವುದಾದರೆ

ಕೆಲವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಾಗ ತುಂಬಾ ನೋವು ಉಂಟಾಗುತ್ತದೆ. ಇದರಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಮೂಡುವುದಿಲ್ಲ. ಮೂತ್ರ ಸೋಂಕು ಅಥವಾ ಜನನೇಂದ್ರೀಯ ಸಂಕುಚಿತಗೊಳ್ಳುವುದು ಈ ರೀತಿ ಉಂಟಾದಾಗ ನೋವು ಉಂಟಾಗುವುದು. ಈ ರೀತಿಯ ಸಮಸ್ಯೆ ಇರುವವರು ಲೈಂಗಿಕ ತಜ್ಞರ ಭೇಟಿಯಾದರೆ ಸೂಕ್ತ ಪರಿಹಾರ ಸಿಗುವುದು.

5. ನಿದ್ರೆಗೆ ಅಡಚಣೆ

5. ನಿದ್ರೆಗೆ ಅಡಚಣೆ

ತಡರಾತ್ರಿಯವರೆಗೆ ಮೊಬೈಲ್‌ ಆಡುತ್ತಾ ಕೂರುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ದಂಪತಿಯಲ್ಲಿ ಯಾರಿಗಾದರು ಒಬ್ಬರಿಗೆ ಮೊಬೈಲ್ ಗೀಳು ಇದ್ದರೆ ಅದು ಕೂಡ ಸೆಕ್ಸ್‌ ಲೈಫ್‌ಗೆ ಬಾಧಿಸುತ್ತದೆ. ಸಂಗಾತಿ ತುಂಬಾ ಹೊತ್ತು ಮೊಬೈಲ್‌ನಲ್ಲಿ ಕಳೆಯುತ್ತಿದ್ದರೆ ಇದರಿಂದ ಅಸಮಧಾನ ಉಂಟಾಗುವುದು, ಅವರು ಸಮೀಪ ಬರುವಷ್ಟರಲ್ಲಿ ಇವರು ನಿದ್ದೆಗೆ ಜಾರಿ ಇರುತ್ತಾರೆ. ಈ ಕಾರಣದಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಮೂಡುವುದಿಲ್ಲ.

ಸಲಹೆ:

ಬೆಡ್‌ರೂಂ ಅನುಭವ ರೊಮ್ಯಾಂಟಿಕ್ ಆಗಿರಬೇಕೆಂದು ಬಯಸುವುದಾದರೆ ಗಂಡ-ಹೆಂಡತಿ ಇಬ್ಬರಲ್ಲೂ ಆಸಕ್ತಿ ಇರಬೇಕು, ನಿಮ್ಮ ಜೀವನದಲ್ಲಿ ಇತ್ತೀಚೆಗೆ ಅದರ ಕೊರತೆ ಕಂಡು ಬಂದರೆ ಈ ಕುರಿತು ಸಂಗಾತಿ ಜೊತೆ ನೇರವಾಗಿ ಮಾತನಾಡುವುದು ಒಳ್ಳೆಯದು.

English summary

Reasons Why You Don't Feel Like Having Sex These Days in Kannada

Here are reasons why you are not feeling to have sex these days,
X
Desktop Bottom Promotion