For Quick Alerts
ALLOW NOTIFICATIONS  
For Daily Alerts

ಮಹಿಳೆಯರು ವಿಚ್ಛೇದನ ಬಯಸಲು ಈ 4 ಪ್ರಮುಖ ಕಾರಣಗಳಂತೆ!

|

ಗಂಡ-ಹೆಂಡತಿಯರೆಂಬ ಎರಡೂ ಚಕ್ರ ಒಟ್ಟಿಗೆ ಸೇರಿ ನಡೆದಾಗ ಬದುಕೆಂಬ ಬಂಡಿ ಸರಾಗವಾಗಿ ಸಾಗುತ್ತದೆ. ಇದರಲ್ಲಿ ಯಾವುದೇ ಲೋಪಗಳಾದರೂ ಅದು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ವಿವಾಹಿತ ಪುರುಷರು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೆಂಡತಿಯ ಕೆಲಸ ಎಂದು ಭಾವಿಸುತ್ತಾರೆ. ಇದಲ್ಲದೆ, ಅವರು ತಮ್ಮ ಹೆಂಡತಿಯನ್ನು ಯಾವುದೇ ಸಮಯದಲ್ಲಿ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎಂಬ ಮನೋಭಾವನೆ ಹೊಂದಿರುತ್ತಾರೆ. ಆದರೆ ಈ ಮನಸ್ಥಿತಿಯಿಂದ ಸಂಬಂಧ ಮುರಿದು ಬೀಳುವ ಹಂತ ತಲುಪುವುದು ಎಂಬುದು ಆವರಿಗೆ ಅರಿವಿರುವುದಿಲ್ಲ.

ಮಹಿಳೆ ತನ್ನ ಪತಿಗೆ ವಿಚ್ಛೇದನ ನೀಡಬೇಕೆಂದು ನಿರ್ಧರಿಸುವುದರ ಹಿಂದೆ ಹಲವು ಕಾರಣಗಳಿರಬಹುದು. ವಿಚ್ಛೇದನದ ನಿರ್ಧಾರವನ್ನು ತೆಗೆದುಕೊಳ್ಳುವುದು ಯಾವುದೇ ಹೆಂಡತಿಗೆ ಸುಲಭವಲ್ಲ, ಆದರೆ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಆಕೆ ಮನಸ್ಸು ಮಾಡಿದ್ದಾಳೆಂದರೆ, ಅದಕ್ಕೆ ಕೆಲವು ಬಲವಾದ ಕಾರಣಗಳಿರುತ್ತವೆ. ಅಂತಹ ಕಾರಣಗಳ ಬಗ್ಗೆ ನಾವಿಂದು ಹೇಳಲಿದ್ದೇವೆ.

ಮಹಿಳೆ ವಿಚ್ಛೇದನ ನೀಡಲು ಪ್ರಮುಖ ಕಾರಣಗಳನ್ನ ಈ ಕೆಳಗೆ ನೀಡಲಾಗಿದೆ:

ದಾಂಪತ್ಯದಲ್ಲಿ ದ್ರೋಹ ಕಂಡುಬಂದರೆ:

ದಾಂಪತ್ಯದಲ್ಲಿ ದ್ರೋಹ ಕಂಡುಬಂದರೆ:

ಸಂಬಂಧ ಎಷ್ಟೇ ಗಟ್ಟಿಯಾಗಿದ್ದರೂ ಮೋಸ ಹೋದರೆ ಆ ಸಂಬಂಧವೇ ಇಲ್ಲವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀತಿಯ ವಿಘಟನೆಗೆ ಇದೇ ಬಲವಾದ ಕಾರಣ. ಆದರೆ, ಮದುವೆಯ ನಂತರವೂ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾದರೆ, ಅವರ ಸಂಬಂಧವು ಸಂಪೂರ್ಣವಾಗಿ ಕೊನೆಗೊಳ್ಳುವ ಸಾಧ್ಯತೆಯಿದೆ. ಯಾವುದೇ ಹೆಂಡತಿಯು ದಾಂಪತ್ಯದಲ್ಲಿ ದ್ರೋಹವನ್ನು ಸಹಿಸುವುದಿಲ್ಲ, ತನ್ನ ಗಂಡ ಬೇರೆಯವರೊಂದಿಗೆ ಸಂಬಂಧ ಹೊಂದುವುದನ್ನು ಮನ್ನಿಸುವುದಿಲ್ಲ. ಇದರಿಂದಾಗಿ ಅವಳು ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ.

ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ:

ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ:

ಸಂಬಂಧದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನತೆಗೆ ಅರ್ಹರು, ಆದರೆ ಸಮಾಜದ ಸಂಪ್ರದಾಯವಾದಿ ಚಿಂತನೆಯು ಅದನ್ನು ಇನ್ನೂ ಒಪ್ಪುವುದಿಲ್ಲ. ಒಬ್ಬ ಪತಿ ತನ್ನ ಹೆಂಡತಿಯನ್ನು ತನಗಿಂತ ಕೀಳು ಎಂದು ಪರಿಗಣಿಸಿದರೆ, ತನ್ನ ಸ್ವಾಭಿಮಾನಕ್ಕೆ ನಿರಂತರವಾಗಿ ಘಾಸಿಯಾಗುತ್ತಿದ್ದರೆ, ಅದನ್ನು ಅವಳು ಸಹಿಸಳು. ಇದರಿಂದ ಆಕೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಸಾವಿರಾರು ಬಾರಿ ಪ್ರಯತ್ನ ಪಟ್ಟರೂ ಪರಿಸ್ಥಿತಿ ಸುಧಾರಿಸದಿದ್ದಾಗ ಆಕೆ ವಿಚ್ಛೇದನದ ನಿರ್ಧಾರಕ್ಕೆ ಬಲವಂತ ಪಡಿಸುವ ಸಂದರ್ಭ ಬರುತ್ತದೆ.

ಕನಸುಗಳನ್ನು ನುಚ್ಚು ನೂರು ಮಾಡಿದರೆ:

ಕನಸುಗಳನ್ನು ನುಚ್ಚು ನೂರು ಮಾಡಿದರೆ:

ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಮದುವೆಯ ನಂತರವೂ ತಮ್ಮ ವೃತ್ತಿಯನ್ನು ಮುಂದುವರಿಸಲು ಬಯಸುತ್ತಾರೆ. ಕೆಲಸದ ಜೊತೆಗೆ ಮನೆಯನ್ನು ನಿಭಾಯಿಸುವ ಕೌಶಲವನ್ನೂ ಕಲಿಯುತ್ತಾರೆ. ಆದರೆ ಆಕೆಯ ಅತ್ತೆ ಅಥವಾ ಪತಿ ತನ್ನ ಕನಸಿಗೆ ಅಡ್ಡಿಪಡಿಸಿದಾಗ, ಹೆಂಡತಿಯರು ಸವಾಲಾಗಿ ನಿಲ್ಲುತ್ತಾರೆ. ಆಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ವೃತ್ತಿಜೀವನದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ, ಇದರಲ್ಲಿ ತಪ್ಪೇನೂ ಇಲ್ಲ. ಸ್ವತಂತ್ರ ಮಹಿಳೆಯಾಗುವುದರಲ್ಲಿ ಯಾವುದೇ ಅಪರಾಧವಿಲ್ಲ, ನಿಮ್ಮ ಹೆಂಡತಿ ಕೆಲಸ ಮಾಡಿದರೆ ನೀವು ಹೆಮ್ಮೆಪಡಬೇಕು. ಆದರೆ ಅವಳಿಂದ ಅವನ ಕನಸುಗಳನ್ನು ಕಸಿದುಕೊಳ್ಳುವುದು ವಿಚ್ಛೇದನದಂತಹ ನಿರ್ಧಾರಕ್ಕೆ ಆಕೆಯನ್ನು ದೂಡುತ್ತದೆ.

ಮಾನಸಿಕವಾಗಿ ನಿಂದಿಸಿದರೆ:

ಮಾನಸಿಕವಾಗಿ ನಿಂದಿಸಿದರೆ:

ಮದುವೆಯ ನಂತರ ಹೆಣ್ಣಿನ ಹಲವು ಜವಾಬ್ದಾರಿಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಹೆಂಡತಿಯ ಮೇಲೆ ಮನೆಯ ಕೆಲಸದ ಒತ್ತಡವು ಅವಳನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸುತ್ತದೆ. ನಿಮ್ಮ ಕೆಲಸವನ್ನು ಹೆಂಡತಿಯೊಂದಿಗೆ ಸಮಾನವಾಗಿ ಹಂಚಿಕೊಳ್ಳಬೇಕು, ಇದರಿಂದ ಅವಳ ಹೊರೆ ಕಡಿಮೆಯಾಗಬಹುದು. ಆದರೆ ಮನೆಕೆಲಸ ಮಾಡುವುದನ್ನೇ ಸಣ್ಣದಾಗಿ ಪರಿಗಣಿಸುವ ಗಂಡಸರು ಪತ್ನಿಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿರುತ್ತಾರೆ. ಅದರ ಒಂದು ಫಲಿತಾಂಶ ವಿಚ್ಛೇದನದ ರೂಪದಲ್ಲಿ ಹೊರಬರುತ್ತದೆ.

English summary

Reasons Why Women File for Divorce in Kannada

Here we talking about Reasons Why Women File for Divorce in kannada, read on
X
Desktop Bottom Promotion