For Quick Alerts
ALLOW NOTIFICATIONS  
For Daily Alerts

ಸಂಗಾತಿ ಜೊತೆ ಮುನಿಸಿನಿಂದ ಮಾತು ಬಿಟ್ಟರೆ ಅಪಾಯ ಹೆಚ್ಚು, ಏಕೆ?

|

ಸಂಬಂಧದಲ್ಲಿ ಕೆಲವೊಂದು ವಿಷಯಗಳನ್ನು ಬಾಯಿ ಬಿಟ್ಟು ಹೇಳಿದರೆ ಚೆಂದ, ಇನ್ನು ಕೆಲವು ವಿಷಯಗಳನ್ನು ಬಾಯಿ ಬಿಡದೇ ಇದ್ದರೆ ಕ್ಷೇಮ... ಕೆಲವೊಂದು ವಿಷಯಗಳನ್ನು ನಾವೇನೂ ಹೇಳದೇ ಇದ್ದರೂ ಅವರಾಗಿ ಅರ್ಥೈಸಿಕೊಂಡು ಮಾಡಿದರೆ ಚೆನ್ನ.... ಅದು ಆಗದೇ ಇದ್ದರೆ ನಾವು ಹೇಳಿ ಅರ್ಥ ಮಾಡಿಸಿಕೊಳ್ಳುವುದು ಒಳ್ಳೆಯದು...

ಎಷ್ಟೋ ಬಾರಿ ನಾವು ಮೌನವಾಗಿ ಬಿಡುತ್ತೇವೆ... ಆದೆ ನಮ್ಮ ಆ ಮೌನವೇ ಮುಂದೆ ಜ್ವಾಲಾಮುಖಯಾಗಿ ಸಿಡಿಯಬಹುದು. ಹೌದು ತುಂಬಾ ಒಳ್ಳೆಯವರಾಗಲು ಅಥವಾ ಮಾತನಾಡಿ ಪ್ರಯೊಜನವಿಲ್ಲ ಎಂಬ ಕಾರಣಕ್ಕೆ , ಇಲ್ಲದಿದ್ದರೆ ನನ್ನ ಮೌನವನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಮೌನವಹಿಸುತ್ತೇವೆ.

ಮೌನ ಬಂಗಾರ ಮಾತು ಬೆಳ್ಳಿ ಅಂತಾರೆ... ಆದರೆ ಕೆಲವೊಂದು ಸಂದರ್ಭದಲ್ಲಿ ಮಾತು ಆಡದೇ ಹೋದರೆ ತುಂಬಾ ನಷ್ಟ ಎದುರಾಗಬಹುದು. ಆದ್ದರಿಂದ ಎಲ್ಲಾ ಸಂದರ್ಭಗಳಲ್ಲಿ ಮೌನವಾಗಿರಬೇಡಿ, ನಿಮ್ಮ ಮನಸ್ಸಿನ ಮಾತುಗಳನ್ನು, ಅನಿಸಿಕೆಗಳನ್ನು ಹೇಳಿಕೊಳ್ಳಿ. ಸಂಬಂಧದಲ್ಲಿ ಸೈಲೆಂಟ್‌ ಟ್ರೀಟ್‌ಮೆಂಟ್‌ ಏಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ ನೋಡಿ...

ಸಮಸ್ಯೆ ಬಗೆ ಹರಿಯುವುದಿಲ್ಲ

ಸಮಸ್ಯೆ ಬಗೆ ಹರಿಯುವುದಿಲ್ಲ

ಏನಾದರೂ ಸಮಸ್ಯೆಯಿದ್ದರೆ ಚರ್ಚೆ ಮಾಡುವುದು ಒಳ್ಳೆಯದು. ಮೌನವಾಗಿದ್ದರೆ ಏನು ಸಮಸ್ಯೆ ಇದೆಯೂ ಅದು ಬಗೆ ಹರಿಯದೇ ಹಾಗೆಯೇ ಉಳಿಯಬಹುದು. ಕೆಲವರು ಸಮಸ್ಯೆಯಿದ್ದಾಗ ತಮ್ಮ ಸಂಗಾತಿ ಜೊತೆ ಮಾತನಾಡುವುದೇ ನಿಲ್ಲಿಸುತ್ತಾರೆ...ಹೀಗೆ ಮಾಡಿದರೆ ಅವರಿಗೆ ನೀವು ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಅನಿಸಿ ನಿಮ್ಮಿಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಬಹುದು ಹೊರತು ಕಡಿಮೆಯಾಗುವುದಿಲ್ಲ. ಏನಾದರೂ ಭಿನ್ನಾಭಿಪ್ರಾಯವಿದ್ದರೆ ಆ ಕುರಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು, ಮೌನವಾಗಿ ಇದ್ದರೆ ನಿಮ್ಮ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಾಗುವುದಿಲ್ಲ.

ಎಲ್ಲಾ ಸಂದರ್ಭದಲ್ಲಿ ಸೈಲೆಂಟ್‌ ಟ್ರೀಟ್‌ಮೆಂಟ್‌ ಕೊಡಲು ಸಾಧ್ಯವಿಲ್ಲ

ಎಲ್ಲಾ ಸಂದರ್ಭದಲ್ಲಿ ಸೈಲೆಂಟ್‌ ಟ್ರೀಟ್‌ಮೆಂಟ್‌ ಕೊಡಲು ಸಾಧ್ಯವಿಲ್ಲ

ನೀವು ಪ್ರೀತಿಸುತ್ತಿರುವ ವ್ಯಕ್ತಿ ನಿರ್ಲಕ್ಷ್ಯ ತೋರುತ್ತಿದ್ದರೆ ಅದನ್ನು ಸಹಿಸಿಕೊಂಡು ಸುಮ್ಮನಿದ್ದರೆ ಅಥವಾ ಅವರ ನಡವಳಿಕೆಯಿಂದ ನಿಮಗೆ ನೋವಾಗುತ್ತಿದ್ದರೆ ಆ ಸಂದರ್ಭದಲ್ಲಿ ಮೌನವಹಿಸಿದರೆ ನಿಮ್ಮಷ್ಟು ಮುಠಾಳರು ಬೇರೆ ಯಾರೂ ಇರಲ್ಲ.. ಅಂಥ ಸಂದರ್ಭದಲ್ಲಿ ನೀವು ಮಾತನಾಡಿದರೆ ಮಾತ್ರ ಅದಕ್ಕೊಂದು ಪರಿಹಾರ ಕಂಡು ಕೊಳ್ಳಲು ಸಾಧ್ಯ.. ಮೌನವಹಿಸಿದರೆ ಅದು ತೀರದ ನೋವಾಗಿರುತ್ತೆ.

ಮೌನವಾಗಿದ್ದರೂ ಅಸಮಧಾನ ಹೊಗೆಯಾಡುತ್ತಾ ಇರುತ್ತದೆ

ಮೌನವಾಗಿದ್ದರೂ ಅಸಮಧಾನ ಹೊಗೆಯಾಡುತ್ತಾ ಇರುತ್ತದೆ

ನಿಮ್ಮ ಸಂಗಾತಿ ಬಗ್ಗೆ ನಿಮಗೇನಾದರೂ ಕೋಪ ಅಥವಾ ಅಸಮಧಾನವಿದ್ದರೆ ಅದು ಮೌನವಾಗಿರುವುದರಿಂದ ಕಡಿಮೆಯಾಗುವುದಿಲ್ಲ, ಬದಲಿಗೆ ಹೆಚ್ಚಾಗುವುದು. ನೀವು ವಿಚಿತ್ರವಾಗಿ ವರ್ತಿಸಲಾರಂಭಿಸುವಿರಿ, ನಿಮ್ಮ ವರ್ತನೆಯಿಂದ ಅವರಿಗೆ ಮತ್ತಷ್ಟು ಕಿರಿಕಿರಿಯಾಗಬಹುದು. ನಿಮಗೆ ಅಸಮಧಾನವಿದ್ದರೆ ಯಾವ ಕಾರಣಕ್ಕೆ ಎಂಬುವುದನ್ನು ಅವರಿಗೆ ಹೇಳಿ. ನೀವು ಹೇಳುವಾಗ ಅವರಿಗೆ ಕೋಪ ಬರಬಹುದು, ಆದರೂ ತೊಂದರೆಯಿಲ್ಲ, ಮಾತನಾಡಿ.. ಸ್ವಲ್ಪ ಜೋರು ಮಾತಾದರೂ ನಂತರ ತಣ್ಣಗಾದ ಎಲ್ಲವೂ ಸರಿಯಾಗುವುದು, ನಿಮ್ಮ ಮನಸ್ಸಿನ ಭಾರ ಕಡಿಮೆಯಾಗುವುದು.

ಸೈಲೆಂಟ್‌ ಆದರೆ ಬಯಸಿದ ಫಲಿತಾಂಶ ಸಿಗದೇ ಹೋಗಬಹುದು

ಸೈಲೆಂಟ್‌ ಆದರೆ ಬಯಸಿದ ಫಲಿತಾಂಶ ಸಿಗದೇ ಹೋಗಬಹುದು

ಕೆಲವೊಮ್ಮೆ ಒಂದು ದೊಡ್ಡ ಜಗಳವಾದ ಮೇಲೆ ಒಬ್ಬರಿಗೊಬ್ಬರು ಮಾತನಾಡದೇ ಮೌನವಾಗಿ ಇರುತ್ತಾರೆ. ಈ ರೀತಿ ಇದ್ದಾಗ ನಿಮ್ಮ ಸಂಗಾತಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಸೈಲೆಂಟ್ ಆಗಿದ್ದು ಏನು ಪ್ರಯೋಜ? ಅವರ ಜೊತೆ ಮಾತನಾಡದೇ ಇದ್ದರೆ ಅವರು ನೀವು ಬಯಸಿದಂತೆ ನಡೆದುಕೊಳ್ಳುತ್ತಾರೆ ಎಂದು ನೀವು ಅಂದುಕೊಂಡು ಆ ರೀತಿ ನಡೆಯದಿದ್ದರೆ ನಿಮ್ಮ ಮನಸ್ಸಿಗೆ ಮತ್ತಷ್ಟು ನೋವಾಗಬಹುದು, ಇದರ ಜಗಳ, ಅಂತರ ಮತ್ತಷ್ಟು ಹೆಚ್ಚಾಗಬಹುದು. ಆದ್ದರಿಂದ ಮನಸ್ತಾಪ ಹೋಗಲಾಡಿಸಲು ಮಾತು ಮುಖ್ಯ ಮೌನವಲ್ಲ ಎಂಬುವುದು ತಿಳಿದಿರಲಿ.

ಸೈಲೆಂಟ್ ಆಗಿರುವುದು ಬಾಲಿಶ ವರ್ತನೆ

ಸೈಲೆಂಟ್ ಆಗಿರುವುದು ಬಾಲಿಶ ವರ್ತನೆ

ಚಿಕ್ಕ-ಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು ಮಾತು ಬಿಡುವುದು ಇವು ಬಾಲಿಶ ವರ್ತನೆ. ಅಲ್ಲದೆ ಮನೆಯಲ್ಲಿ ಮಕ್ಕಳಿದ್ದರೆ ಪೋಷಕರ ಈ ರೀತಿಯ ವರ್ತನೆ ಮಕ್ಕಳ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರಬಹುದು, ಆದ್ದರಿಂದ ಮೌನವಾಗಿರುವುದರಿಂದ ಏನೂ ಪ್ರಯೋಜನವಿಲ್ಲ.

ಆದ್ದರಿಂದ ಸೈಲೆಂಟ್ ಆಗಿರುವುದು ಎಲ್ಲಾ ಸಮಸ್ಯೆಗೆ ಪರಿಹಾರವಲ್ಲ. ಸಂಸಾರದಲ್ಲಿ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತಿನಿಂದ ಸರಿಪಡಿಸಿ ಹೊರತು ಮಣವಹಿಸಿ ಸಮಸ್ಯೆ ಹೆಚ್ಚಿಸಬೇಡಿ.

English summary

Reasons Why Silent Treatment Is The Worst Thing In A Relationship in kannada

Reasons Why Silent Treatment Is The Worst Thing In A Relationship in kannada, Read On...
Story first published: Saturday, October 23, 2021, 18:07 [IST]
X
Desktop Bottom Promotion