For Quick Alerts
ALLOW NOTIFICATIONS  
For Daily Alerts

ಇದೇ ಕಾರಣಗಳಿಂದಾಗಿ 'ಮದುವೆ' ಪರಿಕಲ್ಪನೆ ಇನ್ನೂ ಉಳಿದಿರುವುದು

|

ಆಧುನಿಕ ಜಗತ್ತಿನಲ್ಲಿ ಎಲ್ಲವೂ ಮಾಡರ್ನ್ ಆಗಿ ಬದಲಾಗುತ್ತಿದೆ. ಇದಕ್ಕೆ ಸಂಬಂಧಗಳು ಹೊರತಾಗಿಲ್ಲ. ಪ್ರೀತಿಯನ್ನೇ ನಿರಾಕರಿಸುತ್ತಿದ್ದ ಸಮಾಜ ಇದೀಗ ಲಿವಿಂಗ್ ಟ್ಯೂಗೆದರನ್ನೇ ಒಪ್ಪಿಕೊಂಡು ಮುಂದೆ ಸಾಗುತ್ತಿದೆ. ಆದರೆ ಇವೆಲ್ಲಗಳ ನಡುವೆ ಇನ್ನೂ ಬದಲಾಗದೇ ಇರುವಂತದ್ದು ಅಂದ್ರೆ ಅದು ವಿವಾಹ ಅಥವಾ ಮದುವೆ.

ಜಗತ್ತಿನಲ್ಲಿ ನಾನಾ ಬದಲಾವಣೆಗಳು ಆಗಿದ್ದರೂ ಇನ್ನೂ ತನ್ನ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ ಈ ಮದುವೆ ಅನ್ನೋ ಬಂಧನ. ಇದು ನಮ್ಮ ಸಮಾಜದ ಅಡಿಪಾಯ ಮಾತ್ರವಲ್ಲ, ವ್ಯಕ್ತಿಗಳು ಮತ್ತು ಕುಟುಂಬಗಳ ನಡುವಿನ ಸಂಪರ್ಕವನ್ನು ಸಹ ಪ್ರತಿನಿಧಿಸುತ್ತದೆ. ಆಧುನಿಕತಾವಾದಿಗಳು ಮದುವೆಯನ್ನು ದುರ್ಬಲ ಪರಿಕಲ್ಪನೆ ಎಂದು ಪರಿಗಣಿಸಿದ್ದರೂ, ಅದು ಸಂಪೂರ್ಣವಾಗಿ ಅಲ್ಲ. ಇಂದಿನ ಜಗತ್ತಿನಲ್ಲಿ ಮದುವೆ ಇನ್ನೂ ಪ್ರಸ್ತುತವಾಗಲು ಕೆಲವು ಕಾರಣಗಳು ಇಲ್ಲಿವೆ.

ಪವಿತ್ರ ಬಂಧ:

ಪವಿತ್ರ ಬಂಧ:

ಕೊನೇ ಉಸಿರಿನವರೆಗೂ ಒಟ್ಟಿಗೆ ಇರುವುದಾಗಿ ಭರವಸೆ ನೀಡುವ ವಿವಾಹವು ಗಂಡು ಹೆಣ್ಣಿನ ನಡುವಿನ ಪವಿತ್ರ ಬಂಧವಾಗಿದೆ. ಮದುವೆ ಸಮಯದಲ್ಲಿ ಅಸ್ತಿತ್ವದಲ್ಲಿರುವ ಪವಿತ್ರ ಆಚರಣೆಗಳು ಈ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ವಿವಾಹವೆಂಬುದು ದೇವರಿಂದ ಆಶೀರ್ವದಿಸಲ್ಪಟ್ಟ ನಿರ್ಧಾರವೆಂಬ ನಂಬಿಕೆ ಇದ್ದು, ಸಮಾಜದಲ್ಲಿ ದಂಪತಿಗಳಿಗೆ ಒಂದು ಗೌರವವನ್ನು ತರುತ್ತದೆ. ಆದ್ದರಿಂದ ವಿವಾಹಕ್ಕೆ ಇನ್ನೂ ಮಹತ್ವ ಸಿಗುತ್ತಿರುವುದು.

ನಂಬಿಕೆ ಮತ್ತು ಸ್ನೇಹ:

ನಂಬಿಕೆ ಮತ್ತು ಸ್ನೇಹ:

ಸ್ನೇಹವು ಅನೇಕರ ಜನರ ಪ್ರೀತಿಗೆ ಬುನಾದಿಯಾಗುವುದು ಸಾಮಾನ್ಯ. ಗಂಡ -ಹೆಂಡತಿಯ ನಡುವಿನ ಸಂಬಂಧದಲ್ಲಿ ಸ್ನೇಹವಿದ್ದರೆ ಅಲ್ಲಿ ನಂಬಿಕೆ ತನ್ನಿಂದ ತಾನಾಗಿಯೇ ಬೆಳೆಯುವುದು. ಆದರೆ ಯಾವುದೇ ಗುರುತು ಪರಿಚಯ ಇಲ್ಲದೇ, ಯಾರೋ ಅಪರಿಚಿತನನ್ನು ವರಿಸಿ ಆತನ ಜೊತೆ ದೇಹ ಹಾಗೂ ಮನಸ್ಸು ಹಂಚಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಈ ನಂಬಿಕೆ ಕೊಡುವುದು ಮದುವೆ ಎಂಬ ಬಂಧನ. ಅಲ್ಲಿ ನೀವು ಆ ವ್ಯಕ್ತಿಯೊಂದಿಗೆ ಜೀವನಕ್ಕಾಗಿ ಬಂಧಿತರಾದಾಗ, ಅದು ಅನಿವಾರ್ಯವಾಗುತ್ತದೆ.

ಕುಟುಂಬದ ವಿಸ್ತರಣೆ:

ಕುಟುಂಬದ ವಿಸ್ತರಣೆ:

ಮಕ್ಕಳನ್ನು ಪಡೆಯಬೇಕು ಎಂಬ ಬಯಕೆ ಬರುವುದು ಕುಟುಂಬ ವಿಸ್ತರಣೆಗೆ ಕಾರಣವಾಗುತ್ತದೆ.ಬೇರೆ ಯಾವುದೇ ಮಾರ್ಗಕ್ಕಿಂತ ಮಕ್ಕಳನ್ನು ಪಡೆಯಲು ಮದುವೆ ಉತ್ತಮವಾದ ದಾರಿ. ಮದುವೆಯಾಗಿ ಮಕ್ಕಳನ್ನು ಪಡೆಯುವುದು ದಂಪತಿಗಳಿಗೆ ಸ್ಥಾನಮಾನ ಹಾಗೂ ಗೌರವ ತರುವುದು. ಜೊತೆಗೆ ಆ ಮಕ್ಕಳ ಪಾಲನೆ ಪೋಷಣೆ ಮಾಡಿ ಅವರನ್ನು ಒಂದೊಳ್ಳೆ ದಡ ತಲುಪಿಸುವ ಮೂಲಕ ದಂಪತಿಗಳು ದೀರ್ಘಾವಧಿಯವರೆಗೆ ಜೊತೆಯಾಗಿರುವಂತೆ ಮಾಡುವುದು.

ಭದ್ರತೆ:

ಭದ್ರತೆ:

ನೀವು ಯಾರನ್ನಾದರೂ ಮದುವೆಯಾದಾಗ, ಪವಿತ್ರ ಬಂಧದಿಂದ ಮಾತ್ರ ಅದನ್ನು ಸಮರ್ಥಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಮದುವೆ ನಿಮ್ಗೆ ಸುರಕ್ಷತೆಯ ಭಾವನೆಯನ್ನು ನೀಡುತ್ತದೆ. ಮದುವೆ ಮೂಲಕ ಕಾನೂನಾತ್ಮಕವಾಗಿ ನೀವು ಒಬ್ಬರ ಸೊತ್ತಾಗುತ್ತೀರಿ. ಅಷ್ಟೇ ಅಲ್ಲ, ಅಧಿಕೃತವಾಗಿ ನೀವು ಅವರಿಗೆ ಸೇರುತ್ತಿರಿ.ಇದರಿಂದ ನಿಮಗೆ ಭದ್ರತೆ ಸಿಗುವುದು. ಮದುವೆಯೊಂದಿಗೆ ಹಣಕಾಸಿನ, ಮನೆ, ಜೀವನ ಸುರಕ್ಷತೆಯಂತಹ ಜವಾಬ್ದಾರಿಗಳು ಬರುತ್ತವೆ. ಅದನ್ನು ಗಂಡ ಹೆಂಡತಿ ಸೇರಿ ಎದುರಿಸುವ ಮನಸ್ಸು ನಿಮ್ಮದಾಗುವುದು.

ಅನ್ಯೋನ್ಯತೆ:

ಅನ್ಯೋನ್ಯತೆ:

ಮದುವೆ ಎಂಬ ಬಲವಾದ ಸಂಬಂಧದಲ್ಲಿ ಇರುವ ಯಾರಿಗಾದರೂ ತಮ್ಮ ಸಂಗಾತಿಯ ಜೊತೆ ಅನ್ಯೋನ್ಯತೆ ಸ್ವಾಭಾವಿಕವಾಗಿ ಬರುತ್ತದೆ. ಸದಾ ಅವರ ಜೊತೆಯಲ್ಲಿಯೇ ಕಾಲ ಕಳೆಯುವುದರಿಂದ ನಮ್ಮೆಲ್ಲ ಸುಖ ಕಷ್ಟಗಳಲ್ಲಿ ಪಾಲು ಪಡೆಯುವುದರಿಂದ ಅನ್ಯೋನ್ಯತೆ ಎಂಬುದು ಬಂದೇ ಬರುವುದು. ಆದರೆ ಅದನ್ನು ಕಾಪಾಡಿಕೊಳ್ಳಲು ಗಂಡ ಹೆಂಡತಿ ಇಬ್ಬರೂ ಎಷ್ಟು ಪ್ರಯತ್ನಗಳನ್ನು ಮಾಡುತ್ತೀರಿ ಎಂಬುದು ಮುಖ್ಯ ವಿಷಯ.

English summary

Reasons Why Marriage is Not Passe Yet in Kannada

Here we talking about Reasons why marriage is not passe yet in kannada, read on
X
Desktop Bottom Promotion