For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿ ಸೇರಿ ಅಡುಗೆ ಮಾಡೋದ್ರಿಂದ, ಸಂಬಂಧ ಗಟ್ಟಿಯಾಗುತ್ತಂತೆ!

|

ಮಹಿಳೆಯರು ಅಡುಗೆ ಮಾಡುವುದು ಮಾಮೂಲಿ. ಆದರೆ ಪತ್ನಿ ಅಡುಗೆ ಮಾಡುವಾಗ ಪತಿ ಬಂದು ಸಹಾಯ ಮಾಡಲಿ ಎಂಬುದು ಹೆಚ್ಚಿನ ಹಿಳೆಯರ ಮನದ ಆಸೆ. ಈ ಆಸೆ ಕೆಲವೊಮ್ಮೆ ನೆರವೇರುವುದೂ ಉಂಟು. ಇಬ್ಬರೂ ಸೇರಿ ಅಡುಗೆ ಮಾಡುವುದರಿಂದ, ಅಡುಗೆ ಕೆಲಸ ಬೇಗ ಮುಗಿಯುವುದು ಒಂದು ಕಡೆಯಾದರೆ, ಇದರಿಂದ ಗಂಡ-ಹೆಂಡತಿಯ ನಡುವಿನ ಸಂಬಂಧ ಮತ್ತಷ್ಟು ಭದ್ರವಾಗುತ್ತದೆ. ಹಾಗಾದರೆ ಬನ್ನಿ ಪತಿ-ಪತ್ನಿ ಸೇರಿ ಅಡುಗೆ ಮಾಡುವುದರಿಂದ ಆರೋಗ್ಯಕರ ಸಂಬಂಧದ ವೃದ್ಧಿ ಹೇಗೆ ಸಾಧ್ಯ ಎಂಬುದನ್ನು ನೋಡಿಕೊಂಡು ಬರೋಣ.

ನಿಮ್ಮ ಸಂಗಾತಿಯೊಂದಿಗೆ ಸೇರಿ ಅಡುಗೆ ಮಾಡಬೇಕು ಎನ್ನಲು ಉತ್ತಮ ಕಾರಣಗಳು ಇಲ್ಲಿವೆ:

1. ಏಕಾಂತದ ಸಮಯ ಕಳೆಯಬಹುದು:

1. ಏಕಾಂತದ ಸಮಯ ಕಳೆಯಬಹುದು:

ನಿಮ್ಮ ಸಂಗಾತಿಯ ಜೊತೆ ಸೇರಿ ಅಡುಗೆ ಮಾಡುವುದರಿಂದ ಉತ್ತಮ ಸಮಯ ಕಳೆಯುತ್ತೀರಿ. ನವವಿವಾಹಿತರು ಅಥವಾ ಡೇಟಿಂಗ್ ಮಾಡುತ್ತಿರುವವರು ಹೊರಗೆ ಹೋಗಿ ತಿನ್ನುವ ಬದಲು, ಇಬ್ಬರೂ ಒಟ್ಟಿಗೆ ಸೇರಿ ಅಡುಗೆ ಮಾಡುವುದರಿಂದ ಮನಸ್ಸು ಮತ್ತಷ್ಟು ತೃಪ್ತಿಯಾಗುವುದರಲ್ಲಿ ಸಂದೇಹವಿಲ್ಲ. ಒಂದು ವೇಳೆ ಮಕ್ಕಳನ್ನು ಹೊಂದಿದ್ದರೆ, ಅವರು ಮಲಗಲು ಹೋದ ನಂತರ ತಡವಾಗಿ ಅಡುಗೆ ಮಾಡುವ ಪ್ಲಾನ್ ಮಾಡಿ. ಅಡುಗೆ ಮಾಡುವುದರಿಂದ ನಿಮ್ಮಿಬ್ಬರಿಗೂ ಸದಾ ಕಾಲ ನೆನಪಿಟ್ಟುಕೊಳ್ಳುವಂತಹ ಸಮಯ ಸಿಗುವುದು. ಇದರಿಂದ ಪ್ರೀತಿಪಾತ್ರರೊಂದಿಗೆ ಏಕಾಂತವಾಗಿ ಸಮಯ ಕಳೆಯಬಹುದು, ಜೊತೆಗೆ ರುಚಿಯಾದ ಆಹಾರವೂ ಸಿಗುವುದು.

2. ಸೇರಿ ಕೆಲಸಮಾಡುವುದರ ಮಹತ್ವ ತಿಳಿಯುವುದು:

2. ಸೇರಿ ಕೆಲಸಮಾಡುವುದರ ಮಹತ್ವ ತಿಳಿಯುವುದು:

ಗಂಡ-ಹೆಂಡತಿ ಇಬ್ಬರೂ ಸೇರಿ ಅಡುಗೆ ಮಾಡಲು ನಿರ್ಧರಿಸಿದರೆ, ಆಗ ಒಂದೇ ಖಾದ್ಯವನ್ನು ಆರಿಸಿ, ಅದನ್ನು ಒಟ್ಟಿಗೆ ಸೇರಿ ತಯಾರಿಸಿ, ಕಾರ್ಯಗಳನ್ನು ವಿಭಜಿಸಿ. ಇದರಿಂದ ನೀವು ಒಟ್ಟಿಗೆ ಒಳ್ಳೆಯ ಸಮಯವನ್ನು ಕಳೆಯಲು ಮಾತ್ರವಲ್ಲ, ಒಂದು ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಅವಕಾಶ ಲಭ್ಯವಾಗುವುದು. ಅಡುಗೆಮನೆಯ ಹೊರತಾಗಿ, ಹೊರಗಿನ ಕೆಲಸದಲ್ಲೂ ಹೇಗೆ ಒಟ್ಟಿಗೆ ಸೇರಿ ಕೆಲಸಮಾಡಬಹುದು ಎಂಬುದನ್ನು ತಿಳಿಸಿಕೊಡುವುದು.

3. ಹೊಸ ವಿಷಯ ಕಲಿಯಲು ಸಹಾಯಕ:

3. ಹೊಸ ವಿಷಯ ಕಲಿಯಲು ಸಹಾಯಕ:

ಹೊಸ ಕೌಶಲ್ಯವನ್ನು ಕಲಿಯುವುದಕ್ಕಿಂತ ಆಸಕ್ತಿದಾಯಕ ಬೇರೆನಿದೆ ಅಲ್ಲವೇ? ಈ ಅಡುಗೆ ಪ್ರಕ್ರಿಯೆಯಲ್ಲಿ ಪತಿಯಿಂದ-ಪತ್ನಿ ಅಥವಾ ಪತ್ನಿಯಿಂದ ಪತಿ ಏನಾದರೂ ಹೊಸ ಕೌಶಲ್ಯಗಳನ್ನು ಅರಿತುಕೊಳ್ಳಲು ಸಹಾಯಕವಾಗುವುದು. ತರಕಾರಿ ಹೆಚ್ಚುವುದೋ ಅಥವಾ ಚಪಾತಿ ರೌಂಡ್ ಆಗಿ ಲಟ್ಟಸುವುದೋ ಹೀಗೆ ಒಬ್ಬರು ಮಾಡುವ ಕೆಲಸ ನೋಡುವ ಮೂಲಕ, ಅದನ್ನು ನಾವೇ ಮಾಡುವ ಮೂಲಕ ಹೊಸಹೊಸ ಕೌಶಲ್ಯದ ಕಲಿಯುವಿಕೆಗೆ ದಾರಿಯಾಗುವುದು. ಇದರಿಂದ ಮರೆಯಲಾಗದ ಅನುಭವಗಳು ಸಿಗುವದಂತೂ ಸಿಗುವುದು ನಿಜ.

4. ರೋಮ್ಯಾಂಟಿಕ್ ಆಗಿರಲು ಪ್ರೋತ್ಸಾಹಿಸುವುದು:

4. ರೋಮ್ಯಾಂಟಿಕ್ ಆಗಿರಲು ಪ್ರೋತ್ಸಾಹಿಸುವುದು:

ಅಡುಗೆ ಮಾಡುವಾಗ ಒಟ್ಟಿಗೆ ಕಳೆಯುವ ಸಮಯದಿಂದ ರೊಮ್ಯಾಂಟಿಕ್ ಆಗಿರಲು ಪ್ರೋತ್ಸಾಹ ನೀಡುವುದು. ಅಡುಗೆಮನೆಯಲ್ಲಿ ಸಿಗುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಅದೇಗೆ ಅಂದರೆ, ಸಣ್ಣನೆಯ ಮ್ಯೂಸಿಕ್ ಹಾಕಿಕೊಂಡು, ಇಬ್ಬರೂ ಹಾಡುತ್ತಾ, ನಗಿಸುತ್ತಾ, ಕುಣಿಯುತ್ತಾ ಅಡುಗೆ ಮಾಡಲು ಪ್ರಯತ್ನಿಸಿ. ಇದರಿಂದ ಮನಸ್ಸಿಗೂ ಖುಷಿ ಜೊತೆಗೆ ತಲೆಯಲ್ಲಿರುವ ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.

5. ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಪಡಬಹುದು:

5. ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಪಡಬಹುದು:

ನಿಮ್ಮ ಖಾದ್ಯಕ್ಕೆ ಹಾಕಿರುವ ಶ್ರಮ ನಿಮಗೆ ತಿಳಿದಿರುವುದರಿಂದ, ಅದನ್ನು ತಿನ್ನುವುದರಿಂದ ಹೆಚ್ಚು ತೃಪ್ತಿಯಾಗುತ್ತದೆ. ರೆಸ್ಟೋರೆಂಟ್ ಹೋಗಿದ್ದರೆ ಯಾರೋ ತಯಾರಿಸಿದ ಆಹಾರ ತಿನ್ನಬೇಕಿತ್ತು. ಮನೆಯಲ್ಲಿಯೇ ಸ್ವತಃ ತಯಾರಿಸುವುದರಿಂದ ಒಂದು ರೀತಿಯ ಹೆಮ್ಮೆ, ತೃಪ್ತಿ ಮನಸ್ಸಲ್ಲಿ ಮೂಡುವುದಂತೂ ನಿಜ. ಜೊತೆಗೆ ರೆಸ್ಟೋರೆಂಟ್ ಗಿಂತ ಮನೆ ಆಹಾರ ಹೆಚ್ಚು ಆರೋಗ್ಯಕರವಾಗಿದೆ. ಅಷ್ಟೇ ಅಲ್ಲ, ನಿಮ್ಮ ಸಂಗಾಗಿ ಸಹಾಯ ಮಾಡಿದ ಆತ್ಮತೃಪ್ತಿಯೂ ನಿಮಗೆ ಸಿಗುವುದು.

English summary

Reasons Why Couples should Cook Together for a Better Relationship in Kannada

Aside from what you make or how long it takes, cooking together has its benefits and can certainly strengthen any relationship, no matter if you’re a home cook extraordinaire or an expert at dialing for takeout.Here we talking about Reasons why couples should cook together for a better relationship in Kannada, read on
Story first published: Friday, September 3, 2021, 18:19 [IST]
X
Desktop Bottom Promotion