For Quick Alerts
ALLOW NOTIFICATIONS  
For Daily Alerts

ಲವ್‌ ಮ್ಯಾರೇಜ್‌ನಲ್ಲಿ ವಿಚ್ಛೇದನ ಹೆಚ್ಚಾಗಲು ಕಾರಣಗಳಿವು

|

ಮದುವೆ, ಡಿವೋರ್ಸ್ ಇವೆಲ್ಲಾ ಈಗ ಕಾಮನ್‌... ಮದುವೆಯಾಗಿ ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಇಬ್ಬರಲ್ಲಿ ಹೊಂದಾಣಿಕೆ ಬಾರದಿದ್ದರೆ ಡಿವೋರ್ಸ್... ಹೀಗೆ ಡಿವೋರ್ಸ್‌ ಆಗುವವರಲ್ಲಿ ಲವ್‌ ಮ್ಯಾರೇಜ್‌ ಆದವರ ಸಂಖ್ಯೆಯೇ ಹೆಚ್ಚಿದೆ... ಏಕೆ? ಎಂಬ ಪ್ರಶ್ನೆ ಹಲವರನ್ನು ಕಾಡುವುದುಂಟು...

ಹುಡುಗ-ಹುಡುಗಿ ಇಷ್ಟಪಡುವಾಗ ಕುಟುಂಬದ ಕಡೆಯಿಂದ ನಾನಾ ವಿರುದ್ಧಗಳು ಬಂದಿರುತ್ತವೆ, ಅವೆನ್ನೆಲ್ಲಾ ಮೀರಿ ನನಗೆ ನೀನೇ ಬೇಕು ಎಂದು ಮದುವೆಯಾಗಿ, ಕೆಲವೇ ವರ್ಷಗಳೂ, ಇನ್ನು ಕೆಲವರು ಕೆಲವೇ ತಿಂಗಳುಗಳು ಕಳೆಯುವಷ್ಟರಲ್ಲಿ ನನಗೆ ನೀನು ಬೇಡ್ವೆ ಬೇಡ ಎಂದು ಬಿಡುತ್ತಾರೆ... ಹಾಗಾದರೆ ಅವರಿಬ್ಬರ ನಡುವೆ ಆಗ ಇದ್ದಿದು ಪ್ರೀತಿನಾ ಅಥವಾ ಬರೀ ಆಕರ್ಷಣೆನಾ?

ಆಗ ಬೇಕು ಅನಿಸಿದ ವ್ಯಕ್ತಿ ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಏಕೆ ಬೇಡ ಅನಿಸಲಾರಂಭಿಸುತ್ತಾರೆ ಎಂದು ನೋಡುವುದಾದರೆ ಕೆಲವೊಂದು ಪ್ರಮುಖ ಕಾರಣಗಳ ಬಗ್ಗೆ ಹೇಳಬಹುದು. ದಾಂಪತ್ಯ ಜೀವನ ಮುರಿದು ಬಿದ್ದಾಗ ಅದಕ್ಕೆ ಅವರದ್ದೇ ಆದ ಕಾರಣಗಳಿರಬಹುದು, ಆದರೆ ಬಹುತೇಕ ಲವ್‌ ಮ್ಯಾರೇಜ್ ಫೇಲ್ ಆಗುವುದು ಇವೇ ಕಾರಣಕ್ಕೆ ನೋಡಿ:

ಪ್ರೀತಿ ಮಾಡುವಾಗ ಜವಾಬ್ದಾರಿಗಳು ಇರಲ್ಲ

ಪ್ರೀತಿ ಮಾಡುವಾಗ ಜವಾಬ್ದಾರಿಗಳು ಇರಲ್ಲ

ಅದಕ್ಕೇ ಹೇಳುವುದು ಪ್ರೀತಿ ಕುರುಡು ಅಂತ. ಪ್ರೀತಿಯಲ್ಲಿರುವಾಗ ಮುಂದಿನ ಜವಾಬ್ದಾರಿಗಳ ಬಗ್ಗೆ ಏನೂ ಯೋಚಿಸುವುದೇ ಇಲ್ಲ...ಮುಂದೇನು, ನಮ್ಮ ಬದುಕು ಹೇಗಿರಬೇಕು ಎಂಬುವುದರ ಬಗ್ಗೆ ಏನೂ ಕಲ್ಪನೆಗಳಿರುವುದಿಲ್ಲ. ಒಂದು ವೇಳೆ ಪ್ರೇಮಿಗಳು ಈ ಕುರಿತು ಚರ್ಚಿಸಿದರೆ ಅವು ಫ್ಯಾಂಟಸಿಮಯವಾಗಿರುತ್ತದೆ ಹೊರತು ವಾಸ್ತವಂಶ ಒಂದಿಷ್ಟೂ ಇರಲ್ಲ... ಇಬ್ಬರು ಸದಾ ಫೋನ್‌ನಲ್ಲಿ ಮಾತನಾಡುತ್ತಾ ಚಿನ್ನಾ... ಪುಟ್ಟ ಅಂತ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಾರೆ.... ಮದುವೆಯಾದ ಆದ ಮೇಲೆ ಜವಾಬ್ದಾರಿಗಳು ಹೆಚ್ಚುವುದು, ಆಗ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಹೋದರೇ ಆಗ ಇಬ್ಬರ ನಡುವೆ ಅಪಸ್ವರ ಕೇಳಲಾರಂಭಿಸುವುದು.

ಆಗ ಏನಾದರೂ ಸರಿ ಮದುವೆಯಾಗ ಎಂಬುದಷ್ಟೇ ಯೋಚನೆ

ಆಗ ಏನಾದರೂ ಸರಿ ಮದುವೆಯಾಗ ಎಂಬುದಷ್ಟೇ ಯೋಚನೆ

ಪ್ರೀತಿಸುವಾಗ ಕೆಲವರಷ್ಟೇ ಮುಂದಿನ ಬದುಕಿನ ಬಗ್ಗೆ ತುಂಬಾ ಸೀರಿಯಸ್‌ ಆಗಿ ಯೋಚಿಸುತ್ತಾರೆ, ಅಂದ್ರೆ ಓದು ಬೇಕು, ಒಳ್ಳೆ ಕೆಲಸ ಸಿಗಬೇಕು, ಸೆಟ್ಲ್‌ ಆಗಬೇಕು ನಂತರ ಮದುವೆ ಮಾಡಿಕೊಳ್ಳುವ ಎಂದು ನಿರ್ಧರಿಸಿದರೆ ಇನ್ನು ಕೆಲ ಜೋಡಿ ಪ್ರೀತಿಗಾಗಿ ಬಾಕಿ ಎಲ್ಲವನ್ನೂ ಬಿಡುತ್ತಾರೆ... ಓದು ಬಿಡುತ್ತಾರೆ, ಮನೆಯವರನ್ನು ಬಿಡುತ್ತಾರೆ... ಒಟ್ಟಿನಲ್ಲಿ ಅವರಿಗೆ ಆ ಕ್ಷಣ, ಆ ಸಮಯದಲ್ಲಿ ತಾವು ಪ್ರೀತಿಸುವ ವ್ಯಕ್ತಿ ಮಾತ್ರ ಸಾಕು ಎಂದು ಯೋಚಿಸುತ್ತಾರೆ, ಪ್ರೀತಿಸುವ ಸಮಯದಲ್ಲಿ ತಾವು ಇಷ್ಟಪಡುವ ವ್ಯಕ್ತಿಯಲ್ಲಿರುವ ನ್ಯೂನತೆಗಳೇನು ಕಾಣಿಸುವುದೇ ಇಲ್ಲ.... ಮದುವೆಯಾಗಿ ಸ್ವಲ್ಪ ಸಮಯ ಅಥವಾ ವರ್ಷ ಕಳೆಯುವಷ್ಟರಲ್ಲಿ ಆ ಹುಚ್ಚು ಪ್ರೀತಿ ಮಾಸಿರುತ್ತದೆ, ಆಗ ಹೊಂದಾಣಿಕೆ ಎಂಬುವುದು ಇಲ್ಲದಿದ್ದರೆ ಸಮಸ್ಯೆಗಳ ಶುರುಮಾಲೆಯಾಗಿರುತ್ತದೆ.

ಮೊದಲಿನಷ್ಟು ಪ್ರೀತಿಸುತ್ತಿಲ್ಲ ಎಂಬ ತಪ್ಪು ಕಲ್ಪನೆ

ಮೊದಲಿನಷ್ಟು ಪ್ರೀತಿಸುತ್ತಿಲ್ಲ ಎಂಬ ತಪ್ಪು ಕಲ್ಪನೆ

ಪ್ರೀತಿಯಲ್ಲಿರುವಾಗ ತನ್ನನ್ನು ಮೀಟ್ ಮಾಡಲು ಆತ/ ಆಕೆ ತೋರುತ್ತಿದ್ದ ಉತ್ಸಾಹ ಈಗೀಗ ಇಲ್ಲವಾಗಿದೆ ಎಂಬುವುದೇ ಲವ್‌ ಮ್ಯಾರೇಜ್‌ ಆದ ಹೆಚ್ಚಿನವರ ಸಮಸ್ಯೆಯಾಗಿರುತ್ತದೆ. ಈ ಸಮಸ್ಯೆ ಅರೇಂಜ್ ಮ್ಯಾರೇಜ್ ಆದವರಲ್ಲಿ ಇರಲ್ಲ... ಏಕೆಂದರೆ ಅವರಿಗೆ ತಮ್ಮ ಸಂಗಾತಿ ಹೆಚ್ಚಾಗಿ ತಿಳಿಯುವುದೇ ಮದುವೆಯಾದ ಮೇಲೆ, ಅವರು ಆ ಗುಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಲವ್‌ ಮ್ಯಾರೇಜ್‌ನಲ್ಲಿ ಆ ರೀತಿ ಇರಲ್ಲ.. ತುಂಬಾ ಸುತ್ತಾಡಿರುತ್ತಾರೆ, ತುಂಬಾ ಮಾತನಾಡಿರುತ್ತಾರೆ ತನ್ನವನ/ಳ ಬಗ್ಗೆ ನನಗೆ ಎಲ್ಲವೂ ಗೊತ್ತು ಎಂಬ ಭಾವನೆ ಇರುತ್ತದೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿಗಳು ಅಧಿಕವಾದಾಗ ಮೊದಲಿನ ಹಾಗೇ ಇರಲು ಸಾಧ್ಯವಾಗಲ್ಲ. ಇದನ್ನು ಇಬ್ಬರೂ ಅರ್ಥ ಮಾಡಿಕೊಂಡರೆ ಒಳ್ಳೆಯದು.. ಆದರೆ ಇಬ್ಬರಲ್ಲಿ ಒಬ್ಬರಿಗೆ ಮದುವೆಯಾಗುವ ಮೊದಲು ಇದ್ದ ಪ್ರೀತಿ ಈಗ ಇಲ್ಲ ಎಂದು ಅನಿಸಲಾರಂಭಿಸಿದರೆ ಸಮಸ್ಯೆಗಳು ಶುರುವಾಗುವುದು.

ಕುಟುಂಬದವರ ಬೆಂಬಲ ಕೂಡ ಕಡಿಮೆ ಇರುತ್ತದೆ

ಕುಟುಂಬದವರ ಬೆಂಬಲ ಕೂಡ ಕಡಿಮೆ ಇರುತ್ತದೆ

ಅರೇಂಜ್‌ ಮ್ಯಾರೇಜ್‌ನಲ್ಲಿ ಏನಾದರೂ ಸಮಸ್ಯೆಯಾದರೆ ಕುಟುಂಬದವರು ಮಧ್ಯಸ್ಥಿಕೆ ವಹಿಸಿ ಸರಿ ಮಾಡಲು ಪ್ರಯತ್ನಿಸುತ್ತಾರೆ. ಮನೆಯವರ ವಿರೋಧ ಎದುರಿಸಿ ಮದುವೆಯಾದವರಿಗೆ ಈ ರೀತಿಯ ಬೆಂಬಲ ಸಿಗಲ್ಲ.. ಇಬ್ಬರಲ್ಲಿ ಚಿಕ್ಕ-ಪುಟ್ಟ ಸಮಸ್ಯೆಗಳಾದಾಗ ಮನೆಯವರಿಗೆ ಗೊತ್ತಾದರೆ ನೀವೇ ಮಾಡಿಕೊಂಡಿದ್ದು, ನಾವು ಒಳ್ಳೆಯ ಸಂಬಂಧ ಹುಡುಕುತ್ತಿದ್ವಿ, ಈಗ ಅನುಭವಿಸು ಎಂದು ಹೇಳುತ್ತಾರೆ. ಚಿಕ್ಕ-ಪುಟ್ಟ ಸಮಸ್ಯೆಗಳೂ ದೊಡ್ಡದಾಗುತ್ತಾ ಹೋಗು ವಿಚ್ಛೇದನಕ್ಕೆ ಬಂದು ನಿಲ್ಲುವುದು.

ಹೊಂದಾಣಿಕೆ ಇರಲಿ, ಮುಕ್ತವಾಗಿ ಮಾತನಾಡಿ

ಹೊಂದಾಣಿಕೆ ಇರಲಿ, ಮುಕ್ತವಾಗಿ ಮಾತನಾಡಿ

ವ್‌ ಮ್ಯಾರೇಜ್ ಇರಲಿ, ಅರೇಂಜ್ ಮ್ಯಾರೇಜ್ ಇರಲಿ ವೈವಾಹಿಕ ಜೀವನ ಸುಂದರವಾಗಿರಬೇಕೆಂದರೆ ಹೊಂದಾಣಿಕೆ ಇರಬೇಕು. ಇನ್ನು ಲವ್‌ ಮ್ಯಾರೇಜ್ ಆದವರಿಗೆ ಆ ವ್ಯಕ್ತಿಯನ್ನು ಮದುವೆಗೆ ಮೊದಲೇ ನೋಡಿರುವುದರಿಂದ ಸಲುಗೆ ತುಸು ಅಧಿಕವೇ ಇರುತ್ತದೆ. ಏನಾದರೂ ಸಮಸ್ಯೆಯಾದರೆ ಅವರ ಜೊತೆ ಮುಕ್ತವಾಗಿ ಮಾತನಾಡಿ. ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಪ್ರಾರಮಭದಲ್ಲಿಯೇ ಬಗೆ ಹರಿಸಿ, ಇದರಿಂದ ಮನಸ್ತಾಪ ಹೆಚ್ಚುವುದನ್ನು ತಡೆಗಟ್ಟಬಹುದು.

ನೀನಿಲ್ಲದೆ ನಾನು ಇಲ್ಲ ಎಂದು ಮದುವೆಯಾಗಿದ್ದರೆ ಕೊನೆಯವರೆಗೂ ಅದೇ ಪ್ರೀತಿ ಉಳಿಸಿಕೊಳ್ಳಲು ಪ್ರಯತ್ನಿಸಿ ಆಗ ಲವ್‌ ಮ್ಯಾರೇಜ್ ಮತ್ತಷ್ಟು ಸುಂದರವಾಗುವುದು.

English summary

Reason For Failure Rate Increased In Love Marriages in Kannada

Reason for failure rate increased in love marriages in Kannada,
X
Desktop Bottom Promotion