For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಕೋಟ್‌ಗಳು ಇಲ್ಲಿವೆ ನೋಡಿ

|

ಆಗಸ್ಟ್ 3ಕ್ಕೆ ಅಣ್ಣ-ತಂಗಿಯ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ರಕ್ಷಾ ಬಂಧನ ಹಬ್ಬ. ಈ ಹಬ್ಬದಂದು ಸಹೋದರಿ ತನ್ನ ಸಹೋದರ ಕೈಗೆ ರಾಖಿ ಕಟ್ಟುವ ಸಂಭ್ರಮದಲ್ಲಿದ್ದರೆ, ಅಣ್ಣ ಮುದ್ದಿನ ಸಹೋದರಿಗೆ ಆಕರ್ಷಕ ಗಿಫ್ಟ್ ನೀಡಿ ನಿನ್ನ ಸದಾ ರಕ್ಷಣೆ ಮಾಡುವೆ ಎಂದು ಅಭಯ ನೀಡುವ ದಿನ.

ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ. ಹೀಗೆ ರಾಖಿ ಕುರಿತ ಅನೇಕ ಕತೆಗಳಿವೆ. ತನಗೊಬ್ಬ ಅಣ್ಣನಿದ್ದರೆ ಸದಾ ಆತ ನನ್ನ ರಕ್ಷಣೆ ಮಾಡುತ್ತಾನೆ ಎಂಬ ಭಾವನೆ ಸಹೋದರಿಯಲ್ಲಿರುತ್ತದೆ, ಆ ನಂಬಿಕೆ ಹಾಗೂ ರಕ್ಷೆಗಾಗಿ ಸಹೋದರಿ, ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ.

ಶಾಲಾದಿನಗಳಲ್ಲಿ ರಕ್ಷಾಬಂಧನ ಸಮೀಪಿಸುತ್ತಿದ್ದಂತೆ ಶಾಲಾ ಸಮೀಪದ ಅಂಗಡಿಯಲ್ಲಿ ಬಣ್ಣಬಣ್ಣದ ರಕ್ಷೆಗಳು ರಾರಾಜಿಸುತ್ತಿದ್ದವು. ಅದನ್ನು ನೋಡುವುದೇ ಹಬ್ಬ. ಖರೀದಿಸಲು ಎಲ್ಲಿಲ್ಲದ ಉತ್ಸಾಹ. ಹಿಂದಿನ ದಿನವೇ ಯಾರಿಗೆ ರಾಖಿ ಕಟ್ಟಬಹುದು, ಯಾರಿಂದ ಕಟ್ಟಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ. ಹಬ್ಬದ ದಿನವಂತೂ ಯಾರ ಕೈಯಲ್ಲಿ ಎಷ್ಟು ರಾಖಿ ಎಂದು ಎಣಿಸುವುದೇ ಸಂಭ್ರಮ. ಎಷ್ಟೋ ಸಲ ಸ್ನಾನ ಮಾಡುವಾಗ ರಕ್ಷೆ ಒದ್ದೆಯಾಗುತ್ತದೆ ಎಂದು ಅದು ಬಿಚ್ಚಿಟ್ಟು ಮತ್ತೆ ಅದೇ ಗೆಳೆಯನಿಂದ ಕಟ್ಟಿಸಿಕೊಂಡ ನೆನಪು!
ಇನ್ನು ಈಗಿನ ಕಾಲೇಜ್ ಕತೆ ಹೇಳುವುದೇ ಬೇಡ. ʼಅವಳುʼ ರಾಖಿ ಕಟ್ಟಲು ಬಂದರೆ ʼಇವನುʼ ಓಡುವುದು, ರಾಖಿಯಿಂದ ತಪ್ಪಿಸಿಕೊಳ್ಳದಿರಲು ಕಾಲೇಜ್‌ಗೇ ಚಕ್ಕರ್‌ ಹಾಕುವುದು ನಡೆಯುತ್ತದೆ. ಇಲ್ಲಿ ರಾಖಿ ಒಂದು ʼಸಂದೇಶ ವಾಹಕʼ ವಾಗಿ ಕೆಲಸ ಮಾಡುತ್ತದೆ! ಇದನ್ನು ನೋಡುವುದೇ ಗಮ್ಮತ್ತು. ಇನ್ನು ರಕ್ಷೆ ಕಟ್ಟಿ ಸುಮ್ಮನೆ ಬಿಡುತ್ತಾರಾ, ಏನಾದರೂ ಕಪ್ಪಕಾಣಿಕೆ ವಸೂಲಿ ಮಾಡದೇ ಬಿಡೋದಿಲ್ಲ. ಕನಿಷ್ಠಪಕ್ಷ ಒಂದು ಮಿಠಾಯಿಯಾದ್ರೂ ಕೊಡಲೇಬೇಕು. ಆ ದಿನ ಯುವಕರ ಜೇಬು ಖಾಲಿ ಖಾಲಿ!
ರಕ್ಷಾಬಂಧನ ಎಂಬ ಆಚರಣೆ ಹೊರನೋಟಕ್ಕೆ ಸರಳವಾಗಿ ಕಂಡರೂ ಅದರ ಹಿನ್ನೆಲೆ ಮತ್ತು ಆಶಯ ಅಮೂಲ್ಯ. ಅಣ್ಣ-ತಂಗಿ ಅಕ್ಕ-ತಮ್ಮ ಗೆಳೆಯ-ಗೆಳತಿಯರ ನಡುವಿನ ಸ್ನೇಹದ ಬಂಧ ಈ ರಕ್ಷೆ. ರಕ್ಷಾಬಂಧನದಿಂದ ಬ್ರಾತೃತ್ವದ ಭಾವನೆ ಬಲವಾಗುವುದರ ಜೊತೆಗೆ, ಸ್ನೇಹ ಇಮ್ಮಡಿಯಾಗುತ್ತದೆ.

ಗಿರೀಶ್‌, ಪ್ರಥಮ ಬಿಎ, ವಿವಿ ಮಂಗಳೂರು

ಭಾರತದಲ್ಲಿ ರಕ್ಷಾಬಂಧವನ್ನುತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ನಿಮ್ಮ ಸಹೋದರ-ಸಹೋದರಿಗೆ ಈ ದಿನ ಹೃದಯಸ್ಪರ್ಶಿ ಮೆಸೇಜ್ ಕಳುಹಿಸಬೇಕೆಂದು ನೀವು ಬಯಸುವುದಾದರೆ ಈ ಕೋಟ್‌ಗಳನ್ನು ಕಳುಹಿಸಿ...

 ಸಹೋದರಿಗೆ ಕೋಟ್

ಸಹೋದರಿಗೆ ಕೋಟ್

1. ಮುದ್ದಿನ ಸಹೋದರಿ

ರಕ್ಷಾ ಬಂಧನದ ಶುಭಾಶಯಗಳು

ಈ ರಕ್ಷಾ ಬಂಧನಲ್ಲಿ ನಾನು ನಿನಗೊಂದು ಪ್ರಾಮಿಸ್‌ ಮಾಡುತ್ತಿದ್ದೇನೆ

ಸದಾ ನಿನ್ನ ರಕ್ಷಕನಾಗಿರುತ್ತೇನೆ, ಯಾವಾಗ ನೀನು ಹಿಂತಿರುಗಿ ನೋಡಿದರೂ ಅಲ್ಲಿ ನನ್ನ ಕಾಣುವೆ

ಸಹೋದರಿಗೆ ಕೋಟ್

ಸಹೋದರಿಗೆ ಕೋಟ್

2. ನನ್ನ ಮುದ್ದಿನ ಕೂಸೆ

ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ

ಆದರೆ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ

ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್

ಸಹೋದರಿಗೆ ಕೋಟ್

3. ನೀನು ನನ್ನ ಸಹೋದರಿಯಾಗಿ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ, ಎಂದೆಂದೂ ಇದೇ ರೀತಿಯ ಧೈರ್ಯಶಾಲಿ ಹೆಣ್ಣು ನೀನಾಗಿರು, ನಿನ್ನ ಅಣ್ಣನಿಗೆ ಅದುವೇ ಸಂತೋಷ, ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್

ಸಹೋದರಿಗೆ ಕೋಟ್

4. ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು... ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್

ಸಹೋದರಿಗೆ ಕೋಟ್

5. ನಿನ್ನ ಸಂತೋಷವೇ ನನ್ನ ಪ್ರಪಂಚ, ನಿನ್ನಿಂದಲೇ ಬದುಕು ಇಷ್ಟೊಂದು ಸುಂದರ ಗೊತ್ತಾ ಪುಟ್ಟಿ...ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್

ಸಹೋದರನಿಗೆ ಕೋಟ್

6. ನನ್ನ ಪ್ರೀತಿಯ ಅಣ್ಣ...ನಿನ್ನ ಜೊತೆ ತುಂಬಾ ಕಿತ್ತಾಡುವೆ, ಅದು ನನ್ನ ಹಕ್ಕು ಎಂದೇ ತಿಳಿದಿರುವವಳು ನಾನು, ಏಕೆಂದರೆ ನೀನೇ ನನ್ನ ಪ್ರಪಂಚ ಅಲ್ಲದೆ ನಿನ್ನ ತಂಗಿಯಾಗಿರುವುದಕ್ಕೆ ಹೆಮ್ಮೆಯೂ ಇದೆ... ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್

ಸಹೋದರನಿಗೆ ಕೋಟ್

7. ನನ್ನ ಮುದ್ದಿನ ಸಹೋದರ ನೀನು ನನಗೆ ಸಿಕ್ಕಿರುವುದರಿಂದ ಫ್ರೆಂಡ್‌ನ ಅಗ್ಯತವಿಲ್ಲ. ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್

ಸಹೋದರನಿಗೆ ಕೋಟ್

8. ನೀನು ನನಗೆ ಪೋಷಕರು ಕೊಟ್ಟಿರುವ ಅಮೂಲ್ಯವಾದ ಗಿಫ್ಟ್, ಲವ್‌ ಯೂ ಸೋ ಮಚ್, ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್

ಸಹೋದರನಿಗೆ ಕೋಟ್

9. ನನ್ನ ನಗುವಿಗೆ ಯಾರು ಕಾರಣ ಎಂದರೆ ನಿನ್ನತ್ತ ಬೊಟ್ಟು ತೋರುವೆ, ಹೌದು ನಿನ್ನ ರಕ್ಷೆಯೇ ನನ್ನ ಈ ಮಟ್ಟಕ್ಕೆ ಬೆಳೆಸಿದೆ ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್

ಸಹೋದರನಿಗೆ ಕೋಟ್

10. ಯಾರು ಈ ಮೆಸೇಜ್ ಓಸುತ್ತಿರುವವರೋ ಅವರು ನನ್ನ ಹೃದಯಕ್ಕೆ ತುಂಬಾ ಸಮೀಪವಾಗಿರುವವರು, ಅವರನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಹ್ಯಾಂಡ್‌ಸಮ್ ಅಣ್ಣ... ಹ್ಯಾಪಿ ರಕ್ಷಾ ಬಂಧನ

English summary

Raksha Bandhan 2020: Wishes, Greetings, Images, Quotes, Whatsapp and Facebook Status Messages

Here are inspiring Rakshabandan quotes in kannada, Read on,
X