For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಬಿರುಕು ಮೂಡಲು ಇದೇ ನೋಡಿ ಕಾರಣ

|

ಪ್ರೀತಿಗೆ ಎಲ್ಲೆ ಇಲ್ಲ, ಪ್ರೇಮಕ್ಕೆ ಗಡಿ ಇಲ್ಲ. ಈ ಮಾತು ಎಷ್ಟು ಸತ್ಯವಲ್ಲವೇ? ಪ್ರತಿಯೊಬ್ಬ ಸಂಗಾತಿ ತನ್ನ ಸಂಬಂಧದಲ್ಲಿ ಇದೇ ರೀತಿಯ ಕನಸು ಕಂಡು ಇಡೀ ಜೀವನ ಖುಷಿಯಾಗಿ ಕಾಲ ಕಳೆಯಬೇಕೆಂದು ಆಸೆ ಪಟ್ಟಿರುತ್ತಾರೆ. ಅಂದುಕೊಂಡ ಹಾಗೆ ಮೊದಲಿನ ಕೆಲವು ದಿನಗಳು ಇರುತ್ತವೆ. ಆದರೆ ದಿನಗಳೆದಂತೆ ಇಬ್ಬರ ಮಧ್ಯೆ ಸಲುಗೆ ಪ್ರೀತಿ ಹೆಚ್ಚಾದಂತೆ ಸಂಬಂಧದಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

Personality Traits of a Bad Partner

ಇದಕ್ಕೆ ಅತಿಯಾದ ಪ್ರೀತಿ ಕಾರಣವೋ ಅಥವಾ ಎಲ್ಲೆ ಮೀರಿದ ಮಾತು ಕಾರಣವೋ ಗೊತ್ತಿಲ್ಲ. ಆದರೆ ತಿಳಿದೋ ತಿಳಿಯದೆಯೋ ಇದು ಮಿತಿ ಮೀರಿದರೆ ಸಂಬಂಧ ಅಂತ್ಯ ಕಾಣುವುದು ಕೋರ್ಟು ಕಚೇರಿಗಳಲ್ಲಿ. ಹಾಗಾಗಿ ತನ್ನ ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿ ದೀರ್ಘಕಾಲ ಉಳಿಸಿಕೊಳ್ಳಲು ನೀವು ಈ ಕೆಳಗಿನ ನಿಮ್ಮದೇ ಆದ ಕೆಲವೊಂದು ವರ್ತನೆಗಳಿಂದ ದೂರವಿದ್ದರೆ ಒಳ್ಳೆಯದು.

ಎಲ್ಲಾ ವಿಷಯಕ್ಕೂ ನಿಮ್ಮ ಸಂಗಾತಿಯನ್ನು ದೂರುವುದು

ಎಲ್ಲಾ ವಿಷಯಕ್ಕೂ ನಿಮ್ಮ ಸಂಗಾತಿಯನ್ನು ದೂರುವುದು

ಖಂಡಿತ ಇದೊಂದು ಕೆಟ್ಟ ಅಭ್ಯಾಸ. ಒಂದು ಸಂಬಂಧದಲ್ಲಿ ದಿನ ಕಳೆದಂತೆ, ಪ್ರೀತಿ ಹೆಚ್ಚಾದಂತೆ ಸಲುಗೆ ಕೂಡ ಬೆಳೆಯುತ್ತದೆ. ಇದು ಕೆಲವೊಮ್ಮೆ ಮಾತುಗಳ ಏರುಪೇರಿಗೆ ಕಾರಣವಾಗುತ್ತದೆ. ಸಂಬಂಧದಲ್ಲಿ ಗಂಡ-ಹೆಂಡತಿ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವಿದೆ. ಯಾವುದೇ ಒಂದು ಗಟ್ಟಿಯಾದ ಸಂಬಂಧದಲ್ಲಿ ತಪ್ಪುಗಳು ನಡೆಯುವುದಿಲ್ಲ ಅಥವಾ ನಡೆಯಬಾರದು ಅಥವಾ ಯಾರಿಂದ ನಡೆದಿದೆ ಎಂಬುದು ಮುಖ್ಯವಾಗುವುದಿಲ್ಲ.

ಯಾವುದೇ ಸಂದರ್ಭದಲ್ಲಿ ಯಾವುದೋ ಒಂದು ಅಚಾತುರ್ಯದಿಂದ ನಡೆದ ತಪ್ಪುಗಳನ್ನು ಇಬ್ಬರೂ ಕುಳಿತು ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಂಡು ಮುಂದೆ ಇನ್ನೊಮ್ಮೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸಿ ಮುಂದೆ ಸಾಗುವುದೇ ನಿಜವಾದ ಜೀವನ. ಅದನ್ನು ಬಿಟ್ಟು ಎಂದೋ ಮಾಡಿದ ತಪ್ಪನ್ನು ಪದೇ ಪದೇ ನೆನೆಸಿಕೊಂಡು ಅದಕ್ಕಾಗಿ ಸಂಗಾತಿಯನ್ನು ಚುಚ್ಚಿ ಚುಚ್ಚಿ ಮಾತನಾಡಿ ಈಗಲೂ ಕೂಡ ನಡೆಯುವ ಕೆಲವೊಂದು ವಿಷಯಗಳಿಗೆ ಬೆಣ್ಣೆಯಲ್ಲಿ ಕೂದಲು ಹುಡುಕಿದ ಹಾಗೆ ತಪ್ಪುಗಳನ್ನು ಹುಡುಕಿ ನಿಮ್ಮ ಸಂಗಾತಿಯನ್ನು ಮಾನಸಿಕವಾಗಿ ಹಿಂಸೆ ಮಾಡಲು ಮುಂದಾದರೆ ಖಂಡಿತ ನಿಮ್ಮ ಸಂಬಂಧ ಹೆಚ್ಚು ದಿನ ಉಳಿಯಲಾರದು.

ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದು

ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದು

ಗಂಡ-ಹೆಂಡತಿಯ ಸಂಬಂಧ ಎಂದರೆ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲೂ ಮುಚ್ಚು ಮರೆ ಇಲ್ಲದೆ ಜೀವನ ನಡೆಸುವುದು. ಆದರೆ ಕೆಲವರ ವಿಚಾರದಲ್ಲಿ ಇದು ತದ್ವಿರುದ್ಧವಾಗಿರುತ್ತದೆ. ತಾವು ಮಾಡುವ ಸಣ್ಣ ಪುಟ್ಟ ಕೆಲಸಗಳನ್ನು ತಮ್ಮ ಸಣ್ಣ ಆಸೆ-ಆಕಾಂಕ್ಷೆಗಳನ್ನು ಸಂಗಾತಿಯ ಬಳಿ ಹೇಳಿಕೊಳ್ಳಲು ಹಿಂಜರಿಯುವಂತಹ ಅಥವಾ ಬೇಕೆಂದೇ ಮುಚ್ಚಿಟ್ಟು ಆನಂತರ ಅದರ ಬಗ್ಗೆ ವಿಚಾರ ಮಾಡಲು ಹೋಗಿ ಪೇಚಿಗೆ ಸಿಲುಕುವಂತಹ ಸಂದರ್ಭವಿರುತ್ತದೆ. ಇದು ಯಾವುದೇ ಒಂದು ಒಳ್ಳೆಯ ಸಂಬಂಧದ ಲಕ್ಷಣವಲ್ಲ. ಕೆಲವೊಂದು ಮುಚ್ಚಿಟ್ಟ ವಿಚಾರಗಳು ಇದ್ದಕ್ಕಿದ್ದಂತೆ ಸ್ಫೋಟವಾಗಿ ಸಂಬಂಧದಲ್ಲಿ ದೊಡ್ಡ ಬಿರುಕನ್ನೇ ಮೂಡಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಂದಿಗೂ ಸಹ ಅದರಲ್ಲೂ ನಿಮ್ಮ ಸಂಗಾತಿಯ ಜೊತೆ ಯಾವುದೇ ವಿಷಯವನ್ನು ಮುಚ್ಚಿಟ್ಟು ನಂತರ ತೊಂದರೆಗೆ ಸಿಲುಕಿಕೊಳ್ಳುವ ಪ್ರಮೇಯ ಬೇಡ.

ನಿಮ್ಮ ಸಂಗಾತಿಗೆ ಸ್ವಲ್ಪವೂ ಪ್ರೈವೆಸಿ ಕೊಡದಿರುವುದು

ನಿಮ್ಮ ಸಂಗಾತಿಗೆ ಸ್ವಲ್ಪವೂ ಪ್ರೈವೆಸಿ ಕೊಡದಿರುವುದು

ಮನುಷ್ಯನ ವಿಚಾರ ತೆಗೆದುಕೊಂಡಾಗ ಆತ ನಿಜಕ್ಕೂ ಒಬ್ಬ ಭಾವನಾಜೀವಿ. ಯಾರ ಜೊತೆ ಎಷ್ಟೇ ಗಟ್ಟಿಯಾದ ಸಂಬಂಧದಲ್ಲಿ ಅಂಟಿಕೊಂಡಿದ್ದರೂ ಸಹ ದಿನದಲ್ಲಿ ಕೆಲವು ಸಮಯ ಆತ ತನಗಾಗಿ ಸ್ವಲ್ಪ ಸಮಯ ಮೀಸಲಿಡಬೇಕಾಗುತ್ತದೆ. ಗಂಡ-ಹೆಂಡತಿಯ ವಿಚಾರದಲ್ಲಿ ಕೂಡ ಇದು ಅವಶ್ಯಕ.

ಕೆಲವು ಸಮಯ ಇಬ್ಬರೂ ಒಬ್ಬಂಟಿಯಾಗಿದ್ದು ತಮ್ಮ ಜೀವನದ ಅವಶ್ಯಕತೆಗಳನ್ನು ಆಲೋಚಿಸಲು ಮುಂದಾಗಬೇಕಾಗುತ್ತದೆ. ಆದರೆ ಸಿಗುವ ಇಂತಹ ಸ್ವಲ್ಪ ಸಮಯವನ್ನು ನೀವು ಕಸಿದುಕೊಂಡು ಎಲ್ಲಾ ವಿಷಯಕ್ಕೂ ಮೂಗು ತೂರಿಸಿ ತೊಂದರೆ ಕೊಡುತ್ತಿದ್ದರೆ, ಇದು ನಿಮ್ಮ ಸಂಗಾತಿಗೆ ಸ್ವಲ್ಪ ಕಹಿ ಅನುಭವ ಉಂಟಾದಂತೆ ಆಗುತ್ತದೆ ಮತ್ತು ನಿಮ್ಮ ಮೇಲೆ ಬೇಸರ ಮೂಡಲು ಕಾರಣವಾಗುತ್ತದೆ.

ಸಣ್ಣ ಪುಟ್ಟ ಜಗಳಕ್ಕೆ, ಡೈವರ್ಸ್ ಎಂಬ ಉತ್ತರ

ಸಣ್ಣ ಪುಟ್ಟ ಜಗಳಕ್ಕೆ, ಡೈವರ್ಸ್ ಎಂಬ ಉತ್ತರ

ಈಗಿನ ಬಹಳಷ್ಟು ಯುವಜನತೆ ಅನುಸರಿಸುತ್ತಿರುವ ಅತ್ಯದ್ಭುತ ವಿಚಾರ ಇದು ಎಂದು ಹೇಳಬಹುದು. ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಿದ ಮದುವೆ, ಅಥವಾ ತಾವೇ ಇಷ್ಟ ಪಟ್ಟು ಪ್ರೀತಿಸಿ ಆದ ಮದುವೆ ಕೇವಲ ಕೆಲವೇ ದಿನಗಳಲ್ಲಿ ಮುರಿದು ಬೀಳುತ್ತವೆ. ಹಿಂದಿನ ಕಾಲದಲ್ಲಿ ಈ ರೀತಿ ಒಂದೇ ಒಂದು ಪ್ರಕರಣ ಎಲ್ಲಿಯೂ ಕಂಡು ಬರುತ್ತಿರಲಿಲ್ಲ.

ಹಾಗಾದರೆ ಇದಕ್ಕೆ ಕಾರಣವೇನಿರಬಹುದು? ಯುವಜನತೆಯ ಸೂಕ್ಷ್ಮ ಸ್ವಭಾವವೋ ಅಥವಾ ಆತುರದ ಭಾವದಿಂದ ಕೈಗೊಂಡ ನಿರ್ಧಾರವೋ ಗೊತ್ತಿಲ್ಲ. ಒಟ್ಟಿನಲ್ಲಿ ಸ್ವಲ್ಪ ತಾಳ್ಮೆ ವಹಿಸಿ ಬರುವ ಇಕ್ಕಟ್ಟಿನ ಸಂದರ್ಭವನ್ನು ಹೇಗಾದರೂ ನಿಭಾಯಿಸಿದರೆ ಇಡೀ ಜೀವನ ಪೂರ್ತಿ ಖುಷಿಯಾಗಿ ಕಾಲ ಕಳೆಯಬಹುದು. ಇದು ಪ್ರತಿಯೊಬ್ಬ ಸಂಗಾತಿಗೂ ಅರ್ಥವಾಗಬೇಕಾದ ವಿಚಾರ.

ನಿಮ್ಮ ಸಂಗಾತಿಗೆ ನೀವು ಬೆಂಬಲ ಕೊಡದಿರುವುದು

ನಿಮ್ಮ ಸಂಗಾತಿಗೆ ನೀವು ಬೆಂಬಲ ಕೊಡದಿರುವುದು

ನಿಮ್ಮ ಬಗ್ಗೆ ನಿಮ್ಮ ಸಂಗಾತಿಗೆ ಸಾಕಷ್ಟು ಕನಸುಗಳಿರುತ್ತವೆ. ನನ್ನ ಪ್ರತಿಯೊಂದು ಕಷ್ಟ ಸುಖದಲ್ಲಿ ನನ್ನ ಸಂಗಾತಿ ಭಾಗಿಯಾಗಬಹುದು ಎಂದು ತಮ್ಮ ಮನಸ್ಸಿನಲ್ಲಿ ತಾವೇ ಅಂದುಕೊಂಡಿರುತ್ತಾರೆ. ಆದರೆ ಎಲ್ಲವನ್ನು ನಿಮ್ಮ ಬಳಿ ಬಾಯಿ ಬಿಟ್ಟು ಹೇಳಿರುವುದಿಲ್ಲ ಅಷ್ಟೇ.

ಆದರೆ ಯಾವುದೇ ವಿಚಾರಗಳಿಗೆ ನಿಮ್ಮ ಸಂಗಾತಿ ನಿಮ್ಮ ಸಹಕಾರ ಬಯಸಿದ ಕ್ಷಣದಲ್ಲಿ ನೀವು ವಿರೋಧಿಸಿ ಅವರ ಮನಸ್ಸಿಗೆ ಬೇಸರ ಮಾಡಿದರೆ ಇದು ಸಹಜವಾಗಿಯೇ ಸಂಬಂಧದಲ್ಲಿ ಬೇರೆಯ ದಾರಿ ಹಿಡಿಯುತ್ತದೆ. ಹಾಗಾಗಿ ಇದೊಂದು ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Personality Traits of a Bad Partner

Here we are discussing about Personality Traits of a Bad Partner. If you still think that you’re a good partner and that you’re doing your best to build on your relationship, then watch out for these signs that may tell you otherwise.Read more.
X
Desktop Bottom Promotion