For Quick Alerts
ALLOW NOTIFICATIONS  
For Daily Alerts

ಈ 5 ವ್ಯಕ್ತಿಗಳ ಬಳಿ ಸಂಗಾತಿಯ ಬಗ್ಗೆ ದೂರಲೇಬಾರದು

|

ಗಂಡ-ಹೆಂಡತಿ ವಿಷಯದಲ್ಲಿ ಮೂಗು ತೂರಿಸಲು ಬಿಡಬಾರದು, ಒಂದು ಹಾಗೇ ಬಿಟ್ಟಿದ್ದೇ ಆದರೆ ಆ ಸಂಸಾರದಲ್ಲಿ ಮನಸ್ತಾಪ ಹೆಚ್ಚಾಗಲು ಆ ವ್ಯಕ್ತಿಗಳು ಬೀರುವ ಪ್ರಭಾವವೇ ಸಾಕು. ಏನೇ ಮನಸ್ತಾಪ-ಭಿನ್ನಾಭಿಪ್ರಾಯಗಳು ಇದ್ದರೆ ಮೊದಲಿಗೆ ತಮ್ಮಲ್ಲಿಯೇ ಬಗೆಹರಿಸಲು ಪ್ರಯತ್ನಿಸಬೇಕು. ಕೆಲವರಲ್ಲಿ ಒಂದು ಅಭ್ಯಾಸ ಇರುತ್ತದೆ, ಏನೇ ವಿಷಯ ಇದ್ದರೂ ಅದು ತಮ್ಮ ಪೋಷಕರಿಗೆ ತಿಳಿಸುವುದು.

ಮದುವೆಯಾದ ತಕ್ಷಣ ಪೋಷಕರಿಗೆ ಏನೂ ಹೇಳಬಾರದು ಎಂದು ನಾನು ಹೇಳುತ್ತಿಲ್ಲ, ಆದರೆ ತನ್ನ ಸಂಗಾತಿ ಹಾಗೆ ಮಾಡಿದ, ಹೀಗೆ ಮಾಡಿದ ಎಂದು ಪ್ರತಿಯೊಂದು ವಿಷಯವನ್ನು ಹೇಳುವುದು ಮಾತ್ರ ತಪ್ಪು. ಹೀಗೆ ಹೇಳುವುದರಿಂದ ಅರು ನಿಮ್ಮಿಬ್ಬರ ವಿಷಯದಲ್ಲಿ ಹೆಚ್ಚು ಮೂಗು ತೂರಿಸಲು ಪ್ರಾರಂಭಿಸುತ್ತಾರೆ. ಅವರು ಮಾಡುತ್ತಿರುವುದು ತಪ್ಪು ಎಂಬ ಅರಿವು ಅವರಿಗೂ ಬಂದಿರುವುದಿಲ್ಲ, ಅವರ ಪ್ರಕಾರ ಅಯ್ಯೋ ನನ್ನ ಮಗ/ಮಗಳು ಚೆನ್ನಾಗಿರಬೇಕೆಂಬ ಬಯಕೆ ಇರುತ್ತದೆ, ಹಾಗಾಗಿ ಅವರು ನೀನು ಹಾಗೇ ಇರು, ಹೀಗೆ ಇರು ಎಂದು ಹೇಳುವ ಟಿಪ್ಸ್ ನಿಮ್ಮಿಬ್ಬರ ನಡುವೆ ಮನಸ್ತಾಪ ಮತ್ತಷ್ಟು ಹೆಚ್ಚಿಸಬಹುದು.

ದಾಂಪತ್ಯದಲ್ಲಿ ಸಣ್ಣ-ಪುಟ್ಟ ಮನಸ್ತಾಪ ಬರುವುದು ಸಹಜ, ಇನ್ನು ಕೆಲವೊಮ್ಮೆ ದೊಡ್ಡ ಬಿರುಗಾಳಿಯೇ ಬೀಸಬಹುದು, ಆಗ ನಮ್ಮ ಪಕ್ಕ ಯಾರಾದರೂ ಇದ್ದರೆ ನಮ್ಮ ಮನಸ್ಸಿಗೆ ಒಂದ ಧೈರ್ಯ, ನಮ್ಮ ಕಷ್ಟ ಕಾಲದಲ್ಲಿ ನಮ್ಮ ಜೊತೆ ನಿಲ್ಲುವುದು ನಮ್ಮ ಪೋಷಕರು, ನಮ್ಮ ಆಪ್ತರು, ಸ್ನೇಹಿತರು, ಆದರೆ ಗಂಡ-ಹೆಂಡತಿ ಸಂಬಂಧದಲ್ಲಿ ಬರುವ ಮನಸ್ತಾಪ ಇವುಗಳೆನ್ನೆಲ್ಲಾ ನಾವು ಈ ವ್ಯಕ್ತಿಗಳ ಹತ್ತಿರ ಹೇಳದಿರುವುದೇ ಸೂಕ್ತ:

1. ನಿಮ್ಮ ಆಪ್ತ ಕುಟುಂಬದವರ ಜೊತೆ

1. ನಿಮ್ಮ ಆಪ್ತ ಕುಟುಂಬದವರ ಜೊತೆ

ಹೌದು ನಿಮ್ಮಿಬ್ಬರ ನಡುವೆ ಏನಾದರೂ ಸಮಸ್ಯೆ ಇದ್ದರೆ ಮೊದಲಿಗೆ ನೀವಿಬ್ಬರು ಮಾತನಾಡಿ ಬಗೆಹರಿಸಬೇಕು, ಬದಲಿಗೆ ನಿಮ್ಮ ಪೋಷಕರು ಅಥವಾ ತುಂಬಾ ಆಪ್ತರ ಬಳಿ ಹೇಳಿಕೊಂಡರೆ ಅವರು ನಿಮ್ಮ ಸಂಗಾತಿಯ ಬಗ್ಗೆ ತಪ್ಪಾಗಿ ಭಾಬಿಸಬಹುದು, ನಂತರ ಅದೇ ಇಮೇಜ್ ಅವರಲ್ಲಿ ಉಳಿದುಕೊಳ್ಳುತ್ತದೆ. ನಂತರ ನೀವಿಬ್ಬರು ಸರಿಯಾದರೂ ಅವರು ನಿಮ್ಮ ಸಂಗಾತಿಯ ಬಗ್ಗೆ ಗೌರವ ಇರುವುದಿಲ್ಲ. ಆದ್ದರಿಂದ ಆಪ್ತರ ಬಳಿ ನಿಮ್ಮ ಸಂಗಾತಿಯನ್ನು ಎಂದಿಗೂ ಬಿಟ್ಟುಕೊಡಬೇಡಿ.

2. ನಿಮ್ಮ ವಿರುದ್ಧ ಲಿಂಗದವರ ಬಳಿ ಹೇಳಬೇಡಿ

2. ನಿಮ್ಮ ವಿರುದ್ಧ ಲಿಂಗದವರ ಬಳಿ ಹೇಳಬೇಡಿ

ಹೌದು ನಿಮ್ಮ ಕುಟುಂಬ ಸಮಸ್ಯೆಯನ್ನು ಆಫೀಸ್‌ನಲ್ಲೋ ಅಥವಾ ನಿಮ್ಮ ಸ್ನೇಹಿತರ ಬಳಿ ಹೇಳಿಕೊಳ್ಳುವಾಗ ಅವರು ವಿರುದ್ಧ ಲಿಂಗದವರು ಆದರೆ ಅಂದರೆ ನೀವು ಪುರುಷರಾಗಿದ್ದು ಅವರು ಮಹಿಳೆಯಾಗಿದ್ದರೆ, ನೀವು ಮಹಿಳೆಯಾಗಿದ್ದು ಅವರು ಪುರುಷರಾಗಿದ್ದರೆ ಅವರು ನಿಮ್ಮ ಮೇಲೆ ಅನುಕಂಪ ತೋರಿಸಬಹುದು, ನಂತರ ಆ ಅನುಕಂಪವೇ ನಿಮ್ಮಿಬ್ಬರ ನಡುವೆ ಆಪ್ತತೆ ಹೆಚ್ಚು ಮಾಡಿ ಸಂಬಂಧ ಮತ್ತೊಂದು ತಿರುವಿನಲ್ಲಿ ಸಾಗುವ ಸಾಧ್ಯತೆ ಹೆಚ್ಚು, ಇದರಿಂದ ನಿಮ್ಮ ದಾಂಪತ್ಯದಲ್ಲಿ ಕಲಹ ಮತ್ತಷ್ಟು ಹೆಚ್ಚಾಗಬಹುದು, ಆದ್ದರಿಂದ ನಿಮ್ಮ ಸಂಗಾತಿಯ ಬಗ್ಗೆ ಅವರಲ್ಲಿ ದೂರ ಹೇಳಲು ಹೋಗಬೇಡಿ.

3. ಮದುವೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದವರ ಬಳಿ

3. ಮದುವೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದವರ ಬಳಿ

ಕೆಲವರು ಇರುತ್ತಾರೆ ಅವರಿಗೆ ದಾಂಪತ್ಯ ಜೀವನದ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇರುವುದಿಲ್ಲ. ಕೆಲವರು ತಮ್ಮ ಆ ದೃಷ್ಟಿಕೋನದಿಂದಾಗಿ ಮದುವೆಯಿಂದ ದೂರ ಉಳಿದಿರುತ್ತಾರೆ. ಇನ್ನು ಕೆಲವರು ಮದುವೆಯಾಗಿರುತ್ತಾರೆ, ಆದರೆ ಅವರ ಜೀನದ ಕಹಿ ಅನುಭವಗಳೇ ಎಲ್ಲಾ ವೈವಾಹಿಕ ಜೀವನದ್ದು ಎಂದು ಬಲವಾಗಿ ನಂಬಿರುತ್ತಾರೆ. ಅಂಥವರು ಯಾವಾಗಲೂ ವೈವಾಹಿಕ ಜೀವನದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಹೇಳುವುದಿಲ್ಲ. ಅಂಥವರ ಬಳಿ ನಿಮ್ಮ ದಾಂಪತ್ಯದ ಬಗ್ಗೆ ಹೇಳಿಕೊಂಡರೆ ಅವರು ನಿಮ್ಮ ಸಂಗಾತಿ ಸರಿಯಿಲ್ಲ, ಈ ವೈವಾಹಿಕ ಜೀವನವೇ ಸರಿಯಿಲ್ಲ ಎಂದು ತಮ್ಮ ಮಾತುಗಳಿಂದ ನಿಮ್ಮ ಮೇಲೆ ಪ್ರಭಾವ ಬೀರುತ್ತಾರೆ. ಇಂಥವರ ಮಾತು ಕೇಳಿದರೆ ನಿಮ್ಮ ಸಂಸಾರ ಮತ್ತಷ್ಟು ತಾಳ ತಪ್ಪುವುದು ಗ್ಯಾರಂಟಿ.

4. ನಿಮ್ಮ ಸಂಗಾತಿಯನ್ನು ಇಷ್ಟಪಡದವರ ಬಳಿ

4. ನಿಮ್ಮ ಸಂಗಾತಿಯನ್ನು ಇಷ್ಟಪಡದವರ ಬಳಿ

ಮನೆಯಲ್ಲಿ ಯಾರಿಗಾದರೂ ನಿಮ್ಮ ಸಂಗಾತಿಯನ್ನು ಕಂಡರೆ ಇಷ್ಟವಿಲ್ಲದಿದ್ದರೆ ಅವರ ಬಳಿ ನಿಮ್ಮ ಸಂಗಾತಿಯ ಕುರಿತು ತಪ್ಪಾಗಿ ಹೇಳುವುದರಿಂದ ಅವರಿಗೆ ಖುಷಿಯಾಗುತ್ತದೆ. ಅವರು ನೀವಿಬ್ಬರು ಒಂದಾಗಿ ಬಾಳಿ ಎಂದು ಹೇಳುವ ಬದಲು ಅವರು ನಿಮ್ಮ ಅಸಹನೆ, ದ್ವೇಷಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಇಂಥವರ ಮಾತು ಕೇಳಿದರೆ ನಿಮ್ಮ ಸಂಸಾರ ಒಡೆದು ಚೂರಾಗುವುದು.

5. ವಾಸ್ತವನ್ನು ಅರ್ಥ ಮಾಡಿಕೊಳ್ಳದವರಲ್ಲಿ

5. ವಾಸ್ತವನ್ನು ಅರ್ಥ ಮಾಡಿಕೊಳ್ಳದವರಲ್ಲಿ

ಕೆಲವರು ಇರುತ್ತಾರೆ, ಅವರು ಕಲ್ಪನೆಯಲ್ಲಿಯೇ ಬದುಕುತ್ತಾರೆ, ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಅಂಥವರ ಬಳಿ ನಿಮ್ಮ ಸಮಸ್ಯೆ ಹೇಳಿಕೊಂಡರೆ ಯಾವುದೇ ಪ್ರಯೋಜನ ಇರುವುದಿಲ್ಲ. ಒಂದು ಸಂಸಾರ ಸರಿ ಹೋಗಬೇಕೆಂದರೆ ನೀವು ಅದಕ್ಕಾಗಿ ಪ್ರಯತ್ನಿಸಬೇಕು. ಈ ಪ್ರಯತ್ನದಲ್ಲಿ ಹೀಗೆ ತಪ್ಪಾದವರ ಸಲಹೆ ಪಡೆಯುವ ಬದಲು ಜೀವನದ ಅನುಭವ ಇರುವ ವ್ಯಕ್ತಿಯಿಂದ ಸಲಹೆ ಪಡೆಯುವುದು ಎಂದಿಗೂ ಒಳ್ಳೆಯದು. ಸಾಧ್ಯವಾದರೆ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಒಂದು ಕೌನ್ಸಿಲಿಂಗ್ ಮಾಡುವುದರಿಂದ ನಿಮ್ಮ ಸಮಸ್ಯೆ ಬಗೆ ಹರಿಯುವುದಾದರೆ ಅದನ್ನು ಮಾಡಿ, ಎಲ್ಲರ ಬಳಿ ನಿಮ್ಮ ಸಮಸ್ಯೆ ಹೇಳಲು ಹೋಗಬೇಡಿ.

English summary

People You Shouldn't Talk to About Your Marital Problems in Kannada

People you shouldn't talk to about your marital problems, read on,
X
Desktop Bottom Promotion