For Quick Alerts
ALLOW NOTIFICATIONS  
For Daily Alerts

ದಂಪತಿಗಳ ಬಾಂಧವ್ಯ ವೃದ್ಧಿಗೆ ಹೊಸ ವರ್ಷದ ಆರೋಗ್ಯಕರ ಸಂಕಲ್ಪಗಳು

|

ಹಳೆ ವರ್ಷದಲ್ಲಿನ ನೋವು, ನಲಿವು ಸುಖ ದುಃಖಗಳನ್ನು ಮರೆತು, ನಾವು ಹೊಸ ವರ್ಷಕ್ಕೆ ತಯಾರಾಗಿದ್ದೇವೆ. ಹೊಸ ವರ್ಷದ ಆರಂಭದಲ್ಲಿ ಕೆಲವರು ಸಂಕಲ್ಪ(ರೆಷಲ್ಯೂಷನ್) ಮಾಡಿಕೊಳ್ಳುವರು. ಹೊಸ ವರ್ಷದಲ್ಲಿ ಮಾಡಿದಂತಹ ಸಂಕಲ್ಪಗಳು ಕೆಲವೇ ದಿನಗಳಲ್ಲಿ ಹಾಗೆ ಬಿದ್ದು ಹೋಗುವುದು ಇದೆ. ಇನ್ನು ಕೆಲವರು ಅದನ್ನು ತುಂಬಾ ದೃಢವಾಗಿ ಪಾಲಿಸಿಕೊಂಡು ಹೋಗುವರು. ಹಾಗೆ ವೈಯಕ್ತಿಕ, ಕೌಟುಂಬಿಕ ಹಾಗೂ ವೃತ್ತಿ ಬದುಕಿನಲ್ಲಿ ಕೆಲವು ಸಂಕಲ್ಪಗಳನ್ನು ಮಾಡಬಹುದು.

couples goal

ಹೊಸ ವರ್ಷಕ್ಕೆ ಏನೇ ಸಂಕಲ್ಪಗಳನ್ನು ಮಾಡಿದರೂ ಜೀವನದಲ್ಲಿ ಪ್ರೀತಿ ಎನ್ನುವುದು ಎಲ್ಲಕ್ಕಿಂತಲೂ ಮೇಲು. ಸಂಬಂಧದಲ್ಲಿ ಪರಸ್ಪರರೊಂದಿಗೆ ಪ್ರೀತಿ ಹಾಗೂ ವಿಶ್ವಾಸ ಅತೀ ಮುಖ್ಯವಾಗಿರುವುದು. ಹೊಂದಾಣಿಕೆಯಿಂದ ಜೀವನ ಸಾಗಿಸಿಕೊಂಡು ಹೋದರೆ ಭೂಮಿ ಮೇಲಿನ ಸುಖವೆಲ್ಲವೂ ಸಿಗುವುದು.
ಸಂಗಾತಿಗಳಿಬ್ಬರು ಜತೆಯಾಗಿ ಗುರಿಯನ್ನಿಟ್ಟುಕೊಂಡು ಅದರೆಡೆಗೆ ಮುನ್ನಡೆದಾಗ ಖಂಡಿತವಾಗಿಯೂ ಅದನ್ನು ಸಾಧಿಸಲು ಸಾಧ್ಯವಾಗುವುದು. ಕೆಲವೊಂದು ಗುರಿಗಳು ಸಣ್ಣ ಅಥವಾ ದೀರ್ಘಾವಧಿಯದ್ದಾಗಿರಬಹುದು. ಆದರೆ ಈ ಎರಡು ಗುರಿಗಳನ್ನು ಮುಟ್ಟಲು ಸರಿಯಾದ ಯೋಜನೆ ಬೇಕಾಗುವುದು. ದಂಪತಿಯು ಜತೆಯಾಗಿ ಹೊಸ ವರ್ಷದಲ್ಲಿ ಯಾವ ರೀತಿಯ ರೆಷಲ್ಯೂಷನ್(ಸಂಕಲ್ಪ) ಮಾಡಿಕೊಳ್ಳಬಹುದು ಎಂದು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

2020ರಲ್ಲಿ ಹೊಸ ವರ್ಷದಲ್ಲಿ ದಂಪತಿಯು ತೆಗೆದುಕೊಳ್ಳಬೇಕಾದ ಹತ್ತು ರೆಷಲ್ಯೂಷನ್ ಗಳು ಇವೆ.

ಪರಸ್ಪರರಿಗೆ ಡಿಜಿಟಲ್ ಸ್ಪೇಸ್ ನೀಡುವುದು

ಪರಸ್ಪರರಿಗೆ ಡಿಜಿಟಲ್ ಸ್ಪೇಸ್ ನೀಡುವುದು

ಇದು ಡಿಜಿಟಲ್ ಯುಗ. ಪ್ರತಿಯೊಬ್ಬರ ಕೈಯಲ್ಲಿಯೂ ಅತ್ಯಾಧುನಿಕ ಮೊಬೈಲ್ ಫೋನ್ ಗಳು ಇದ್ದೇ ಇರುವುದು ಮತ್ತು ಈಮೇಲ್ ಗಳು ದೈನಂದಿನ ಜೀವನದ ಅಂಗವಾಗಿ ಹೋಗಿದೆ. ಅದೇ ರೀತಿಯಾಗಿ ಇದೆಲ್ಲವೂ ತುಂಬಾ ವೈಯಕ್ತಿಕ ಕೂಡ. ಹೀಗಾಗಿ ದಂಪತಿಯು ಪರಸ್ಪರರಿಗೆ ಡಿಜಿಟಲ್ ಸ್ಪೇಸ್ ನೀಡಬೇಕು. ಇಲ್ಲಿ ವೈಯಕ್ತಿಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಪರಸ್ಪರರ ಟೆಕ್ಸ್ಟ್ ಮತ್ತು ಮೆಸೇಜ್ ಗಳನ್ನು ನೋಡಬಾರದು. ದಂಪತಿಯು ಹೊಸ ವರ್ಷದಲ್ಲಿ ಇಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲವೆನ್ನುವ ಸಂಕಲ್ಪ ಮಾಡಿಕೊಳ್ಳಬೇಕು.

ಜತೆಯಾಗಿ ಅಡುಗೆ ಮಾಡುವುದು

ಜತೆಯಾಗಿ ಅಡುಗೆ ಮಾಡುವುದು

ಪತ್ನಿ ಅಡುಗೆ ಮಾಡಿದರೆ ಅದನ್ನು ಪತಿಯು ಕುಳಿತುಕೊಂಡು ತಿನ್ನುವುದು ಹಿಂದಿನಿಂದಲೂ ರೂಢಿಯಾಗಿರುವುದು. ದಂಪತಿಯು ಜತೆಯಾಗಿ ಅಡುಗೆ ಮಾಡಿಕೊಂಡರೆ ಆಗ ಅದರಿಂದ ಒಬ್ಬರ ಮೇಲೆ ಹೊರೆಯಾಗುವುದು ತಪ್ಪುವುದು. ಇಷ್ಟು ಮಾತ್ರವಲ್ಲದೆ ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಹೊಸ ವರ್ಷದಲ್ಲಿ ಮಾಡಿಕೊಳ್ಳಬೇಕಾದ ಮತ್ತೊಂದು ಸಂಕಲ್ಪವೆಂದರೆ ಅದು ಜತೆಯಾಗಿ ಅಡುಗೆ ಮಾಡುವುದು. ಪ್ರತಿನಿತ್ಯವು ಇದು ಸಾಧ್ಯವಾಗದೆ ಇದ್ದರೂ ವಾರದಲ್ಲಿ ಒಂದು ದಿನ ಇದನ್ನು ಕಡ್ಡಾಯವಾಗಿ ಪಾಲಿಸಿ.

ಸಾಮಾನ್ಯ ಆರ್ಥಿಕ ಹೂಡಿಕೆ

ಸಾಮಾನ್ಯ ಆರ್ಥಿಕ ಹೂಡಿಕೆ

ವೈವಾಹಿಕ ಸಂಬಂಧದಲ್ಲಿ ಜತೆಯಾದ ಬಳಿಕ ಹಣವು ಅಲ್ಲಿ ಒಬ್ಬರದ್ದಾಗಿರುವುದಿಲ್ಲ. ಜತೆಯಾಗಿ ಆರ್ಥಿಕ ಸಂಪನ್ಮೂಲದ ಒಂದು ಭಾಗವನ್ನು ಹೂಡಿಕೆ ಮಾಡಬೇಕು. ಇದರಿಂದ ಪರಸ್ಪರ ಜತೆಯಾಗಿ ಕೆಲಸ ಮಾಡಲು ಪ್ರೇರಣೆ ಸಿಗುವುದು ಮತ್ತು ಇದರಿಂದ ಒಳ್ಳೆಯ ಅವಕಾಶವು ಸಿಗುವುದು.

ಸಾಮಾನ್ಯ ಹವ್ಯಾಸ ಪಾಲಿಸುವುದು

ಸಾಮಾನ್ಯ ಹವ್ಯಾಸ ಪಾಲಿಸುವುದು

ವ್ಯಕ್ತಿಯ ಹವ್ಯಾಸವು ಹೇಗಿದೆ ಎನ್ನುವುದನ್ನು ನೋಡಿಕೊಂಡು ಆತನ ವ್ಯಕ್ತಿತ್ವ ತಿಳಿಯಬಹುದು ಎನ್ನುವುದೊಂದು ಮಾತು. ಹವ್ಯಾಸಗಳು ಮದುವೆಗೆ ಮೊದಲೇ ಪರಸ್ಪರರಲ್ಲಿ ಇರುವುದು. ಇಬ್ಬರಲ್ಲೂ ಸಾಮಾನ್ಯವಾಗಿ ಇರುವಂತಹ ಹವ್ಯಾಸವನ್ನು ಬೆಳೆಸಿಕೊಂಡು ಹೋಗಲು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿಕೊಳ್ಳಿ. ಈ ಸಣ್ಣ ಕ್ರಮವು ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಲಿದೆ.

ಜತೆಯಾಗಿ ಜಿಮ್ ಗೆ ಹೋಗುವುದು

ಜತೆಯಾಗಿ ಜಿಮ್ ಗೆ ಹೋಗುವುದು

ದೈಹಿಕ ಫಿಟ್ನೆಸ್ ವೈಯಕ್ತಿಕ ವಿಚಾರವೆಂದು ಹೇಳಬಹುದಾದರೂ ದಂಪತಿಯು ಜತೆಯಾಗಿ ಜಿಮ್ ಗೆ ಹೋದರೆ ಆಗ ಪರಸ್ಪರ ಪ್ರೇರಣೆ ಸಿಗುವುದು. ಇದರಿಂದ ದೈಹಿಕ ಫಿಟ್ನೆಸ್ ನಲ್ಲಿ ಹೆಚ್ಚಿನ ಫಲಿತಾಂಶವು ಸಿಗುವುದು. ಜಿಮ್ ಗೆ ಹೋಗುವುದು ವೈಯಕ್ತಿಕ ನಿರ್ಧಾರವಾದರೂ ಸಂಗಾತಿಯು ದೈಹಿಕ ಫಿಟ್ನೆಸ್ ಗಾಗಿ ಪಡುವ ಶ್ರಮವು ಪರಸ್ಪರ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವುದು.

ಸಂಗಾತಿ ಕುಟುಂಬದೊಂದಿಗೆ ಸಮಯ ಕಳೆಯುವುದು

ಸಂಗಾತಿ ಕುಟುಂಬದೊಂದಿಗೆ ಸಮಯ ಕಳೆಯುವುದು

ಇಬ್ಬರು ಜತೆಯಾಗಿದ್ದರೆ ಅದು ದಾಂಪತ್ಯವೆಂದು ನಾವು ಸಾಮಾಜಿಕವಾಗಿ ಹೇಳುವ ಮಾತು. ಆದರೆ ಇದು ಎರಡು ಜೀವಗಳ ಸಂಬಂಧ ಮಾತ್ರವಲ್ಲ, ಇಲ್ಲಿ ಎರಡು ಕುಟುಂಬಗಳು ಜತೆಯಾಗಿ ಇರುವುದು ಅತೀ ಮುಖ್ಯ. ಪ್ರತಿಯೊಬ್ಬರಿಗೂ ಅವರವರ ಕುಟುಂಬವು ಹೆಚ್ಚು ಮುಖ್ಯವಾಗಿ ಇರುವುದು. ಆದರೆ ಈ ಭಾವನೆಯನ್ನು ತೊಡೆದು ಹಾಕಿದರೆ ಆಗ ಖಂಡಿತವಾಗಿಯೂ ಪರಸ್ಪರ ಮತ್ತಷ್ಟು ಹತ್ತಿರವಾಗಬಹುದು. ಇದಕ್ಕಾಗಿ ಸಂಗಾತಿಯ ಕುಟುಂಬದ ಜತೆಗೆ ಹೆಚ್ಚು ಸಮಯ ಕಳೆಯಬೇಕು. ಈ ಹೊಸ ವರ್ಷದಲ್ಲಿ ನೀವು ಈ ಸಂಕಲ್ಪ ಮಾಡಲು ಮರೆಯಬೇಡಿ.

ದಿನದಲ್ಲಿ ಒಂದು ಹೊತ್ತಿನ ಊಟವಾದರೂ ಜತೆಯಾಗಿ ಮಾಡುವುದು

ದಿನದಲ್ಲಿ ಒಂದು ಹೊತ್ತಿನ ಊಟವಾದರೂ ಜತೆಯಾಗಿ ಮಾಡುವುದು

ಇಂದಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗಕ್ಕೆ ತೆರಳುವ ಕಾರಣದಿಂದಾಗಿ ಪರಸ್ಪರ ಜತೆಯಾಗಿ ಸಮಯ ಕಳೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದಂಪತಿಯು ದಿನದಲ್ಲಿ ಒಂದು ಹೊತ್ತಿನ ಊಟವನ್ನಾದರೂ ಜತೆಯಾಗಿ ಮಾಡಬೇಕು. ಈ ವೇಳೆ ಮೊಬೈಲ್ ನ್ನು ದೂರವಿಡಬೇಕು. ಈ ನಿಯಮದಿಂದಾಗಿ ಪರಸ್ಪರ ಸಂವಹನ ಹೆಚ್ಚಾಗುವುದು ಮತ್ತು ಅದು ಆರೋಗ್ಯಕರ ಸಂಬಂಧವನ್ನು ನಿರ್ಮಿಸುವುದು.

ವೈಯಕ್ತಿಕ ಜಾಗ ನೀಡಿ

ವೈಯಕ್ತಿಕ ಜಾಗ ನೀಡಿ

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಯದಲ್ಲಿ ಏಕಾಂಗಿಯಾಗಿ ಇರಬೇಕು ಎಂದು ಅನಿಸುವುದು ಇದೆ. ಇಂತಹ ಸಮಯದಲ್ಲಿ ಸಂಗಾತಿಯು ಮಧ್ಯೆ ಪ್ರವೇಶ ಮಾಡಬಾರದು. ಆತ ಅಥವಾ ಆಕೆ ಏಕಾಂಗಿಯಾಗಿ ಸಮಯ ಕಳೆಯಲು ಅವಕಾಶ ಮಾಡಿಕೊಡಿ. ಇದನ್ನು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಹೊಸ ವರ್ಷದಲ್ಲಿ ನೀವು ಈ ಸಂಕಲ್ಪ ಮಾಡಿಕೊಳ್ಳಿ. ಇದು ಅತೀ ಅಗತ್ಯ ಕೂಡ.

ಜತೆಯಾಗಿ ಸಮಾಜ ಸೇವೆ ಮಾಡುವುದು

ಜತೆಯಾಗಿ ಸಮಾಜ ಸೇವೆ ಮಾಡುವುದು

ಪರಸ್ಪರ ಜತೆಯಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರೆ ಆಗ ಒಳ್ಳೆಯ ಭಾವನೆ ಮೂಡುವುದು. ಜತೆಯಾಗಿ ಬೇರೆಯವರಿಗೆ ನೆರವು ನೀಡಿದರೆ ಒಳ್ಳೆಯ ಭಾವನೆಯು ದ್ವಿಗುಣವಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರಣದಿಂದಾಗಿ ತಮ್ಮ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡುವ ಜತೆಗೆ ಸಂಬಂಧವು ಬಲಗೊಳ್ಳುವುದು. ಇದು ಹೊಸ ವರ್ಷದಲ್ಲಿ ಕೈಗೊಳ್ಳಬಹುದಾದ ಒಂದು ಒಳ್ಳೆಯ ಸಂಕಲ್ಪವಾಗಿದೆ.

English summary

New Year Resolutions Every Couple Should Make In 2020

when couples have well-defined goals can they expect their relationship to stand every test of time. Now, these common goals may be either short term or long term. Both the type of goals require careful planning and any form of procrastination is not encouraged. The best way to come up with plans like this and make sure that one sticks to them (not just individually but also as a couple) is to make new year resolutions as a couple. Here is a list of ten must-make New Year resolutions for 2020 that one must make as a couple. Read more.
X
Desktop Bottom Promotion