For Quick Alerts
ALLOW NOTIFICATIONS  
For Daily Alerts

ಅತ್ತೆ-ಸೊಸೆ ಸಂಬಂಧ ಚೆನ್ನಾಗಿರಬೇಕಾ? ಹಾಗಾದ್ರೆ ಈ ಮಾತುಗಳನ್ನು ಅಪ್ಪಿತಪ್ಪಿಯೂ ಅತ್ತೆಗೆ ಹೇಳಬೇಡಿ

|

ಮದುವೆಯಾದ ಮೇಲೆ ಶುರುವಾಗುವ ಅತ್ತೆ-ಮಾವ ಎನ್ನುವ ಸಂಬಂಧ ಬಹಳ ವಿಶೇಷ. ಆದರೆ ಅತ್ತೆ-ಸೊಸೆ ನಡುವೆ ತಕರಾರು ಇದ್ದೇ ಇರುತ್ತದೆ. ಹಾಗಂತ ಎಲ್ಲರೂ ಒಂದೇ ರೀತಿ ಇರಬೇಕು ಎಂದೇನಿಲ್ಲ. ಅವರವರ ಭಾವಕ್ಕೆ ತಕ್ಕಂತೆ ಬದುಕುತ್ತಿರುತ್ತಾರೆ. ಆದರೆ, ಅತ್ತೆ-ಸೊಸೆ ಅಥವಾ ಅತ್ತೆ-ಅಳಿಯನ ನಡುವಿನ ಸಂಬಂಧ ಹಾಳಾಗಬಾರದೆಂದರೆ ನೀವು ಕೆಲವೊಂದು ಮಾತುಗಳ ಮೇಲೆ ಹಿಡಿತ ಸಾಧಿಸಬೇಕು. ನಿಮಗೆ ಮನೆಯಲ್ಲಿ ಶಾಂತಿ ಮುಖ್ಯವಾಗಿದ್ದರೆ ಈ ಕೆಳಗೆ ನೀಡಿರುವ ಮಾತುಗಳನ್ನು ನಿಮ್ಮ ಅತ್ತೆಗೆ ಎಂದಿಗೂ ಹೇಳಬೇಡಿ.

ಎಂದಿಗೂ ನಿಮ್ಮ ಅತ್ತೆಗೆ ಹೇಳಬಾರದಂತಹ ಮಾತುಗಳನ್ನು ಈ ಕೆಳಗೆ ನೀಡಲಾಗಿದೆ:

ನಾನು ನಿಮ್ಮ ಅಭಿಪ್ರಾಯವನ್ನು ಕೇಳಲಿಲ್ಲ:

ನಾನು ನಿಮ್ಮ ಅಭಿಪ್ರಾಯವನ್ನು ಕೇಳಲಿಲ್ಲ:

ಸಲಹೆ ನೀಡುವುದೆಂದರೆ ಎಲ್ಲರಿಗೂ ಇಷ್ಟ, ಅದರಿಂದ ನಿಮ್ಮ ಅತ್ತೆಯು ಹೊರತಾಗಿಲ್ಲ. ಬಳಿ ಯಾವುದೋ ಒಂದು ವಿಚಾರದ ಬಗ್ಗೆ ಮಾತನಾಡುವಾಗ, ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಈ ಮಾತನ್ನು ಹೇಳುವುದು ಸರಿಯಲ್ಲ. ಏಕೆಂದರೆ ಅವರು ನಿಮಗಿಂತಲೂ ಹೆಚ್ಚಿನ ಅನುಭವ ಹೊಂದಿರುವವರು. ಅವರ ದೃಷ್ಟಿಕೋನದ ಪ್ರಕಾರ, ಅವರಿಗನ್ನಿಸದ್ದನ್ನು ಹೇಳಿರಬಹುದು. ಹಾಗಂತ ಅದನ್ನು ವಿರೋಧಿಸಿ ನಡೆಯುವುದು ಸರಿಯಲ್ಲ. ಅವರ ಅಭಿಪ್ರಾಯ ಗೌರವಿಸುವುದು ಮುಖ್ಯ. ಇಲ್ಲವಾದಲ್ಲಿ ನಿಮ್ಮ ಬಗ್ಗೆ ಅವರಲ್ಲಿ ಅಸಮಾಧಾನ ಮೂಡಲು ಶುರುವಾಗಬಹುದು.

ನಿಮ್ಮ ಮಗನಿಗೆ ಈ ವಿಚಾರವನ್ನು ಕಲಿಸಿದ್ದೀರಿ ಅಂತ ಅಂದುಕೊಂಡಿದ್ದೆ:

ನಿಮ್ಮ ಮಗನಿಗೆ ಈ ವಿಚಾರವನ್ನು ಕಲಿಸಿದ್ದೀರಿ ಅಂತ ಅಂದುಕೊಂಡಿದ್ದೆ:

ನಿಮ್ಮ ಸಂಗಾತಿ ಒಬ್ಬ ವಯಸ್ಕನಾಗಿರುವುದರಿಂದ ಹೊರಗಿನ ವಿಷಯಗಳನ್ನು ಕಲಿತುಕೊಳ್ಳಬೇಕಾಗಿರುವುದು ಅವರ ಕರ್ತವ್ಯ. ಅದನ್ನೇಕೆ ಹೇಳಿಕೊಡಲಿಲ್ಲ ಎಂದು ನಿಮ್ಮ ಅತ್ತೆಯನ್ನು ಕೇಳುವುದು ಸರಿಯಲ್ಲ. ಎಲ್ಲದಕ್ಕೂ ನಿಮ್ಮ ಅತ್ತೆಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ನಡುವಿನ ವಿಚಾರಕ್ಕೆ ಅವರನ್ನು ಮಧ್ಯೆ ತರಬೇಡಿ.

ಈ ಕೆಟ್ಟ ಅಭ್ಯಾಸಗಳು ಬಂದಿದ್ದು ಯಾರಿಂದ?:

ಈ ಕೆಟ್ಟ ಅಭ್ಯಾಸಗಳು ಬಂದಿದ್ದು ಯಾರಿಂದ?:

ಈ ಹೇಳಿಕೆಯು ಅಸಭ್ಯವಾಗಿದೆ ಏಕೆಂದರೆ, ನಿಮ್ಮ ಸಂಗಾತಿ ತನ್ನ ಪೋಷಕರಿಂದ ಯಾವುದೋ ನಿರ್ದಿಷ್ಟ ಅಭ್ಯಾಸವನ್ನು ಕಲಿತಿದ್ದಾರೆ ಎಂದು ನಿಮಗೆ ತಿಳಿದಿದ್ದರೂ, ಇಂತಹ ಮಾತು ಅವರಿಗೆ ಹೇಳುವುದು ಸರಿಯಲ್ಲ. ಈ ಮಾತು ಅವರ ಪೋಷಕರನ್ನು ನೋಯಿಸಬಹುದು.

ನೀವು ನನಗೆ ಕೊಟ್ಟ ಉಡುಗೊರೆಯ ರಸೀದಿ ಕೊಡುತ್ತೀರಾ?:

ನೀವು ನನಗೆ ಕೊಟ್ಟ ಉಡುಗೊರೆಯ ರಸೀದಿ ಕೊಡುತ್ತೀರಾ?:

ನಿಮ್ಮ ಅತ್ತೆ ನೀಡಿದ ಯಾವುದೋ ಉಡುಗೊರೆ ಇಷ್ಟವಾಗದೇ ಇರಬಹುದು. ಹಾಗಂತ ಅದನ್ನು ಹಿಂದಿರುಗಿಸಲು ಅಥವಾ ಬದಲಾಯಿಸಲು ರಶೀದಿ ಕೇಳಬೇಡಿ. ಸಾಧ್ಯವಾದರೆ ಅದನ್ನು ಬಳಸಲು ಪ್ರಯತ್ನಿಸಿ, ಇಲ್ಲವೇ ತೆಗೆದಿಡಿ. ಎಷ್ಟೇ ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ ನಿಮ್ಮ ಬಗ್ಗೆ ತುಂಬಾ ಯೋಚಿಸಿ ಆಯ್ಕೆ ಮಾಡಿರುತ್ತಾರೆ. ಅವರ ಭಾವನೆಗಳಿಗೆ ನೋಯಿಸಬೇಡಿ.

ಯಾವಾಗ ಬೇಕಾದರೂ ಬನ್ನಿ:

ಯಾವಾಗ ಬೇಕಾದರೂ ಬನ್ನಿ:

ಇದು ತುಂಬಾ ಮುಖ್ಯ. ನಿಮ್ಮ ಅತ್ತೆ ಒಳ್ಳೆಯವರಾಗಿದ್ದರೂ, ಇದನ್ನು ಹೇಳಬೇಡಿ. ಏಕೆಂದರೆ ಅವರು ನಿಮ್ಮ ಮನೆಗೆ ಆಗಾಗ್ಗೆ ಬರಲು ಆರಂಭಿಸಿದರೆ, ಕೊನೆಗೆ ನಿಮಗೆ ಇರುಸುಮುರುಸಾಗಲು ಆರಂಭವಾಗುತ್ತದೆ. ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳಲು ಸ್ವಲ್ಪ ಜಾಗ ಅಗತ್ಯವಾಗಿದೆ.

ನೀವು ತಯಾರಿಸುವ ಆಹಾರದಲ್ಲಿ ತುಂಬಾ ಎಣ್ಣೆಯಿರುತ್ತದೆ:

ನೀವು ತಯಾರಿಸುವ ಆಹಾರದಲ್ಲಿ ತುಂಬಾ ಎಣ್ಣೆಯಿರುತ್ತದೆ:

ಪೋಷಕರು ಅಡುಗೆ ಮಾಡುವಾಗ ಎಣ್ಣೆ ಹೆಚ್ಚು ಬಳಸುವುದು ಸಾಮಾನ್ಯ. ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ದರೆ, ಒಪ್ಪಿಕೊಳ್ಳಿ. ನಿಮಗೆ ಸಮಸ್ಯೆಗಳಿದ್ದರೆ, ಟೀಕಿಸುವ ಬದಲು ನೀವೇ ಅಡುಗೆ ಮಾಡಿ. ಅತ್ತೆ ಪ್ರೀತಿಯಿಂದ ಅಡುಗೆ ಮಾಡುತ್ತಿದ್ದಾರೆ ಆದ್ದರಿಂದ ಅದನ್ನು ಟೀಕೆಮಾಡಬೇಡಿ.

ದಯವಿಟ್ಟು ನಿಮ್ಮ ಬಟ್ಟೆಗಳನ್ನು ಬದಲಿಸಿ, ಚೆನ್ನಾಗಿ ಕಾಣುತ್ತಿಲ್ಲ:

ದಯವಿಟ್ಟು ನಿಮ್ಮ ಬಟ್ಟೆಗಳನ್ನು ಬದಲಿಸಿ, ಚೆನ್ನಾಗಿ ಕಾಣುತ್ತಿಲ್ಲ:

ಈ ಹೇಳಿಕೆಯನ್ನು ಹೀಗೆ ಹೇಳುವ ಬದಲು, "ನೀವು ಆ ಉಡುಗೆ/ಸೀರೆ/ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತೀರಿ, ನೀವೇಕೆ ಅದನ್ನು ಪ್ರಯತ್ನಿಸಬಾರದು ಮತ್ತು ನೋಡಬಾರದು?" ...ಎನ್ನಬಹುದು. ನೇರವಾಗಿ ಹೇಳುವ ಬದಲು, ಅವರಿಗೆ ಅರ್ಥವಾಗುವಂತೆ, ಆದರೆ ನೋವಾಗದ, ಮುಜುಗರವಾಗದ ರೀತಿಯಲ್ಲಿ ಹೇಳಿ.

English summary

Never Say These Things To Your Mother-In-Law in Kannada

Here we talking about Never Say These Things To Your Mother-In-Law in Kannada, read on
Story first published: Saturday, October 9, 2021, 17:36 [IST]
X
Desktop Bottom Promotion