For Quick Alerts
ALLOW NOTIFICATIONS  
For Daily Alerts

ವೈವಾಹಿಕ ಬದುಕು ಸುಂದರವಾಗಲು ಇಂಥ ವಿಷಯಗಳಿಗೆ ಮುಲಾಜಿಲ್ಲದೆ 'ನೋ' ಹೇಳಲೇಬೇಕು

|

ಯಾರೋ ಏನೋ ಕೇಳಿದರು ಅಥವಾ ನಿಮಗಿಷ್ಟವಿಲ್ಲದ್ದನ್ನು ಯಾರೋ ಹೇಳಿದರು ಆಗ ನಿಮಗೆ 'ನೋ' ಅಂತ ಮುಲಾಜಿಲ್ಲದೆ ಹೇಳಬಹುದು, ಆದರೆ ವೈವಾಹಿಕ ಜೀವನದಲ್ಲಿ ಆ ರೀತಿ ಹೇಳುವುದು ಕಷ್ಟ. ಆದ್ದರಿಂದಲೇ ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ ಎಲ್ಲಿ ಸಂಗಾತಿ ಮನಸ್ಸಿಗೆ ನೋವಾಗುತ್ತೋ ಎಂದು ಸುಮ್ಮನಾಗಿ ಬಿಡುತ್ತೇವೆ. ಹೀಗಾಗಿ ಅನಗ್ಯತ ಬರ್ಡನ್ ನಮಗಾಗುವುದು.

relationship tips

ಉದಾಹರಣೆಗೆ ಹೆಂಡತಿಯ ಫ್ರೆಂಡ್‌ಯೊಬ್ಬರಿಗೆ ಅವರ ಗಂಡ ದುಬಾರಿ ಸೀರೆ ಕೊಡಿಸಿರುತ್ತಾನೆ, ಅದನ್ನು ಅವಳು ಬಂದು ನಿಮ್ಮವಳ ಬಳಿ ಹೇಳುತ್ತಾಳೆ, ನಿಮ್ಮವಳು ನಿಮ್ಮ ಬಳಿ ನನಗೆ ಅಂತ ಸೀರೆ ಬೇಕೆಂದು ಕೇಳಿದಾಗ ಒಂದು ವೇಳೆ ಬಜೆಟ್ ಟೈಟ್ ಇದ್ದರೂ ನಾನೆಲ್ಲಿ 'ನೋ' ಎಂದರೆ ಪಾಪ! ಬೇಸರಪಟ್ಟುಕೊಳ್ಳುತ್ತಾಳೆ ಕ್ರೆಡಿಟ್‌ ಕಾರ್ಡ್ ಉಜ್ಜಿಯಾದರೂ ಕೊಡಿಸುವ ಎಂದು ಯೋಚಿಸುತ್ತೀರಿ, ಆದರೆ ಇದರಿಂದ ಮುಂದಿನ ತಿಂಗಳು ಬಜೆಟ್ ಮತ್ತಷ್ಟು ಟೈಟ್‌ ಆಗಬಹುದು.

ಮತ್ತೊಂದು ಉದಾಹರಣೆ ಹೇಳುವುದಾದರೆ ಗಂಡ ಫ್ರೆಂಡ್ಸ್‌, ಪಾರ್ಟಿ ಅಂತ ಹೆಚ್ಚು ಸಮಯ ಹೊರಗಡೆ ಕಳೆಯುತ್ತಿರುತ್ತಾನೆ, ಅದು ನಿಮಗಿಷ್ಟವಾಗುವುದಿಲ್ಲ, ಪಾರ್ಟಿಯೆಲ್ಲಾ ಮಿತಿಯಲ್ಲಿರಲಿ, ಫ್ಯಾಮಿಲಿ ಕೂಡ ಇದೆ ಎಂದು ಹೇಳಬೇಕೆನಿಸುವುದು ಆದರೆ ಗಂಡನ ಇಷ್ಟಕ್ಕೆ ನೋ ಎಂದರೆ ಎಲ್ಲಿ ಕುಟುಂಬ ಕಲಹ ಆಗುತ್ತೋ ಎಂಬ ಭಯದಿಂದ ಏನು ಹೇಳುವುದೇ ಇಲ್ಲ... ಆದರೆ ಹೆಂಡತಿಗೆ ಈ ವಿಷಯದಲ್ಲಿ ಅಸಮಧಾನ ಹೊಗೆಯಾಡುತ್ತಲೇ ಇರುತ್ತದೆ, ಆ ಅಸಮಧಾನ ಬೇರೆ ರೀತಿಯಲ್ಲಿ ಪ್ರಕಟಿಸಬಹುದು

ಈ ಎರಡೂ ಪ್ರಕರಣಗಳನ್ನು ಗಮನಿಸಿ ಎಲ್ಲಿ 'ನೋ' ಎಂದರೆ ಸಮಸ್ಯೆಯಾಗುತ್ತೋ ಎಂಬ ಭಯದಲ್ಲಿ ಸುಮ್ಮನಾಗುತ್ತಾರೆ, ಆದರೆ ಸಮಸ್ಯೆ ಮುಕ್ತಾಯವಾಗುವುದೇ? ಖಂಡಿತ ಇಲ್ಲ, ಅದು ಮತ್ತಷ್ಟು ಹೆಚ್ಚಾಗುವುದು. ಆದ್ದರಿಂದ ಸಂಸಾರದಲ್ಲಿ ಕೆಲವೊಂದು ವಿಷಯಗಳಿಗೆ ನೋ ಹೇಳಲು ಹಿಂದೇಟು ಹಾಕಬೇಡಿ.

ಒಬ್ಬರ ವೈವಾಹಿಕ ಜೀವನ ಮತ್ತೊಬ್ಬರಿಗಿಂತ ಭಿನ್ನವಾಗಿರುತ್ತೆ, ಆದ್ದರಿಂದ ಅವರಂತೆ ನಾವು ಇರಬೇಕು ಎಂದು ಬಯಸುವಷ್ಟು ಮೂರ್ಖತನ ಮತ್ತೊಂದಿಲ್ಲ, ನಮ್ಮ ಬದುಕು ನಮ್ಮದು, ಅದನ್ನು ಸುಂದರವಾಗಿಸಬೇಕೆಂದರೆ ಇಂಥ ಕೆಲ ವಿಷಯಗಳಿಗೆ ಮುಲಾಜಿಲ್ಲದೆ ನೋ ಅನ್ನಿ...

ಸೋಷಿಯಲ್‌ ಮೀಡಿಯಾ ನೋಡಿ ಹೋಲಿಕೆ ಮಾಡುವುದಕ್ಕೆ ನೋ ಅನ್ನಿ

ಸೋಷಿಯಲ್‌ ಮೀಡಿಯಾ ನೋಡಿ ಹೋಲಿಕೆ ಮಾಡುವುದಕ್ಕೆ ನೋ ಅನ್ನಿ

ಸೋಷಿಯಲ್‌ ಮೀಡಿಯಾದಲ್ಲಿ ಹಾಕುವುದೆಲ್ಲವೂ ನಿಜವಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಫ್ರೆಂಡ್‌ಯೊಬ್ಬರು 'ರೊಮ್ಯಾಂಟಿಕ್ ಡಿನ್ನರ್ ವಿಥ್‌ ಮೈ ಲವ್' ಎಂಬ ಕ್ಯಾಪ್ಷನ್‌ ನೀಡಿ ಫೋಟೊ ಹಾಕಿರುತ್ತಾರೆ. ಅದನ್ನು ನೋಡಿ ನಿಮ್ಮ ಬದುಕಿನ ಜೊತೆ ಹೋಲಿಕೆ ಮಾಡಿ ಕೊರಗುವುದರಿಂದ ನಿಮ್ಮ ನೆಮ್ಮದಿ ಮತ್ತಷ್ಟು ಹಾಳಾಗುವುದು. ಅಂಥ ಭಾವನೆಗಳಿಗೆ ಮೊದಲು 'ನೋ' ಅನ್ನಿ. ನಿಮ್ಮ ಬದುಕನ್ನು ಮತ್ತೊಬ್ಬರ ಬದುಕಿನ ಜೊತೆ ಯಾವುದೇ ಕಾರಣಕ್ಕೆ ಹೋಲಿಕೆ ಮಾಡಬೇಡಿ. ಇರುವ ಜೀವನವನ್ನು ಮತ್ತಷ್ಟು ಸುಂದರವಾಗಿ ಮಾಡುವುದು ಹೇಗೆ ಎಂದಷ್ಟೇ ಯೋಚಿಸಿ.

2. ತುಂಬಾ ಕೆಲಸ? ನೋ ಅನ್ನಿ

2. ತುಂಬಾ ಕೆಲಸ? ನೋ ಅನ್ನಿ

ಒಳ್ಳೆಯ ಬಡ್ತಿ ಬೇಕು, ಪ್ರಮೋಷನ್‌ ಸಿಗಬೇಕು, ಇದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕು ಆದರೆ ನಿಮ್ಮ ಜೀವನವೆಂದರೆ ಕೆಲಸಕ್ಕಾಗಿಯೇ ಮೀಸಲಿಡಬೇಡಿ. ನೀವು ಲೇಟ್‌ನೈಟ್‌ವರೆಗೆ ಕೆಲಸ ಮಾಡುವುದು, ವಾರದ ರಜೆ ಕೂಡ ತೆಗೆಯದೆ ದುಡಿಯುವುದು ಇವೆಲ್ಲಾ ನೋಡಿದಾಗ ನಿಮ್ಮ ಬಾಸ್‌ಗೆ ತುಂಬಾನೇ ಇಷ್ಟವಾಗಬಹುದು, ಆದರೆ ನಿಮ್ಮ ಸಂಗಾತಿಗೆ ಅಲ್ಲ. ನೀವು ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತಿದ್ದರೆ ಅವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ, ಅದು ಅವರಿಗೆ ಖುಷಿ ನೀಡುವುದು. ಸದಾ ಬ್ಯುಸ್‌ನೆಸ್‌, ವರ್ಕ್ ಅಂತ ಇದ್ದರೆ ಸಂಗಾತಿಗೆ ಒಂಟಿತನ ಕಾಡಬಹುದು, ಅಲ್ಲದೆ ಅವರು ಬಯಸಿದ ಸಂತೋಷ ತುಂಬಲು ನೀವು ಗಳಿಸಿದ ಹಣದಿಂದ ಸಾಧ್ಯವಾಗುವುದಿಲ್ಲ. ಕುಟುಂಬ ನಡೆಸಲು ಹಣ ಬೇಕು, ಆದರೆ ಹಣದಿಂದಲೇ ಕುಟುಂಬ ನಡೆಸಲು ಸಾಧ್ಯವಿಲ್ಲ, ಅಲ್ಲಿ ಪ್ರೀತಿಬೇಕು, ಅವರಿಗೆ ನಿಮ್ಮ ಸಮಯ, ನಿಮ್ಮ ಕುಟುಂಬಕ್ಕಾಗಿ ಸದಾ ವರ್ಕ್‌, ಬ್ಯುಸ್‌ನೆಸ್‌ ಅಂತ ಯೋಚಿಸುವುದಕ್ಕೆ 'ನೋ' ಎನ್ನಲೇಬೇಕು.

3. ತುಂಬಾ ಫ್ರೆಂಡ್ಸ್ ಪಾರ್ಟಿಗೆ ನೋ ಅನ್ನಿ

3. ತುಂಬಾ ಫ್ರೆಂಡ್ಸ್ ಪಾರ್ಟಿಗೆ ನೋ ಅನ್ನಿ

ನಮ್ಮ ಜೀವನದಲ್ಲಿ ಫ್ರೆಂಡ್ಸ್‌ ತುಂಬಾನೇ ಮುಖ್ಯ. ಆದರೆ ಮನೆ-ಕುಟುಂಬ ಕಡೆ ಹೆಚ್ಚು ಗಮನ ಕೊಡದೆ ಫ್ರೆಂಡ್ಸ್‌-ಪಾರ್ಟಿ ಅಂತ ಇರುವುದಕ್ಕೆ ನೋ ಅಂತ ಹೇಳಿ. ಕುಟುಂಬ ತುಂಬಾನೇ ಮುಖ್ಯ. ಮುಂದೆ ಕಷ್ಟ ಅಂತ ಬಂದಾಗ ಜೊತೆಗಿರುವುದು ನಿಮ್ಮ ಕುಟುಂಬ ಹಾಗೂ ನಿಜವಾದ ಸ್ನೇಹಿತತರು. ಪಾರ್ಟಿಗಳಲ್ಲಿ ಸಿಗುವ ಸ್ನೇಹಿತರು ಆಗ ಸಿಗುವುದಿಲ್ಲ. ನಿಮ್ಮ ನಿಜವಾದ ಸ್ನೇಹಿತರು ನೀವು ಕುಟುಂಬದ ಜೊತೆ ಖುಷಿಯಾಗಿ ಇರಬೇಕೆಂದು ಬಯಸುವರು ಆಗಿರುತ್ತಾರೆ.

4. ಸಾಲ- ನೋ ಎನ್ನಿ

4. ಸಾಲ- ನೋ ಎನ್ನಿ

ಬಡವ ಇರಲಿ-ಶ್ರೀಮಂತ ಇರಲಿ ಸಾಲ ಮಡಿಯೇ ಮಾಡುತ್ತಾರೆ. ಆದರೆ ಸಾಲ ಮಾಡುವಾಗ ಅದನ್ನು ಹಿಂತಿರುಗಿಸಲು ನಮಗೆ ಎಷ್ಟು ಶಕ್ತಿ ಇದೆಯೋ ಅಷ್ಟು ಮಾತ್ರ ಸಾಲ ಮಾಡಬೇಕು. ಸಾಲ ಸಿಗುತ್ತೆ ಅಂತ ಮಿತಿ ಮೀರಿ ಸಾಲ ಮಾಡಿದರೆ ಮುಂದೆ ಬದುಕು ತುಂಬಾನೇ ಕಷ್ಟವಾಗುವುದು. ಅಲ್ಲದೆ ಅವರ ಮನೆಯಲ್ಲಿ ಕಾರು ಇದೆ ನಮಗೆ ಬೇಕು, ಅವರು ಆಡಂಬರವಾಗಿ ಮದುವೆ ಮಾಡಿದರು ನಾವು ಮಾಡಬೇಕು ಅಂತ ಬೇರೆಯವರ ಪೈಪೋಟಿಗೆ ಬಿದ್ದು ಸಾಲ ಮಾಡಿದರೆ ಮುಂದೆ ಕಷ್ಟ ಅನುಭವಿಸಬೇಕಾದವರು ನಾವೇ, ಹಾಗಾಗಿ ಇಂಥ ಅನವಶ್ಯಕ ಪೈಪೋಟಿಗೆ ನೋ ಅನ್ನಿ. ಅಲ್ಲದೆ ನಿಮ್ಮ ಸಂಗಾತಿ ಬೇರೆಯವರ ಜೊತೆ ನಮ್ಮ ಬದುಕನ್ನು ಹೋಲಿಕೆ ಮಾಡುವ ಗುಣವಿದ್ದರೆ ಆ ಗುಣ ಒಳ್ಳೆಯದಲ್ಲ ಅಂತ ಹೇಳಿ, ನೋ ಹೇಳಬೇಕಾದ ಸಂದರ್ಭದಲ್ಲಿ 'ನೋ' ಎನ್ನಿ.

 5. ನಿಮ್ಮ ಸ್ವಗೌರವಕ್ಕೆ ಪೆಟ್ಟಾಗುತ್ತಿದ್ದರೆ 'ನೋ' ಎನ್ನಿ

5. ನಿಮ್ಮ ಸ್ವಗೌರವಕ್ಕೆ ಪೆಟ್ಟಾಗುತ್ತಿದ್ದರೆ 'ನೋ' ಎನ್ನಿ

ನೀವು ಒಂದು ಕುಟುಂಬದಲ್ಲಿ ವಾಸಿಸುವಾಗ ಅವರನ್ನು ನೀವು ಹೇಗೆ ಗೌರವಿಸುತ್ತೀರೋ ಅದೇ ರೀತಿ ಅವರು ಕೂಡ ಗೌರವದಿಂದ ನಿಮ್ಮ ಜೊತೆ ನಡೆದುಕೊಳ್ಳುತ್ತಿದ್ದಾರೆಯೇ? ನಿಮ್ಮ ಸ್ವ ಗೌರವಕ್ಕೆ ಪೆಟ್ಟಾಗುವ ರೀತಿ ಅವರ ವರ್ತನೆ ಇದ್ದರೆ 'ನೋ' ಎನ್ನಿ, ಬದಲಿಗೆ ನೀವು ಸಹಿಸುತ್ತಾ ಹೋದರೆ ಅವರ ವರ್ತನೆ ಮತ್ತಷ್ಟು ಮಿತಿ ಮೀರುವುದು ಹೊರತು ಕಡಿಮೆಯಾಗುವುದಿಲ್ಲ. ಆದ್ದರಿಂದ ಅಂಥ ವರ್ತನೆ ಕಂಡು ಬಂದರೆ ಅದು ಸಹಿಸಲು 'ನೋ' ಎನ್ನಿ.

English summary

Must Say No to These to Stay Happy In Relationship in Kannada

Must say no to these to stay happy in relationship in Kannada, read on....
X
Desktop Bottom Promotion