For Quick Alerts
ALLOW NOTIFICATIONS  
For Daily Alerts

ಸಮಂತಾ ನಾಗಚೈತನ್ಯ ವಿಚ್ಛೇದನ: ಬಹುತೇಕ ವಿಚ್ಛೇದನಗಳು ನಡೆಯುವುದು ಇವೇ ಕಾರಣಕ್ಕೆ

|

ಸೆಲೆಬ್ರಿಟಿಗಳ ವಿಚ್ಛೇದನ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಸೂಪರ್‌ ಜೋಡಿಯಾಗಿ, ಹೊರಗಡೆ ತುಂಬಾ ರೊಮ್ಯಾಂಟಿಕ್ ಜೋಡಿಗಳಾಗಿ ಕಂಡು ಬಂದ ಜೋಡಿಗಳ ವಿಚ್ಛೇದನ ಸುದ್ದಿ ಕೇಳುವಾಗ ಅವರ ಅಭಿಮಾನಿಗಳಿಗೆ made for each other ಎಂಬಂತೆ ಇದ್ದ ಜೋಡಿ ಬೇರೆಯಾಗಲು ಕಾರಣವೇನು ಎಂದು ಅನಿಸುವುದು ಸಹಜ.

ಇದೀಗ ಸೆಲೆಬ್ರಿಟಿ ಜೋಡಿ ಸಮಂತಾ-ನಾಗ ಚೈತನ್ಯ ವಿಚ್ಛೇನವಾಗಿದ್ದಾರೆ. 10 ವರ್ಷ ಪ್ರೀತಿಸಿ ಮದುವೆಯಾದ ಜೋಡಿ, ಮದುವೆಯಾಗಿ ನಾಲ್ಕು ವರ್ಷ ತುಂಬುವ ಮುನ್ನ ಬೇರೆ-ಬೇರೆಯಾಗಿದ್ದಾರೆ.

Most Common Reasons People Get Divorced

ಕಳೆದ ತಿಂಗಳು ಕ್ರಿಕೆಟರ್ ಶಿಖರ್ ಧವನ್‌ ಅವರು ವಿಚ್ಛೇದನ ಪಡೆದರು. ಪ್ರೀತಿಸಿ ಮದುವೆಯಾಗಿ ಎಂಟು ವರ್ಷಗಳ ಕಾಲ ಜೊತೆಗಿದ್ದ ಶಿಖರ್ ಧವನ್- ಆಯೇಷಾ ಮುಖರ್ಜಿ ಕಾನೂನು ಪ್ರಕಾರ ಬೇರೆಯಾಗಿ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಆಯೇಷಾಗೆ 2ನೇ ಮದುವೆಯಾಗಿತ್ತು. ಶಿಖರ್‌ಗಿಂತ 10 ವರ್ಷ ದೊಡ್ಡವರಾಗಿದ್ದ ಆಯೇಷಾಗೆ ಮೊದಲನೇ ಮದುವೆಯಲ್ಲಿ 2 ಹೆಣ್ಣು ಮಕ್ಕಳಿದ್ದರು. ಶಿಖರ್‌ ಹಾಗೂ ಆಯೇಷಾ ನಡುವಿನ ಮದುವೆಗೆ ವಯಸ್ಸಿನ ಅಂತರ ಅವರ ಮದುವೆಗೆ ಅಡ್ಡಿ ಬಂದಿತ್ತು. ಆದರೆ ಅವುಗಳೆನ್ನೆಲ್ಲಾ ಎದುರಿಸಿ ಈ ಜೋಡಿ ಹೊಂದಾಗಿತ್ತು. ಇವರ ಸಂಬಂಧಕ್ಕೆ ಕುರುಹಾಗಿ 2014ರಲ್ಲಿ ಗಂಡು ಮಗು ಹುಟ್ಟಿದ್ದು ಆ ಮಗುವಿಗೆ ಝೋರೋವರ್‌ ಧವನ್‌ ಎಂದು ಹೆಸರಿಡಲಾಗಿದೆ. ಈಗ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ದೂರಾಗಿದ್ದಾರೆ.

ವೈವಾಹಿಕ ಬದುಕು ಅಂದ ಮೇಲೆ ಅಲ್ಲಿ ಹೊಂದಾಣಿಕೆ ಎಂಬುವುದು ತುಂಬಾನೇ ಮುಖ್ಯವಾಗಿರುತ್ತೆ. ಎಲ್ಲಾ ದಂಪತಿ ನಡುವೆ ಕೆಲವೊಂದು ಭಿನ್ನಾಭಿಪ್ರಾಯ, ಮುನಿಸು, ವಿರಸ ಎಲ್ಲಾ ಬರುವುದು ಸಹಜ..ಆ ರೀತಿ ಇಲ್ಲದ ಜೋಡಿನೇ ಈ ಪ್ರಪಂಚದಲ್ಲಿ ಇರಲ್ಲ. ಆದರೆ ಅವುಗಳನ್ನು ಮೀರುವ ಸೆಳೆತ, ಪ್ರೀತಿ ಇದ್ದರೆ ಒಬ್ಬರಿಗೊಬ್ಬರು ಹೊಂದಿಕೊಂಡು ಜೊತೆಗಿರುತ್ತಾರೆ.

ಕೆಲ ಸಂಬಂಧಗಳಲ್ಲಿ ಸರಸ ಬದಲಿಗೆ ಬರೀ ವಿರಸನೇ ಇರುತ್ತದೆ, ಪ್ರೀತಿ ಬದಲಿಗೆ ಸದಾ ಕಿತ್ತಾಟವೇ ನಡೆಯುತ್ತಿರುತ್ತದೆ, ಮೂಡಿರುವ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲು ಸಾಧ್ಯವೇ ಆಗಿರುವುದಿಲ್ಲ, ಇನ್ನು ಮುಂದೆ ಈ ರೀತಿ ಮುಂದುವರೆಯಲು ಸಾಧ್ಯವೇ ಇಲ್ಲ ಎಂದಾಗ ದಂಪತಿ ವಿಚ್ಚೇದನದ ಕುರಿತು ಚಿಂತೆ ಮಾಡುವುದು.

ನಾವಿಲ್ಲಿ ಬಹುತೇಕ ವೈವಾಹಿಕ ವಿಚ್ಛೇದನದಲ್ಲಿ ಅಂತ್ಯವಾಗಲು ಪ್ರಮುಖ ಕಾರಣಗಳು ಏನು ಎಂಬುವುದರ ಬಗ್ಗೆ ಹೇಳಿದ್ದೇವೆ. ಬಹುತೇಕ ವಿಚ್ಛೇದನಕ್ಕೆ ಇದರಲ್ಲಿ ಯಾವುದಾದರೂ ಒಂದು ಅಂಶ ಕಾರಣವಾಗಿರುತ್ತದೆ ನೋಡಿ:

1. ಜಗಳ, ಚರ್ಚೆ, ಹೀಯಾಳಿಕೆ, ಅಗೌರವ

1. ಜಗಳ, ಚರ್ಚೆ, ಹೀಯಾಳಿಕೆ, ಅಗೌರವ

ದಂಪತಿ ನಡುವೆ ಜಗಳ, ಭಿನ್ನಾಭಿಪ್ರಾಯ ಸಹಜ. ಆದರೆ ದಿನ ಬೆಳಗಾದರೆ ಶುರುವಾಗುವ ಜಗಳ ರಾತ್ರಿ ಮಲಗಿದ ಬಳಿಕವೂ ಮುಂದುವರೆದರೆ ( ಅಂದ್ರೆ ಅವರಿಬ್ಬರೂ ದೈಹಿಕವಾಗಿಯೂ ಅಂತರವನ್ನು ಕಾಯ್ದುಕೊಂಡರೆ) ಆ ದಾಂಪತ್ಯ ಜೀವನ ತುಂಬಾ ಕಾಲ ಬಾಳಲ್ಲ ಎನ್ನುವುದರ ಮುನ್ಸೂಚನೆಯಾಗಿದೆ. ತಮ್ಮ ಸಂಗಾತಿಯನ್ನು ಸದಾ ಹೀಯಾಳಿಸುವುದು, ಅವರ ಭಾವನೆಗಳಿಗೆ ನೋವುಂಟು ಮಾಡುವುದು ಒಂದು ಚಿಕ್ಕ ವಿಷಯಕ್ಕೆ ದೊಡ್ಡದಾಗಿ ಜಗಳ ಮಾಡುವುದು, ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡದೇ ಇರುವುದು ಇವೆಲ್ಲ ವಿಚ್ಛೇದನಕ್ಕೆ ಬಗ್ಗೆ ಚಿಂತಿಸುವಂತೆ ಮಾಡುವುದು.

2. ಜವಾಬ್ದಾರಿ ಇಲ್ಲದಿರುವುದು

2. ಜವಾಬ್ದಾರಿ ಇಲ್ಲದಿರುವುದು

ಮದುವೆಯಾದ ಮೇಲೆ ಇಬ್ಬರಿಗೂ ಅನೇಕ ಜವಾಬ್ದಾರಿಗಳು ಇರುತ್ತವೆ. ಗಂಡನಾಗಿ ಈತನಿಗೆ ಕೆಲ ಜವಾಬ್ದಾರಿ ಇದ್ದರೆ ಹೆಂಡತಿಯಾಗಿ ಅವಳಿಗೂ ಕೆಲ ಜವಾಬ್ದಾರಿಗಳಿರುತ್ತವೆ. ಆ ಜವಾಬ್ದಾರಿಯ ಬಗ್ಗೆ ಯಾರಾದೂ ಒಬ್ಬರು ಅಥವಾ ಒಬ್ಬರು ಅಸ್ಡಡೆ ತೋರಿದರೆ ಅಂಥ ಸಂಬಂಧ ತುಂಬಾ ಸಮಯ ಬಾಳಲ್ಲ.

3. ಮೋಸ/ ಅನೈತಿಕ ಸಂಬಂಧ

3. ಮೋಸ/ ಅನೈತಿಕ ಸಂಬಂಧ

ವೈವಾಹಿಕ ಜೀವನ ಎಂಬುವುದು ನಿಂತಿರುವುದೇ ನಂಬಿಕೆ ಮೇಲೆ. ತಮ್ಮ ಸಂಗಾತಿಯಿಂದ ಈ ನಂಬಿಕೆಗೆ ಮೋಸವಾದರೆ ಅದನ್ನು ಕ್ಷಮಿಸಲು ಯಾರಿಗೂ ಸಾಧ್ಯವಾಗಲ್ಲ. ಎಷ್ಟೋ ವಿಚ್ಛೇದನಗಳಿಗೆ ಇದು ಪ್ರಮುಖ ಕಾರಣಗಳಾಗಿವೆ.

4. ಸಂಬಂಧದಲ್ಲಿ ಅಂತರ/ ದೈಹಿಕ ಸಂಪರ್ಕ ಇಲ್ಲದೇ ಇರುವುದು

4. ಸಂಬಂಧದಲ್ಲಿ ಅಂತರ/ ದೈಹಿಕ ಸಂಪರ್ಕ ಇಲ್ಲದೇ ಇರುವುದು

ವೈವಾಹಿಕ ಸಂಬಂಧವನ್ನು ಬಲ ಪಡಿಸುವುದೇ ಅವರಿಬ್ಬರ ನಡುವೆ ಇರುವ ದೈಹಿಕ ಸಂಬಂಧದ ತೃಪ್ತಿ. ತನ್ನ ಸಂಗಾತಿಯಿಂದ ಆ ತೃಪ್ತಿ ದೊರೆಯದೇ ಹೋದರೆ ಆ ಸಂಬಂಧ ದುರ್ಬಲವಾಗುತ್ತಾ ಹೋಗುವುದು. ಆಗ ಕೆಲವರು ಅನೈತಿಕ ಸಂಬಂಧದ ಸುಳಿಗೆ ಬೀಳುತ್ತಾರೆ. ಹಾಗಂತ ದೈಹಿಕ ಸಂಬಂಧ ಇಲ್ಲದಿದ್ದರೆ ಆ ದಂಪತಿಗಳು ದೂರವಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅನಾರೋಗ್ಯ ಕಾರಣದಿಂದ ದಂಪತಿ ನಡುವೆ ದೈಹಿಕ ಸಂಪರ್ಕ ಇಲ್ಲದಿದ್ದರೂ ಅವರಿಬ್ಬರ ನಡುವೆ, ಪ್ರೀತಿ, ಅನ್ಯೂನ್ಯತೆ ಇದ್ದರೆ ಆ ಸಂಬಂಧ ಚೆನ್ನಾಗಿಯೇ ಇರುತ್ತದೆ.

ಆದರೆ ಕೆಲ ದಾಂಪತ್ಯದಲ್ಲಿ ಪರಸ್ಪರ ಯಾವುದೇ ಸೆಳೆತವಿಲ್ಲ, ಒಂದು ಮನೆಯಲ್ಲಿ ಅಪರಿಚಿತರಂತೆ ಬದುಕಿದ್ದರೆ ಆ ಸಂಬಂಧ ಅಂತ್ಯವಾಗುವುದು.

5. ಸಂವಹನದ ಕೊರತೆ

5. ಸಂವಹನದ ಕೊರತೆ

ಏನು ಮಿಸ್‌ ಅಂಡರ್‌ಸ್ಟ್ಯಾಂಡಿಂಗ್ ಎಂದು ಹೇಳುತ್ತೇವೋ ಅದಾಗುವುದೇ ಸಂವಹನದ ಕೊರತೆಯಿಂದ. ಕೆಲವೊಂದು ಸಂಬಂಧದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ. ಆದರೆ ಇಬ್ಬರು ಕೂತು ತಮ್ಮ ಸಮಸ್ಯೆಯೇನು ಎಂಬುವುದು ಮಾತನಾಡದೇ ಇರುವುದೇ ಸಮಸ್ಯೆಗೆ ಕಾರಣವಾಗಿರುತ್ತೆ. ಸಮವಹನದ ಕೊರತೆಯಿಂದಾಗಿ ತಪ್ಪು ಕಲ್ಪನೆಗಳು ದೊಡ್ಡದಾಗಿ ಬೆಳೆದು ವಿಚ್ಛೇದನವಾಗುವುದು.

6. ದೈಹಿಕ, ಮಾನಸಿಕ ಹಿಂಸೆ

6. ದೈಹಿಕ, ಮಾನಸಿಕ ಹಿಂಸೆ

ಮನೆಯಲ್ಲಿ ಕಿರುಕುಳ, ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುವುದು, ನಿಂದಿಸುವುದು ಇವೆಲ್ಲಾ ಇರುವ ಸಂಸಾರದಲ್ಲಿದ್ದರೆ ಅಂಥ ಸಮಸ್ಯೆ ನೆಮ್ಮದಿಯೇ ಇರುವುದಿಲ್ಲ. ಕಿರುಕುಳ ನೀಡುವ ಸಂಗಾತಿಯ ಜೊತೆ ಬದುಕಲು ಯಾರೂ ಇಷ್ಟಪಡಲ್ಲ, ಇದರಿಂದಾಗಿ ವಿಚ್ಛೇದನ ಉಂಟಾಗುವುದು.

7. ತನ್ನ ಸಂಗಾತಿಯ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ ಎಂದು ಅರ್ಥವಾದಾಗ

7. ತನ್ನ ಸಂಗಾತಿಯ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ ಎಂದು ಅರ್ಥವಾದಾಗ

ಕೆಲವೊಂದು ನಂಬಿಕೆ, ಮೌಲ್ಯಗಳು ನಮ್ಮಿಬ್ಬರದ್ದು ಬೇರೆ-ಬೇರೆಯಿದೆ ಎಂದು ಅರಿವಾದಾಗ ಕೂಡ ವಿಚ್ಛೇದನ ನಡೆಯುವುದು. ಉದಾಹರಣೆಗೆ ಮದುವೆಯಾಗಿ ಸಂಸಾರ ಚೆನ್ನಾಗಿಯೇ ನಡೆಯುತ್ತಿದ್ದಾಗ ತನ್ನ ಸಂಗಾತಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕೊಂಡಿದ್ದಾರೆ ಎಂದು ತಿಳಿದಾಗ ತನ್ನ ನಂಬಿಕೆ ಹಾಗೂ ಮೌಲ್ಯಗಳಿಗೆ ಅದು ವಿರುದ್ಧವಾಗಿದ್ದಾಗ ವಿಚ್ಛೇದನಕ್ಕೆ ಬಯಸುತ್ತಾರೆ.

8. ದುಶ್ಚಟಗಳು

8. ದುಶ್ಚಟಗಳು

ತನ್ನ ಸಂಗಾತಿ ದುಶ್ಚಟಗಳು ಮನಸ್ಸಿನ ನೆಮ್ಮದಿಯನ್ನೇ ಹಾಳು ಮಾಡುವುದು, ಇಂಥ ಸಂಬಂಧದಲ್ಲಿ ಇರುವುದಕ್ಕಿಂತ ಹೊರ ಬಂದು ನೆಮ್ಮದಿಯಾಗಿ ಬದುಕೋಣ ಎಂದು ವಿಚ್ಛೇದನಕ್ಕೆ ಮುಂದಾಗುತ್ತಾರೆ.

9. ಮದುವೆ ಘನೆತ ಕಾಪಾಡದಿದ್ದರೆ

9. ಮದುವೆ ಘನೆತ ಕಾಪಾಡದಿದ್ದರೆ

ವೈವಾಹಿಕ ಬದುಕಿನಲ್ಲಿ ಒಂದು ಘನತೆ ಇರಬೇಕು. ಅಂದ್ರೆ ಹೆಂಡತಿ ಜೊತೆ ಹೇಗಿರಬೇಕೋ ಹಾಗೇ ಗಂಡ ಇರಬೇಕು, ಗಂಡನ ಜೊತೆ ಹೇಗೆ ಇರಬೇಕೋ ಹಾಗೇ ಹೆಂಡತಿ ಇರಬೇಕು. ಆ ಘನತೆ ಧಕ್ಕೆಯಾದಾಗ ವಿಚ್ಛೇದನವಾಗುವುದು. ಕೆಲವೊಂದು ಸುದ್ದಿಗಳನ್ನು ನೋಡಬಹುದೇ ಬೇರೆಯವನ ಜೊತೆಗೆ ಹೋಗು ಎಂದು ಗಂಡನೇ ಒತ್ತಾಯಿಸುವುದು, ಹಣಕ್ಕಾಗಿ ತುಂಬಾ ಕೀಳು ಮಟ್ಟಕ್ಕೆ ಇಳಿಯುವುದು ಇವೆಲ್ಲಾ ಮದುವೆಯೆಂಬ ಸಂಬಂಧದ ಘನತೆಯನ್ನೇ ಹಾಳು ಮಾಡುವುದು. ಇಂಥ ಸಂಬಂಧದಲ್ಲಿರಲು ಯಾರೂ ಇಷ್ಟಪಡಲ್ಲ.

10. ಹಣಕಾಸಿನ ತೊಂದರೆ/ಸಾಲ

10. ಹಣಕಾಸಿನ ತೊಂದರೆ/ಸಾಲ

ಹಣಕಾಸಿನ ತೊಂದರೆಯಿದ್ದಾಗ ತುಂಬಾ ಸಮಸ್ಯೆ ಉಂಟಾಗುವುದು. ಇದುವೇ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಬಹುದು. ಹಣವಿಲ್ಲದಿದ್ದಾಗ ಸಂಗಾತಿಯನ್ನು ಬಿಟ್ಟು ಹೋಗುವವರೂ ಇದ್ದಾರೆ. ಹೀಗಾಗಿ ತುಂಬಾ ಹಣಕಾಸಿನ ತೊಂದರೆ ಕೂಡ ವಿಚ್ಛೇದನಕ್ಕೆ ಒಂದು ಕಾರಣವಾಗಿದೆ.

11. ಚಿಕ್ಕ ಪ್ರಾಯದಲ್ಲೇ ಮದುವೆಯಾಗುವುದು

11. ಚಿಕ್ಕ ಪ್ರಾಯದಲ್ಲೇ ಮದುವೆಯಾಗುವುದು

ತುಂಬಾ ಚಿಕ್ಕ ಪ್ರಾಯದಲ್ಲಿ ಮದುವೆಯಾದರೆ ಕೆಲವು ವರ್ಷಗಳ ಬಳಿಕ ಆ ವೈವಾಹಿಕ ಬದುಕಿನ ಆಕರ್ಷಣೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದಾಗಿ ವಿಚ್ಛೇದನ ಉಂಟಾಗುವುದು.

12. ರೊಮ್ಯಾನ್ಸ್‌ ಇಲ್ಲದಿರುವುದೇ/ ಇಬ್ಬರ ಆಸಕ್ತಿಗಳಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು

12. ರೊಮ್ಯಾನ್ಸ್‌ ಇಲ್ಲದಿರುವುದೇ/ ಇಬ್ಬರ ಆಸಕ್ತಿಗಳಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು

ಒಂದು ವೈವಾಹಿಕ ಸಂಬಂಧ ಎಂದ ಮೇಲೆ ಅಲ್ಲಿ ರೊಮ್ಯಾನ್ಸ್ ಇರಲೇಬೇಕು. ಇಲ್ಲವಾದರೆ ಆ ಸಂಬಂಧದಲ್ಲಿ ಅನೇಕ ಭಿನ್ನಾಭಿಪ್ರಾಯ ಮೂಡುವುದು. ತಮ್ಮ ಆಸಕ್ತಿಗಳಲ್ಲಿ ಹೊಂದಾಣಿಕೆ ಇಲ್ಲದೇ ಹೋದಾಗ, ತಮ್ಮಿಬ್ಬರ ನಡುವೆ ಯಾವುದೇ ಆಪ್ತ ಸಂಬಂಧ ಇಲ್ಲದೇ ಹೋದಾಗ ವಿಚ್ಛೇದನದ ಬಗ್ಗೆ ಯೋಚಿಸುತ್ತಾರೆ.

English summary

Most Common Reasons People Get Divorced in Kannada

Most Common Reasons People Get Divorced in Kannada,read on...
X
Desktop Bottom Promotion