For Quick Alerts
ALLOW NOTIFICATIONS  
For Daily Alerts

ದಂಪತಿ ನಡುವೆ ದೈಹಿಕ ಸಂಪರ್ಕದ ಕೊರತೆಗೆ ಸಾಮಾನ್ಯ ಕಾರಣಗಳಿವು

|

ಮದುವೆಯೆಂಬುವುದು ಹೆಣ್ಣು-ಗಂಡು ದೈಹಿಕವಾಗಿ, ಮಾನಸಿಕವಾಗಿ ಬೆರೆತು ಜೊತೆಯಾಗಿ ಬಾಳಲು ಸಮಾಜ ಹಾಕಿರುವ ಚೌಕಟ್ಟು ಆಗಿದೆ. ಮದುವೆ ಮುಂಚೆ ದೈಹಿಕ ಸಂಪರ್ಕ ಮಾಡುವುದು ತಪ್ಪು ಎಂಬುವುದನ್ನು ಸಮಾಜ ಹೇಳುತ್ತದೆ, ಅದೇ ವೈವಾಹಿಕ ಜೀವನದಲ್ಲಿ ಸೆಕ್ಸ್‌ ತುಂಬಾನೇ ಮುಖ್ಯವಾಗಿರುತ್ತದೆ. ಎರಡು ಮನಸ್ಸು ಹಾಗೂ ಎರಡು ದೇಹಗಳು ಒಂದಾಗಿ ದಂಪತಿ ನಡುವೆ ಅನೂನ್ಯ ಹೆಚ್ಚಿಸುವುದಲ್ಲಿ ಲೈಂಗಿಕ ತೃಪ್ತಿ ಎಂಬುವುದು ತುಂಬಾನೇ ಮುಖ್ಯ. ಲೈಂಗಿಕ ತೃಪ್ತಿ ಇಲ್ಲದಿದ್ದರೆ ಅಂಥ ವೈವಾಹಿಕ ಕುಟುಂಬದಲ್ಲಿ ಅನೈತಿಕ ಸಂಬಂಧ, ಮನಸ್ತಾಪ ಮುಂತಾದ ಸಮಸ್ಯೆಗಳು ಬರಬಹುದು. ವೈವಾಹಿಕ ಜೀವನದಲ್ಲಿ ಲೈಂಗಿಕ ತೃಪ್ತಿ ಇದ್ದರೆ ಅವರಿಬ್ಬರ ಬಂಧ ಮತ್ತಷ್ಟು ಸುಂದರವಾಗಿರುತ್ತದೆ.

reasons for a sexless marriage

ಆದರೆ ಕೆಲವರ ವೈವಾಹಿಕ ಜೀವನದಲ್ಲಿ ಸೆಕ್ಸ್ ಕುರಿತು ಮೊದಲಿದ್ದ ಆಸಕ್ತಿ ಕ್ರಮೇಣ ಕಡಿಮೆಯಾಗುವುದು. ವಯಸ್ಸಾಗುತ್ತಿದ್ದಂತೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಸಹಜ. ಆದರೆ ಕೆಲವರಲ್ಲಿ ಚಿಕ್ಕ ಪ್ರಾಯದಲ್ಲಿಯೇ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.

ಅನೇಕ ಕಾರಣಗಳಿಂದ ದಂಪತಿ ನಡುವೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಅದರಲ್ಲೂ ಸಾಮಾನ್ಯವಾಗಿ ಈ ಕಾರಣಗಳಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು:

ಉದ್ರೇಕ ಕಡಿಮೆಯಾಗುವುದು

ಉದ್ರೇಕ ಕಡಿಮೆಯಾಗುವುದು

ವೈವಾಹಿಕ ಜೀವನದಲ್ಲಿ ಲೈಂಗಿಕ ಆಸಕ್ತಿ ಎಂಬುವುದು ಇಬ್ಬರಲ್ಲೂ ಇರಬೇಕಾಗುತ್ತದೆ. ಒಬ್ಬರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾದರೆ ಮತ್ತೊಬ್ಬ ಸಂಗಾತಿಗೆ ಬಯಸಿದ ಲೈಂಗಿಕ ತೃಪ್ತಿ ಸಿಗುವುದಿಲ್ಲ. ಜೊತೆಗೆ ಈ ಕಾರಣ ಮಾನಸಿಕವಾಗಿ ಅಂತರ ಹೆಚ್ಚಾಗಲು ಕಾರಣವಾಗಬಹುದು. ಈ ರೀತಿಯ ಸಮಸ್ಯೆಯಿದ್ದರೆ ಮುಜುಗರ ಪಡದೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಗರ್ಭಧಾರಣೆ ಅಥವಾ ಮೆನೋಪಾಸ್

ಗರ್ಭಧಾರಣೆ ಅಥವಾ ಮೆನೋಪಾಸ್

ಗರ್ಭಿಣಿಯಾಗಿದ್ದಾಗ ಕೆಲವರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಇದನ್ನು ಅರಿತು ಗಂಡ ನಡೆದುಕೊಂಡರೆ ಅಳಿಗೆ ಅವನ ಮೇಲಿನ ಗೌರವ ಮತ್ತಷ್ಟು ಹೆಚ್ಚುವುದು, ಇನ್ನು ಹೆರಿಗೆಯಾದ ಬಳಿಕ ಅವಳ ದೇಹ ಮೊದಲಿನ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುವುದು, ಆಗಾಗ ಮಗುವಿಗೆ ಎದೆ ಹಾಲುಣಿಸುವುದು, ನಿದ್ರೆ ಇಲ್ಲದಿರುವುದು ಅವಳಲ್ಲಿ ಲೈಂಗಿಕ ಆಸಕ್ತಿ ಕುಗ್ಗಿಸುವುದು. ಈ ಸಮಯದಲ್ಲಿ ಗಂಡನ ಮಾನಸಿಕ ಬೆಂಬಲ, ಪ್ರೀತಿಯ ಅವಶ್ಯಕತೆ ಇರುತ್ತದೆ, ನಂತರ ಸರಿ ಹೋಗುವುದು. ಇನ್ನು ಮಹಿಳೆಯರಿಗೆ ಮೆನೋಪಾಸ್‌ ಸಮಯದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದಾಗಿ ಈ ರೀತಿ ಉಂಟಾಗುತ್ತದೆ.

 ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ

ಇನ್ನು ಆರೋಗ್ಯ ಸಮಸ್ಯೆಯಿಂದಾಗಿ ವೈವಾಹಿಕ ಜೀವನದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದರೆ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು. ಆದರೆ ಸಂಗಾತಿಯ ಆರೋಗ್ಯ ಸರಿಯಿಲ್ಲದಿದ್ದಾಗ ಅವರನ್ನು ಆರೈಕೆ ಮಾಡಿ, ಅವರಿಗೆ ಮಾನಸಿಕ ಬೆಂಬಲ, ಪ್ರೀತಿ ತೋರಿಸಿದರೆ ಆ ದಾಂಪತ್ಯ ಸುಂದರವಾಗಿಯೇ ಉಳಿಯುವುದು.

 ಸಂವಹನದ ಕೊರತೆ

ಸಂವಹನದ ಕೊರತೆ

ಸಂವಹನದ ಕೊರತೆಯಿಂದಾಗಿ ದಂಪತಿ ನಡುವೆ ಯಾವುದೇ ಸಾಮರಸ್ಯ, ಸರಸ ಇರುವುದಿಲ್ಲ. ಸಂವಹನದ ಕೊರತೆ ಇರುವ ದಾಂಪತ್ಯ ತುಂಬಾ ಕಾಲ ಬಾಳಲ್ಲ. ಗಂಡ-ಹೆಂಡತಿ ಎಂದ ಮೇಲೆ ಇಬ್ಬರ ನಡುವೆ ಯಾವುದೇ ವಿಷಯದಲ್ಲಿ ಮುಚ್ಚುಮರೆ ಇರಬಾರದು, ಮನಸ್ಸು ಬಿಚ್ಚಿ ಮಾತನಾಡಬೇಕು.

ಔಷಧದ ಅಡ್ಡಪರಿಣಾಮ

ಔಷಧದ ಅಡ್ಡಪರಿಣಾಮ

ಇನ್ನು ಏನಾದರೂ ಆರೋಗ್ಯ ಸಮಸ್ಯೆಗೆ ಔಷಧ ತೆಗೆಯುತ್ತಿದ್ದರೆ ಅದು ಅಡ್ಡಪರಿಣಾಮದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಔಷಧದ ಕಾರಣದಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಿ ಇದರಿಂದ ನಿಮ್ಮ ಸಂಗಾತಿಗೆ ಬೇಸರವಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ ಜೊತೆಗೆ ವೈದ್ಯರ ಬಳಿ ನಿಮ್ಮ ಸಮಸ್ಯೆ ಹೇಳಿ ಏನಾದರೂ ಪರಿಹಾರವಿದೆಯೇ ಎಂದು ಕೇಳಿ. ಇದರಿಂದ ನಿಮ್ಮ ಸಮಸ್ಯೆ ದೂರವಾಗಿ ಗಂಡ-ಹೆಂಡತಿ ಸಂತೋಷದಿಂದ ಇರಬಹುದು.

English summary

Most common reasons for a sexless marriage in kannada

Most common reasons for a sexless marriage in kannada, read on...
X
Desktop Bottom Promotion