For Quick Alerts
ALLOW NOTIFICATIONS  
For Daily Alerts

71 ವರ್ಷ ಜೊತೆಯಾಗಿ ಸಂಸಾರ ನಡೆಸಿದ ಈ ದಂಪತಿ ಹೇಳಿದ್ದಾರೆ ನೋಡಿ ಸುಂದರ ದಾಂಪತ್ಯದ ಗುಟ್ಟು

|

ಮದುವೆ, ಸಂಸಾರ ಎನ್ನುವುದು ಹುಡುಗಾಡಿಕೆಯ ಮಾತಲ್ಲ ಎಂದು ಹಿರಿಯರು ಈಗೀನ ಯುವ ಪೀಳಿಗೆಗೆ ಹೇಳುವುದನ್ನು ಕೇಳುತ್ತೇವೆ. ಹೆಣ್ಣು-ಗಂಡು ಮದುವೆ ಎಂಬ ಬಂಧನಕ್ಕೆ ಒಳಗಾಗಿ ಸಂಸಾರ ಸಾಗಿಸುವಾಗ ಅಲ್ಲಿ ತಾಳ್ಮೆ ಬೇಕಾಗಿರುತ್ತದೆ, ನಂಬಿಕೆ ಇರಬೇಕಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣವಿರಬೇಕಾಗುತ್ತದೆ ಆಗ ಮಾತ್ರ ಆ ದಾಂಪತ್ಯದಲ್ಲಿ ಮಾಧುರ್ಯ ಇರುತ್ತದೆ.

 Married For 71 Years : Karnatakas Elderly Couple Shares The Cecret For Their Long Relationship In Kannada

ಮದುವೆಗೆ ಮೊದಲು ಎಲ್ಲರಿಗೂ ನೂರೆಂಟು ಕನಸುಗಳಿರುತ್ತದೆ, ಆದರೆ ಮದುವೆಯ ಬಳಿಕ ನಾವು ಕನಸು ಕಂಡಂತೆಯೇ ಜೀವನ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಅಲ್ಲಿ ನಾವು ಹೇಗೆ ಹೊಂದಿಕೊಂಡು ಬಾಳುತ್ತೇವೆ ಎಂಬುವುದರ ಮೇಲೆ ಸಂಸಾರ ಗುಟ್ಟು ಅಡಗಿದೆ. ಕೆಲವರು ಪ್ರೀತಿಸಿ ಅವರಿಲ್ಲದಿದ್ದರೆ ನಾನು ಬಾಳಲಾರೆ ಎಂದು ಅತ್ತು ಕರೆದು ಮನೆಯವರನ್ನು ಒಪ್ಪಿಸಿ ಅಥವಾ ದಿಕ್ಕರಿಸಿ ಮದುವೆಯಾಗುತ್ತಾರೆ, ಆದರೆ ಅವರಲ್ಲಿ ಕೆಲವರು ಕೆಲವೇ ವರ್ಷಗಳಲ್ಲಿ ಒಬ್ಬರಿಗೊಬ್ಬರು ಗುಡ್‌ಬೈ ಹೇಳುವ ಮನಸ್ಥಿತಿಗೆ ಬಂದಿರುತ್ತಾರೆ.

ಇದನ್ನು ನೋಡುವಾಗ ಇವರೇನಾ ಅಂದು ಎರಡು ದೇಹ ಒಂದು ಪ್ರಾಣ ಎಂದು ಅಚ್ಚರಿ ಮೂಡಿಸಿ ಬಿಡುತ್ತಾರೆ, ಇನ್ನು ಅರೇಂಜ್‌ ಮ್ಯಾರೇಜ್‌ನಲ್ಲಿ ಕುಂಡಲಿ, ಮನೆತನ ಹೀಗೆ ನೂರೆಂಟು ನೋಡಿ ಮದುವೆ ಮಾಡಲಾಗಿರುತ್ತದೆ, ಅವುಗಳಲ್ಲಿ ಕೆಲವೊಂದು ಸಂಸಾರದಲ್ಲಿ ಬಿರುಗಾಳಿ ಏಳುವುದುಂಟು.. ಇವೆಲ್ಲಾ ನೋಡುವಾಗ ಗಂಡ-ಹೆಂಡತಿ ಅನ್ಯೂನ್ಯವಾಗಿರಲು ಮುಖ್ಯವಾಗಿ ಬೇಕಾಗಿರುವುದು ಏನು ಎಂಬ ಪ್ರಶ್ನೆ ಮೂಡುವುದುಂಟು.. ನಾವಿಲ್ಲಿ ಹೇಳಿದ 72ವರ್ಷ ದಾಂಪತ್ಯ ನಡೆಸಿರುವ ಈ ದಂಪತಿಯ ಜೀವನದ ಕತೆಯಲ್ಲಿ ನೀವು ಉತ್ತರವನ್ನು ಕಂಡುಕೊಳ್ಳಬಹುದು ನೋಡಿ:

ಅವರದ್ದೇ ನುಡಿಯಲ್ಲಿ ಹೇಳುವುದಾದರೆ...

ಹನಿಮೂನ್ ಅಂತೇನು ನಾವು ಹೋಗಿಲ್ಲ

ಹನಿಮೂನ್ ಅಂತೇನು ನಾವು ಹೋಗಿಲ್ಲ

"ನನಗೀಗ 100 ವರ್ಷ ಆದರೆ ಅವಳನ್ನು ಮೊದಲ ಬಾರಿ ನೋಡಿದ್ದು ಈಗಲೂ ಕಣ್ಣಿಗೆ ಕಟ್ಟಿದ್ದಂತಿದೆ. ನಮ್ಮ ಮದುವೆಗೆ ಮನೆಯವರು ಪಂಡಿತ್ ಅವರ ಬಳಿ ಹೋಗಿ ಕುಂಡಲಿ ನೋಡಿ ಅದು ಮ್ಯಾಚ್‌ ಆದ ಮೇಲೆ ಹುಡುಗಿ ನೋಡುವ ಶಾಸ್ತ್ರಕ್ಕೆ ಮನೆಯವರ ಜೊತೆ ಹೋದೆ. ಹಿರಿಯರು ಮಾತನಾಡುತ್ತಿದ್ದರು, ಅವಳು ನೋಡಲು ತುಂಬಾ ಸುಂದರವಾಗಿದ್ದಳು, ಅವಳತ್ತ ಆಗಾಗ ನೋಡುತ್ತಿದ್ದೆ... ಅವಳಿಗಿಂತ 10 ವರ್ಷದೊಡ್ಡವನಾದ ನನ್ನನ್ನು ಒಪ್ಪುತ್ತಾಳಾ ಎಂಬ ಚಿಕ್ಕ ಅಳಕು ಇತ್ತು, ಆದರೆ ಅವಳು ನನ್ನ ಮದುವೆಗೆ ಸಮ್ಮಿತಿ ಸೂಚಿಸಿಯೇ ಬಿಟ್ಟಳು.

ಮದುವೆಯಾದೆವು, ಹನಿಮೂನ್ ಅಂತೇನು ನಾವು ಹೋಗಿಲ್ಲ, ನಮ್ಮದು ಕೂಡ ಕುಟುಂಬ, ಹೆಚ್ಚೇನು ಹಣನೂ ಇಲ್ಲ, ದಿನನಿತ್ಯದ ಹೊಟ್ಟೆಪಾಡಿಗೆ ಕಷ್ಟಪಡುತ್ತಿದ್ದೆವು. ನಮಗೆ ನಮ್ಮ ಸಹೋದರನೇ ಬಟ್ಟೆ ತರುತ್ತಿದ್ದ, ಏಕೆಂದರೆ ನನಗೆ ಆಕೆಗೆ ಒಂದು ಸೀರೆ ತಂದು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದರ ಬಗ್ಗೆ ಎಂದೂ ನನ್ನ ಬಳಿ ಅಸಮಧಾನ ತೋಡಿರಲಿಲ್ಲ. ನಾನು ನಮ್ಮ ಕುಟುಂಬದವರು ನಡೆಸುತ್ತಿದ್ದ ಊದು ಬತ್ತಿ ಉದ್ಯಮದಲ್ಲೇ ಕೆಲಸ ಮಾಡುತ್ತಿದ್ದೆ. ಆಕೆ ನನ್ನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಳು. ಪ್ರತೀದಿನ 5 ಗಂಟೆಗೆ ಎಬ್ಬಿಸಿ ವಾಕ್‌ಗೆ ಕಳುಹಿಸುತ್ತಿದ್ದಳು.

ಅವಳು ನನ್ನ ಪಕ್ಕ ಕೂತಾಗ ನಾನು ತುಂಬಾ ಶ್ರೀಮಂತ ಅನಿಸುತ್ತಿತ್ತು

ಅವಳು ನನ್ನ ಪಕ್ಕ ಕೂತಾಗ ನಾನು ತುಂಬಾ ಶ್ರೀಮಂತ ಅನಿಸುತ್ತಿತ್ತು

ವ್ಯಾಪಾರಕ್ಕಾಗಿ ತಿಂಗಳಿನಲ್ಲಿ 3 ವಾರ ಮನೆಯಿಂದ ಹೊರಗಡೆಯೇ ಇರುತ್ತಿದ್ದೆ. ದಕ್ಷಿಣ ಭಾರತದ ಕಡೆ ವ್ಯಾಪಾರ ಮಾಡುತ್ತಿದ್ದೆ. ಅವಳು ನನ್ನ ಬಟ್ಟೆ-ಬರೆ ಪ್ಯಾಕ್ ಮಾಡುತ್ತಾ 'ನನ್ನ ಬಗ್ಗೆ ಏನೂ ಚಿಂತೆ ಮಾಡಬೇಡಿ' ಎಂದು ಹೇಳುತ್ತಿದ್ದಳು. ಅವಳನ್ನು ತುಂಬಾ ನಂಬುತ್ತಿದ್ದೆ, ಯಾವುದೇ ನಿರ್ಧಾರವಾಗಲಿ ಅವಳಿ ಒಪ್ಪಿದರೆ ಮಾತ್ರ ನನಗೆ ಅದು ಸರಿ ಅನಿಸುತ್ತಿತ್ತು. ಕುಟುಂಬ ವ್ಯವಹಾರ ಬಿಟ್ಟು ನನ್ನದೇ ಸ್ವಂತ ಏನಾದರೂ ಮಾಡಬೇಕೆಂದುಕೊಂಡಾಗ ಎಲ್ಲರೂ ನನ್ನದು ಹುಂಬತನ ಎಂದು ಆಡಿಕೊಂಡರೆ ಈಕೆ ನನ್ನ ಬೆಂಬಲವಾಗಿ ನಿಂತಳು. ಅವಳು ಏನೇ ಆಗಲಿ ಜೊತೆಯಾಗಿ ಎದುರಿಸೋಣ ಎಂದಳು. ಅವಳಿಗೆ ಒಂದು ಸ್ವಂತ ಮನೆ ಮಾಡಿಕೊಡಬೇಕೆಂದು ಕನಸು ಕಂಡೆ, ಅದಕ್ಕಾಗಿ ತುಂಬಾ ಹೊತ್ತು ದುಡಿಯುತ್ತಿದ್ದೆ. ಮನೆ, ಮಕ್ಕಳ ಜವಾಬ್ದಾರಿ ಆಕೆ ಹೊತ್ತು ಕೊಂಡಳು. ನಮಗೇನು ತುಂಬಾ ದುಡ್ಡಿರಲಿಲ್ಲ, ಆದರೆ ಅವಳು ನನ್ನ ಪಕ್ಕ ಕೂತಾಗ ನಾನು ತುಂಬಾ ಶ್ರೀಮಂತ ಅನಿಸುತ್ತಿತ್ತು. ಒಂದೊಂದು ರುಪಾಯಿ ಕೂಡಿಟ್ಟು 17 ವರ್ಷಗಳಲ್ಲಿ ಮನೆಯೆಂಬ ನಮ್ಮ ಕನಸು ನನಸು ಮಾಡಿಕೊಂಡೆವು.

ಆಕೆ ಹೂ ತೋಟದಲ್ಲಿ ಹೂ ಕೀಳುತ್ತಿದ್ದರೆ ನ್ಯೂಸ್‌ಪೇಪರ್‌ ಓದುವಂತೆ ನಟಿಸಿ ಆಕೆಯನ್ನು ನೋಡುತ್ತೇನೆ

ಆಕೆ ಹೂ ತೋಟದಲ್ಲಿ ಹೂ ಕೀಳುತ್ತಿದ್ದರೆ ನ್ಯೂಸ್‌ಪೇಪರ್‌ ಓದುವಂತೆ ನಟಿಸಿ ಆಕೆಯನ್ನು ನೋಡುತ್ತೇನೆ

ಈ ಮನೆಯಲ್ಲಿ ಪ್ರತಿ ಬೆಳಗ್ಗೆ ಹೊಸದಂದು ಜೀವನ ಕಟ್ಟಿಕೊಳ್ಳುತ್ತೇವೆ, ನಾನು ಬೆಡ್‌ ಮಲಗಿದ್ದರೆ ಆಕೆ ಮೃದುವಾದ ದೋಸೆ ಮಾಡುತ್ತಿರುತ್ತಾಳೆ, ಸಂಜೆ ಆಕೆ ಹೂ ತೋಟದಲ್ಲಿ ಹೂ ಕೀಳುತ್ತಿದ್ದರೆ ನ್ಯೂಸ್‌ಪೇಪರ್‌ ಓದುವಂತೆ ನಟಿಸಿ ಆಕೆಯನ್ನು ನೋಡುತ್ತೇನೆ. ನಮ್ಮ ಮನೆಯಲ್ಲಿ ಸದಾ ಕರ್ನಾಟಿಕ್ ಸಂಗೀತ ಕೇಳ್ತಾ ಇರುತ್ತೇವೆ.

ನಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟ ಬಳಿಕ ಮೊದಲ ಬಾರಿ ವಿದೇಶ ಪ್ರವಾಸ ಹೋದೆವು, ಆಗ ನಾನು ಟೂರ್ ಬಸ್‌ನಿಂದ ಇಳಿದರೆ ಎಲ್ಲಿ ಕಳೆದು ಹೋಗುತ್ತೇವೋ ಎಂದು ಭಯ ಪಟ್ಟಾಗ ಏನೂ ಆಗಲ್ಲ ಎಂದು ದೈರ್ಯ ತುಂಬಿ ಎಲ್ಲಾ ಕಡೆ ಕರೆದುಕೊಂಡು ಹೋಗಿದ್ದಳು.

ನಮ್ಮ ಪ್ರೀತಿಯನ್ನು ಅನುಭವಿಸಲು ಸಾಕಾಗುತ್ತಿಲ್ಲಈ ಜನ್ಮ ಸಾಕಾಗುತ್ತಿಲ್ಲ

ನಮ್ಮ ಪ್ರೀತಿಯನ್ನು ಅನುಭವಿಸಲು ಸಾಕಾಗುತ್ತಿಲ್ಲಈ ಜನ್ಮ ಸಾಕಾಗುತ್ತಿಲ್ಲ

ಈಗ ನನಗೆ ಶತಕ, ಆದರೆ ಒಂದು ಚಿಕ್ಕ ಸಂಗತಿಗೂ ಆಕೆಯ ಸಲಹೆ ಕೇಳುತ್ತೇನೆ, ನನ್ನ ಮಕ್ಕಳು ಏನಾದರೂ ಹೇಳುವಾಗ 'ನಿಮ್ಮ ಹೆಂಡತಿ ಇದಕ್ಕೆ ಒಪ್ಪಿಗೆ ಕೊಟ್ರಾ' ಎಂದು ಹೇಳಿ ತಮಾಷೆ ಮಾಡುತ್ತಾರೆ.

ಮದುವೆಯಾಗಿ 72 ವರ್ಷಗಳಾಗಿವೆ, ಇಬ್ಬರು ಮಕ್ಕಳು, ನಾಲ್ಕು ಮೊಮ್ಮಕ್ಕಳು, ಎರಡು ಮರಿ ಮೊಮ್ಮಕ್ಕಳು ಇದ್ದಾರೆ. ನಮ್ಮ ಪ್ರೀತಿಯನ್ನು ಅನುಭವಿಸಲು ಸಾಕಾಗುತ್ತಿಲ್ಲ'.

ಬಹುಶಃ ಇದರಲ್ಲಿ ಸುಂದರ ದಾಂಪತ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು ಎಂದು ಅರ್ಥವಾಗಿರಬೇಕು ಅಲ್ವಾ?

English summary

Married For 71 Years : Karnataka's Elderly Couple Shares The Secret For Their Long Relationship In Kannada

Married for 71 Years : Karnataka's elderly couple shares the secret for their long relationship in kannada,
X
Desktop Bottom Promotion