For Quick Alerts
ALLOW NOTIFICATIONS  
For Daily Alerts

ಮದುವೆಯಾಗಿ ಮೂರು ವರ್ಷವಾದ ಮೇಲೆ ದಾಂಪತ್ಯ ಜೀವನದಲ್ಲಿ ಈ ಸಮಸ್ಯೆಗಳು ಸಾಮಾನ್ಯ

|

ಮದುವೆಯ ಮೊದಲಮೊದಲ ವರ್ಷ ಎಲ್ಲವೂ ಚೆನ್ನ, ಎಲ್ಲವೂ ಪರಿಪೂರ್ಣ. ಯಾವುದೇ ಕೋಪ, ಜಗಳ, ಮನಸ್ತಾಪಗಳು ಬರುವುದಿಲ್ಲ, ಬಂದರೂ ಬೇಗನೇ ಕೊನೆಯಾಗುತ್ತವೆ. ಆದರೆ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಎಲ್ಲವೂ ಬದಲಾಗುವುದು. ನೀವು ಈ ಹಿಂದೆ ಇಷ್ಟಪಡುತ್ತಿದ್ದ ವಸ್ತು ಅಥವಾ ನಡವಳಿಕೆಗಳೇ ಮುಂದೆ ಕಿರಿಕಿರಿ ಆಗಬಹುದು, ಆ ಸಮಯದಲ್ಲಿ ಹೊಂದಾಣಿಕೆ ಎನ್ನುವುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ಮದುವೆಯಾದ ಮೂರು ವರ್ಷದ ನಂತರ ಎದುರಾಗುವ ಸಾಮಾನ್ಯ ಸಮಸ್ಯೆಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಮದುವೆಯಾದ ಮೂರು ವರ್ಷದ ನಂತರ ಎದುರಾಗುವ ಸಾಮಾನ್ಯ ಸಮಸ್ಯೆಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಣದ ವಿಚಾರ:

ಹಣದ ವಿಚಾರ:

ದಂಪತಿಗಳ ನಡುವಿನ ಸಂಘರ್ಷದ ಸಾಮಾನ್ಯ ವಿಷಯವೆಂದರೆ ಹಣ. ಕುಟುಂಬ ಎಂದರೆ ನಿಮ್ಮ ಎಲ್ಲಾ ಬಿಲ್‌ಗಳು ಮತ್ತು ಹಣವನ್ನು ಹಂಚಿಕೊಳ್ಳಬೇಕು. ಸಮತೋಲಿತ ಖರ್ಚು ಮತ್ತು ಹಣವನ್ನು ವ್ಯರ್ಥ ಮಾಡದಿರಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಹಣದ ವಿಷಯಗಳು ಸ್ವಲ್ಪ ಹೆಚ್ಚು ಕಾಳಜಿ ಮಾಡಬೇಕಾದ ವಿಷಯವಾಗಿದೆ. ಏಕೆಂದರೆ ಈ ಮೂಲಕವೇ ಅವರು ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದು ಅರ್ಥವಾಗುವುದು.

ಲೈಂಗಿಕ ಬದುಕು:

ಲೈಂಗಿಕ ಬದುಕು:

ಸಂಬಂಧದ ಪ್ರಾರಂಭದಲ್ಲಿ ಲೈಂಗಿಕತೆ ತೃಪ್ತಿ ನೀಡುತ್ತದೆ. ಆದರೆ ಮೂರು ವರ್ಷಗಳ ನಂತರ ನಿಧಾನವಾಗಿ ಅದು ಕಡಿಮೆಯಾಗಲು ಆರಂಭವಾಗುತ್ತದೆ. ಸಾಕಷ್ಟು ಲೈಂಗಿಕ ತೃಪ್ತಿ ಪಡೆಯುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಇದರಿಂದ ನೀರಸ ಲೈಂಗಿಕತೆ ಹುಟ್ಟಿಕೊಳ್ಳುತ್ತದೆ, ಇದು ಮುಂದೆ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಲೈಂಗಿಕತೆಯನ್ನು ಜೀವಂತವಾಗಿಡಲು ಅನ್ಯೋನ್ಯತೆಯನ್ನು ಪಡೆಯಲು ವಿವಿಧ ಕೆಲಸಗಳನ್ನು ಮಾಡುತ್ತೀರಿ.

ಮನೆಯ ಘರ್ಷಣೆಗಳು:

ಮನೆಯ ಘರ್ಷಣೆಗಳು:

ಮನೆಕೆಲಸಗಳಂತಹ ಸಣ್ಣ ವಿಷಯಗಳಿಗೆ ನಿಮ್ಮ ನಡುವೆ ಭಿನ್ನಾಭಿಪ್ರಾಯ ಮೂಡದಿರಬಹುದು ಎಂದು ನೀವು ಊಹಿಸಬಹುದು. ಆದರೆ ದಿನಕಳೆದಂತೆ ಇದರಲ್ಲೂ ಮನಸ್ತಾಪಗಳು ಮೂಡುತ್ತವೆ. ಮನೆಕೆಲಸವನ್ನ ಒಬ್ಬರೇ ಮಾಡುತ್ತಿದ್ದರೆ, ಎಲ್ಲಾ ಕೆಲಸಗಳನ್ನು ನಾನೇ ಮಾಡಬೇಕಾ ಎಂಬ ಪ್ರಶ್ನೆ ಮೂಡದೇ ಇರದು. ಮನೆಕೆಲಸಗಳ ವಿಭಾಗವನ್ನು ನಿರ್ಧರಿಸುವಾಗ ಭಿನ್ನಾಭಿಪ್ರಾಯಗಳು ಹೊಸ ತಿರುವು ಪಡೆಯುತ್ತವೆ. ಆದ್ದರಿಂದ ಹಂಚಿಕೊಂಡು ಕೆಲಸ ಮಾಡಿದರೆ ಉತ್ತಮ.

ಮಗುವಿನ ವಿಚಾರ:

ಮಗುವಿನ ವಿಚಾರ:

ಮದುವೆಯಿಂದ ಪ್ರತಿಯೊಬ್ಬರೂ ವಿಭಿನ್ನ ವಿಷಯಗಳನ್ನು ಬಯಸುತ್ತಾರೆ. ಕೆಲವರು ಮಗುವನ್ನು ಬಯಸಿದರೆ, ಇನ್ನೂ ಕೆಲವರು ಇಷ್ಟು ಬೇಗ ಮಗು ಎಂಬ ಬದ್ಧತೆಗೆ ಸಿದ್ಧರಿರುವುದಿಲ್ಲ. ಕುಟುಂಬ ಯೋಜನೆ ಚರ್ಚೆಗೆ ಸಂಬಂಧಿಸಿದಂತೆ ಒಂದು ಹಂತದ ನಂತರ ಭಿನ್ನಾಭಿಪ್ರಾಯಗಳು ಸ್ವಾಭಾವಿಕವಾಗಿ ಬರುತ್ತವೆ. ಆದ್ದರಿಂದ, ಈ ವಿಷಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮೊದಲೇ ಮಾತನಾಡುವುದು ಒಳ್ಳೆಯದು.

ಬದಲಾವಣೆ:

ಬದಲಾವಣೆ:

ಬದಲಾವಣೆ ಜಗದ ನಿಯಮ. ಅದರಂತೆ ಮದುವೆ ಆದ ಮೇಲೂ ಹೆಚ್ಚಿನ ವಿಷಯಗಳು ಬದಲಾಗುತ್ತವೆ. ಡೇಟಿಂಗ್ ನಲ್ಲಿದ್ದಾಗ ಒದು ರೀತಿಯಾದರೆ, ಮದುವೆಯಾದ ಮೇಲೆ ಮತ್ತೊಂದು ರೀತಿ ಇರಬೇಕಾಗಿರುವುದು ಅನಿವಾರ್ಯ. ಹೀಗಿದ್ದಾಗಲೇ ಮುಂದೆ ಭಿನ್ನಾಭಿಪ್ರಾಯ ಬರುವುದು. ನೀನು ಮೊದಲಿನಿಂತಿಲ್ಲ ಎಂಬ ಮಾತಿನೊಂದಿಗೆ ಎಲ್ಲವೂ ಶುರುವಾಗುತ್ತದೆ. ಆದರೆ ಮೊದಲು ನೀವು ಬದಲಾವಣೆ ಜೀವನದ ಭಾಗವೆಂಬುದನ್ನು ಅರ್ಥ ಮಾಡಿಕೊಂಡು, ಆ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಹೋಗಬೇಕು.

ಸಂಬಂಧಗಳು:

ಸಂಬಂಧಗಳು:

ಸಂಘರ್ಷಕ್ಕೆ ಇದು ಒಂದು ಪ್ರಮುಖ ಕಾರಣವಾಗಬಹುದು. ನಿಮ್ಮ ಮದುವೆ ನಂತರ ಅತ್ತೆ-ಮಾವಂದಿರು ಅಗತ್ಯಕ್ಕಿಂತ ಹೆಚ್ಚಿನ ವಿಚಾರಗಳಲ್ಲಿ ತಲೆಹಾಕುತ್ತಾರೆ. ಅದು ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ. ಅಂತಹ ಗೊಂದಲಗಳನ್ನು ತಪ್ಪಿಸಲು, ಪೋಷಕರಿಗೆ ದಾಟಲು ಸಾಧ್ಯವಾಗದ ಗಡಿಗಳನ್ನು ರಚಿಸಬೇಕು.

ಬೇಸರ:

ಬೇಸರ:

ಕೆಲವೊಮ್ಮೆ ನಿಮ್ಮ ಮದುವೆಯ ನಿರೀಕ್ಷೆಗಳು ವಾಸ್ತವಕ್ಕೆ ವಿರುದ್ಧವಾಗಿರುತ್ತದೆ. ನಿಮ್ಮ ದಾಂಪತ್ಯದ ಬಗ್ಗೆ ನಿಮಗೆ ಬೇಸರವಿರುವ ಬ ಸಣ್ಣ ಸಾಧ್ಯತೆಯೂ ಇರಬಹುದು. ನೀವು ಬೇರೆಯೇ ಜೀವನವನ್ನು ಎದುರು ನೋಡುತ್ತಿದ್ದೀರಿ, ಆದರೆ ನೀರಸ ಮತ್ತು ಸಾಮಾನ್ಯವಾದ ಜೀವನ ನಿಮ್ಮ ಪಾಲಾದಾಗ ಅದು ಮದುವೆಯಲ್ಲಿ ಘರ್ಷಣೆಗೆ ಕಾರಣವಾಗುತ್ತದೆ. ಒಟ್ಟಿಗೆ ಪ್ರವಾಸಗಳಿಗೆ ಹೋಗುವ ಮೂಲಕ ಅಥವಾ ಆಗಾಗ್ಗೆ ಡೇಟಿಂಗ್ ಹೊಗುವ ಮೂಲಕ ನೀವು ಉತ್ಸಾಹವನ್ನು ಮುಂದುವರಿಸುವುದು ಮುಖ್ಯ.

English summary

List of Most Common Problems in the First 3 Years of Marriage in Kannada

Here we talking about List of most common problems in the first 3 years of marriage in kannada, read on
Story first published: Tuesday, July 27, 2021, 15:23 [IST]
X
Desktop Bottom Promotion