For Quick Alerts
ALLOW NOTIFICATIONS  
For Daily Alerts

ಜಪಾನಿನಲ್ಲಿ ಮಕ್ಕಳನ್ನು ಪೋಷಿಸುವ ಸ್ಟೈಲೇ ಬೇರೆ

|

ಮಕ್ಕಳನ್ನು ಬೆಳೆಸುವ ಬಗ್ಗೆ ಪ್ರತಿಯೊಬ್ಬ ಪೋಷಕರಿಗೂ ಸಾಕಷ್ಟು ಕನಸುಗಳಿರುತ್ತದೆ. ಪೋಷಕರ ಕೆಲಸ ಖಂಡಿತ ಬಹಳ ಕಠಿಣವಾದದ್ದು. ಪ್ರತಿಯೊಬ್ಬ ಪೋಷಕರ ಬಳಿಯೂ ತಮ್ಮ ಮಕ್ಕಳ ಬಗ್ಗೆ ವಿಭಿನ್ನ ಕಥೆಗಳಿರುತ್ತದೆ. ಮಕ್ಕಳು ತಮ್ಮ ಸುತ್ತಮುತ್ತಲು ನಡೆಯುವ ಘಟನೆಗಳಿಂದ ಮತ್ತು ಸುತ್ತಮುತ್ತಲೂ ಇರುವವರಿಂದ ಬಹಳಷ್ಟು ಕಲಿಯುತ್ತಾರೆ. ಪ್ರತಿಯೊಬ್ಬರೂ ಕೂಡ ಸಂತೋಷದ, ಆರೋಗ್ಯಕಾರಿಯಾದ ಮತ್ತು ಬುದ್ಧಿವಂತ ಮಕ್ಕಳನ್ನೇ ಬಯಸುತ್ತಾರೆ. ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ.

Japanese parenting style is different from others

ಈ ನಿಟ್ಟಿನಲ್ಲಿ ಬೇರೆಯವರಿಗೆ ಸ್ಪೂರ್ತಿ ನೀಡುವಂತಹ ಒಂದು ಜನಾಂಗವಿದ್ದರೆ ಅದು ವಿಶ್ವದಲ್ಲಿ ಜಪಾನಿಗರೆಂದೇ ಹೇಳಬೇಕು. ಜಪಾನಿ ಮಕ್ಕಳಲ್ಲಿ ಬೆಳೆಸಲಾಗುವ ಒಂದು ವಿಭಿನ್ನ ವ್ಯಕ್ತಿತ್ವವು ಅವರನ್ನು ಇತರರಿಗಿಂತ ಭಿನ್ನರನ್ನಾಗಿಸುತ್ತದೆ. ನಿಜ ಹೇಳಬೇಕು ಅಂದರೆ ಸಾರ್ವಜನಿಕವಾಗಿ ಜಪಾನಿ ಮಕ್ಕಳು ಅಳುವುದನ್ನು ಬಹಳ ಕಡಿಮೆ ನೋಡುವುದಕ್ಕೆ ಸಿಗುತ್ತದೆ! ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಜಪಾನಿಗರು ತಮ್ಮ ಮಕ್ಕಳನ್ನು ವಿಭಿನ್ನವಾಗಿ ಬೆಳೆಸುತ್ತಾರೆ. ಆ ನಿಟ್ಟಿನಲ್ಲಿ ಇರುವ ಪ್ರಮುಖ 5 ವ್ಯತ್ಯಾಸಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ಜಪಾನಿ ಮಕ್ಕಳು ಸಮಾನತೆಯಲ್ಲಿ ಬೆಳೆಯುತ್ತಾರೆ

ಜಪಾನಿ ಮಕ್ಕಳು ಸಮಾನತೆಯಲ್ಲಿ ಬೆಳೆಯುತ್ತಾರೆ

ಕೆಲವು ದಿನಗಳ ಮುಂಚೆ ಶಾಲೆಯ ಮಕ್ಕಳು ತಮ್ಮ ಕ್ಲಾಸ್ ರೂಮ್ ನ್ನು ಸ್ವಚ್ವಗೊಳಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇದು ಕೇವಲ ವೀಡಿಯೋ ಮಾತ್ರವಲ್ಲ. ಇದು ಜಪಾನಿನ ಸಂಸ್ಕೃತಿ. ಬೇರೆ ಬೇರೆ ಕುಟುಂಬದ ಮಕ್ಕಳು ಇಲ್ಲಿ ಸಮಾನರಾಗಿರುತ್ತಾರೆ. ಅದು ರಾಜಮನೆತನದವರೇ ಆಗಿರಲಿ ಅಥವಾ ಬಡಮಧ್ಯಮ ವರ್ಗದ ಕುಟುಂಬದವರೇ ಆಗಿದ್ದರೂ ಕೂಡ ಜಪಾನಿ ಶಾಲೆಯಲ್ಲಿ ಎಲ್ಲರೂ ಸಮಾನರಾಗಿರುತ್ತಾರೆ. ಶಾಲೆಯ ಎಲ್ಲಾ ಆಕ್ಟಿವಿಟಿಗಳಲ್ಲಿ ಅವರು ಸಮನಾಗಿ ಭಾಗವಹಿಸುತ್ತಾರೆ. ಮಕ್ಕಳು ತಮ್ಮ ಜೀವನದ ಪ್ರಮುಖ ಘಟ್ಟದಲ್ಲಿರುವಾಗ ಅವರಿಗೆ ಅವರ ವಯಕ್ತಿಕ ಆಸಕ್ತಿಗೆ ಹೆಚ್ಚು ಅವಕಾಶ ನೀಡಿ ಪ್ರೋತ್ಸಾಹಿಸುವ ವ್ಯವಸ್ಥೆ ಜಪಾನಿನಲ್ಲಿದೆ. ಬದುಕಿಗಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎಂಬುದನ್ನು ಅವರು ಚಿಕ್ಕಂದಿನಿಂದಲೇ ಕಲಿಲಾಗುತ್ತದೆ. ಇದು ಜಪಾನಿಗರ ಫಿಲಾಸಫಿಯಾಗಿದೆ. ಸಮಾಜದಲ್ಲಿ ಒಟ್ಟಾಗಿ ಬಾಳ್ವೆ ನಡೆಸುವುದರ ಮಹತ್ವವನ್ನು ಅವರು ಕಲಿಯುತ್ತಾರೆ ಮತ್ತು ಸಮಾನತೆಯ ಪಾಠ ಕಲಿತಿರುತ್ತಾರೆ.

ತಾಯಿ-ಮಗುವಿನ ಸಂಬಂಧ ಹೆಚ್ಚು ಗಾಢ ಮತ್ತು ಗೌರವಾತ್ಮಕವಾಗಿರುತ್ತದೆ

ತಾಯಿ-ಮಗುವಿನ ಸಂಬಂಧ ಹೆಚ್ಚು ಗಾಢ ಮತ್ತು ಗೌರವಾತ್ಮಕವಾಗಿರುತ್ತದೆ

ಜಪಾನಿನ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆಗೆ ಬಹಳ ಮಹತ್ವವಿದೆ ಮತ್ತು ಮಕ್ಕಳನ್ನು ಪೋಷಕರು ಬೆಳೆಸುವುದು ಜೀವನದ ಪ್ರಮುಖ ಭಾಗವಾಗಿ ಪರಿಗಣಿಸುತ್ತಾರೆ. ಜಪಾನಿನಲ್ಲಿ ತಾಯಿ ಮಕ್ಕಳ ಸಂಬಂಧವು ರಕ್ಷಣಾತ್ಮಕ ವಾಗಿದೆ. ಇದು ಅಲ್ಲಿ ಸ್ವಲ್ಪ ವಿಭಿನ್ನವಾಗಿದೆ. ಮಕ್ಕಳು ಚಿಕ್ಕವರಾಗಿದ್ದಾಗ ಅವರ ತಾಯಿಯ ಪಾತ್ರದ ಬಗ್ಗೆ ಹೆಚ್ಚು ಗಮನವಿಡಲಾಗುತ್ತದೆ ಮತ್ತು ಧನಾತ್ಮಕ ಜೀವನಶೈಲಿಯನ್ನು ಮಗುವು ರೂಪಿಸಿಕೊಳ್ಳುವುದಕ್ಕಾಗಿ ಶಿಕ್ಷಣ ನೀಡಲಾಗುತ್ತದೆ. ಹಾಗಾಗಿ ದೊಡ್ಡವರಾದ ಮೇಲೆ ಸಮಸ್ಯೆಯನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಜಪಾನಿ ಮಕ್ಕಳು ಬಾಲ್ಯದಿಂದಲೇ ಕಲಿತಿರುತ್ತಾರೆ.

ಜಪಾನಿನ ನಿಯಮದ ಪ್ರಕಾರ ಜಪಾನಿನ ಪೋಷಕರು ಅದರಲ್ಲೂ ಮುಖ್ಯವಾಗಿ ತಾಯಂದಿರು ಹೆಚ್ಚು ಸಮಯವನ್ನು ತಮ್ಮ ಮಕ್ಕಳಿಗೆ ಮೀಸಲಿಡಬೇಕು ಎಂದಿದೆ. ಅದಕ್ಕಾಗಿ ಸರ್ಕಾರವು ಕೂಡ ಹಲವು ಯೋಜನೆಗಳನ್ನು ರೂಪಿಸಿದೆ. ಮೂರು ವರ್ಷಕ್ಕೂ ಮುನ್ನ ಮಕ್ಕಳನ್ನು ಕಿಂಡರ್ ಗಾರ್ಡನ್ ಗೆ ಕಳಿಸುವ ಪದ್ಧತಿ ಜಪಾನಿನಲ್ಲಿ ಇಲ್ಲವೇ ಇಲ್ಲ.

ಮಕ್ಕಳ ಭಾವನೆಗಳಿಗೆ ಪೋಷಕರು ಗಮನ ಹರಿಸುತ್ತಾರೆ

ಮಕ್ಕಳ ಭಾವನೆಗಳಿಗೆ ಪೋಷಕರು ಗಮನ ಹರಿಸುತ್ತಾರೆ

ಮಕ್ಕಳ ದೈಹಿಕ ಬೆಳವಣಿಗೆಯ ಬಗ್ಗೆ ಗಮನ ಹರಿಸುವಂತೆ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ವಿಚಾರಗಳಿಗೆ ಗಮನವಿಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಇದನ್ನು ಜಪಾನೀ ಪೋಷಕರು ಉತ್ತಮವಾಗಿ ತಿಳಿದುಕೊಂಡಿದ್ದಾರೆ. ಮಕ್ಕಳ ಕಾಳಜಿಯಲ್ಲಿ ಪ್ರೋತ್ಸಾಹಿಸುವ ಗುಣವನ್ನು ಜಪಾನಿಗರು ಹೊಂದಿದ್ದಾರೆ. ಶಿಸ್ತು ಮತ್ತು ಸಂಮಯವನ್ನು ಅವರ ಜೀವಶೈಲಿಯಲ್ಲಿ ಕಲಿಸಿಕೊಡಲಾಗುತ್ತದೆ. ಯಾವುದೇ ತಪ್ಪಿಗೂ ಎದೆಗುಂದದೆ ಬದುಕುವ ಸಾಮರ್ಥ್ಯ ಬೆಳೆಸುವೆಡೆಗೆ ಜಪಾನಿಗರ ಗಮನವಿರುತ್ತದೆ.

ಎಲ್ಲಾ ಸಮಯದಲ್ಲೂ ಧನಾತ್ಮಕವಾಗಿ ಮಕ್ಕಳನ್ನು ಪ್ರೊತ್ಸಾಹಿಸಲಾಗುತ್ತದೆ ಮತ್ತು ಸಮಾಜದಲ್ಲಿ ಮಕ್ಕಳು ಹೇಗೆ ಬದುಕಬೇಕು ಜೊತೆಗೆ ಅವರ ಭಾವನೆಗಳನ್ನು ಹೇಗೆ ಕಂಟ್ರೋಲ್ ಮಾಡಬೇಕು, ಪರಿಸ್ಥಿತಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬ ಪಾಠವನ್ನು ಮಕ್ಕಳಿಗೆ ಬಾಲ್ಯದಿಂದಲೇ ಮಾಡಲಾಗುತ್ತದೆ.

ಸಾರ್ವಜನಿಕ ಪ್ರೋತ್ಸಾಹ ಅಥವಾ ಬಾಂಧವ್ಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲ

ಸಾರ್ವಜನಿಕ ಪ್ರೋತ್ಸಾಹ ಅಥವಾ ಬಾಂಧವ್ಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲ

ಪ್ರತಿಯೊಬ್ಬ ಪೋಷಕರೂ ಕೂಡ ತಮ್ಮ ಮಕ್ಕಳಿಗೆ ಸಾರ್ವಜನಿಕವಾಗಿ ಬೆಲೆ ಸಿಗಬೇಕು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅಥವಾ ಸಾರ್ವಜನಿಕ ಪ್ರಸಿದ್ಧತೆ‌ ಸಿಗಬೇಕು ಅಂದು ಬಯಸುತ್ತಾರೆ. ಹಾಗಾಗಿ ತಮ್ಮ ಮಕ್ಕಳ ಒಳ್ಳೆತನವನ್ನು ಎಲ್ಲರೆದುರು ಹೊಗಳುತ್ತಾರೆ. ಆದರೆ ಜಪಾನಿ ಪೋಷಕರೂ ಎಂದಿಗೂ ಹೀಗೆ ಮಾಡುವುದೇ ಇಲ್ಲ. ಮಕ್ಕಳು ಸ್ವತಂತ್ರ್ಯವಾಗಿರಲು ಮತ್ತು ಶಿಸ್ತಿನ ಅಭ್ಯಾಸವನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಯಾವುದೋ ಪ್ರೋತ್ಸಾಹ ಅಥವಾ ಸವಲತ್ತು ಗಳಿಲ್ಲದೆಯೂ ಬದುಕುವುದಕ್ಕೆ ಮತ್ತು ಯಾರನ್ನೂ ಅವಲಂಬಿಸದೇ ಬದುಕುವುದಕ್ಕೆ ಮಕ್ಕಳನ್ನು ತಯಾರು ಮಾಡಲಾಗುತ್ತದೆ. ಸಾರ್ವಜನಿಕವಾಗಿ ಮಕ್ಕಳು ಗುರುತಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಅವಲಂಬನೆ‌ ಇಲ್ಲದೆ ಬದುಕಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ.

English summary

Lessons to Learn From the Japanese Parenting Style

Here we are discussing about Japanese parenting style is different from others. Here are five things Japanese do differently when it comes to raising their offspring. Read more.
X
Desktop Bottom Promotion