For Quick Alerts
ALLOW NOTIFICATIONS  
For Daily Alerts

ಹೊಸವರ್ಷ 2022: ಅವಿವಾಹಿತರು ಅಥವಾ ಸಿಂಗಲ್ಸ್‌ಗೆ ಈ ವರ್ಷ ಹೇಗಿರಲಿದೆ?

|

ಭವಿಷ್ಯದಲ್ಲಿ ಏನಾಗುತ್ತದೆ ಎಂಬ ಅರಿವಿಲ್ಲದಿದ್ದರೂ ಸಹ, ಪ್ರತಿ ವರ್ಷ ನಾವು ಹೊಸ ವರ್ಷವನ್ನು ಬಹಳ ಸಂಭ್ರಮದಿಂದ ಸ್ವಾಗತಿಸುತ್ತೇವೆ. ಆದರೆ ನಮ್ಮ ರಾಶಿಚಕ್ರಗಳು ನಮ್ಮ ಮುಂದಿನ ಹಾದಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ, ಅವಿವಾಹಿತ ಅಥವಾ ಸಿಂಗಲ್ ಆಗಿರುವವರಿಗೆ ಜ್ಯೋತಿಷ್ಯದ ಪ್ರಕಾರ, ಮುಂಬರುವ ವರ್ಷವು ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ.

ರಾಶಿಚಕ್ರದ ಪ್ರಕಾರ, ಅವಿವಾಹಿತ ಅಥವಾ ಸಿಂಗಲ್ ಆಗಿರುವವರಿಗೆ ಮುಂಬರುವ ವರ್ಷವು ಹೇಗಿರಬಹದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ ರಾಶಿ:

ಮೇಷ ರಾಶಿ:

ನೀವು ಮಾಡುವ ಪ್ರತಿ ಕೆಲಸದಲ್ಲೂ ಭಾವೋದ್ರಿಕ್ತರಾಗಿರುವುದು ಒಳ್ಳೆಯದಾದರೂ, ಅತಿಯಾದ ಉತ್ಸಾಹವು ಕೆಲವೊಮ್ಮೆ ಸಂಬಂಧಕ್ಕೆ ಹಾನಿಕಾರಕವಾಗಿದೆ. ಯಾವುದೇ ಸಂಬಂಧದಲ್ಲಿರಲು ಮೇಷ ರಾಶಿಯ ಜನರು ಎದುರಿಸುವ ಸವಾಲು ಇದು. ಆದರೆ 2022 ರಲ್ಲಿ, ಅವರು ಭಿನ್ನವಾಗಿರಬಹುದು ಮತ್ತು ಇದು ಅವರ ಜೀವನದಲ್ಲಿ ಪ್ರೀತಿ ಪ್ರವೇಶಿಸಲು ಕಾರಣವಾಗುತ್ತದೆ.

ವೃಷಭ ರಾಶಿ:

ವೃಷಭ ರಾಶಿ:

ಸ್ಥಿರ ಸಂಬಂಧಕ್ಕಾಗಿ ಅನ್ವೇಷಣೆ ಉತ್ತಮವಾದರೂ, ಸಂಬಂಧದ ಪ್ರಾರಂಭದ ನಂತರ ಮಾತ್ರ ಅದನ್ನು ಸಾಧಿಸಬಹುದು. ಇವರು ಸೋಲಿಗೆ ಅಥವಾ ನೋವಿಗೆ ಹೆದರುವುದನ್ನು ನಿಲ್ಲಿಸಬೇಕು ಮತ್ತು ಮುಕ್ತವಾಗಿ ಬೆರೆಯಬೇಕು. ಆಗ ನಿಮ್ಮ ಸಂಗಾತಿ ಸಿಗಲು ಸಾಧ್ಯ.

ಮಿಥುನ ರಾಶಿ:

ಮಿಥುನ ರಾಶಿ:

2022 ರ ಮಧ್ಯದ ವೇಳೆಗೆ ಸಿಂಗಲ್ಸ್ ತಮ್ಮ ಜೀವನದಲ್ಲಿ ತುಂಬಾ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗಲಿದ್ದಾರೆ. ಸಂಬಂಧವನ್ನು ಮುಂದುವರಿಸಲು ಇವರು ತಮ್ಮ ಸ್ಪಷ್ಟವಾದ ಮತ್ತು ಸ್ಮಾರ್ಟ್ ಸಂವಹನ ಕೌಶಲ್ಯಗಳನ್ನು ಬಳಸಬೇಕಾಗುತ್ತದೆ.

ಕರ್ಕ ರಾಶಿ:

ಕರ್ಕ ರಾಶಿ:

ಈ ರಾಶಿಚಕ್ರದ ಅವಿವಾಹಿತರು ವಿಶೇಷ ವ್ಯಕ್ತಿಗಳೊಂದಿಗೆ ಬೆರೆಯಬಹುದು ಆದರೆ ಇಬ್ಬರ ನಡುವಿನ ಭಾವನಾತ್ಮಕ ಬೆಂಬಲದ ಕೊರತೆಯು ಸಂಬಂಧವನ್ನು ಅರಳಲು ಬಿಡುವುದಿಲ್ಲ. ಇವರು ಬಹಳ ಅರ್ಥಮಾಡಿಕೊಳ್ಳಬೇಕು ಮತ್ತು ಸಾಕಷ್ಟು ಸಮಯವನ್ನು ವಿನಿಯೋಗಿಸಬೇಕು.

ಸಿಂಹರಾಶಿ:

ಸಿಂಹರಾಶಿ:

ಹೆಚ್ಚಿನ ಸಿಂಹ ರಾಶಿಯವರಿಗೆ 2022 ಪ್ರಣಯದ ವರ್ಷವಲ್ಲ. ಜೊತೆಗೆ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವವರು ಸಾಕಷ್ಟು ನಾಟಕವನ್ನು ಎದುರಿಸಬೇಕಾಗುತ್ತದೆ. ನಿಮಗೆ ಸಂಬಂಧ ಅವಶ್ಯವಿಲ್ಲದಿದ್ದರೆ, ಸದ್ಯಕ್ಕೆ ಏಕಾಂಗಿಯಾಗಿ ಉಳಿಯುವುದು ಉತ್ತಮ.

ಕನ್ಯಾರಾಶಿ:

ಕನ್ಯಾರಾಶಿ:

ವಿಶೇಷ ವ್ಯಕ್ತಿಯನ್ನು ಭೇಟಿಯಾಗುವುದು ಕನ್ಯಾ ರಾಶಿಯವರಿಗೆ ಸುಲಭವಾಗಿರುತ್ತದೆ ಆದರೆ ನಂತರದ ಸಮಸ್ಯೆಗಳಿಗೆ ಅವರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಜೀವನದ ಬಗೆಗಿನ ಈ ಸಾಂದರ್ಭಿಕ ವಿಧಾನವನ್ನು ಅವರ ಸಂಗಾತಿ ಹೆಚ್ಚು ಮೆಚ್ಚುವುದಿಲ್ಲ.

ತುಲಾ ರಾಶಿ:

ತುಲಾ ರಾಶಿ:

ತುಲಾ ರಾಶಿಯವರು ತಮ್ಮ ಪರಿಪೂರ್ಣ ಸಂಗಾತಿಯನ್ನು ಹುಡುಕಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಭಾವನಾತ್ಮಕ ಹೊಂದಾಣಿಕೆ, ಗುರಿ ಆಧಾರಿತ ವಿಧಾನ ಮತ್ತು ವೃತ್ತಿಜೀವನದ ಮಾರ್ಗಸೂಚಿಯ ವಿಷಯದಲ್ಲಿ ಅವರು ಹೊಂದಿಕೆಯಾಗುವ ಯಾರನ್ನಾದರೂ ಕಂಡುಹಿಡಿಯಬೇಕು.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಈ ರಾಶಿಚಕ್ರದಿಂದ ಬಂದಿರುವ ಕೆಲವರು ಸದ್ಯಕ್ಕೆ ಏಕಾಂಗಿಯಾಗಿರಬಹುದು, ಆದರೆ ಮುಂದಿನ ದಿನಗಳಲ್ಲಿ ಅವರು ಇದೇ ರೀತಿ ಉಳಿಯುವ ಸಾಧ್ಯತೆಯಿಲ್ಲ. ಅವರು ಶೀಘ್ರದಲ್ಲೇ ಭಾವೋದ್ರೇಕ ಮತ್ತು ಪ್ರಣಯದಿಂದ ತುಂಬಿರುವ ಸಂಬಂಧವನ್ನು ಹೊಂದುತ್ತಾರೆ.

ಧನು ರಾಶಿ:

ಧನು ರಾಶಿ:

ಧನು ರಾಶಿಯವರು ಜೀವನದಲ್ಲಿ ಫ್ರೀ ಬರ್ಡ್ ಆಗಿರಲು ಇಷ್ಟಪಡುತ್ತಾರೆ. ಅದರೆ, 2022 ರಲ್ಲಿ, ಹೊಸ ಸಂಬಂಧವು ಅವರ ಬಾಗಿಲುಗಳನ್ನು ತಟ್ಟಬಹುದು ಆದರೆ ಅವರು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಮಕರ ರಾಶಿ:

ಮಕರ ರಾಶಿ:

ಈ ವರ್ಷ ಏಕಾಂಗಿಯಾಗಿ ಕೊನೆಗೊಳ್ಳುವ ಮಕರ ರಾಶಿಯವರು ಮುಂದಿನ ವರ್ಷದ ಅಂತ್ಯದ ವೇಳೆಯವರೆಗೆ ಹಾಗೆಯೇ ಮುಂದುವರಿಯುವ ಸಾಧ್ಯತೆಗಳಿವೆ. ಈ ರಾಶಿಚಕ್ರದ ಚಿಹ್ನೆಯಿಂದ ಬಂದ ಜನರ ಮನಸ್ಸನ್ನು ಕೆಲಸ ಮತ್ತು ವ್ಯವಹಾರವು ಆಳುತ್ತಲೇ ಇರುತ್ತದೆ.

ಕುಂಭ ರಾಶಿ:

ಕುಂಭ ರಾಶಿ:

ಈ ರಾಶಿಚಕ್ರದ ಅನೇಕ ಜನರಿಗೆ 2022 ಒಂಟಿಯಾಗಿರುವ ಕೊನೆಯ ವರ್ಷವಾಗಿರಬಹುದು. ಅವರು ಈ ಅವಧಿಯಲ್ಲಿ ಹೆಚ್ಚಿನದನ್ನು ಮಾಡಬೇಕಾಗಿದೆ ಮತ್ತು ಅವರ ವೃತ್ತಿಜೀವನದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದನ್ನು ಬಿಡಬಾರದು.

ಮೀನ ರಾಶಿ:

ಮೀನ ರಾಶಿ:

ಮೀನ ರಾಶಿಯವರು ವರ್ಷವಿಡೀ ತಮ್ಮ ವೃತ್ತಿ ಮತ್ತು ಕೆಲವು ಅಥವಾ ಇತರ ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಆದಾಗ್ಯೂ, ಯಾರಾದರೂ, ಶೀಘ್ರದಲ್ಲೇ ಅವರ ಜೀವನವನ್ನು ಪ್ರವೇಶಿಸಬಹುದು.

English summary

How Will 2022 Be For Those Who Are Unmarried, As Per Their Zodiac Sign in Kannada

Here we talking about How Will 2022 Be For Those Who Are Unmarried, As Per Their Zodiac Sign in Kannada, read on
Story first published: Saturday, January 1, 2022, 10:30 [IST]
X