For Quick Alerts
ALLOW NOTIFICATIONS  
For Daily Alerts

ನೀವು ನೋವಿನಲ್ಲಿದ್ದಾಗ ಸಂಬಂಧದಲ್ಲಿನ ಬಿರುಕು ನಿವಾರಿಸಲು ಸಲಹೆ

|

ಜೀವನದಲ್ಲಿ ಹಲವು ಸಂದರ್ಭಗಳಲ್ಲಿ, ಹಲವರು ನಮ್ಮ ಮನಸ್ಸಿಗೆ ಘಾಸಿ ಮಾಡುವಂಥ ಕೆಲಸಗಳನ್ನು ಮಾಡಿರುತ್ತಾರೆ ಅಥವಾ ನೋವಾಗುವಂಥ ಮಾತುಗಳನ್ನು ಆಡುತ್ತಾರೆ. ಕೆಲವು ಅನಿರೀಕ್ಷಿತ ಘಟನೆಗಳಾದರೆ ಇನ್ನೂ ಕೆಲವರ ಬೇಕೆಂದೇ ಮನ ನೋಯಿಸಬಹುದು. ಇಂಥಾ ಸಂದರ್ಭಗಳಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾಗಿ ತಮ್ಮ ನೋವನ್ನು ತೋರ್ಪಡಿಸಿಕೊಳ್ಳುತ್ತಾರೆ.

 Hurt Your Feelings in Kannada

ಕೆಲವರು ರೇಗಾಡಬಹುದು, ಹೊಡೆಯಬಹುದು, ವಸ್ತುಗಳ ಮೇಲೆ ತಮ್ಮ ಕೋಪ ತೋರಿಸಿಕೊಳ್ಳಬಹುದು ಹೀಗೆ ಹತ್ತು ಹಲವು ಪ್ರತಿಕ್ರಿಯೆಗಳಿರಬಹುದು. ಆದರೆ ಇತರರಿಗೂ ನೋವಾಗದಂತೆ ನಿಮ್ಮ ನೋವನ್ನು ಅವರಿಗೆ ತೋರ್ಪಡಿಸುವುದು ಹೇಗೆ ಮತ್ತೆ ಸಂಬಂಧವನ್ನು ಸರಿಪಡಿಸಿಕೊಳ್ಳುವುದು ಹೇಗೆ, ಸಂಬಂಧದಲ್ಲಿ ಬಿರುಕು ಉಂಟಾಗದಂತೆ ಸಂದರ್ಭವನ್ನು ನಿಭಾಯಿಸುವುದು ಹೇಗೆ ಎಂದು ತಿಳಿಯಬೇಕೆ, ಇಲ್ಲಿದೆ ನೋಡಿ ಕೆಲವು ಟಿಪ್ಸ್‌:

ನಿದ್ರೆ ಮಾಡಿ

ನಿದ್ರೆ ಮಾಡಿ

ಯಾರಾದರೂ ತಮ್ಮ ಮಾತುಗಳಿಂದ ನಿಮ್ಮನ್ನು ನೋಯಿಸಿದ್ದರೆ ಮರು ಉತ್ತರ ಕೊಡದೆ ಮಲಗಿಬಿಡಿ. ಸೇಡು ತೀರಿಸಿಕೊಳ್ಳುವ ಅಥವ ಅವರ ಮಾತಿಗೆ ಎದುರಾಗಿ ಮರು ಮಾತನಾಡುವ ಪ್ರಯತ್ನ ಮಾಡಬೇಡಿ. ನಾವು ಕೋಪಗೊಂಡಾಗ ನಮಗೇ ಅರ್ಥವಾಗದ ವಿಷಯಗಳನ್ನು ನಾವು ಹೇಳುವ ಸಾಧ್ಯತೆ ಇರುತ್ತದೆ. ನಿಮ್ಮ ಹೋರಾಟ ಸಂಬಂಧವನ್ನು ಉಳಿಸಲು ಸಾಧ್ಯವೇ ಇಲ್ಲ, ಇದರಿಂದ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆಯೇ ಹೆಚ್ಚು. ಆದಷ್ಟು ಮೌನವಾಗಿರುವುದು ಒಳಿತು.

ಬರೆಯಿರಿ

ಬರೆಯಿರಿ

ನೀವು ವಾದ ಮಾಡುವ ಬದಲು ಮೌನವಾಗಿದ್ದರೆ ಕೋಪ ಕಡಿಮೆ ಆಗುತ್ತದೆ, ನಂತರ ನಿಮ್ಮ ಸಂಗಾತಿ ನಿಮ್ಮ ಜತೆ ಮಾತನಾಡಲು ಯತ್ನಿಸಿದಾಗಲೂ ನಿಮ್ಮ ಕೋಪ ಕಡಿಮೆ ಆಗದಿದ್ದರೆ ನಿಮ್ಮ ಮನಸ್ಸಿನಲ್ಲಿರುವ ಮಾತನ್ನು ಆಡುವ ಬದಲು ಬರೆದುಬಿಡಿ. ಆ ವ್ಯಕ್ತಿಯನ್ನು ಉದ್ದೇಶಿಸಿ ಯಾವುದೇ ಫಿಲ್ಟರ್‌ಗಳಿಲ್ಲದೆ ನಿಮ್ಮ ಆಲೋಚನೆಗಳನ್ನು ಪತ್ರದಲ್ಲಿ ಬರೆಯಿರಿ. ಆದರಿಂದ ನಿಮ್ಮ ಮನಸ್ಸಿನ ಭಾವನೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ನಂತರ ಆ ಪತ್ರವನ್ನು ಅವರಿಗೆ ನೀಡುವುದು ಅಥವಾ ನೀಡದೇ ಇಕರುವುದು ನಿಮ್ಮ ಆಯ್ಕೆ.

ಮುಕ್ತವಾಗಿ ಸಾಮಾಧಾನವಾಗಿ ಮಾತನಾಡಿ

ಮುಕ್ತವಾಗಿ ಸಾಮಾಧಾನವಾಗಿ ಮಾತನಾಡಿ

ನೀವು ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಲು ನಿರ್ಧರಿಸಿದರೆ ಸಮಾಧಾನವಾಗಿ ಶಾಂತ ಮತ್ತು ಸಂಯೋಜಿತ ಮನಸ್ಸಿನಿಂದ ಮಾತನಾಡಿ. ನಿಮ್ಮ ಮಾತು ಅವರಿಗೆ ಅರ್ಥೈಸುವಂತಿರಲು, ಅವರು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆಯೇ ಎಂಬುದನ್ನು ನೀವು ಗಮನಿಸಿ. ನಿಧಾನವಾಗಿ ಮುಖ್ಯ ಮಾತಿನ ಕಡೆ ನಿಮ್ಮ ಮಾತನ್ನು ಪ್ರಾರಂಭಿಸಿ, ನಂತರ ಅವರು ವಿವರಿಸಲು ಅವಕಾಶ ನೀಡಿ.

ಆಲಿಸುವುದು ಮುಖ್ಯ

ಆಲಿಸುವುದು ಮುಖ್ಯ

ಸಮಸ್ಯೆಯ ಬಗ್ಗೆ ನೀವು ಪರಸ್ಪರ ಮುಕ್ತವಾಗಿ ಮಾತನಾಡಲು ನಿರ್ಧರಿಸಿದ ನಂತರ, ನಿಮ್ಮ ಎದುರು ಇರುವ ವ್ಯಕ್ತಿಯ ಮಾತುಗಳನ್ನು ಕೇಳಲು ಮರೆಯಬೇಡಿ. ಅವರ ಮಾತನ್ನು ಗೌರವಿಸಿ ಮತ್ತು ನೀವು ಸಹ ಅರ್ಥಮಾಡಿಕೊಳ್ಳಿ. ಎಲ್ಲರೂ ಮನುಷ್ಯರೇ ಮತ್ತು ನಾವುಗಳು ಸಹ ತಪ್ಪುಗಳನ್ನು ಮಾಡುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಪ್ರೀತಿಯಿಂದ ಮಾತನಾಡಿ.

ಕ್ಷಮೆ ನಿರೀಕ್ಷಿಸಬೇಡಿ

ಕ್ಷಮೆ ನಿರೀಕ್ಷಿಸಬೇಡಿ

ಇತರರು ನಿಮ್ಮನ್ನು ನೋಯಿಸಿರಬಹುದು ಅಥವಾ ನೀವೆ ಅವರನ್ನು ನೋಯಿಸಬಹುದು, ನಿಮ್ಮಿಂದ ನೀವು ಕ್ಷಮೆ ಕೇಳಿ. ಆದರೆ ಅವರಿಂದಲೂ ಮತ್ತೆ ಅದನ್ನೇ ನಿರೀಕ್ಷಿಸಬೇಡಿ. ಅವರ ಮನಸ್ಥಿತಿ ಬೇರೆಯೇ ಇರಬಹುದು, ಆದರೆ ಇಲ್ಲಿ ಸ್ನೇಹ/ಸಂಬಂಧ ಮುಖ್ಯವಾಗುತ್ತದೆ.

English summary

How To Tell Someone They've Hurt Your Feelings in Kannada

Here we are discussing about How To Tell Someone They've Hurt Your Feelings in Kannada. Communication is a base for a healthy relationship. Neglecting the situations that might have hurt us could lead to future quarrels. Here are a few tips on how you can easily tell someone that they have hurt your feelings. Read more.
Story first published: Monday, June 28, 2021, 20:05 [IST]
X
Desktop Bottom Promotion