For Quick Alerts
ALLOW NOTIFICATIONS  
For Daily Alerts

ಸಂಗಾತಿ ನಿಮ್ಮನ್ನು ಲಘುವಾಗಿ ಪರಿಗಣಿಸದಂತಿರಲು ಹೀಗೆ ಮಾಡಿ

|

ಗಂಡ ಹೆಂಡತಿ ಅಥವಾ ಪ್ರೇಮಿಗಳಾಗಿರಲಿ, ಅವರು ಅವರ ಸಂಬಂಧವನ್ನು ಉಳಿಸಿಕೊಳ್ಳಲು ಶ್ರಮ ಪಡಲೇಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತ್ತು ಒಬ್ಬರನ್ನೊಬ್ಬರು ಗೌರವಿಸುವುದು, ಹೊಂದಾಣಿಕೆ ಮಾಡಿಕೊಳ್ಳುವುದು ಸಂಬಂಧಗಳಲ್ಲಿ ಬಹಳ ಮುಖ್ಯ. ಆದರೆ ಕೆಲವೊಂದು ಸಂದರ್ಭದಲ್ಲಿ ಸಂಗಾತಿ ನಿಮ್ಮನ್ನು ನಿಮ್ಮ ಮಾತನ್ನು ಲಘುವಾಗಿ ಪರಿಗಣಿಸುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಸಂಬಂಧ ಹಾಳಾಗದಂತೆ ಹೇಗೆ ಸರಿ ಮಾಡಿಕೊಂಡು ಹೋಗಬಹುದು ಎಂಬುದು ನಿಮ್ಮ ಜಾಣ್ಮೆಗೆ ಬಿಟ್ಟ ವಿಷಯ!.

How To Stop Being Taken For Granted By Your Partner

ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ಭಾವಿಸುತ್ತಿದ್ದೀರಾ? ನಿಮ್ಮ ಸಲಹೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಡೆಗಣಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಾ? ಹಾಗಾದರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇನ್ನೊಂದಿಲ್ಲ! ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಿಲ್ಲ ಮತ್ತು ಕೇವಲವಾಗಿ ನೋಡುತ್ತಾರೆ ಎಂಬುದು ಅತ್ಯಂತ ಬೇಸರವನ್ನು ಉಂಟುಮಾಡುತ್ತದೆ. ನಿಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಮತ್ತು ಎಷ್ಟೇ ಪ್ರೀತಿಯನ್ನು ನೀಡಿದರೂ ನಿಮ್ಮ ಸಂಬಂಧದಲ್ಲಿ ಇಂಥ ಕೆಲವು ವಿಷಯಗಳು ಹಾನಿಯನ್ನು ಉಂಟುಮಾಡಬಹುದು. ಸಮಸ್ಯೆಯನ್ನು ತರಬಲ್ಲದು.

ನೀವು ಹಾಗೂ ನಿಮ್ಮ ಸಂಗಾತಿ ಜೊತೆಗೂಡಿ ನಿಮ್ಮ ಹನಿಮೂನ್ ನ್ನು ಆನಂದಿಸಿದ, ಸಂತೋಷದಿಂದಿದ್ದ ದಿನಗಳನ್ನು ನೆನಪಿಸಿಕೊಳ್ಳಬಹುದು. ಈಗ ಹೀಗೆ ಯಾವ ಸಂತೋಷಗಳೂ ಉಳಿದಿಲ್ಲ ಎಂದು ನೆನೆದು ನಿರಾಶೆ ಮತ್ತು ಎದೆಗುಂದುವುದರ ಬದಲು, ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ಪರಿಗಣಿಸುವುದನ್ನು ತಪ್ಪಿಸಲು ಕೆಲವು ಕೆಲಸಗಳನ್ನು ಮಾಡಬೇಕು. ಹೇಗೆ ಮಾಡುವುದು ಎಂಬ ಕುತೂಹಲ ನಿಮಗಿದ್ದರೆ ಈ ಲೇಖನವನ್ನು ಮುಂದೆ ಓದಿ.

1. ಇದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ

1. ಇದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ

ನಿಮ್ಮ ಸಂಗಾತಿ, ನಿಮ್ಮನ್ನು ಲಘುವಾಗಿ ಪರಿಗಣಿಸಿದ್ದಾರೆ ಅಥವಾ ನಿಮ್ಮ ಯಾವ ಮಾತುಗಳನ್ನೂ ಗೌರವಿಸುತ್ತಿಲ್ಲ ಎಂದು ನಿಮಗನ್ನಿಸಿದರೆ ಕೂಡಲೆ ಅವನ / ಅವಳ ಹತ್ತಿರ ಮಾತನಾಡಿ. ನಿಮ್ಮ ಸಂಬಂಧದಲ್ಲಿ ಯಾವ ವಿಷಯಗಳು ಸರಿಯಾಗಿ ನಡೆಯದಿದ್ದಾಗ ನೀವು ಆ ಸರಿಯಾದ ಸಮಯಕ್ಕೋಸ್ಕರ ಕಾಯುತ್ತಿರಬಹುದು ಆದರೆ ಇದೇ ಸಂಗಾತಿಯೊಂದಿಗೆ ಮಾತನಾಡಲು ಇದೇ ಸರಿಯಾದ ಸಮಯ. ನೀವು ನಿಮ್ಮ ಸಂಗಾತಿಯೊಂದಿಗೆ, ಅವರು ನಡೆದುಕೊಳ್ಳುತ್ತಿರುವ ರೀತಿಯಿಂದ ನಿಮಗೆ ಹೇಗನ್ನಿಸುತ್ತಿದೆ ಮತ್ತು ನಿಮ್ಮಿಬ್ಬರ ನಡುವೆ ವಿಷಯಗಳು/ ಸಂಬಂಧಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ವಿವರಿಸುವ ಮೂಲಕ ಮಾತನಾಡಬಹುದು. ಆದರೆ ಹೀಗೆ ಮಾತನಾಡುವಾಗ ನಿಮ್ಮಿಬ್ಬರ ಸಂಭಾಷಣೆ ಒಬ್ಬರನ್ನೊಬ್ಬರು ದೂರುವಂತಹ ಮಾತುಕತೆಯಾಗದಂತೆ ಗಮನ ವಹಿಸಿ.

2. ನಿಮ್ಮ ಯೋಗ್ಯತೆಯನ್ನು ಅರ್ಥಮಾಡಿಸಿ

2. ನಿಮ್ಮ ಯೋಗ್ಯತೆಯನ್ನು ಅರ್ಥಮಾಡಿಸಿ

ನಿಮ್ಮ ಮೌಲ್ಯವನ್ನು ನೀವು ಹೇಳಿಕೊಳ್ಳದ ಹೊರತು, ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ನೀವು ಪ್ರೀತಿ ಮತ್ತು ಕಾಳಜಿಗೆ ಅರ್ಹರಾದ ಅದ್ಭುತ ವ್ಯಕ್ತಿ ಎಂದು ನೀವೇ ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಸಂಬಂಧದಲ್ಲಿ ಎಷ್ಟು ಶ್ರಮವಹಿಸುತ್ತೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿ. ನೀವು ಇಷ್ಟು ವರ್ಷಗಳಿಂದ ನೀವು ಎಷ್ಟು ಸುಂದರವಾಗಿ ಎಲ್ಲಾ ಸಂಗತಿಗಳನ್ನು ನಿರ್ವಹಿಸುತ್ತಿದ್ದೀರಿ ಎಂದು ನಿಮ್ಮ ಸಂಗಾತಿಗೆ ನೀವು ಹೇಳಬಹುದು ಮತ್ತು ಇದನ್ನು ಸ್ವಲ್ಪ ಹಾಸ್ಯಮಯವಾಗಿ ಸಹ ಹೇಳಲು ಪ್ರಯತ್ನಿಸಬಹುದು. ಉದಾಹರಣೆಗೆ, ನಿಮ್ಮ ಸಂಗಾತಿ ನೀವು ಅವನಿಗೆ/ ಅವಳಿಗೆ ಏನಾದರೂ ಮಾಡಿದ ನಂತರ ಧನ್ಯವಾದ ಹೇಳದಿದ್ದರೆ, ನೀವು ‘ನಿಮಗೆ ಸ್ವಾಗತ' (ಯು ಆರ್ ವೆಲ್ ಕಮ್) ಎಂದು ಹೇಳಬಹುದು. ಇದರಿಂದ ಅವರು ಧನ್ಯವಾದ ಹೇಳದೇ ಇರುವುದು ಅವರ ಅನುಭವಕ್ಕೆ ಬರುತ್ತದೆ.

3. ನಿಮ್ಮನ್ನು ನೀವು ಇಷ್ಟಪಡುವುದು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ

3. ನಿಮ್ಮನ್ನು ನೀವು ಇಷ್ಟಪಡುವುದು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ

ಈಗ ನೀವು ನಿಮ್ಮ ಯೋಗ್ಯತೆ ಮತ್ತು ಸ್ವಾಭಿಮಾನವನ್ನು ಒಪ್ಪಿಕೊಂಡಿದ್ದೀರಿ, ಇದೀಗ ನಿಮ್ಮನ್ನು ನೀವು ನೋಡಿಕೊಳ್ಳುವ ಸಮಯ. ಸಂತೋಷ ಎನ್ನುವುದು ನಮ್ಮೊಳಗಿಂದಲೇ ಬರುತ್ತದೆ ಎಂದು ನೀವು ಮೊದಲು ಅರ್ಥಮಾಡಿಕೊಳ್ಳಬೇಕು, ಅಲ್ಲದೇ ನೀವು ಸಂತೋಷವಾಗಿರದಿದ್ದರೆ, ನಿಮ್ಮ ನಡುವಿನ ಯಾವ ವಿಷಯಗಳು ಸರಿಯಾಗುವುದಿಲ್ಲ. ನಿಮ್ಮ ಆಸಕ್ತಿಗಳು ಮತ್ತು ಹವ್ಯಾಸಗಳಿಗೆ ನೀವು ಹೆಚ್ಚಿನ ಆದ್ಯತೆ ನೀಡಬೇಕು. ನಿಮಗೆ ಸಂತೋಷ ಮತ್ತು ಆರಾಮವಾಗಿರುವಂತಹ ಕೆಲಸಗಳನ್ನು ಮಾಡಿ. ಈ ರೀತಿಯಾಗಿ ನೀವು ನಿಮ್ಮನ್ನು ಸಂತೋಷಪಡಿಸುವುದು ಮಾತ್ರವಲ್ಲದೆ ನಿಮ್ಮ ಸಂಗಾತಿಗೆ ನಿಮ್ಮ ಮೌಲ್ಯವನ್ನೂ ಸಹ ತಿಳಿಸಿದಂತಾಗುತ್ತದೆ.

4. ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

4. ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಇನ್ನೊಂದು ಉತ್ತಮ ಮಾರ್ಗವೆಂದರೆ ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಯ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು. ಉದಾಹರಣೆಗೆ, ನೀವು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ನೀವು ಅದನ್ನೇ ಮಾಡಬಹುದು. ನಿಮ್ಮ ಸಂಗಾತಿಯ ಗಮನ ಸೆಳೆಯುವುದರಲ್ಲೇ ನಿಮ್ಮ ಜೀವನವನ್ನು ಕಳೆಯುವ ಬದಲು, ನೀವು ಪುಸ್ತಕವನ್ನು ಓದಬಹುದು, ಚಲನಚಿತ್ರವನ್ನು ವೀಕ್ಷಿಸಬಹುದು ಅಥವಾ ನಿಮಗಾಗಿ ಅಲಂಕಾರವನ್ನು ಮಾಡಿಕೊಳ್ಳಬಹುದು. ಇದರಿಂದ ನೀವು ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಬಹುದು ಜೊತೆಗೆ ನಿಮ್ಮ ಸಂಗಾತಿಯ ಗಮನವನ್ನು ಸೆಳೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

5. ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ

5. ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ

ನಿಮ್ಮ ಸಂಗಾತಿ ನಿಮಗೆ ಹೆಚ್ಚು ಗಮನ ನೀಡದಿದ್ದರೆ ಮತ್ತು ನಿಮ್ಮನ್ನು ಲಘುವಾಗಿ ಪರಿಗಣಿಸದಿದ್ದರೆ ನೀವು ನಿರಾಶೆಗೊಳಗಾಗಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವುದು ಉಚಿತವಲ್ಲ. ಬದಲಾಗಿ, ನಿಮ್ಮ ಗೆಳೆಯರೊಂದಿಗೆ ನೀವು ಕೆಲವು ಯೋಜನೆಗಳನ್ನು ಮಾಡಬಹುದು ಮತ್ತು ಅವರೊಂದಿಗೆ ಸ್ವಲ್ಪ ಸಮಯ ಕಳೆಯಬಹುದು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದು ಅಥವಾ ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳನ್ನು ವೀಕ್ಷಿಸುವುದು ಇಂತಹ ವಿಷಯಗಳು ನಿಮ್ಮನ್ನು ನೀವು ಸಂತೋಷವಾಗಿಟ್ಟುಕೊಳ್ಳಲು ಸಹಾಯಕವಾಗುತ್ತವೆ. ನಿಮ್ಮ ಸಂಗಾತಿ,ಅವನು / ಅವಳು ನಿಮ್ಮೊಂದಿಗೆ ಕೆಲವು ಯೋಜನೆಗಳನ್ನು ಮಾಡಬೇಕು ಎಂದು ನೀವು ನಿರೀಕ್ಷಿಸಬೇಕಾಗಿಲ್ಲ. ನಿಮ್ಮ ಸಂಗಾತಿ ಕ್ರಮೇಣ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವನು / ಅವಳು ಈ ವಿಷಯವನ್ನು ಸರಿಮಾಡಲು ಕೂಡ ಪ್ರಯತ್ನಿಸಬಹುದು.

6. ತಪ್ಪು ಗ್ರಹಿಕೆ ಬೇಡ

6. ತಪ್ಪು ಗ್ರಹಿಕೆ ಬೇಡ

ನಿಮ್ಮ ಸಂಗಾತಿಗೆ ಯಾವಾಗಲೂ ಲಭ್ಯವಿರುವುದು ಅವರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪು ಗ್ರಹಿಕೆ. ಇದು ನಿಮ್ಮ ಸಂಗಾತಿ ನಿಮ್ಮನ್ನು ಇನ್ನಷ್ಟು ನಿರ್ಲಕ್ಷಿಸುವಂತೆ ಮಾಡುತ್ತದೆ. ನಿಮ್ಮ ಸಂಗಾತಿಗೆ ದಿನದ ೨೪ ಗಂಟೆಯೂ ಲಭ್ಯವಾಗಿರುವ ಬದಲು, ನೀವು ನಿಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಹೊಸ ಹೊಸ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಿ ಮತ್ತು ನಿಮ್ಮ ವೃತ್ತಿಜೀವನವನ್ನು ಪ್ರಕಾಶಮಾನವಾಗಿ ಮಾಡಲು ಶ್ರಮಿಸಿ. ನಮ್ಮನ್ನು ನೀವು ಮೊದಲು ನಂಬಿರಿ, ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನಿಮ್ಮ ಸಂಗಾತಿ ಇನ್ನು ಮುಂದೆ ನಿಮ್ಮನ್ನು ಲಘುವಾಗಿ ಕೂಡ ತೆಗೆದುಕೊಳ್ಳುವುದಿಲ್ಲ.

7. ‘ಇಲ್ಲ’ ಎಂದು ಹೇಳಲು ಕಲಿಯಿರಿ

7. ‘ಇಲ್ಲ’ ಎಂದು ಹೇಳಲು ಕಲಿಯಿರಿ

ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಲು, ನೀವು ‘ಇಲ್ಲ' ಎಂದು ಹೇಳಲು ಕಲಿಯುವುದು ಬಹಳ ಮುಖ್ಯ. ‘ಇಲ್ಲ' ಎಂದು ಹೇಳುವುದು, ಅದರಲ್ಲೂ ವಿಶೇಷವಾಗಿ ನೀವು ಸಮರ್ಪಿತ ಪಾಲುದಾರರಾಗಿದ್ದರೆ ನಿಮಗೆ ಸ್ವಲ್ಪ ಸ್ವಾರ್ಥಿ ಎಂಬ ಭಾವನೆ ಮೂಡಬಹುದು. ನೀವು ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು ಬಯಸದಿದ್ದರೆ, ನೀವು ಅದನ್ನು ನಿಮ್ಮ ಸಂಗಾತಿಗೆ ಹೇಳಬಹುದು. ನಿಮಗೆ ಅನಾನುಕೂಲ ಮತ್ತು ದಣಿದ ಭಾವನೆಯನ್ನುಂಟುಮಾಡುವ ವಿಷಯಗಳಿಗೆ ‘ಇಲ್ಲ' ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.

ನಿಮ್ಮ ಸಂಬಂಧದಲ್ಲಿ ಅಸಮಾಧಾನಗಳು ಉಂಟಾಗಿದ್ದರೆ ಅದನ್ನು ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಬೇಕು. ನಿಮ್ಮ ಸಂಗಾತಿ ನಿಮ್ಮನ್ನು ಲಘುವಾಗಿ ಪರಿಗಣಿಸಿದ್ದರೆ ಅದರ ಬಗ್ಗೆ ಅವರಿಗೆ ಉಚಿತ ರೂಪದಲ್ಲಿ ಅರಿವು ಮೂಡಿಸಿ ನಿಮ್ಮ ಸಂಬಂಧ ಸುಗಮವಾಗಿ ಸಾಗುವಂತೆ ಮಾಡಿಕೊಳ್ಳಿ.

English summary

How To Stop Being Taken For Granted By Your Partner

Here we are discussing about How To Stop Being Taken For Granted By Your Partner. instead of feeling disappointed and heartbroken, you need to do a few things to stop being taken for granted by your partner. Read more.
Story first published: Thursday, July 9, 2020, 9:20 [IST]
X
Desktop Bottom Promotion