Just In
Don't Miss
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Movies
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಇಂಥ ದೋಸ್ತ್ ಇದ್ದರೆ ಅಂಥವರ ಸ್ನೇಹಕ್ಕೆ ಹೇಳಿ ಗುಡ್ ಬೈ
ಗೆಳೆತನ, ಫ್ರೆಂಡ್‌ಶಿಪ್, ದೋಸ್ತ್ ಎಂದೆಲ್ಲಾ ನಾವು ಕರೆಯುವ ಸ್ನೇಹಕ್ಕೆ ನಮ್ಮ ಜೀವನದಲ್ಲಿ ತುಂಬಾನೇ ಬಹುದೊಡ್ಡ ಸ್ಥಾನವಿರುತ್ತದೆ.
ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದ ಸಂಬಂಧ ಸ್ನೇಹ ಸಂಬಂಧ. ಏಕೆಂದರೆ ಉಳಿದ ಸಂಬಂಧದಲ್ಲಿ ರಕ್ತ ಬಂಧವಿರುತ್ತದೆ ಅಥವಾ ಗಂಡ-ಹೆಂಡತಿ ಎಂಬ ಅನುಬಂಧವಿರುತ್ತದೆ, ಆದರೆ ಗೆಳತನದಲ್ಲಿ ಇರುವುದು ಬರೀ ಸ್ನೇಹ. ಅವರು ನಮ್ಮಿಂದ ಏನೂ ಬಯಸಿ ಬಂದಿರುವುದಿಲ್ಲ, ನಮ್ಮಲ್ಲಿನ ಗುಣಕ್ಕೆ ಸ್ನೇಹ ಬೆಳೆದಿರುತ್ತದೆ. ನಮ್ಮಲ್ಲಿ ಹಣವಿದೆ, ಪವರ್ ಇದೆ ಎಂದೆಲ್ಲಾ ನೋಡಿ ಬರುವವರು ನಮ್ಮ ಒಳ್ಳೆಯ ಸ್ನೇಹಿತರಾಗಲು ಸಾಧ್ಯವೇ ಇಲ್ಲ.
ಕೆಲವರನ್ನು ನಾವು ತುಂಬಾ ನಂಬಿ ಬಿಡುತ್ತೇವೆ, ಆದರೆ ಅವರಿಂದ ಮೋಸವಾದಾಗ ಅದನ್ನು ಸಹಿಸಿಕೊಳ್ಳುವುದು ತುಂಬಾನೇ ಕಷ್ಟವಾಗುತ್ತದೆ ಅಂಥ ಅನುಭವ ಉಂಟಾಗುವ ಮೊದಲೇ ಕಪಟ ಸ್ನೇಹವನ್ನು ದೂರವಿಟ್ಟರೆ ನಮಗೆ ಒಳ್ಳೆಯದು, ಹಾಗಾದರೆ ಅಂಥವರನ್ನು ಕಂಡು ಹಿಡಿಯುವುದು ಹೇಗೆ? ಅವರಲ್ಲಿ ಈ ಅಂಶಗಳನ್ನು ಗಮನಿಸಿದರೆ ಹಿಂದೆ-ಮುಂದೆ ಯೋಚಿಸಲೇಬೇಡಿ ಜಸ್ಟ್ ಗುಡ್ ಬೈ ಹೇಳಿ...

ಅವರು ನಿಮ್ಮಿಂದ ಏನಾದರೂ ಸಿಗುವಾಗ ಮಾತ್ರ ಜೊತೆಗಿರುತ್ತಾರೆ
ಪಾರ್ಟಿ, ಫಂಕ್ಷನ್ ಅಂತೆಲ್ಲಾ ಬರುವಾಗ ನಿಮ್ಮ ಜೊತೆಯಲ್ಲೇ ಇರುತ್ತಾರೆ. ಎಷ್ಟು ಚೆನ್ನಾಗಿರುತ್ತಾರೆ ಅಂದರೆ ಆಯೋಜಿಸಿರು ಪಾರ್ಟಿಗಳ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ, ಪ್ರತಿಯೊಂದು ವಿಷಯದಲ್ಲೂ ನಿಮ್ಮ ಜೊತೆಗಿದ್ದಾರೆ ಎಂದು ನಿಮಗೆ ಅನಿಸುವಷ್ಟೂ ಚೆನ್ನಾಗಿರುತ್ತದೆ. ಅದೇ ನಿಮಗೆ ಕಷ್ಟ ಅಂತ ಬರಲಿ ಅವರ ಅಡ್ರೆಸ್ ಕೂಡ ಸಿಗಲ್ಲ.

2. ನಿಮ್ಮ ಕಣ್ತುಂಬಿ ಬರುವಾಗ ಒರೆಸಲು ಅವರು ಇರಲ್ಲ
ಮೊದಲೇ ಹೇಳಿದಂತೆ ನಿಮ್ಮ ಕಷ್ಟದಲ್ಲಿ ಹೆಗಲು ಕೊಡಲು ಅವರು ಇರಲ್ಲ. ಬಿಟ್ಟಿ ಸಲಹೆ ಕೊಡಲು ತುಂಬಾ ಜನರಿರುತ್ತಾರೆ. ಆದರೆ ನೀವು ತುಂಬಾ ಕಷ್ಟದ ಸಮಯದಲ್ಲಿ ಇರುವಾಗ ಅಂದರೆ ಹಣ ಅಂತಲ್ಲ, ಮಾನಸಿಕವಾಗಿ ಕುಸಿದಾಗ, ಒಂದು ಬ್ಯುಸ್‌ನೆಸ್ ಕೈ ಕೊಟ್ಟಾಗ ನಿಮ್ಮ ಬೆಂಬಲಕ್ಕೆ ಅವರು ಇರಲ್ಲ.

3. ಅವರು ಸದಾ ನಿಮ್ಮಿಂದ ಏನೋ ಬಯಸುತ್ತಾರೆ
ಅವರಿಗೆ ಏನಾದರೂ ಅವಶ್ಯಕತೆ ಇರುವಾಗ ಮಾತ್ರ ನಿಮ್ಮ ನೆನಪಾಗುತ್ತದೆ, ಇಲ್ಲದಿದ್ದರೆ ನೆನಪಾಗುವುದೇ ಇಲ್ಲ. ನೀವೇ ಅವರಿಗೆ ಕಾಲ್ ಮಾಡಿದರೆ, ಟೆಕ್ಸ್ಟ್ ಮಾಡಿದರೆ ರಿಪ್ಲೈ ಬರುತ್ತೆ. ಅದೇ ಅವರಿಗೆ ಏನಾದರೂ ಬೇಕಿದ್ದರೆ ಆಗ ಅವರ ಕಡೆಯಿಂದ ಕರೆ ಬರುತ್ತೆ.

4. ಅವರು ನಿಮ್ಮೊಂದಿಗೆ ಸ್ಪರ್ಧೆಗೆ ಇಳಿಯುತ್ತಾರೆ
ನೀವು ಏನೇ ವಸ್ತು ಖರೀದಿಸಿದರೆ ಹೊಟ್ಟೆಕಿಚ್ಚು ಪಡುತ್ತಾರೆ. ನಿಮಗಿಂತ ಅವರಲ್ಲಿ ಉತ್ತಮವಾದ ವಸ್ತುಗಳು ಇರಬೇಕೆಂದು ಬಯಸುತ್ತಾರೆ. ನಿಮ್ಮದೇ ವ್ಯವಹಾರ ಅವರು ಮಾಡುತ್ತಿದ್ದರೆ ನಿಮ್ಮ ಗ್ರಾಹಕರನ್ನು ಅವರತ್ತ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಅವರ ನಿಮ್ಮೊಂದಿಗೆ ಸ್ಪರ್ಧೆಗೆ ಬಿದ್ದಂತೆ ವರ್ತಿಸುತ್ತಾರೆ.

5. ನಿಮ್ಮ ಆತ್ಮವಿಶ್ವಾಸ ಕುಗ್ಗುವಂತೆ ಮಾತನಾಡುತ್ತಾರೆ
ಒಳ್ಳೆಯ ಫ್ರೆಂಡ್ ನಮ್ಮ ಆತ್ಮವಿಶ್ವಾಸ ಕುಗ್ಗಿದಾಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಆದರೆ ಕೆಲವರು ಇಲ್ಲ ನಿನ್ನಿಂದ ಸಾಧ್ಯವಿಲ್ಲ ಎಂದೆಲ್ಲಾ ಹೇಳುವುದು ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಾರೆ. ನಿಮ್ಮ ಸಕ್ಸಸ್ ಸೆಲೆಬ್ರೇಟ್ ಮಾಡಲು ಇಷ್ಟಪಡುವುದಿಲ್ಲ.

6. ನಿಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ
ಒಬ್ಬ ಒಳ್ಳೆಯ ಫ್ರೆಂಡ್ ಆಗಿದ್ದರೆ ಅವರಿಗೆ ನಿಮ್ಮಲ್ಲಿ ಏನಾದರೂ ಇಷ್ಟವಿಲ್ಲದಿದ್ದರೆ ಅದನ್ನು ನಿಮ್ಮ ಮುಖದ ನೇರಕ್ಕೆ ಹೇಳುತ್ತಾರೆ, ಆದರೆ ಬೆನ್ನ ಹಿಂದೆ ಮಾತನಾಡುವವರು ನಿಮ್ಮ ಸ್ನೇಹಿತರಾಗಲು ಸಾಧ್ಯವೇ ಇಲ್ಲ. ನಿಮ್ಮ ಬೆನ್ನ ಹಿಂದೆ ಮಾತನಾಡಿರುವುದು ಗೊತ್ತಾದರೆ ಅವರ ಸ್ನೇಹಕ್ಕೆ ಮುಲಜಿಯಿಲ್ಲದೆ ಗುಡ್‌ಬೈ ಹೇಳಿ.

7. ತುಂಬಾ ಡ್ರಾಮಾ ಮಾಡುವುದು
ಒಳ್ಳೆಯ ಸ್ನೇಹ ಸಂಬಂಧ ತುಂಬಾ ಸೀದಾ-ಸಾದ ಇರುತ್ತದೆ. ಡ್ರಾಮಾ ಮಾಡಲ್ಲ, ಕೆಲವರ ಆಟ ನೋಡುವಾಗಲೇ ಅದು ಡ್ರಾಮವೆಂಬುವುದು ಸ್ಪಷ್ಟವಾಗುತ್ತದೆ. ನಿಮ್ಮ ಎದುರಿಗೆ ನಿಮ್ಮನ್ನು ತುಂಬಾ ಹೊಗಳುವುದು, ನೀವು ಏನು ಹೇಳಿದರೂ ಸೈ ಸೈ ಅನ್ನುವುದು, ಕೆಟ್ಟ ಚಟಕ್ಕೆ, ಕೆಟ್ಟ ಕಾರ್ಯಕ್ಕೆ ಹುರಿದುಂಬಿಸುವುದು ಇಂಥದ್ದೆಲ್ಲಾ ಮಾಡುತ್ತಿದ್ದರೆ ಅವರಿಂದ ದೂರ ಸರಿಯುವುದೇ ನಿಮಗೆ ಒಳ್ಳೆಯದು.
ಒಳ್ಳೆಯ ಸ್ನೇಹಿತರು ನಿಮ್ಮ ಕೆಟ್ಟ ಕಾರ್ಯವನ್ನು ಎಂದಿಗೂ ಹುರಿದುಂಬಿಸಲ್ಲ.

8. ನಿಮಗಿಂತ ಬೇರೆಯವರಿಗೆ ಪ್ರಾಮುಖ್ಯತೆ ನೀಡುವುದು
ಒಂದು ಫಂಕ್ಷನ್ ಅಥವಾ ಪಾರ್ಟಿಗೆ ಹೋದಾಗ ನಿಮಗಿಂತ ರಿಚ್ ಇರುವವರು ಬಂದರೆ ನಿಮಗಿಂತ ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಅವರ ಸಂಗ ಬಯಸುವುದು ಮಾಡಿದರೆ ಅಂಥವರ ಬಗ್ಗೆ ಹುಷಾರ್ ಕಣ್ರಿ....