For Quick Alerts
ALLOW NOTIFICATIONS  
For Daily Alerts

ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್‌ಬೈ ಹೇಳುವುದೇ ಬೆಸ್ಟ್!

|

ಹುಡುಗ -ಹುಡುಗಿ, ಪತಿ-ಪತ್ನಿ ನಡುವಿನ ಸಂಬಂಧಕ್ಕೆ ಅದರದೆ ಆದ ಮಹತ್ವವಿದೆ. ಯಾವುದೇ ಸಂಬಂಧ ಆರಂಭಿಸುವ ಮುನ್ನ ನೂರಾರು ಬಾರಿ ಯೋಚಿಸಿ ಪುರುಷ ಮತ್ತು ಮಹಿಳೆ ಕಾಲಿಡುತ್ತಾರೆ. ಆರಂಭದಲ್ಲಿ ಎಲ್ಲಾ ಸಂಬಂಧದಲ್ಲೂ ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ಆರಂಭದಲ್ಲಿ ರೋಮಿಯೋ ಜೂಲಿಯೆಟ್ ತರ ಇರುವವರು ಬಳಿಕ ಹಾವು-ಮುಂಗುಸಿ ತರ ಕಚ್ಚಾಡೋದು ಇದೆ.

ಹಾಗಂದ ಮಾತ್ರಕ್ಕೆ ಪ್ರೀತಿ ಇಲ್ಲ ಎಂದು ಅರ್ಥವಲ್ಲ. ಪ್ರೀತಿಯಿಂದಲೇ ಕೆಲವರು ಜಗಳವಾಡುತ್ತಾರೆ. ಎಲ್ಲರೂ ಪ್ರೀತಿಯಿಂದಲೇ ಜಗಳವಾಡುತ್ತಾರೆ ಎಂದು ಹೇಳಲು ಆಗಲ್ಲ. ಯಾಕೆಂದರೆ ತುಂಬಾನೇ ಡೀಪ್ ಪ್ರೀತಿಯಲ್ಲಿದ್ದವರು ಶತ್ರುಗಳಾಗಿ ಬಿಡುತ್ತಾರೆ. ಒಬ್ಬೊಬ್ಬರ ಮುಖ ನೋಡಲು ಕೂಡ ಇಷ್ಟಪಡದ ಪರಿಸ್ಥಿತಿಯೂ ಬರುತ್ತದೆ. ಇದಕ್ಕೆ ಅವರ ನಡುವೆ ನಡೆಯುವ ಹಲವು ಘಟನೆಗಳು ಕೂಡ ಕಾರಣವಾಗಿರುತ್ತೆ. ಇನ್ನು ಕೆಲವರಿಗೆ ಎಷ್ಟು ಪ್ರೀತಿ ಇರುತ್ತೆ ಅಂದರೆ ತನ್ನ ಸಂಗಾತಿ ಎಷ್ಟೇ ಹೀನಾಯವಾಗಿ ನಡೆಸಿಕೊಂಡರು ಸಂಬಂಧಗಳನ್ನು ಮುರಿಯಲು ಇಷ್ಟಪಡದವರು ಕೂಡ ಇರುತ್ತಾರೆ.

ದೈಹಿಕವಾಗಿ, ಮಾನಸಿಕವಾಗಿ ಚಿತ್ರ ಹಿಂದೆ ಕೊಟ್ಟರು ದೂರ ಹೋಗುವಿದಿಲ್ಲ. ಕೆಲವೆಡೆ ಸಂಗಾತಿ ಅತೀ ಕೀಳಾಗಿ ಕಾಣುವುದು, ಎಲ್ಲಾ ವಿಚಾರದಲ್ಲೂ ಹೇಟ್ ಮಾಡುವುದು ಮಾಡುತ್ತಿರುತ್ತಾರೆ. ಆಗ ಅಂತಹ ಸಂಬಂಧದಲ್ಲಿ ಅಲ್ಲಿ ನಿಲ್ಲುವುದು ಸೂಕ್ತವೇ ಎಂದು ನಮಗೆ ಅನಿಸಿಬಿಡುತ್ತೆ. ಹಾಗಾದರೆ ಸಂಬಂಧದಲ್ಲಿ ಯಾವ ರೀತಿಯ ಸಮಸ್ಯೆ ಇದ್ದರೆ ಆ ರಿಲೇಶನ್ ಶಿಪ್ ಗೆ ಗುಡ್ ಬಾಯ್ ಹೇಳುವುದು ಒಳ್ಳೆಯದು? ಈ ರೀತಿ ನಿಮ್ಮ ಜೀವನದಲ್ಲಿ ನಡೆದರೆ ನೀವು ಕೂಡ ಮೂವ್ ಆನ್ ಆಗುವುದು ಒಳ್ಳೆಯದು.

ಪ್ರೀತಿ ಇಲ್ಲದ ಮೇಲೆ ಅಲ್ಲಿ ನಿಲ್ಲುವುದು ಸೂಕ್ತವಲ್ಲ!

ಪ್ರೀತಿ ಇಲ್ಲದ ಮೇಲೆ ಅಲ್ಲಿ ನಿಲ್ಲುವುದು ಸೂಕ್ತವಲ್ಲ!

ಪ್ರೀತಿ ಇದು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಗಟ್ಟಿ ಮಾಡಬೇಕಾದ ವಸ್ತು. ಆದರೆ ಈ ವಸ್ತುವೇ ಇಲ್ಲದ ಮೇಲೆ ಆ ಸಂಬಂಧಕ್ಕೆ ಬೆಲೆಯೇ ಇರುವುದಿಲ್ಲ. ಹೌದು, ಅನೇಕರಲ್ಲಿ ಸಂಬಂಧದ ಆರಂಭದಲ್ಲಿ ಭಾರೀ ಪ್ರೀತಿ ಇರುತ್ತೆ. ಒಬ್ಬೊರೊಬ್ಬರನ್ನು ಬಿಟ್ಟು ಇರದ ಹಾಗೇ ಇರುತ್ತಾರೆ. ಕೊಂಚ ದೂರವಿದ್ದರೆ ಪದೇ ಪದೇ ಫೋನ್. ಆದರೆ ಯಾವ ವಿಚಾರಕ್ಕೋ ಏನೋ ಕೆಲವು ಸಂಬಂಧದಲ್ಲಿ ಈ ಪ್ರೀತಿ ಕಮ್ಮಿ ಆಗುತ್ತಾ ಹೋಗುತ್ತೆ. ಬೇಸಿಗೆ ಕಾಲದಲ್ಲಿ ಹೇಗೆ ಕೆರೆಯಲ್ಲಿ ಹೇಗೆ ನೀರು ಆರುತ್ತೋ ಆದೇ ರೀತಿ ತನ್ನ ಸಂಗಾತಿ ಮೇಲೆ ಪ್ರೀತಿ ಸಂಪೂರ್ಣವಾಗಿ ಆರಿ ಹೋಗುತ್ತೆ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಒಂದು ಬಾರಿ ಅಲ್ಲಿ ಪ್ರೀತಿ ಸತ್ತರೆ ಅದು ಹುಟ್ಟಲು ಭಾರೀ ಕಷ್ಟ. ಪ್ರೀತಿ ಎಲ್ಲ ಎಂದಾಗ ಜಗಳ, ಮಾತು ಕಮ್ಮಿಯಂತಹ ಹಲವು ಲಕ್ಷಣಗಳು ನಮಗೆ ಕಾಣುತ್ತೆ. ಹೀಗಾಗಿ ಇಂತಹ ಸಂದರ್ಭ ಬಂದರೆ ದೂರ ಹೋಗುವುದು ಒಳ್ಳೆಯದು. ಪ್ರೀತಿ ಇಲ್ಲದಿದ್ದರೆ ಆ ಸಂಬಂಧಕ್ಕೆ ಬೆಲೆಯೇ ಇರುವುದಿಲ್ಲ. ಮತ್ತೆ ಆ ಪ್ರೀತಿ ಹುಟ್ಟಲು ಸಾಧ್ಯವೇ ಇಲ್ಲ.

ಅಭದ್ರತೆ!

ಅಭದ್ರತೆ!

ತನ್ನ ಸಂಗಾತಿ, ತನ್ನನ್ನು ಬಿಟ್ಟು ಬೇರೆ ಯಾರನ್ನೋ ಇಷ್ಟಪಡುತ್ತಾಳೋ, ಯಾರಿಗಾದರೂ ಹತ್ತಿರವಾಗುತ್ತಾಳೋ ಎಂದು ಯೋಚನೆ ಮಾಡುತ್ತ ಅದೇ ವಿಚಾರದಲ್ಲಿ ಸಂಗಾತಿಗೆ ಕಿರಿಕಿರಿ ಮಾಡುವ ಗುಣ ಅಭದ್ರತೆಯನ್ನು ಸೂಚಿಸುತ್ತದೆ. ಹೌದು, ಸ೦ಬ೦ಧವೊ೦ದಕ್ಕೆ ಒಳಪಟ್ಟಿರುವ ಒಬ್ಬರು ಅಥವಾ ಇಬ್ಬರೂ ಕೂಡಾ ಅಭದ್ರತೆಯ ಭಾವನೆಯಿ೦ದ ಬಳಲುತ್ತಿದ್ದರೆ, ಭಾ೦ದವ್ಯದ ಸೊಗಡು ಮು೦ದೆ೦ದೂ ಅನುಭವಕ್ಕೆ ಬರಲಾರದು. ಈ ರೀತಿ ಒಬ್ಬರು ಅಥವಾ ಇಬ್ಬರು ಅಭದ್ರತೆ ಅನುಭವಿಸುತ್ತಿದ್ದರೆ ಈ ಉತ್ತಮ ಸಂಬಂಧ ಸತ್ತು ಹೋಗುತ್ತದೆ. ತಮ್ಮ ರೂಪ, ನೋಟ ಇಂತಹ ನಾನಾಕಾರಣಗಳ ಕುರಿತು ಸ್ವಯಂ ಅನುಮಾನಗಳೇ ಈ ಅಭದ್ರತೆಗೆ ಕಾರಣಗಳಾಗಿವೆ. ಈ ಅನುಮಾನ ಜಗಳಕ್ಕೆ ಕಾರ್ಣವಾಗುತ್ತೆ, ಸಂಬಂಧದಲ್ಲಿ ಕಿರಿಕಿರಿ ಮಾಡುತ್ತೆ. ನಮಗೆ ಒಂದು ಬಾರಿ ಅಭದ್ರತೆ ಕಾಡಿದರೆ ಮತ್ತೆ ಅದು ವಾಪಸ್ ಬರುವುದಿಲ್ಲ. ಹೀಗಾಗಿ ಇಂತಹ ಸಂಬಂಧ ಉಳಿಸಿಕೊಳ್ಳುವುದಕ್ಕಿಂತ. ದೂರ ಹೋಗುವುದು ಉತ್ತಮ.

ನಂಬಿಕೆ!

ನಂಬಿಕೆ!

ಸಂಬಂಧ ಎಂದರೆ ಹಾಲು-ಜೇನಿನಂತೆ. ಹಾಲಿಗೆ ಒಂದು ಹನಿ ಹುಳಿ ಬಿದ್ದರೂ ಹಾಲು ಹಾಳಾಗಿ ಬಿಡುತ್ತದೆ. ಇದೇ ರೀತಿ ಸಂಬಂಧ ಕೂಡ. ಸಂಬಂಧದಲ್ಲಿ ನಂಬಿಕೆ ಅತೀ ಮುಖ್ಯ. ಸಂಬಂಧ ಇಲ್ಲವಾದರೆ ಅಲ್ಲಿ ಮೌಲ್ಯ ಇಲ್ಲದಂತೆ ಆಗುತ್ತೆ. ತನ್ನ ಸಂಗಾತಿಗೆ ಬೇರೆ ಅಫೇರ್ ಇದೆ ಎಂದು ಅನುಮಾನಪಡುವುದು ದೊಡ್ಡ ತಪ್ಪು. ಯಾಕೆಂದರೆ ಈ ಅಪನಂಬಿಕೆ ಅದು ಜಗಳಕ್ಕೆ ದಾರಿ ಮಾಡಿಕೊಡುತ್ತದೆ. ಇನ್ನು ಸಂಗಾತಿ ತನ್ನ ಬಗ್ಗೆ ಏನೇ ಹೇಳಿದರೂ ಅದನ್ನು ನಂಬದೆ ಮತ್ತೆ ಅದೇ ವಿಚಾರದ ಬಗ್ಗೆ ಕೊಂಕು ಮಾತನಾಡುವುದು ಕೂಡ ತಪ್ಪು. ಏನೇ ಹೇಳಿದರೂ ನಂಬಿಕೆ ಇಡಬೇಕು. ಆಕೆ ಏನಾದರೂ ಹೇಳುತ್ತಿದ್ದಾಳೆ ಎಂದಾದರೆ ಅದನ್ನು ಪರಾಮರ್ಶಿಸಿ ಮಾತನಾಡಬೇಕು. ಏಕಾಏಕಿ ಅಪನಂಬಿಕೆಯಿಂದ ಮಾತನಾಡುವುದು ನಿಮ್ಮ ಸಂಗಾತಿಗೆ ನೋವು ಉಂಟುಮಾಡುತ್ತದೆ. ಸಂಬಂಧದಲ್ಲಿ ನಂಬಿಕೆ ಇಲ್ಲ ಎಂದಾದರೆ ಆ ನಂಬಿಕೆ ಮತ್ತೆ ಬರಲ್ಲ. ಎಲ್ಲದಕ್ಕೂ ಡೌಟ್ ಪಡುತ್ತಾ ಇದ್ದರೆ ಒಂದು ದಿನ ಜೀವನವೇ ಬೇಸತ್ತು ಹೋಗುತ್ತದೆ. ಹೀಗಾಗಿ ನಂಬಿ ಇಲ್ಲದಿದ್ದರೆ ರಿಲೇಶನ್ ಶಿಪ್ ಬಿಡುವುದು ಒಳ್ಳೆಯದು.

ಗೌರವ ಇಲ್ಲದಿದ್ದರೆ ಅಲ್ಲಿದ್ದು ವೇಸ್ಟ್!

ಗೌರವ ಇಲ್ಲದಿದ್ದರೆ ಅಲ್ಲಿದ್ದು ವೇಸ್ಟ್!

ಗೀವ್ ರೆಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್ ಅನ್ನೋ ಮಾತು ಇಂಗ್ಲೀಷ್ ನಲ್ಲಿದೆ. ಹೌದು, ಸಂಬಂಧದಲ್ಲಿ ಪ್ರೀತಿ, ನಂಬಿಕೆ ಎಷ್ಟು ಮುಖ್ಯವೋ ಗೌರವ ಕೂಡ ಅಷ್ಟೇ ಮುಖ್ಯ. ನೀವು ಎಲ್ಲದರೂ ಗಮನಿಸಿ ಸಂಗಾತಿಗಳ ನಡುವೆ ಗೌರವ ಇದ್ದರೆ ಆ ಸಂಬಂಧ ಎಷ್ಟು ಅನೋನ್ಯವಾಗಿ ಅನೋನ್ಯವಾಗಿರುತ್ತದೆ ಎಂದರೆ ಊಹಿಸಲು ಸಾಧ್ಯವಿಲ್ಲ. ಪತ್ನಿ ಪತಿ ಗೌರವ ಕೊಡೋದು, ಪತಿಗೆ ಪತ್ನಿ ಗೌರವ ಕೊಡೋದು ಒಂದು ಸಂಬಂಧದಲ್ಲಿ ಮುಖ್ಯ. ಗೌರವವಾಗಿ ಸಂಬೋಧಿಸುವುದು ಕೂಡ ಒಳ್ಳೆಯದು. ಗೌರವ ಇಲ್ಲದಿದ್ದರೆ ಅದು ಸಾರ್ವಜನಿಕವಾಗಿ ತಿಳಿಯುತ್ತೆ. ಪತ್ನಿಗೆ ಸಾರ್ವಜನಿಕವಾಗಿ ಬೆದರಿಸೋದು, ಹಲ್ಲು ಕಚ್ಚಿ ತೋರಿಸೋದು ಎಲ್ಲಾ ಕೂಡ ಒಂದು ಗೌರವದ ಭಾಗ. ಹೀಗಾಗಿ ಸಂಬಂಧದಲ್ಲಿ ಗೌರವ ಅತೀ ಮುಖ್ಯ, ಮನೆ ಹೊರಗ ಮಾತ್ರವಲ್ಲ ಒಳಗೂ ಸಂಗಾತಿಗಳು ಗೌರವದಿಂದ ನಡೆದುಕೊಳ್ಳಬೇಕು. ಒಂದು ವೇಳೆ ಗೌರವ ಇಲ್ಲದಿದ್ದರೆ ಅಂತಹ ಸಂಬಂಧದಿಂದ ಹೊರ ಬರುವುದು ಒಳ್ಳೆಯದು.

ನಿಮ್ಮ ಮೌಲ್ಯಗಳಿಗೆ ಬೆಲೆ ಇಲ್ಲದಿದ್ದರೆ!

ನಿಮ್ಮ ಮೌಲ್ಯಗಳಿಗೆ ಬೆಲೆ ಇಲ್ಲದಿದ್ದರೆ!

ಪುರುಷ ಆಗಲಿ ಮಹಿಳೆಯಾಗಲಿ ಅವರದ್ದೇ ಮೌಲ್ಯಗಳಿರುತ್ತದೆ. ಅದನ್ನು ಅವರು ಪಾಲಿಸುತ್ತಿರುತ್ತಾರೆ. ಅದಕ್ಕೆ ಸಂಬಂಧ ಎಂದಾಗ ಅದಕ್ಕ ಧಕ್ಕೆಯಾವುದು ಜಾಸ್ತಿ. ಹೀಗಾಗಿ ಸಂಗಾತಿಗಳು ಅವರವರ ಮೌಲ್ಯಗಳನ್ನು ಪಾಲನೆ ಮಾಡಿಕೊಂಡು ಸಂಬಂಧ ನಡೆಸುವುದು ಒಳ್ಳೆಯದು. ಉದಾಹರಣೆಗೆ ನಿಮ್ಮ ಪೈಕಿ ಒಬ್ಬರಿಗೆ ಮಗು ಹೊಂದಲು ಆಸೆ ಇದೆ ಆದರೆ ಮತ್ತೊಬ್ಬರಿಗೆ ಇಲ್ಲ. ಎಷ್ಟೇ ಮನವೊಲಿಸಿದರು ಅದು ಸರಿಯಾಗುವ ಲಕ್ಷಣವಿಲ್ಲ. ಸಂಬಂಧಲ್ಲಿ ನಿಮ್ಮ ಮಾತಿಗೆ ಬೆಲೆ ಇಲ್ಲದಿದ್ದರೆ ಅಥವಾ ಮೌಲ್ಯಗಳಿಗೆ ಬೆಲೆ ಇಲ್ಲದಿದ್ದರೆ ಅಂತಹ ಸಂಬಂಧ ಕೊನೆಗಳಿಸುವುದು ಒಳ್ಳೆಯದು. ಕೆಲವು ಕಡೆ ಅಭಿಪ್ರಾಯ ಹೇಳಲು ಕೂಡ ಬಿಡುವುದಿಲ್ಲ. ಇಂತಹ ಜಾಗ ಬದುಕಲು ಸೂಕ್ತವಲ್ಲ.

ನಿಂದನೆ, ದೌರ್ಜನ್ಯವಿದ್ದರೆ ಏನು ಮಾಡಬೇಕು?

ನಿಂದನೆ, ದೌರ್ಜನ್ಯವಿದ್ದರೆ ಏನು ಮಾಡಬೇಕು?

ಸಂಬಂಧದಲ್ಲಿ ಗೌರವ ಇರಬೇಕು ಎಲ್ಲದಕ್ಕೂ ನಿಂದನೆ ಮಾಡಿದರೆ ಈ ಜೀವನ ಯಾಕೆ ಎಂದು ಅನಿಸುತ್ತೆ. ಅಲ್ಲದೇ ಕುಡಿದು, ಡೌಟ್ ಮೇರೆಗೆ ದೌರ್ಜನ್ಯ ಮಾಡುವುದು, ಲೈಂಗಿಕ ದೌರ್ಜನ್ಯ ಮಾಡುವುದು ಕೂಡ ಜೀವನ ಬೇಸರ ತರಿಸುವಂತೆ ಮಾಡುತ್ತೆ. ಕೆಲವರು ಸಂಗಾತಿ ಜೊತೆ ಸೈಕೋ ತರ ಮಾಡುವುದುಂಟು. ಸುಮ್ಮನೆ ಹೊಡೆಯುವುದು, ರೂಮಿನೊಳಗೆ ಕೂಡಿ ಹಾಕಿ ಹಿಂಸೆ ಕೊಡುವುದು. ಮಾನಸಿಕವಾಗಿ ಕುಗ್ಗಿಸುವುದು. ಈ ರೀತಿ ಇದ್ದರೆ ಖಂಡಿತವಾಗಿ ಅಲ್ಲಿ ನಿಂತು ನೋವು ಅನುಭವಿಸುದಗಿಂತ ಮೂವ್ ಆನ್ ಆಗುವುದು ಒಳ್ಳೆಯದು.

ಕುಟುಂಬದವರು ಇಷ್ಟಪಡದಿದ್ದರೆ!

ಕುಟುಂಬದವರು ಇಷ್ಟಪಡದಿದ್ದರೆ!

ಅನೇಕರು ಲವ್ ಮಾಡುತ್ತಾರೆ. ಆದರೆ ಈ ಲವ್ ಮದುವೆ ಆಗಲು ಹೋದಾಗ ಅನೇಕ ಸಮಸ್ಯೆಗಳು ಬರುತ್ತದೆ. ಮನೆಯವರು ಒಪ್ಪೋದಿಲ್ಲ ಎನ್ನುವಂತಹ ಘಟನೆಗಳು ನೋಡುತ್ತೇವೆ. ಮನಶಾಸ್ತ್ರಜ್ಞರ ಪ್ರಕಾರ, ಕುಟುಂಬದವರು ಸಂಗಾತಿಯನ್ನು ಒಪ್ಪಿಕೊಳ್ಳದಿದ್ದರೆ ಅಂತಹ ಸಂಬಂಧವನ್ನು ಬಿಟ್ಟುಬಿಡುವುದು ಒಳೆಯದು ಎನ್ನುತ್ತಾರೆ. ಯಾಕೆಂದರೆ ಆ ಸಂಬಂಧದಲ್ಲಿ ಯಾವುತ್ತೂ ಬಿರುಕು ಮೂಡುವ ಸಾಧ್ಯತೆ ಇದೆ ಎಂದಿದ್ದಾರೆ. ಅದಾಗ್ಯೂ ಕೆಲವರು ಮನೆಯವರ ಒಪ್ಪಿಗೆ ಇಲ್ಲದೆ ಪ್ರೇಮ ಅಥವಾ ವಿವಾಹ ಆಗಿ ಚೆನ್ನಾಗಿ ಇರುತ್ತಾರೆ. ಆದರೆ ಹಲವು ಘಟನೆಗಳಲ್ಲಿ ಇದು ದೊಡ್ಡ ದುರಂತಕ್ಕೂ ಸಾಕ್ಷಿಯಾಗಬಹುದು. ಕೊಲೆಯಂತಹ ಘಟನೆಗಳಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಕುಟುಂಬಸ್ಥರು ಸ್ವೀಕರಿಸಿಲ್ಲದಿದ್ದರೆ ಅಂತಹ ಸಂಬಂಧವನ್ನು ತಕ್ಷಣ ಕೊನೆಗೊಳಿಸುವುದು ಒಳ್ಳೆಯದು.

ಸಂಬಂಧದಿಂದಲೇ ಜೀವನ ಭಾರ ಅನಿಸಿದರೆ!

ಸಂಬಂಧದಿಂದಲೇ ಜೀವನ ಭಾರ ಅನಿಸಿದರೆ!

ಅನೇಕ ಕಡೆಗಳಲ್ಲಿ ನಾವು ಗಮನಿಸಿದ್ದೇವೆ. ಸಂಬಂಧದಲ್ಲಿ ಬಿರುಕು ಮೂಡಿ ಆತ್ಮಹತ್ಯೆ ಮಾಡಿಕೊಂಡಿರುವುದು. ಹೌದು, ಸಂಬಂಧದಲ್ಲಿ ಬಿರುಕು ಮೂಡಲು ಅನೇಕ ಕಾರಣಗಳಿರಬಹುದು. ಕೆಲವೊಂದು ಬಾರಿ ಹೇಗೆ ಆಗುತ್ತೆ ಎಂದರೆ ಸಂಬಂಧದಿಂದಲೇ ಜೀವನ ಭಾರ ಅನಿಸುತ್ತೆ. ಜೀವನವೇ ಬೇಡ ಅನಿಸುತ್ತೆ.ಸಂಬಂಧದಿಂದ ನಿಮಗೆ ಆ ರೀತಿ ಅನಿಸಿದರೆ ಬೇರೆ ಕೆಟ್ಟ ದಾರಿಯನ್ನು ತುಳಿಯುವುದಕ್ಕಿಂತ ಸಂಬಂಧಕ್ಕೆ ಗುಡ್ ಬಾಯ್ ಹೇಳುವುದು ಒಳ್ಳೆಯದು. ಇದಲ್ಲದೇ ಈ ಸಂಗಾತಿಯಿಂದ ನೀವು ಅಂತರ ಕಾಯ್ದುಕೊಂಡಿದ್ದರೆ, ದೂರ ಹೋಗಬೇಕು ಎಂದು ಒಂದು ಬಾರಿ ಮನಸ್ಸಿನಲ್ಲಿ ಅಂದುಕೊಂಡಿದ್ದಾರೆ. ಈ ಸಂಬಂಧದಿಂದ ದೂರ ಉಳಿಯುವುದು ಉತ್ತಮ ಆಯ್ಕೆ.

ಮತ್ಸರ!

ಮತ್ಸರ!

ನೀವು ನಿಮ್ಮ ಬಾಳಸ೦ಗಾತಿಯ ಕುರಿತ೦ತೆ ಮತ್ಸರ ಭಾವವನ್ನು ತಳೆಯತೊಡಗಿದಲ್ಲಿ, ಅಥವಾ ನಿಮ್ಮ ಬಾಳಸ೦ಗಾತಿಯು ನಿಮ್ಮ ಮಿತ್ರರನ್ನು ಹಾಗೂ ಅವರೊ೦ದಿಗಿನ ಮೈತ್ರಿಯನ್ನು ಸ್ವೀಕರಿಸದೇ ಹೋದಲ್ಲಿ, ಈ ಕುರಿತು ಅತೀ ಕೂಡಲೇ ಮಾತುಕತೆಗೆ ತೊಡಗಿಕೊಳ್ಳುವುದರ ಮೂಲಕ ಅ೦ತಹ ತಕರಾರುಗಳಿಗೆ ಅತೀ ಶೀಘ್ರವಾಗಿ ಇತಿಶ್ರೀ ಹಾಡಬೇಕು. ಏಕೆ೦ದರೆ ಅ೦ತಹ ತಗಾದೆಗಳು ನಿಮ್ಮೀರ್ವರ ನಡುವಿನ ಸ೦ಬ೦ಧದ ಮೇಲೆ ಪ್ರತಿಕೂಲ ಪರಿಣಾಮವನ್ನು೦ಟು ಮಾಡುವುದರ ಮೂಲಕ ಸ೦ಬ೦ಧವನ್ನು ಶಾಶ್ವತವಾಗಿ ಹಾಳುಗೆಡವಬಲ್ಲದು. ಈ ರೀತಿ ಮತ್ಸರ ಬಂದರೆ ಅಲ್ಲಿ ಸಂಗಾತಿಗಳ ಯೋಚನೆ ಬದಲಾಗುತ್ತೆ ಅಂತಹವುದನ್ನು ಸರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬಿಟ್ಟು ಬಿಡಬೇಕು.

English summary

How to Let Go of Someone You Love In Relationship in Kannada

How to Let Go of Someone You Love In Relationship in Kannada, Read on,
Story first published: Monday, June 27, 2022, 18:00 [IST]
X
Desktop Bottom Promotion