For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಗೆಳೆಯ ಮನೆ ಅಳಿಯನಾಗಲು ಸೂಕ್ತನೇ ಎಂದು ತಿಳಿದುಕೊಳ್ಳುವುದು ಹೇಗೆ?

|

ನಿಮ್ಮ ದೀರ್ಘಕಾಲೀನ ಗೆಳೆಯನನ್ನು ನಿಮ್ಮ ಪೋಷಕರಿಗೆ ಪರಿಚಯಿಸಬೇಕಾದ ಸಮಯ ಬಂದಾಗ, ಆತ ನನಗೆ ಸರಿಯಾದ ವ್ಯಕ್ತಿಯೇ? ನಮ್ಮ ಕುಟುಂಬಕ್ಕೆ ಹೊಂದಿಕೊಳ್ಳುತ್ತಾನೆಯೇ ಎಂಬ ಗೊಂದಲ ಹುಡುಗಿಯರ ಮನಸ್ಸಿನಲ್ಲಿ ಬರದೇ ಇರದು. ಏಕೆಂದರೆ, ಪ್ರೀತಿಯಿಂದ ಮುಂದಿನ ಹಂತಕ್ಕೆ ಕಾಲಿಡುವ ಸಮಯದಲ್ಲಿ, ನಿಮ್ಮ ಆಯ್ಕೆಯ ಬಗ್ಗೆ ಸ್ಪಷ್ಟತೆ ಇರಬೇಕು. ಅದರಲ್ಲೂ, ಹೆಣ್ಣಿನ ತಂದೆ-ತಾಯಿಯಿ ವಿಚಾರದಲ್ಲಿ ಆತ ಎಂತಹ ಮನೋಭಾವ ಇಟ್ಟುಕೊಂಡಿದ್ದಾನೆ ಎಂಬುದು ಬಹಳ ಮುಖ್ಯ. ಇಲ್ಲವಾದಲ್ಲಿ ಮುಂದೆ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಆತ ನಿಮ್ಮ ಕುಟುಂಬಕ್ಕೆ ಸರಿಯಾಗಿ ಹೊಂದುತ್ತಾನೆಯೇ ಎಂದು ತಿಳಿದುಕೊಳ್ಳಲು ಈ ಲೇಖನ ಓದಿ.

ಗೆಳೆಯನ ವಿಚಾರದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆತ ಜವಾಬ್ದಾರಿಯುತನಾಗಿರಬೇಕು:

ಆತ ಜವಾಬ್ದಾರಿಯುತನಾಗಿರಬೇಕು:

ಜವಾಬ್ದಾರಿ ಇಲ್ಲದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವುದು ವಿನೋದಮಯವಾಗಿರಬಹುದು, ಆದರೆ ಆತ ಯಾವುದೇ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದರೆ, ಆತನನ್ನು ಮನೆಗೆ ಕರೆತರುವುದು, ಪೋಷಕರಿಗೆ ಭೇಟಿ ಮಾಡಿಸುವುದು ಅತ್ಯುತ್ತಮ ಆಯ್ಕೆಯಾಗಿರುವುದಿಲ್ಲ. ಮದುವೆಯಾಗುವುದು ಎಂದರೆ ಜವಾಬ್ದಾರಿಯನ್ನು ಸಮವಾಗಿ ಹಂಚಿಕೊಳ್ಳುವುದರ ಜೊತೆಗೆ ನಿಮ್ಮ ಭವಿಷ್ಯದ ಮಗು ಮತ್ತು ನಿಮ್ಮ ಸಂಗಾತಿಯ ಬಗ್ಗೆ ಕಾಳಜಿ ಹೊಂದಿರುವುದು. ನೀವು ವೃತ್ತಿಜೀವನವನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ನಿಮ್ಮಿಬ್ಬರ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಲು ಬಯಸುವ ವ್ಯಕ್ತಿಯೊಂದಿಗೆ ನೀವು ಇರಬೇಕು.

ನಿಮ್ಮ ಹೆತ್ತವರನ್ನು ನೋಡಿಕೊಳ್ಳುವ ಆಸಕ್ತಿ ವ್ಯಕ್ತಪಡಿಸುವುದು:

ನಿಮ್ಮ ಹೆತ್ತವರನ್ನು ನೋಡಿಕೊಳ್ಳುವ ಆಸಕ್ತಿ ವ್ಯಕ್ತಪಡಿಸುವುದು:

ಮದುವೆಯ ನಂತರ ಹುಡುಗಿ ತನ್ನ ಪತಿ ಅಥವಾ ಅತ್ತೆಯೊಂದಿಗೆ ವಾಸಿಸುತ್ತಿದ್ದರೂ, ಆಕೆ ಯಾವಾಗಲೂ ತನ್ನ ಹೆತ್ತವರೊಂದಿಗೆ ಆಳವಾದ ಸಂಪರ್ಕವನ್ನು ಹೊಂದುತ್ತಾಳೆ. ಅದನ್ನು ಅರ್ಥಮಾಡಿಕೊಳ್ಳುವ ಮತ್ತು ಯಾವುದೇ ಪ್ರತಿಯೊಂದು ಸಂದರ್ಭದಲ್ಲೂ ನೀವು ಅವರ ಜೀವನದ ಭಾಗವಾಗಿರಲು ಸಕ್ರಿಯವಾಗಿ ಸಹಾಯ ಮಾಡುವ ಪತಿಯನ್ನು ಹೊಂದಿರುವುದು ನಿರ್ಣಾಯಕ. ಆದ್ದರಿಂದ, ಮದುವೆಯ ನಂತರ ನಿಮ್ಮ ಹೆತ್ತವರನ್ನು ಭಾವನಾತ್ಮಕವಾಗಿ ಅಥವಾ ಆರ್ಥಿಕವಾಗಿ ಬೆಂಬಲಿಸಲು ನೀವು ಬಯಸುವುದರಲ್ಲಿ ಅವನಿಗೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತನ್ನ ಆಲೋಚನೆಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುವುದು:

ತನ್ನ ಆಲೋಚನೆಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುವುದು:

ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಬಹುಶಃ ಪಿತೃಪ್ರಭುತ್ವದ ಬಗ್ಗೆ ಯೋಚಿಸದ ವ್ಯಕ್ತಿಯನ್ನು ಆಯ್ಕೆ ಮಾಡಲು ಬಯಸುತ್ತೀರಿ. ಆದ್ದರಿಂದ, ನಿಮ್ಮ ಗೆಳೆಯನೊಂದಿಗಿನ ನಿಮ್ಮ ಸಂಭಾಷಣೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು, ಅಲ್ಲಿ ಅವರು ನಿಮ್ಮ ಭವಿಷ್ಯದ ಬಗ್ಗೆ ಮಾತನಾಡುತ್ತಾರೆ. ಆ ಸಮಯದಲ್ಲಿ ಹುಡುಗಿಯ ಕಡೆಯವರಾಗಿರುವುದರಿಂದ ವರದಕ್ಷಿಣೆ ಕೊಡಬೇಕು, ಅವನ ಹೆತ್ತವರಿಗೆ ಋಣಿಯಾಗಬೇಕು ಎಂದು ಆತ ಭಾವಿಸುತ್ತಿದ್ದಾನೆಯೇ? ಅಥವಾ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು, ಆತ ಸಮಾನ ಕೊಡುಗೆ ನೀಡಬಹುದು ಎಂಬ ಆಲೋಚನೆ ಹೊಂದಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರವು ಅವನು ನಿಮಗೆ ಸರಿಯಾದ ವ್ಯಕ್ತಿಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.

English summary

How to Know if your Boyfriend is the Right Choice for Your Family in Kannada

Here we talking about How to know if your boyfriend is the right choice for your family in Kannada, read on
Story first published: Monday, January 24, 2022, 16:19 [IST]
X
Desktop Bottom Promotion