For Quick Alerts
ALLOW NOTIFICATIONS  
For Daily Alerts

ದೂಷಿಸುವ ಮನೋಭಾವವೇ ಸಂಬಂಧವನ್ನು ಹಾಳುಮಾಡುತ್ತದೆ

|

ಗಂಡ ಹೆಂಡತಿಯಾಗಿರಬಹುದು, ಅಥವಾ ಪ್ರೇಮಿಗಳಾಗಿರಬಹುದು, ಪರಸ್ವರ ಪ್ರೀತಿ ವಿಶ್ವಾಸವಿದ್ದರೂ ಹಲವಾರು ಸಂದರ್ಭಗಳಲ್ಲಿ ಒಬ್ಬರು ಇನ್ನೊಬ್ಬರನ್ನು ದೂಷಿಸುವುದು ಸಾಮಾನ್ಯ.

ಆದರೆ ಈ ರೀತಿ ಒಬ್ಬರನ್ನೊಬ್ಬರು ದೂಷಿಸುವುದು ಅತಿಯಾದರೆ ಆ ಸಂಬಂಧ ಅರ್ಥವನ್ನು ಕಳೆದುಕೊಳ್ಳುತ್ತದೆ, ಹಾಗೂ ಆ ಸಂಬಂಧ ಶಾಶ್ವತವಾಗಿ ಉಳಿಯುವುದೂ ಇಲ್ಲ. ಒಂದು ಸುಂದರ ಸಂಬಂಧವನ್ನು ಗಟ್ಟಿಯಾಗಿಸುವುದು ಹಾಗೂ ವಿನಾಕಾರಣ ಕಳೆದುಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಯಾವುದು ಬೇಕೋ ಅದರ ಆಯ್ಕೆ ನಿಮ್ಮದೆ.

How To Avoid Blame Game

ಯಾವುದೇ ತಪ್ಪು ನಡೆದರೂ ಅದರ ಎಲ್ಲಾ ಜವಾಬ್ದಾರಿಯನ್ನು ಒಬ್ಬರ ಮೇಲೆಯೇ ಹಾಕಿ ಸುಮ್ಮನಿರುವುದು ಬಹಳ ಸುಲಭ. ನಮ್ಮಲ್ಲಿ ಬಹಳಷ್ಟು ಜನ ಈ ರೀತಿ ನಡೆದುಕೊಳ್ಳುತ್ತಾರೆ ಕೂಡ. ಆದರೆ ಇನ್ನೊಬ್ಬರನ್ನು ದೂಷಿಸುತ್ತ, ಅವರೆಡೆಗೆ ಬೆರಳು ಮಾಡಿ ತೋರಿಸುವ ಮೊದಲು ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಂಡು ಒಮ್ಮೆ ಆಲೋಚಿಸಬಾರದೇಕೆ?

ಈ ರೀತಿ ಬಬ್ಬರನ್ನೊಬ್ಬರು ದೂಷಿಸುವುದು ಅಥವಾ ತಪ್ಪಿತಸ್ತರನ್ನಾಗಿ ಮಾಡುವುದು ಯಾವತ್ತಿಗೂ ಒಳ್ಳೆಯದಲ್ಲ. ನೀವು ಮತ್ತು ನಿಮ್ಮ ಸಂಗಾತಿ ಬಹಳ ಸಮಯದಿಂದ ಹೀಗೆ ಒಬ್ಬರ ಮೇಲೊಬ್ಬರು ತಪ್ಪೊರಿಸುತ್ತಿದ್ದರೆ ಅಂತಹ ಸಂಬಂಧ ಎಂದಿಗೂ ಉಳಿಯುವುದಿಲ್ಲ ನೆನಪಿಡಿ!

ಸಂಬಂಧಗಳಲ್ಲಿರುವ ಒಂದು ಕೆಟ್ಟ ಸಮಸ್ಯೆ ಎಂದರೆ ಒಂದು ವಿಷಯದ ಬಗೆಗಿನ ಚರ್ಚೆ ಆಪಾದನೆಯ ಆಟವಾಗಿ ಬದಲಾದಾಗ. ಇದು ಇಬ್ಬರೂ ತಮ್ಮನ್ನು ತಾವು ಸರಿ ಎಂದು ಸಾಬೀತುಪಡಿಸಲು ಪ್ರಯತ್ನಿಸುವ ಹಂತ. ಆದರೆ ನೀವು ಆಪಾದಿಸುತ್ತಿರುವ ವಿಷಯದ ಬಗ್ಗೆ ಆಳವಾಗಿ ಯೋಚಿಸಿದರೆ ನೀವಿಬ್ಬರೂ ತಪ್ಪಾಗಿರಬಹುದು ಅಥವಾ ಸರಿಯಾಗಿರಬಹುದು, ಯಾಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲೂ ಒಂದಲ್ಲಾ ಒಂದು ರೀತಿಯ ನ್ಯೂನತೆಗಳಿರುವುದು ಸಹಜ.

ಅಲ್ಲದೇ ಇಲ್ಲಿ ಯಾವುದೂ ಸರಿ ತಪ್ಪು ಎನ್ನುವುದಿಲ್ಲ, ಏಕೆಂದರೆ ಪ್ರತಿಯೊಬ್ಬರೂ ಅವರದ್ದೇ ಆದ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಈ ಆಪಾದನೆ ಮಾಡುವುದು ಎಷ್ಟು ವಿಚಾರಹೀನ ಸಂಗತಿ ಎಂದರೆ ಇದರಿಂದ ಯಾವುದೇ ಸಂಬಂಧ ಮುರಿದುಹೋಗಬಹುದು. ಹಾಗಾಗಿ ಇಂತಹ ಸಮಸ್ಯೆಗಳಾಗದಂತೆ ತಡೆಯಲು ಕೆಲವು ಸಲಹೆಗಳನ್ನು ಕೊಡುತ್ತಿದ್ದೇವೆ.

1. ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಅದನ್ನು ಗುರುತಿಸಿ

1. ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಅದನ್ನು ಗುರುತಿಸಿ

ಒಂದು ಸಮಸ್ಯೆಯನ್ನು ಪರಿಹರಿಸಲು ನೀವು ಮೊದಲು ಸಮಸ್ಯೆಯನ್ನು ಗುರುತಿಸಬೇಕು. ಸಾಕಷ್ಟು ಸಲ ನಿಮ್ಮ ನಡವಳಿಕೆಯಿಂದಾಗಿ ನಿಮ್ಮ ಸಂಗಾತಿ ನೊಂದುಕೊಳ್ಳುವ ಸಂದರ್ಭಗಳೂ ಇರಬಹುದು, ಆದರೆ ಅದು ನಿಮಗೆ ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿ ದುಃಖಿತನಾಗಿದ್ದಾನೆ ಅಥವಾ ಅಸಮಾಧಾನಗೊಂಡಿದ್ದಾನೆ ಎಂದು ನೀವು ಗ್ರಹಿಸಲು ಸಾಧ್ಯವಾದರೆ, ಆಗ ಸಮಸ್ಯೆಯನ್ನು ನಿರ್ಲಕ್ಷಿಸುವುದು ಬುದ್ಧಿವಂತಿಕೆಯಲ್ಲ. ನೀವು ಸಮಸ್ಯೆಯ ಬಗ್ಗೆ ಮಾತನಾಡಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು. ಈ ರೀತಿಯಾಗಿ ನೀವು ಸಂಬಂಧದಲ್ಲಿನ ಆಪಾದನೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

2. ನಿಮ್ಮ ಸಂಗಾತಿಯ ವಿರುದ್ಧ ಏನಾದರೂ ಸಂಚು ಮಾಡುವುದನ್ನು ಬಿಡಿ

2. ನಿಮ್ಮ ಸಂಗಾತಿಯ ವಿರುದ್ಧ ಏನಾದರೂ ಸಂಚು ಮಾಡುವುದನ್ನು ಬಿಡಿ

ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನರು. ನೀವು ವಾದಗಳನ್ನು ಮಾಡಿ ನೀವೇ ಸರಿ ಎಂದು ಸಾಬೀತುಪಡಿಸಲು, ನಿಮ್ಮ ಸಂಗಾತಿ ಈ ಭೂಮಿಮೇಲೆ ವಾಸಿಸುವ ಅತ್ಯಂತ ಕಿರಿಕಿರಿ ಮತ್ತು ಕೆಟ್ಟ ವ್ಯಕ್ತಿ ಎಂದು ಹೇಳಲು ಹೊರಟರೆ, ಆಗ ಇದು ಒಂದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ನಿಮ್ಮ ವಾದಗಳಿಗೆ ಪುಷ್ಠಿಯನ್ನು ನೀಡುವುದನ್ನು ಬಿಟ್ಟರೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಬಹುದು. ನಿಮ್ಮ ಸಂಗಾತಿಯ ಮೇಲೆ, ಅವನು ಅಥವಾ ಅವಳು ಯಾವುದೇ ತಪ್ಪು ಮಾಡಿದಾಗ ನೀವು ಬೆರಳು ಮಾಡಿ ತೋರಿಸಬೇಕಾಗಿಲ್ಲ. ಬದಲಾಗಿ, ನಿಮ್ಮನ್ನು ಅಸಮಾಧಾನಗೊಳಿಸಿದ ಸಂಗತಿಯನ್ನು ಅವರಿಗೆ ತಿಳಿಸಿ. ನಿಮ್ಮ ಸಂಗಾತಿಯನ್ನು ಅತ್ಯಂತ ಅಸಡ್ಡೆ, ಕಿರಿಕಿರಿ ಮತ್ತು ಸಮಸ್ಯಾತ್ಮಕ ವ್ಯಕ್ತಿಯಾಗಿ ನೋಡುವುದನ್ನು ಮೊದಲು ಬಿಡಿ. ಆಗ ಹಲವಾರು ಸಮಸ್ಯೆಗಳು ಕಡಿಮೆಯಾಗುತ್ತವೆ.

3. ನಿಮ್ಮ ಅಹಂಕಾರವನ್ನು ಪಕ್ಕಕ್ಕಿಡಿ

3. ನಿಮ್ಮ ಅಹಂಕಾರವನ್ನು ಪಕ್ಕಕ್ಕಿಡಿ

ಪ್ರೀತಿ ಮತ್ತು ಅಹಂ, ಯಾವಾಗಲೂ ಸಂಬಂಧದಲ್ಲಿ ಸಹಬಾಳ್ವೆ ತರಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದರೆ, ಅದನ್ನು ಸ್ವೀಕರಿಸಲು ನಿಮಗೆ ಧೈರ್ಯವಿರಬೇಕು ಈ ಸಮಯದಲ್ಲಿ ನಿಮ್ಮ ಅಹಂಕಾರವನ್ನು ಪಕ್ಕಕ್ಕಿಡಿ. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಸಂಗಾತಿಯಿಂದ ಕಲಿಯುವುದು ನಿಮ್ಮ ಬಂಧವನ್ನು ಸುಧಾರಿಸಲು ಮತ್ತು ಪರಸ್ಪರರ ಬಗ್ಗೆ ಹೀಗೇ ಎಂದು ನಿರ್ಣಯಿಸುವ ಮನಸ್ಥಿತಿಯನ್ನು ಬದಲಾಯಿಸಬಹುದು.

4. ಅವಾಸ್ತವಿಕ ನಿರೀಕ್ಷೆಗಳನ್ನು ನಿರ್ಮಿಸಿಕೊಳ್ಳುವುದನ್ನುನಿಲ್ಲಿಸಿ

4. ಅವಾಸ್ತವಿಕ ನಿರೀಕ್ಷೆಗಳನ್ನು ನಿರ್ಮಿಸಿಕೊಳ್ಳುವುದನ್ನುನಿಲ್ಲಿಸಿ

ಅಂದಹಾಗೆ ನಿಮಗೆ ಏನು ನೋವುಂಟು ಮಾಡುತ್ತಿದೆ? ಅದು ಕೇವಲ ನಿಮ್ಮ ಸ್ವಂತ ನಿರೀಕ್ಷೆಗಳು. ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ನೀವು ಎಷ್ಟು ಬೇಗನೆ ಸ್ವೀಕರಿಸುತ್ತೀರೋ, ಮತ್ತು ಭಿನ್ನ ವ್ಯಕ್ತಿತ್ವ ಇರುವ ನೀವಿಬ್ಬರೂ ಪರಸ್ವರ ಪ್ರೀತಿಸುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿರೋ ಅಷ್ಟು ಬೇಗ ನಿಮ್ಮ ಸಂಬಂಧಗಳು ಉತ್ತಮವಾಗುತ್ತಾ ಹೋಗುತ್ತದೆ. ನಿಮ್ಮ ಸಂಗಾತಿ ನಿಮಗೆ ಬೇಕಾದ ಹಾಗೇ ವರ್ತಿಸಬೇಕು ಎಂದು ನಿರೀಕ್ಷಿಸುವ ಬದಲು, ಅವರು ಒಬ್ಬ ವ್ಯಕ್ತಿಯಾಗಿ ಹೇಗಿದ್ದಾರೆಯೋ ಹಾಗೆಯೇ ಒಪ್ಪಿಕೊಳ್ಳಿ. ಅಲ್ಲದೆ, ನೀವು ಅವನ ಅಥವಾ ಅವಳ ಅತ್ಯುತ್ತಮ ವಕ್ತಿತ್ವ ಬೆಳೆಯಲು ಸಹಾಯ ಮಾಡಬಹುದು.

5. ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬೆದರಿಸಬೇಡಿ

5. ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬೆದರಿಸಬೇಡಿ

ನೀವು ಕೋಪದಲ್ಲಿದ್ದಾಗಲೂ ಕೂಡ ಹೀಗೆ ಮಾಡದಿರಿ ನಂತರ ನಿವೇ ಪಶ್ವಾತಾಪ ಪಡಬೇಕಾಗುತ್ತದೆ. ವಿಷಾದಿಸಬಹುದಾದ ವಿಷಯಗಳನ್ನು ಹೇಳುವುದನ್ನು ತಪ್ಪಿಸಿ. ನಿಮ್ಮ ಸಂಗಾತಿ ಭಾವನಾತ್ಮಕವಾಗಿ ದುರ್ಬಲರಾಗಿದ್ದಾರೆಂದು ನಿಮಗೆ ತಿಳಿದಿದ್ದರೆ, ಅವನು / ಅವಳು ನೀವು ಹೇಳುವದನ್ನು ಮಾಡದಿದ್ದರೆ ನೀವು ಅವರನ್ನು ಬಿಟ್ಟು ಹೋಗುತ್ತೇನೆ ಎಂದು ಬೆದರಿಸುವುದು ಕ್ರೂರ ವಿಷಯವೇ ಸರಿ. ಅವರು ಏನಾದರೂ ತಪ್ಪು ಮಾಡಿದ್ದರೆ ಅವರನ್ನು ಕ್ಷಮಿಸಿ. ಏಕೆಂದರೆ ದ್ವೇಷವನ್ನು ಸಾಧಿಸುವುದು ಕೇವಲ ಸಮಯವನ್ನು ವ್ಯರ್ಥ ಮಾಡಿದಂತೆ ಮತ್ತು ಎಲ್ಲಾ ಸಂಬಂಧಗಳಿಗೆ ಇದೊಂದು ತೊಂದರೆದಾಯಕ.

6. ಯಾರೊಬ್ಬರ ಮೇಲೆ ಕೂಗಾಡುವುದು ಎಂದಿಗೂ ಸಮಸ್ಯೆಗೆ ಪರಿಹಾರವಲ್ಲ

6. ಯಾರೊಬ್ಬರ ಮೇಲೆ ಕೂಗಾಡುವುದು ಎಂದಿಗೂ ಸಮಸ್ಯೆಗೆ ಪರಿಹಾರವಲ್ಲ

ನಿಮ್ಮ ಧ್ವನಿಯನ್ನು ಎತ್ತರಿಸಿ ಕೂಗುವುದರಿಂದ ನೀವು ವಾದವನ್ನು ಗೆಲ್ಲಬಹುದು ಎಂದು ಭಾವಿಸಿದರೆ ಅದು ತಪ್ಪು. ಆದ್ದರಿಂದ, ಮೊದಲು, ನಿಮ್ಮ ಭಾವನೆಗಳನ್ನು ಶಾಂತಗೊಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಮಸ್ಯೆಯ ಬಗ್ಗೆ ಕೂತು ಮಾತನಾಡುವ ಬಗ್ಗೆ ಯೋಚಿಸಿ.

ಅಲ್ಲದೆ, ಒಬ್ಬರನ್ನು ದೂರುವಂತಹ ನಿಮ್ಮ ಧ್ವನಿಯನ್ನು ಶಾಂತ ಮತ್ತು ಮನವರಿಕೆಯಾಗುವ ರೀತಿಯಲ್ಲಿ ಹೇಳಲು ಪ್ರಯತ್ನಿಸಿ. 'ನೀವು ಇದನ್ನು ಏಕೆ ಮಾಡಿದ್ದೀರಿ' ಎಂದು ಹೇಳುವ ಬದಲು, 'ಈ ರೀತಿ ಕೆಲಸಗಳನ್ನು ಮಾಡಬಾರದು' ಎಂದು ಹೇಳಲು ಪ್ರಯತ್ನಿಸಿ. ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಿಳಿಸಿ. ನಿಮ್ಮ ಮಾತುಗಳನ್ನು ಬುದ್ಧಿವಂತಿಕೆಯಿಂದ ಆಡಿ. ಆಗ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವುದು!

7. ಸಮಸ್ಯೆ-ಪರಿಹರಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ

7. ಸಮಸ್ಯೆ-ಪರಿಹರಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ

ನೀವು ಸಮಸ್ಯೆಗಳನ್ನು ಪರಿಹರಿಸುವ ರೀತಿಯನ್ನು ಅರಿಯದಿದ್ದರೆ, ನಿಮ್ಮ ಆಪಾದನೆಯ ಸಮಸ್ಯೆಯನ್ನು ಕೊನೆಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಒಂದು ವೇಳೆ, ನಿಮ್ಮ ಸಂಗಾತಿ ಹೇಳಿದ್ದನ್ನು ಅಥವಾ ಮಾಡಿದ್ದನ್ನು ನೀವು ಒಪ್ಪಲು ಸಾಧ್ಯವಾಗದಿದ್ದರೆ, ಅದನ್ನು ಮರುಪರಿಶೀಲಿಸುವಂತೆ ನೀವು ಅವನಿಗೆ ಅಥವಾ ಅವಳಿಗೆ ಹೇಳ. ಏತನ್ಮಧ್ಯೆ, ನಿಮ್ಮ ಆಲೋಚನೆಗಳನ್ನು ಸಹ ನೀವು ವಿಶ್ಲೇಷಿಸಬಹುದು ಮತ್ತು ನಿಮ್ಮ ಭಿನ್ನಾಭಿಪ್ರಾಯದ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು. ನಂತರ, ಸಮಸ್ಯೆಯನ್ನು ಪರಿಹರಿಸಲು ಮತ್ತು ನಿಮ್ಮಿಬ್ಬರಿಗೂ ಸ್ವೀಕಾರಾರ್ಹವಾಗಿಸಲು ನೀವು ಇಬ್ಬರೂ ಒಂದು ಸಾಮಾನ್ಯ ಮಾರ್ಗವನ್ನು ಕಂಡುಕೊಳ್ಳಬಹುದು.

8. ಉತ್ತಮ ಕೇಳುಗರಾಗಿರಿ

8. ಉತ್ತಮ ಕೇಳುಗರಾಗಿರಿ

ದಂಪತಿಗಳು ಏಕೆ ಸಣ್ಣ ಜಗಳಗಳಿಗೆ ಇಳಿಯುತ್ತಾರೆ ಎಂಬುದರ ಹಿಂದಿನ ಪ್ರಮುಖ ಕಾರಣವೆಂದರೆ, ನೀವು ಉತ್ತಮ ಕೇಳುಗನಾಗಿರುವುದಿಲ್ಲ. ನಿಮ್ಮ ಸಂಗಾತಿ ಏನಾದರೂ ಹೇಳುತ್ತಿರುವಾಗ ಸುಮ್ಮನಿರಲು ಮತ್ತು ಕೇಳಲು ನಾವು ಸಲಹೆ ನೀಡುತ್ತೇವೆ. ಅವನು ಅಥವಾ ಅವಳು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ ಸಂಗತಿಯನ್ನು ಪೂರ್ಣಗೊಳಿಸಿದ ನಂತರ, ನೀವು ನಿಮ್ಮ ಅಭಿಪ್ರಾಯಗಳನ್ನು ಮುಂದಿಡಬಹುದು ಮತ್ತು ನಿಮ್ಮ ಆಲೋಚನೆಗಳನ್ನು ಸಹ ವ್ಯಕ್ತಪಡಿಸಬಹುದು. ನಿಮ್ಮ ಸಂಗಾತಿ ಹೇಳಿದ್ದನ್ನು ಯಾವಾಗಲೂ ನೀವು ಒಪ್ಪಿಕೊಳ್ಳಬೇಕಾಗಿಲ್ಲ, ಆದರೆ ಅವರ ಸ್ವಭಾವವನ್ನು ನಿರ್ಣಯಿಸುವುದು ಒಳ್ಳೆಯದಲ್ಲ. ಅವರನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಆಯ್ಕೆಗಳನ್ನು ಹೇಳಿ. ಅಲ್ಲದೆ, ನೀವು ಮಾತನಾಡುವಾಗ, ನಿಮ್ಮ ಸಂಗಾತಿಯ ಭಾವನೆಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ನೀವು ಅನುಮತಿ ನೀಡಿ.

9. ಕ್ಷಮೆ ಮತ್ತು ಕೃತಜ್ಞತೆಯ ಗುಣವನ್ನು ಬೆಳೆಸಿಕೊಳ್ಳಿ

9. ಕ್ಷಮೆ ಮತ್ತು ಕೃತಜ್ಞತೆಯ ಗುಣವನ್ನು ಬೆಳೆಸಿಕೊಳ್ಳಿ

ಯಾವುದೇ ಸಂಬಂಧದಲ್ಲಿ ಆಪಾದನೆಯನ್ನು ಮಾಡುವುದನ್ನು ತಡೆಯುವುದು ಒಂದು ಪ್ರಮುಖ ವಿಷಯವಾಗಿದೆ. ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ನಿಮ್ಮ ಸಂಗಾತಿ ಕ್ಷಮೆ ಕೇಳಿದಾಗ ಅವರನ್ನು ನಿರ್ಲಕ್ಷಿಸುವುದು ಎಂದಿಗೂ ಒಳ್ಳೆಯದಲ್ಲ. ನಿಮ್ಮ ಸಂಗಾತಿ ಕ್ಷಮೆಯಾಚಿಸಲು ಬಯಸಿದರೆ, ನೀವು ಅವರನ್ನು ಕ್ಷಮಿಸುವುದು ಉತ್ತಮ. ಅಲ್ಲದೆ, ನಿಮ್ಮ ಸಂಗಾತಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ನಿಮ್ಮ ಸಂಬಂಧವನ್ನು ಬಲಪಡಿಸಲು ಇನ್ನಷ್ಟು ಸಹಾಯ ಮಾಡುತ್ತದೆ.

ಸಂಬಂಧ ಎಂದರೆ ಯಾರು ಸರಿ ಅಥವಾ ತಪ್ಪು ಎಂಬುದಲ್ಲ ಸಂಬಂಧದಲ್ಲಿನ ಘರ್ಷಣೆಗಳು ಮತ್ತು ವ್ಯತ್ಯಾಸಗಳನ್ನು ನೀವು ಎಷ್ಟು ಸುಂದರವಾಗಿ ಪರಿಹರಿಸಿಕೊಳ್ಳುತ್ತೀರಿ ಎಂಬುದು. ನಿಮ್ಮ ದೂಷಿಸುವ ಮನೋಭಾವವನ್ನು ತೊರೆದು ಸಂಗಾತಿಯನ್ನು ಅರ್ಥಮಾಡಿಕೊಂಡು ಹೋದರೆ ಜೀವನ ಅತ್ಯಂತ ರಸಮಯವಾಗಿರುತ್ತದೆ.

English summary

How To Avoid Blame Game And Strengthen Your Relationship

Here we are discussing about How To Avoid Blame Game And Strengthen Your Relation. Read more.
X
Desktop Bottom Promotion