For Quick Alerts
ALLOW NOTIFICATIONS  
For Daily Alerts

ಮಗಳಿಗೆ ಕಂಕಣ ಯೋಗ ಕೂಡಿ ಬರಲು ವಾಸ್ತು ಟಿಪ್ಸ್

|

ಮದುವೆಯೆಂಬುವುದು ಒಂದು ಯೋಗ, ಅದು ಕೂಡಿ ಬಂದಾಗಲೇ ಮದುವೆಯಾಗುವುದು. ಕೆಲವರಿಗೆ ಬೇಗನೆ ಆ ಯೋಗ ಕೂಡಿ ಬಂದರೆ ಇನ್ನು ಕೆಲವರಿಗೆ ವಯಸ್ಸು ಮೀರುತ್ತಿದ್ದರೂ ಒಂದಲ್ಲಾ ಒಂದು ಕಾರಣದಿಂದ ಮದುವೆ ತಪ್ಪುತ್ತಿರುತ್ತದೆ. ಅದರಲ್ಲೂ ಮನೆಯಲ್ಲಿ ಮದುವೆ ವಯಸ್ಸಿನ ಹೆಣ್ಮಕ್ಕಳು ಇದ್ದರೆ ಪೋಷಕರಿಗೆ ಅವಳನ್ನು ಮದುವೆ ಮಾಡಿ ಕಳುಹಿಸುವವರೆಗೂ ಸಮಧಾನ ಇರಲ್ಲ. ವಯಸ್ಸು ಮೀರಿದರೆ ನಾವು ಬಯಸಿದಂಥ ಸಂಬಂಧ ಕೂಡಿ ಬರಲ್ಲ ಎಂಬ ಆತಂಕ ಪೋಷಕರಿಗಿರುತ್ತೆ.

ಮಗಳ ಮದುವೆ ಯಾವಾಗ ಎಂದು ಪ್ರತಿಯೊಬ್ಬರು ಕೇಳಲು ಪ್ರಾರಂಭಿಸಿರುತ್ತಾರೆ, ಅವರಿಗೆಲ್ಲಾ ಉತ್ತರ ಹೇಳುವುದೇ ದೊಡ್ಡ ಪ್ರಯಾಸವಾಗಿರುತ್ತೆ. ಶಾಸ್ತ್ರಗಳಲ್ಲಿ ನಂಬಿಕೆ ಇರುವವರು ಏನಾದರೂ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡುತ್ತಾರೆ. ವಾಸ್ತು ಶಾಸ್ತ್ರ ಕೂಡ ಮನೆ ಮಗಳಿಗೆ ಮದುವೆ ಬೇಗನೆ ಆಗಲು ಕೆಲವೊಂದು ವಾಸ್ತು ಟಿಪ್ಸ್ ನೀಡಿದೆ, ಅದೇನೆಂದು ನೊಡೋಣ ಬನ್ನಿ:

ಕೋಣೆಯ ದಿಕ್ಕು

ಕೋಣೆಯ ದಿಕ್ಕು

ಮದುವೆಯಾಗ ಬೇಕಾಗಿರುವ ಹುಡುಗಿ ಬೆಡ್‌ ರೂಂನ ಬಾಗಿಲು ವಾಯುವ್ಯ ದಿಕ್ಕಿನಲ್ಲಿರಬೇಕು. ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇರಲೇಬಾರದು, ಇದ್ದರೆ ಮದುವೆ ವಿಳಂಬವಾಗುವುದು.

ಬೆಡ್‌ರೂಂನ ದೀಪ

ಬೆಡ್‌ರೂಂನ ದೀಪ

ಬೆಡ್‌ರೂಂ ಬೆಳಕು ಕೋಣೆಯೊಳಗೆ ಪಾಸಿಟಿವಿಟಿ ತುಂಬುವಂತೆ ಇರಬೇಕು. ಸ್ವಲ್ಪ ಕಲರ್‌ಫುಲ್ ಆದ ಬೆಳಕು ಕೋಣೆಯಲ್ಲಿರಲಿ.

ಬೆಡ್‌ ಶೀಟ್

ಬೆಡ್‌ ಶೀಟ್

ಹೂವಿನ ಅಲಂಕಾರದ ಪಿಂಕ್ ಅಥವಾ ಹಳದಿ ಬಣ್ಣದ ಕಲರ್‌ ಫುಲ್‌ ಬೆಡ್‌ಶೀಟ್ ಹಾಸಿ.. ಈ ಬಣ್ಣಗಳು ಮನಸ್ಸಿಗೂ ಖುಷಿ ನೀಡುವುದು, ಇವುಗಳು ಅದೃಷ್ಟದ ಬಣ್ಣಗಳೆಂದು ಹೇಳಲಾಗುವುದು.

ಗೋಡೆಯ ಬಣ್ಣ

ಗೋಡೆಯ ಬಣ್ಣ

ಗೋಡೆಗೆ ಲೈಟ್‌ ಬಣ್ಣವಿರಲಿ, ಕಪ್ಪು ಅಥವಾ ಕಂದು ಬಣ್ಣದ ಪೇಯಿಂಟ್ ಹಚ್ಚಬೇಡಿ.

ಮಲಗುವ ಭಂಗಿ

ಮಲಗುವ ಭಂಗಿ

ತಲೆ ಪೂರ್ವದ ಕಡೆಗೆ ಇದ್ದರೆ ಕಾಲು ಪಶ್ಚಿಮದ ಕಡೆಗೆ ಇರಬೇಕು. ಆ ರೀತಿಯಲ್ಲಿ ಮಲಗಬೇಕು. ಮನೆಯಲ್ಲಿ ಪ್ರತಿಯೊಬ್ಬರೂ ಇದೇ ದಿಕ್ಕಿನಲ್ಲಿ ಮಲಗಬೇಕು.

ಕನ್ನಡಿ

ಕನ್ನಡಿ

ಕೋಣೆಯ ಒಳಗಡೆ ನಿಲುಗನ್ನಡಿ ಇಡಬೇಕು, ಆದರೆ ಬೆಡ್‌ಗೆ ವಿರುದ್ಧವಾಗಿ ಇಡಬಾರದು. ಕನ್ನಡಿಯನ್ನು ಪೂರ್ವ ಅಥವಾ ದಕ್ಷಿಣ ಭಾಗದಲ್ಲಿ ಇಡಬಹುದು, ಆದರೆ ಬೆಡ್‌ನ ಪ್ರತಿಬಿಂಬ ಕನ್ನಡಿಯಲ್ಲು ಬೀಳುವಂತೆ ಇಡಬಾರದು.

ಹೂಗಳು

ಹೂಗಳು

ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತಾಜಾ ಹೂಗಳನ್ನು ಹಾಕಿಡಿ. ಹಳೆಯ ಹೂಗಳನ್ನು ಬಿಸಾಡಿ ಹೊಸ ಹೂಗಳನ್ನು ಇಡಿ.

ಬೆಡ್‌ನ ಕೆಳಗಡೆ

ಬೆಡ್‌ನ ಕೆಳಗಡೆ

ಬೆಡ್‌ನ ಕೆಳಗಡೆ ಏನೂ ಇಡಬಾರದು, ಖಾಲಿ ಇಡಬೇಕು. ಬೆಡ್‌ನ ಕೆಳಗಡೆ ವಸ್ತುಗಳನ್ನು ಇಡುವುದರಿಂದ ಮದುವೆ ವಿಳಂಬವಾಗುವುದು. ಅಲ್ಲದೆ ಬೆಡ್‌ನ ಮನೆಯ ಪ್ರಗತಿಗೂ ಕೂಡ ಬೆಡ್‌ ಕೆಳಗಡೆ ಏನೂ ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಬಟ್ಟೆ

ಬಟ್ಟೆ

ಕೆಂಪು ಬಟ್ಟೆ ಧರಿಸುವುದು ಒಳ್ಳೆಯದು. ಕೆಂಪು ಎಂಬುವುದು ಪ್ರೀತಿಯ ಸಂಕೇತ ಅಲ್ಲದೆ ಪಾಸಿಟಿವ್‌ ವೈಬ್ಸ್ ಕೂಡ ತರುತ್ತದೆ ಎಂದು ಹೇಳಲಾಗುವುದು.

ಸ್ಪಟಿಕ

ಸ್ಪಟಿಕ

ಕೋಣೆಯೊಳಗೆ ಸ್ಪಟಿಕ ಇಡುವುದರಿಂದ ಮದುವೆ ಇರುವ ಅಡೆತಡೆಗಳು ದೂರವಾಗುವುದು ಎಂದು ಹೇಳಲಾಗುವುದು. ಇದನ್ನು ಕೋಣೆಯೊಳಗಡೆ ಅಥವಾ ನಿಮ್ಮ ಬೆಡ್‌ ಸಮೀಪ ಇಡುವಂತೆ ಸೂಚಿಸಲಾಗುವುದು.

ಅಲಂಕಾರ

ಅಲಂಕಾರ

ಕೋಣೆಯ ಅಲಂಕಾರಕ್ಕೆ ಲವ್‌ಬರ್ಡ್ಸ್‌ ಚಿತ್ರ ಅಥವಾ ಮೂರ್ತಿಗಳನ್ನು ತಂದಿಡಿ. ಇದನ್ನು ನೈರುತ್ಯ ಭಾಗದಲ್ಲಿಡಿ.

FAQ's
  • ಬೇಗನೆ ಮದುವೆಯಾಗಲು ಏನು ಮಾಡೇಕು?

    * ಅರಿಶಿಣವನ್ನು ಹೆಚ್ಚಾಗಿ ಬಳಸಬೇಕು. ತಿನ್ನುವ ಆಹಾರದಲ್ಲಿ ಕೂಡ ಅರಿಶಿಣ ಬಳಸಬೇಕು.
    * ಸುಗಂಧ ದ್ರವ್ಯ ಬಳಸಬೇಕು
    * ಬಡ ಹೆಣ್ಮಕ್ಕಳ ಮದುವೆಗೆ ದಾನ ಮಾಡಬೇಕು
    * ನವಗ್ರಹಗಳಿಗೆ ಪೂಜೆ ಮಾಡಬೇಕು
    * ಹಸುವಿಗೆ ಮಂಗಳವಾರ ಮೇವು ನೀಡಬೇಕು.

  • ಬೇಗನೆ ಮದುವೆಯಾಗಲು ಯಾವ ಮಂತ್ರ ಹೇಳಬೇಕು?

    ಮಾ ಕಾತ್ಯಾಯನಿ ಮಂತ್ರವನ್ನು ಪಠಿಸುವುದರಿಂದ ಮದುವೆಗೆ ಇರುವ ಎಲ್ಲಾ ತಡೆಗಳು ದೂರವಾಗಿ ಮದುವೆ ಸಂಬಂಧ ಕೂಡಿ ಬರುವುದು. ವಿವಾಹಿತರು ಈ ಮಂತ್ರ ಹೇಳಿದರೆ ವೈವಾಹಿಕ ಜೀವನದಲ್ಲಿರುವ ಕಷ್ಟಗಳು ದೂರವಾಗುವುದು.

  • ಮದುವೆ ವಿಳಂಬವಾಗುತ್ತಿದ್ದರೆ ಏನು ಮಾಡಬೇಕು?

    ಹೆಣ್ಮಕ್ಕಳ ಮದುವೆ ವಿಳಂಬವಾಗುತ್ತಿದ್ದರೆ 16 ಸೋಮವಾರ ಉಪವಾಸವಿದ್ದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಪಾರ್ವತಿ ದೇವಿಯ ರೀತಿ ಅಲಂಕರಿಸಿಕೊಂಡು ಶಿವ-ಪಾರ್ವತಿ ಸೇರಿಸಿ ದಾರ ಕಟ್ಟಿ ಒಳ್ಳೆಯ ಮದುವೆ ಸಂಬಂಧ ಕೂಡ ಬರಲಿ ಎಂದು ಪ್ರಾರ್ಥಿಸಬೇಕು.

English summary

Follow These Vastu Tips To Get Married Soon in Kannada

Follow these vastu tips to get married soon in Kannada, Read on....
X
Desktop Bottom Promotion