For Quick Alerts
ALLOW NOTIFICATIONS  
For Daily Alerts

ಅಪ್ಪಂದಿರ ದಿನದ ವಿಶೇಷ ಲೇಖನ: ನನ್ನ ಅಪ್ಪನೇ ನನ್ನ ಬೆಸ್ಟ ಫ್ರೆಂಡ್‌

By ಅಖಿಲಾ
|

ಅಪ್ಪ ಅಂದರೆ ಯಜಮಾನ, ಜವಾಬ್ದಾರಿ, ಭಯ, ಮನೆಯ ಒಡೆಯ, ಪ್ರೀತಿ, ಕಾಳಜಿ ಹೀಗೆ ಹತ್ತಾರು ಪದಗಳು ಮನಸ್ಸಲ್ಲಿ ಮೂಡುತ್ತದೆ. ಅಪ್ಪನನ್ನು ಒಂದೆರಡು ಪದಗಳಲ್ಲಿ ವರ್ಣಿಸಲು ಖಂಡಿತಾ ಸಾಧ್ಯವಿಲ್ಲ. ಅಂಥಾ ಅಪ್ಪನಿಗೆ ಶುಭಾಶಯ ಸಲ್ಲಿಸಲು ವಿಶ್ವಾದ್ಯಂತ ಜೂನ್‌ 21ರಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸುತ್ತಾರೆ.

ಬೋಲ್ಡ್‌ ಸ್ಕೈ ಕನ್ನಡ ಸಹ ಅಪ್ಪನಿಗೆ ನಮನ ಸಲ್ಲಿಸಲು ಓದುಗರಿಂದ ತಮ್ಮ ಅಪ್ಪನ ಕುರಿತ ಲೇಖನಗಳನ್ನು ಆಹ್ವಾನಿಸಲಾಗಿತ್ತು. ಮಂಗಳೂರಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಅಖಿಲಾ ಅವರು ತಮ್ಮ ಅಪ್ಪನ ಹೀಗೆ ವರ್ಣಿಸಿದ್ದಾರೆ ಮುಂದೆ ಓದಿ.

"ನೋಡಲು ಕೋಪಿಷ್ಟ, ಆದರೆ ಮನಸ್ಸು ಜೇನ ಹನಿ. ಸದಾ ನಮಗಾಗಿ ದುಡಿಯುವ ಶ್ರಮಿಕ. ತಾನು ಹರಕಲು ಬಟ್ಟೆ ತೊಟ್ಟಾದರೂ ನನಗೆ ಮಾತ್ರ ಬಣ್ಣ ಬಣ್ಣದ ಅಂಗಿ ಕೊಡಿಸುವ ಮಹಾತ್ಯಾಗಿ. ನನಗೆ, ನನ್ನಾಸೆಗೆಂದೇ ಜೀವನದ ಪ್ರತಿ ನಿಮಿಷ, ದೇವರಲ್ಲಿ ಬೇಡುವ ಒಂದೇ ಒಂದು ಜೀವ, ನನಗೆ ದೊರೆತಿರುವ ಮಾಣಿಕ್ಯ ಅದು ಅಪ್ಪ...

Fathers Day Special Story By Akhila

ಹೆಗಲ ಮೇಲೆ ಹೊತ್ತು ಕೂಸುಮರಿ ಮಾಡಿದ, ಜ್ವರ ಬಂದಾಗ ಬಿಗಿದಪ್ಪಿದ ನೆನಪು ಹಾಗೇ ಇದೆ. ನಮ್ಮ ಸುಖಕ್ಕಾಗಿ ತನ್ನ ಜೀವನವನ್ನು ಸವೆಸಿದ, ತಪ್ಪುಗಳನ್ನು ತಿದ್ದಿ ಸರಿ ದಾರಿಯಲ್ಲಿ ನಡೆಸಿ ದಾರಿಯುದ್ದಕ್ಕೂ ಬೆಂಗಾವಲಾಗಿ ನಿಂತವ ನನ್ನ ಅಪ್ಪ. ಸಂಸಾರದ ತಕ್ಕಡಿ ತೂಗಿಸುತ್ತಲೇ, ಅರಳುತ್ತಿದ್ದ ಕನಸು ಮುದುಡಿ ಹೋದಾಗ ಮತ್ತೆ ಬಲ ತುಂಬಿ ಕೈ ಹಿಡಿದ. ಜೀವನದ ಉದ್ದಗಲಕ್ಕೂ ನನ್ನೀ ಬದುಕಿನ ಪಯಣಕ್ಕೆ ನನ್ನ ಮೊದಲ ಹೀರೋ ಈ ಅಪ್ಪ.
ಪ್ರತಿ ಬಾರಿಯೂ ಹೆದರಿದಾಗ ಜೊತೆಗಿರುವ ನೋವ ನುಂಗುತ್ತಾ ನಗುವ ಹಂಚುವ, ಯಾರೇ ಏನೆಂದರೂ ಚಿಂತಿಸದೇ ತಾಳ್ಮೆಯಿಂದ ಕನಸಿನತ್ತ ಹೆಜ್ಜೆ ಹಾಕು ಎಂದ ಸಾಹುಕಾರ, ನನ್ನ ಬದುಕಿಗೆ ಶಕ್ತಿ, ಸ್ಫೂರ್ತಿ ನನ್ನ ಅಪ್ಪ.
ಎಲ್ಲಾ ಹೆಣ್ಣು ಮಕ್ಕಳ ಬದುಕಿಗೆ ಅವರ ತಂದೆಯೇ ನಾಯಕ, ಆದರೆ ನನಗೆ ನನ್ನ ತಂದೆ ಒಬ್ಬ ಬೆಸ್ಟ್‌ ಫ್ರೆಂಡ್. ಅಪ್ಪ ಎಂಬ ಜೀವವನ್ನ ವರ್ಣಿಸಲು ಹೊರಟರೆ ಪದಗಳೇ ಸಾಲದು ಏಕೆಂದರೆ ಅಪ್ಪ ಆಕಾಶವಿದ್ದಂತೆ.... ಲವ್ ಯು ಅಪ್ಪಾ...

ಅಖಿಲಾ
ಪ್ರಥಮ ಬಿ. ಎ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಅಂತಾರಾಷ್ಟ್ರೀಯ ಯೋಗ ದಿನ

English summary

Father's Day Special Story By Akhila

Father's Day Special here is cute story by student Akhila.
X
Desktop Bottom Promotion