Just In
Don't Miss
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Movies
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಹೀಗೆ ಮಾಡಿದರೆ ಗಂಡ ಹೆಂಡತಿ ನಡುವೆ ಜಗಳ ಕಡಿಮೆ ಆಗೇ ಆಗುತ್ತೆ
ಸಂಬಂಧದಲ್ಲಿ ಯಾವುದೇ ಗಡಿ ಅಥವಾ ನಿಯಂತ್ರಣವಿರಬಾರದು ಎಂದು ಹೇಳಲಾಗುವುದು. ಆದರೆ, ಆರೋಗ್ಯಕರ ಸಂಬಂಧಕ್ಕೆ, ಮುಂದಾಗುವ ಸಮಸ್ಯೆಗಳನ್ನು ತಡೆಗಟ್ಟಲು, ಮೊದಲೇ ದಂಪತಿಗಳು ಅಥವಾ ಪ್ರೇಮಿಗಳು ಕೆಲವೊಂದು ವಿಷಯಗಳಿಗೆ ಗಡಿ ನಿರ್ಮಾಣ ಮಾಡಬೇಕಾಗುತ್ತದೆ. ಇದರಿಂದ ಮುಂದೆ ಆ ವಿಚಾರಗಳಿಗೆ ಜಗಳ ಅಥವಾ ಮನಸ್ತಾಪ ಆಗುವುದು ತಡೆಯಬಹುದು. ಹಾಗಾದರೆ, ಆರೋಗ್ಯಕರ ಸಂಬಂಧಕ್ಕೆ ಯಾವ ವಿಚಾರಗಳ ಕುರಿತು ಮೊದಲೇ ಪರಸ್ಪರ ಮಾತನಾಡಿಕೊಂಡು, ಗಡಿ ನಿರ್ಮಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

ನಿರೀಕ್ಷೆಗಳು
ಸಂಬಂಧದಲ್ಲಿ ನಿರೀಕ್ಷೆಗಳು ಸಹಜ. ಅದು ಈಡೇರದಾಗ ನೋವು ಕೂಡ ಅಷ್ಟೇ ಸಹಜ. ಈ ನೋವನ್ನು ಕಡಿಮೆ ಮಾಡಬೇಕೆಂದರೆ, ನೀವಿಬ್ಬರೂ ಮೊದಲಿಗೆ ನಿಮ್ಮ ನಿರೀಕ್ಷೆಗಳನ್ನು ಪರಸ್ಪರ ಹೇಳಿಕೊಳ್ಳಬೇಕು. ಏಕೆಂದರೆ, ಯಾರ ಮನಸ್ಸಿನಲ್ಲಿ ಏನಿದೆ ಎಂಬುದು ಅರಿತುಕೊಳ್ಳುವ ಶಕ್ತಿ ಯಾರಿಗೂ ಇರುವುದಿಲ್ಲ. ನೀವಿಬ್ಬರೂ ಒಬ್ಬರಿಗೊಬ್ಬರು ಏನನ್ನು ನಿರೀಕ್ಷಿಸುತ್ತೀರಿ ಎಂಬುದರ ಕುರಿತು ಮಾತನಾಡದಿದ್ದರೆ, ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸದಿದ್ದಕ್ಕಾಗಿ ನೀವಿಬ್ಬರೂ ಪರಸ್ಪರ ಅಸಮಾಧಾನಗೊಳ್ಳಲು ಪ್ರಾರಂಭಿಸುತ್ತೀರಿ.

ಜಗಳಗಳು
ಸಂಬಂಧದಲ್ಲಿ ಜಗಳ, ಮನಸ್ತಾಪ ಸಾಮಾನ್ಯ. ಆದರೆ, ಅದು ಅತಿರೇಕಕ್ಕೆ ಹೋಗದಂತೆ ತಡೆಯುವುದು ನಿಮ್ಮಬ್ಬರ ಕೈಯಲ್ಲಿದೆ. ಅದಕ್ಕಾಗಿ ಮೊದಲು ಜಗಳವಾದಾಗ ಅದು ಯಾಕಾಯಿತು? ನಿಮ್ಮ ಯಾವ ನಡವಳಿಕೆ ಸರಿ ಇಲ್ಲ ಎಂಬುದನ್ನು ಕುಳಿತು ಮಾತನಾಡಿ. ವಾದದಲ್ಲಿ ಯಾವ ನಡವಳಿಕೆಗಳು ಸರಿ ಮತ್ತು ಸರಿಯಲ್ಲ ಎಂಬುದನ್ನು ಚರ್ಚಿಸಿ. ನಿಮ್ಮ ಸಂಬಂಧವು ಮುಂದುವರಿಯಲು ಹೆಚ್ಚು ಸೂಕ್ತವಾದ ಕ್ರಮವನ್ನು ನಿರ್ಧರಿಸಿ.

ಸೋಶಿಯಲ್ ಮೀಡಿಯಾ
ಇಂದಿನ ಕಾಲದಲ್ಲಿ ಹೆಚ್ಚಿನ ಸಂಬಂಧಗಳು ಬಲಿಯಾಗುತ್ತಿರುವುದೇ ಸೋಶಿಯಲ್ ಮೀಡಿಯಾಗಳಿಂದ. ಆದ್ದರಿಂದ ಈ ವಿಚಾರಕ್ಕೆ ಗಡಿ ನಿರ್ಮಾಣ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಖಾಸಗಿತನವನ್ನು ಇಷ್ಟಪಡುತ್ತೀರಾ ಅಥವಾ ಇಲ್ಲವೇ? ಇಬ್ಬರ ಪೋಸ್ಟ್ ಶೇರ್ ಮಾಡಬಹುದೇ?, ಸೋಶೀಯಲ್ ಮೀಡಿಯಾ ಬಳಕೆಯ ಬಗ್ಗೆ ಇಬ್ಬರಿಗಿರುವ ಅಭಿಪ್ರಾಯವೇನು? ಇವುಗಳ ಬಗ್ಗೆ ಮೊದಲೇ ಚರ್ಚಿಸಿ, ಇದರಿಂದ ತಪ್ಪುಗ್ರಹಿಕೆ ತಡೆಯಬಹುದು.

ನನಗಾಗಿ ಸಮಯ
ಸಂಬಂಧದಲ್ಲಿ ಸಂಗಾತಿಗೆ ಸಮಯ ನೀಡುವುದು ಮುಖ್ಯ. ಆದರೆ ನಿಮಗಾಗಿ ಸಮಯವನ್ನು ಮೀಸಲಿಡುವುದು ಅತ್ಯಗತ್ಯ. ಅದನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ. ನಿಮಗೆ ಖಾಸಗಿ ಸಮಯದ ಅಗತ್ಯವಿರುವ ಬಗ್ಗೆ ಅವರಿಗೆ ಅರ್ಥ ಮಾಡಿಸಿ. ಸಂಬಂಧದಿಂದ ಪ್ರತ್ಯೇಕವಾಗಿ ನಿಮ್ಮ ಗುರುತನ್ನು ಕಾಪಾಡಿಕೊಳ್ಳಲು ನಿಮಗೆ ಏಕಾಂಗಿಯಾಗಿ ಸಮಯ ಬೇಕಾಗುತ್ತದೆ. ಅದನ್ನು ಅವರಿಗೆ ಅರ್ಥ ಮಾಡಿಸಿ.

ಸ್ವಾತಂತ್ರ್ಯ
ನೀವು ದಂಪತಿಗಳು ಎಂದ ಮಾತ್ರಕ್ಕೆ ನಿಮ್ಮ ಜೀವನದ ಪ್ರತಿಯೊಂದು ಭಾಗವನ್ನು ಹಂಚಿಕೊಳ್ಳಬೇಕು ಎಂದರ್ಥವಲ್ಲ. ನಿಮ್ಮ ಹಣದಿಂದ ಸ್ವತಂತ್ರವಾಗಿರಲು ಬಯಸಬಹುದು ಅಥವಾ ಆಗುವ ಖರ್ಚಿನ್ನು ಸಮವಾಗಿ ಹಂಚಿಕೊಳ್ಳಲು ಮನಸ್ಸಿಲ್ಲದೇ ಇರಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾಗಿರುವುದು ಗಂಡು-ಹೆಣ್ಣು ಇಬ್ಬರಿಗೂ ಮುಖ್ಯ. ಇದಷ್ಟೇ ಅಲ್ಲ, ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯ ಇರಬೇಕು ಎಂಬ ಆಸೆ ಕೆಲವರಿಗಿರುವುದು. ಆದ್ದರಿಂದ ಈ ವಿಚಾರದ ಬಗ್ಗೆ ಇಬ್ಬರೂ ಪರಸ್ಪರ ಚರ್ಚಿಸಬೇಕು.

ಅನ್ಯೋನ್ಯತೆ
ಮಲಗುವ ಕೋಣೆಯಲ್ಲಿ ನಿಮ್ಮ ಹಾಗೂ ಅವರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯಕರ ಸಂಬಂಧಕ್ಕೆ ಬಹಳ ಮುಖ್ಯ. ಆದ್ದರಿಂದ, ನೀವೇನು ಬಯಸುತ್ತೀರಿ? ಯಾವುದು ಇಷ್ಟವಿಲ್ಲ?, ಲೈಂಗಿಕತೆ, ಚುಂಬನ, ಮತ್ತು ಫ್ಲರ್ಟಿಂಗ್ ಎಲ್ಲದರ ಬಗ್ಗೆ ಇಬ್ಬರೂ ಮಾತನಾಡಿ.

ಭವಿಷ್ಯ
ಹೌದು, ನೀವಿಬ್ಬರೂ ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೂ ಮುಂದುವರಿಸಲು ಬಯಸಿದರೆ, ಭವಿಷ್ಯದ ಬಗೆಗಿನ ಮಾತು ಅತೀಮುಖ್ಯ. ನಿಮ್ಮಿಬ್ಬರಿಗೂ ಮಕ್ಕಳು ಬೇಕೇ? ಬೇಕಿದ್ದಲ್ಲಿ ಎಷ್ಟು ಮಕ್ಕಳು? ನೀವು ಪ್ರಯಾಣಿಸಲು ಬಯಸುವಿರಾ?, ಭವಿಷ್ಯದಲ್ಲಿ ನೀವಿಬ್ಬರೂ ಒಟ್ಟಿಗೆ ಏನನ್ನು ಬಯಸುತ್ತೀರಿ ಎಂಬುದನ್ನು ಚರ್ಚಿಸುವುದು ನಿಮಗೆ ಮುಂದುವರಿಯಲು ಸಹಾಯ ಮಾಡುತ್ತದೆ.